Search
  • Follow NativePlanet
Share
» »ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ ಎಲ್ಲಿದೆ ಗೊತ್ತ? ಪ್ರಪಂಚದಲ್ಲಿನ ನಯಾಗರಾ ಜಲಪಾತ ಎಂದರೆ ತಿಳಿಯದೇ ಇರುವವರು ಯಾರು ಇಲ್ಲ. ಏಕೆಂದರೆ ಪ್ರಕೃತಿ ಮಧ್ಯದಲ್ಲಿರುವ ಆ ಸುಂದರವಾದ ಜಲಪಾತವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಜಲಪಾತವಾಗಿದೆ

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ ಎಲ್ಲಿದೆ ಗೊತ್ತ? ಪ್ರಪಂಚದಲ್ಲಿನ ನಯಾಗರಾ ಜಲಪಾತ ಎಂದರೆ ತಿಳಿಯದೇ ಇರುವವರು ಯಾರು ಇಲ್ಲ. ಏಕೆಂದರೆ ಪ್ರಕೃತಿ ಮಧ್ಯದಲ್ಲಿರುವ ಆ ಸುಂದರವಾದ ಜಲಪಾತವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಅದು ಅಮೆರಿಕಾದಲ್ಲಿದ್ದರೆ ನಮ್ಮ ಭಾರತ ದೇಶದ ತೆಲಂಗಾಣದಲ್ಲಿಯೂ ಕೂಡ ಒಂದು ಅದ್ಭುತವಾದ ನಯಾಗರ ಜಲಪಾತವಿದೆ. ಅದನ್ನೇ "ತೆಲಂಗಾಣ ನಯಾಗರ" ಎಂದು ಕರೆಯುತ್ತಾರೆ.

ಇನ್ನು ಈ ಜಲಪಾತವು ಎಲ್ಲಿದೆ? ಅದರ ವಿಶೇಷತೆಗಳೇನು? ಎಂಬುದು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ. ಇದು ತೆಲಂಗಾಣದ ದಂಡಕಾರಣ್ಯದಲ್ಲಿ ಸುಮಾರು 50 ಕಿ.ಮೀ ದೂರದಲ್ಲಿರುವ ನಲ್ಲಂದೇವಿ ಗುಡ್ಡದ ಸಮೀಪದಲ್ಲಿ ಹುಟ್ಟಿತು.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಭೋಗತ ಜಲಪಾತವನ್ನು ಚಿಕುಲಪಲ್ಲಿ ಫಾಲ್ಸ್ ಎಂದು ಕೂಡ ಕರೆಯುತ್ತಾರೆ. ಕಾಳೇಶ್ವರ-ಭದ್ರಾಚಲಂ ಅರಣ್ಯ ಪ್ರದೇಶದ ಮಧ್ಯೆ ಇದೆ. ಇದು ಸುಮಾರು 30 ಅಡಿ ಎತ್ತರದಿಂದ ನೀರು ಧುಮುಕಿ ದೊಡ್ಡ ಜಲಾಶಯವಾಗಿ ಮಾರ್ಪಾಟಾಗುತ್ತದೆ. ಹಚ್ಚ ಹಸಿರಿನ ದಟ್ಟವಾದ ಅರಣ್ಯ ಮಧ್ಯೆಯಲ್ಲಿ ಬೆಟ್ಟ ಗುಡ್ಡಗಳ ಮಧ್ಯೆ ಅದ್ಭುತವಾಗಿ ಧರೆಗೆ ಇಳಿಯುವುದೇ ಭೋಗತ ಜಲಪಾತ. ಪ್ರಕೃತಿಯು ಸೃಷ್ಟಿ ಮಾಡಿರುವ ಅದ್ಭುತವಾದ ಸೌಂದರ್ಯಗಳಲ್ಲಿ ಇದು ಕೂಡ ಒಂದು.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಅಲ್ಲಿನ ಅರಣ್ಯದ ದಿವ್ಯವಾದ ಔಷಧ ಗುಣಗಳು ಆ ನೀರು ಹೊಂದಿದೆ ಎಂದು ನಂಬಲಾಗಿದೆ. ಅಲ್ಲಿಂದ ಸುಮಾರು 6 ಕಿ.ಮೀ ದೂರದಲ್ಲಿ ಗುಡ್ಡಗಳನ್ನು ದಾಟಿಕೊಳ್ಳುತ್ತಾ ಭೋಗತಜಲಪಾತವಾಗಿ ಮಾರ್ಪಾಟಾಗುತ್ತದೆ. ಇದು ಗಿರಿಜನರಿಗೆ ಒಂದು ಪವಿತ್ರವಾದ ಪ್ರದೇಶ ಕೂಡ ಆಗಿದೆ.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಭೋಗತಾ ಜಲಪಾತ ಅಡಿಯಿಂದ ಪಾತಾಳಕ್ಕೆ ಮಾರ್ಗವಿದೆ ಎಂದು ಆದಿವಾಸಿಗಳು ಅಪಾರವಾಗಿ ನಂಬಿಕೆ ಇಟ್ಟಿದ್ದಾರೆ. ಇನ್ನು ಇಲ್ಲಿ ಪಾಂಡವರು ಕೆವಲವು ದಿನಗಳ ಕಾಲ ತಮ್ಮ ಅಜ್ಞಾತ ವಾಸವನ್ನು ಕಳೆದರು ಎಂದು ಹೇಳಲಾಗುತ್ತಿದೆ. ಶ್ರೀ ರಾಮನು ಕೂಡ ಇಲ್ಲಿ ಶಿವನಿಗೆ ಪೂಜೆ ಮಾಡಿದರು ಎಂದೂ, ಆ ಶಿವನನ್ನು ಶ್ರೀ ರಾಮನೇ ಸ್ವತಃ ತನ್ನ ಕೈಯಿಂದ ಪ್ರತಿಷ್ಟಾಪಿಸಿದನು ಎಂದು ಅಲ್ಲಿನ ಪ್ರಜೆಗಳು ಅನೇಕ ಕಥೆಗಳನ್ನು ಹೇಳುತ್ತಿರುತ್ತಾರೆ.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಇಷ್ಟೇ ಅಲ್ಲದೇ ಭೋಗತಾ ಜಲಪಾತವು ನಲ್ಲಂದೇವಿ ಗುಡ್ಡದಿಂದ ಬರುವ ನೀರು ಔಷಧಿ ಗುಣವನ್ನು ಹೊಂದಿದೆ ಎಂದು ನಂಬುತ್ತಾರೆ. ಇದು ಅತ್ಯಂತ ಆಳವಾಗಿದ್ದು, ಕನಿಷ್ಟ ಅಲ್ಲಿ ಯಾರು ಕೂಡ ಹೋಗುವುದಕ್ಕೂ ಸಾಹಸ ಮಾಡುವುದಿಲ್ಲವಂತೆ.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಇಲ್ಲಿರುವ ಸುರಂಗಗಳು ಪಾತಾಳಕ್ಕೆ ತೆರಳಲು ಇರುವ ಮಾರ್ಗ ಎಂದು ಅಲ್ಲಿನ ಪ್ರಜೆಗಳು ನಂಬುತ್ತಾರೆ. ನಿಜವಾಗಿ ಹೇಳಬೇಕಾದರೆ ಅನೇಕ ಕಾಲಗಳ ಹಿಂದೆಯೇ ಈ ಜಲಪಾತವು ಬೆಳಕಿಗೆ ಬಂದರು ಕೂಡ ಯಾರು ಅಲ್ಲಿ ಹೋಗುತ್ತಿರಲಿಲ್ಲವಂತೆ. ಆ ಜಲಪಾತದಲ್ಲಿ ದೇವತಾಮೂರ್ತಿಗಳು ನೆಲೆಸಿರುತ್ತಾರೆ ಎಂದು ಪವಿತ್ರವಾದ ಕಾಣುತ್ತಿದ್ದರು.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಈ ಭೋಗತಾ ಜಲಪಾತವು ಅತ್ಯಂತ ಸುಂದರವಾಗಿ ಕಾಣುವುದೇ ಅಲ್ಲದೇ, ಪ್ರಕೃತಿಯ ಮಡಿಲಿನಲ್ಲಿ ಸೌಂದರ್ಯಯುತವಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಲ್ಲಿನ ಜಲಪಾತವು ಆಕಾಶಗಂಗೆಯು ಭೂಮಿಗೆ ಇಳಿಯುತ್ತಿರವಂತೆ ಭಾಸವಾಗುತ್ತದೆ.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಭೋಗತಾ ಜಲಪಾತದ ಸಮೀಪದಲ್ಲಿಯೇ ನರಸಿಂಹಸ್ವಾಮಿ ಪುಣ್ಯ ಕ್ಷೇತ್ರವು ಕೂಡ ಇದೆ. ಪ್ರತಿ ಭಾನುವಾರ ಇಲ್ಲಿಗೆ ನೂರಾರು ಮಂದಿ ಭಕ್ತರು ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರಕೃತಿ ಹಾಗು ಜಲಪಾತವನ್ನು ನೋಡಿ ಮೈಮರೆಯುತ್ತಾರೆ.

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಹೇಗೆ ಸಾಗಬೇಕು?
ಖಮ್ಮುಂ ಜಿಲ್ಲೆ ವಾಜೇಡು ಮಂಡಲದಲ್ಲಿನ ಭೋಗತ ಹೈದ್ರಾಬಾದ್‍ನಿಂದ 440 ಕಿ.ಮೀ ದೂರದಲ್ಲಿದೆ. ವರಂಗಲ್ ಪಟ್ಟಣಕ್ಕೆ ಸುಮಾರು 140 ಕಿ.ಮೀ ದೂರದಲ್ಲಿದೆ. ಏಟೂರು ನಾಗರಂನಿಂದ 30 ಕಿ.ಮೀ ದೂರದಲ್ಲಿ ಭೋಗತ ಜಲಪಾತ ದೊರೆಯುತ್ತದೆ. ಭದ್ರಾಚಲದಿಂದ ಸುಮಾರು 120 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X