Search
  • Follow NativePlanet
Share
» »ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ. ರಾಘವೇಂದ್ರ ಸ್ವಾಮಿ 12 ವರ್ಷಗಳ ಕಾಲವನ್ನು ಈ ಬಿಚಿಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ.ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ.

By Divya

ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ. ರಾಘವೇಂದ್ರ ಸ್ವಾಮಿ 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮಂತ್ರಾಲಯ ಬರುತ್ತದೆ. 2009ರ ವೇಳೆ ಅತಿಯಾದ ಮಳೆಯಿಂದ ಮಂತ್ರಾಲಯ ಹಾಗೂ ಸುತ್ತಲಿನ ಹಳ್ಳಿಗಳೂ ಮುಳುಗಿ ಹೋಗಿದ್ದವು ಎಂದು ಹೇಳಲಾಗುತ್ತದೆ.

ಬಿಚ್ಚಾಲೆ ಇತಿಹಾಸ
ಅಪ್ಪಣಚಾರ್ಯರು ವೇದ ಹಾಗೂ ಉಪನಿಷತ್‍ಅನ್ನು ತಿಳಿದ ಒಬ್ಬ ಮಹಾನ ವಿದ್ವಾಂಸ. ಇವರು ತನ್ನ ವಿದ್ಯಾರ್ಥಿಗಳಿಗೆ ಸನ್ಯಾಸಿಗಳ ಜೀವನದ ಕಷ್ಟ ಏನೆಂಬುದು ಅರ್ಥವಾಗಬೇಕು ಎನ್ನುವ ಉದ್ದೇಶದಿಂದ, ಬಗಲಿಗೆ ಜೋಳಿಗೆಯನ್ನು ಹಾಕಿಕೊಂಡು ಭಿಕ್ಷೆ ಬೇಡಿ ಬರಬೇಕು ಎಂದು ಹೇಳಿದರು. ಶಿಶ್ಯರು ಬೇಡಿ ತಂದ ಅಕ್ಕಿಯನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿದರು. ನಂತರ ಅದನ್ನು ಹತ್ತಿರದಲ್ಲಿರುವ ಅಂಟಿನ ಮರದ ಕೊಂಬೆಯೊಂದಕ್ಕೆ ಕಟ್ಟಿದರು. ಇದಾದ ಸ್ವಲ್ಪ ಸಮಯದಲ್ಲೇ ಅಕ್ಕಿಯು ಅನ್ನವಾಯಿತು. ಅಷ್ಟರಲ್ಲಿ ಅಪ್ಪಣ್ಣಚಾರ್ಯರು ತಮ್ಮ ಪ್ರವಚನವನ್ನು ನಿಲ್ಲಿಸಿದರು. ಇವರ ಈ ಒಂದು ಅಗಾಧ ಶಕ್ತಿಯನ್ನು ಮೆಚ್ಚಿ, ಮಧ್ವ ಸನ್ಯಾಸಿ ರಾಘವೇಂದ್ರಸ್ವಾಮಿಗಳು ತಮ್ಮ ದೈವ ಶಕ್ತಿಯಿಂದ ಅಪ್ಪಣ್ಣಚಾರ್ಯರನ್ನು ಮುಟ್ಟಿ ಆಶೀರ್ವದಿಸಿದರು. ಅಂದಿನಿಂದ ಆ ಊರಿಗೆ ಬಿಚ್ಚಾಲೆ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ.

Mantralayam Tourism

PC : Sameera Bellary

ಬಿಚಲೆಯಲ್ಲಿರುವ ಬೃಂದಾವನ
ಒಂದು ದಿನ ಅಪ್ಪಣ್ಣಾಚಾರ್ಯರ ಕನಸಿನಲ್ಲಿ ರಾಘವೇಂದ್ರಸ್ವಾಮಿಗಳು ಬಂದು ಏಕಶಿಲೆಯಲ್ಲಿ ಕೆತ್ತಿದ ಮೂರ್ತಿಯನ್ನು ತುಂಗಭದ್ರಾ ನದಿಯ ದಡದಲ್ಲಿ ಸ್ಥಾಪಿಸಬೇಕು, ನಂತರ ಅಲ್ಲಿ ಸರಿಯಾದ ಆಚರಣೆ ನಡೆಯಬೇಕು ಎಂದು ಹೇಳಿದರು. ಅಪ್ಪಣ್ಣಾಚಾರ್ಯರು ಸ್ವಾಮಿಗಳ ಆಶೀರ್ವಾದದಂತೆ ಆಗಲಿ ಎಂದು ನದಿಯ ದಡದಲ್ಲಿ ಮೂರ್ತಿಯನ್ನು ನಿರ್ಮಿಸಿದರು.

Mantralayam Tourism

PC : Sameera Bellary

ಬಿಚ್ಚಾಲೆಯಲ್ಲಿ ಅಪ್ಪಣ್ಣಚಾರ್ಯರ ಮನೆ
ಬಿಚ್ಚಾಲೆಯಲ್ಲಿ ಅಪ್ಪಣ್ಣಚಾರ್ಯರ ಮನೆಯೂ ಒಂದು ಪ್ರಮುಖ ಆಕರ್ಷಣೆ. ರಾಘವೇಂದ್ರ ಸ್ವಾಮಿಗಳು ಸುಮಾರು 12 ವರ್ಷಗಳ ಕಾಲ ಈ ಮನೆಯಲ್ಲೇ ವಾಸವಿದ್ದರು. ಈಗಲೂ ಇಲ್ಲಿ ಆಂಜನೇಯ ಹಾಗೂ ನಾಗದೇವರು ಇರುವುದನ್ನು ನೋಡಬಹುದು. ಅಲ್ಲದೆ ರಾಘವೇಂದ್ರ ಸ್ವಾಮಿಗಳು ಮಲಗುತ್ತಿದ್ದ ಸ್ಥಳವನ್ನು ಗುರುತಿಸಿಡಲಾಗಿದೆ. ಅಪ್ಪಣ್ಣಚಾರ್ಯರು ರಾಘವೇಂದ್ರ ಸ್ವಾಮಿಗಳಿಗೆ ಚಟ್ನಿ ಬೀಸಲು ಬಳಸುತ್ತಿದ್ದ ರುಬ್ಬುವ ಗುಂಡು ಸಹ ಇದೆ.

Mantralayam Tourism

PC : Sameera Bellary

ಆಚರಣೆ
ಮಂತ್ರಾಲಯದಲ್ಲಿ ಆರಾಧಿಸಲಾಗುವ ಎಲ್ಲಾ ಬಗೆಯ ಸಾಂಪ್ರದಾಯಿಕ ಆರಾಧನೆಗಳನ್ನು ಬಿಚ್ಚಾಲೆಯಲ್ಲೂ ಮಾಡಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಮೂರು ದಿನಗಳಕಾಲ ನಡೆಯುತ್ತದೆ.

Mantralayam Tourism

PC : Sameera Bellary

ವಸತಿ ಸೌಲಭ್ಯ.
ಇದು ಹಳ್ಳಿ ಪ್ರದೇಶವಾದ್ದರಿಂದ ನಮಗೆ ಬೇಕಾದಂತಹ ವಸತಿ ವ್ಯವಸ್ಥೆ ದೊರೆಯುವುದು ಕಷ್ಟ. ಹಾಗಾಗಿ ಮಂತ್ರಾಲಯದಲ್ಲಿ ಹೋಟೆಲ್ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು.

Mantralayam Tourism

PC : Sameera Bellary

ಸಾರಿಗೆ ವ್ಯವಸ್ಥೆ
ಇಲ್ಲಿ ಬೇಕಾದಷ್ಟು ಆಟೋ ರಿಕ್ಷಾಗಳು ಸಿಗುವುದರಿಂದ ಓಡಾಟಕ್ಕೆ ಯಾವುದೇ ತೊಂದರೆ ಉಂಟಾಗದು. ನಿಮ್ಮದೆ ಸಾರಿಗೆ ವ್ಯವಸ್ಥೆ ಹೊಂದಿದ್ದರೆ ಹತ್ತಿರದಲ್ಲೇ ಇರುವ ಪಂಚಮುಖಿ ಆಂಜನೇಯ ದೇಗುಲ, ವೆಂಕಟ ಸ್ವಾಮಿ ದೇಗುಲ, ದೇಗುಲಗಳನ್ನು ನೋಡಬಹುದು.

ಈ ಸಮಯ ಒಳ್ಳೆಯದು
ಬೇಸಿಗೆಯ ಸಮಯದಲ್ಲಿ ಹೆಚ್ಚು ಬಿಸಿ ವಾತಾವರಣ ಹಾಗೂ ನೀರಿನ ಸಮಸ್ಯೆ ಉಂಟಾಗುವುದರಿಂದ ಅಕ್ಟೋಬರ್ ನಿಂದ ಡಿಸೆಂಬರ್ ವೇಳೆಯಲ್ಲಿ ಹೋಗುವುದು ಸೂಕ್ತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X