Search
  • Follow NativePlanet
Share
» »ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯc

ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯc

ದಸರಾ ಹಬ್ಬಕ್ಕೆ ಮಕ್ಕಳಿಗೆ ರಜಾ ನೀಡಿರುವುದರಿಂದ ಕುಟುಂಬ ಸಮೇತರಾಗಿ ಒಂದು ದೇವಾಲಯಕ್ಕೆ ತೆರಳಬೇಕು ಎಂದು ಸ್ಥಳದ ಹುಡುಕಾಟದಲ್ಲಿದ್ದರೆ ನಮ್ಮ ಸೈಟ್ ನಿಮಗೆ ಅತ್ಯುತ್ತಮವಾದ ತಾಣಗಳ ಮಾಹಿತಿಯನ್ನು ನೀಡುತ್ತದೆ. ನೀವು ಸಾಮಾನ್ಯವಾಗಿ ನಂದಿ ಬೆಟ್ಟಕ್ಕೆ

ದಸರಾ ಹಬ್ಬಕ್ಕೆ ಮಕ್ಕಳಿಗೆ ರಜಾ ನೀಡಿರುವುದರಿಂದ ಕುಟುಂಬ ಸಮೇತರಾಗಿ ಒಂದು ದೇವಾಲಯಕ್ಕೆ ತೆರಳಬೇಕು ಎಂದು ಸ್ಥಳದ ಹುಡುಕಾಟದಲ್ಲಿದ್ದರೆ ನಮ್ಮ ಸೈಟ್ ನಿಮಗೆ ಅತ್ಯುತ್ತಮವಾದ ತಾಣಗಳ ಮಾಹಿತಿಯನ್ನು ನೀಡುತ್ತದೆ. ನೀವು ಸಾಮಾನ್ಯವಾಗಿ ನಂದಿ ಬೆಟ್ಟಕ್ಕೆ ಭೇಟಿ ನೀಡೇ ಇರುತ್ತೀರಾ. ಅಲ್ಲಿನ ಸುಂರವಾದ ವಾತಾವರಣ ನಿಮ್ಮನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತದೆ.

ಆದರೆ ನಂದಿ ಬೆಟ್ಟದ ಕೆಳಗಿನ ಮಾರ್ಗದಲ್ಲಿ ಪವಿತ್ರವಾದ ಭೋಗ ನಂದೀಶ್ವರ ದೇವಾಲಯವಿದೆ. ಆ ದೇವಾಲಯಿಕ್ಕೆ ಎಂದಾದರೂ ಭೇಟಿ ನೀಡಿದ್ದೀರಾ?. ಈ ದೇವಾಲಯವು ಅತ್ಯಂತ ಪುರಾತನವಾದುದು ಅಲ್ಲದೇ ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿದೆ. ನಂದಿ ಬೆಟ್ಟಕ್ಕೆ ಭೇಟಿ ನೀಡುವವರೆಲ್ಲಾ ಈ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಹಾಗಾಗಿಯೇ ಒಮ್ಮೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.

ಪ್ರಸ್ತುತ ಈ ಲೇಖನದಲ್ಲಿ ಭೋಗನಂದೀಶ್ವರ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಚಿತ್ರಗಳ ಮೂಲಕ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

ಈ ಅದ್ಭುತವಾದ ಭೋಗ ನಂದೀಶ್ವರ ದೇವಾಲಯವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಇದು ನಂದಿ ಬೆಟ್ಟದ ದಾರಿಯಲ್ಲಿಯೇ ಇದ್ದು, ಸುಲಭವಾಗಿ ಈ ದೇವಾಲಯಕ್ಕೆ ತಲುಪಬಹುದುದಾಗಿದೆ. ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಸುಮಾರು 54 ಕಿ.ಮೀ ದೂರದಲ್ಲಿ, ಚಿಕ್ಕಬಳ್ಳಾಪುರದಿಂದ 6.5 ಕಿ.ಮೀ ದೂರದಲ್ಲಿದೆ. ಹಾಗೆಯೇ ನಂದಿ ಬೆಟ್ಟದಿಂದ ಸುಮಾರು 9.5 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

Bikashrd

ಯಾರ ದೇವಾಲಯ?

ಯಾರ ದೇವಾಲಯ?

ಈ ಸುಂದರವಾದ ದೇವಾಲಯವು ಒಂದು ಹಿಂದೂ ದೇವಾಲಯವಾಗಿದ್ದು, ಮಹಾಶಿವನನ್ನು ಲಿಂಗ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯದ ವಾಸ್ತು ಶಿಲ್ಪ ಅತ್ಯಂತ ಸುಂದರವಾಗಿದ್ದು, ದಕ್ಷಿಣ ಭಾರತೀಯ ವಾಸ್ತು ಶಿಲ್ಪ ಶೈಲಿಯಲ್ಲಿ ಅತ್ಯುತ್ತಮವಾದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಬೆಂಗಳೂರಿಗರಿಗೆ ಅತ್ಯಂತ ಸಮೀಪವಾದ ದೇವಾಲಯವಾಗಿದ್ದು, ಒಂದು ದಿನದ ಪ್ರವಾಸಕ್ಕೆ ಸ್ಥಳದ ಹುಡುಕಾಟದಲ್ಲಿದ್ದರೆ ಈ ಸ್ಥಳವನ್ನು ಆಯ್ದುಕೊಳ್ಳಬಹುದಾಗಿದೆ.

Bikashrd

ಯಾರು ನಿರ್ಮಾಣ ಮಾಡಿದರು?

ಯಾರು ನಿರ್ಮಾಣ ಮಾಡಿದರು?

ಈ ಸುಂದರವಾದ ಭೋಗನಂದೀಶ್ವರ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು, 9 ನೇ ಶತಮಾನದಲ್ಲಿ ನೋಲಂಬ ವಂಶದವರು ನಿರ್ಮಾಣ ಮಾಡಿದ್ದಾರೆ. ವಿಶೇಷ ಏನೆಂದರೆ ಈ ದೇವಾಲಯವು ಗಂಗಾ, ಚೋಳ, ರಾಷ್ಟ್ರಕೂಟರು, ಹೊಯ್ಸಳ ಮತ್ತು ವಿಜಯನಗರ ರಾಜವಂಶಗಳಿಂದ ದೊರೆತ ದೊಡ್ಡ ಕೊಡುಗೆಗಳನ್ನು ಪಡೆದುಕೊಂಡಿದೆ.

Bikashrd

ಹೇಗೆ ಇದೆ ಈ ದೇವಾಲಯ?

ಹೇಗೆ ಇದೆ ಈ ದೇವಾಲಯ?

ಈ ದೇವಾಲಯವು ಅದ್ಭುತವಾದ ವಾಸ್ತುಶಿಲ್ಪ ಮತ್ತು ಅದ್ಭುತವಾದ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದೆ. ಇಲ್ಲಿ ವಿಶಾಲವಾದ ಪ್ರದೇಶವನ್ನು ಹಾಗು ಮುಖ್ಯ ಆವರಣದಲ್ಲಿ ಭೋಗನಂದೀಶ್ವರ, ಅರುಣಾಚಲೇಶ್ವರ ಮತ್ತು ಉಮಾ ಮಹೇಶ್ವರ ಲಿಂಗಗಳು ಇರುವ ಮೂರು ಗುಡಿಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಹಿಂದಿನ ಭಾಗದಲ್ಲಿ ಹಲವಾರು ಮಂದಿರಗಳು ಇರುವುದನ್ನು ಕಾಣಬಹುದಾಗಿದೆ.

Jim Ankan Deka

ಏನೇನು ಇದೆ?

ಏನೇನು ಇದೆ?

ಮುಖ್ಯವಾದ ಮಂದಿರಗಳ ಮುಂಭಾಗದಲ್ಲಿ ದೊಡ್ಡ ದೊಡ್ಡ ಮಂಟಪಗಳು, ದೇವತಾ ವಿಗ್ರಹಗಳು, ಪ್ರಾಣಿಗಳು, ಪೌರಾಣಿಕ ಪಾತ್ರಗಳು, ಋಷಿಗಳು ಮತ್ತು ಹಿಂದೂ ಪುರಾಣಗಳಿಂದ ಚಿತ್ರಿಸಿದ ದೃಶ್ಯಗಳ ಸುಂದರವಾದ ಕೆತ್ತಿದ ಚಿತ್ರಗಳನ್ನು ಹೊಂದಿರುವ ಮನೋಹರವಾದ ಸ್ತಂಭಗಳ ದೊಡ್ಡ ದೊಡ್ಡ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

Josh084

ಪ್ರಮುಖವಾದ ಆಕರ್ಷಣೆ ಯಾವುದು?

ಪ್ರಮುಖವಾದ ಆಕರ್ಷಣೆ ಯಾವುದು?

ಈ ಭೋಗ ನಂದೀಶ್ವರ ದೇವಾಲಯದ ಪ್ರಮುಖವಾದ ಆಕರ್ಷಣೆ ಎಂದರೆ ಅದು ವಂದತ ಮಂಟಪವಾಗಿದೆ. ಈ ಸುಂದರವಾದ ಮಂಟಪವನ್ನು ಅರ್ಥನಾರೀಶ್ವರ ದೇವಾಲಯದ ಮುಂದೆ ನಿರ್ಮಾಣ ಮಾಡಲಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾದ ಛಾವಣಿಗಳು, ಸೂಕ್ಷ್ಮವಾದ ಕೆತ್ತನೆಯ ಸ್ತಂಭಗಳನ್ನು ಕಾಣಬಹುದು.

Bikashrd

ಶಿಲ್ಪಗಳು

ಶಿಲ್ಪಗಳು

ಈ ದೇವಾಲಯದಲ್ಲಿ ಶಿವ, ಪಾರ್ವತಿ, ವಿಷ್ಣು, ಮಹಾಲಕ್ಷ್ಮೀ, ಬ್ರಹ್ಮ, ಸರಸ್ವತಿ, ಸೂರ್ಯ ಮತ್ತು ಮಂಟಪದ ವಿವಿಧ ಮೂಲೆಗಳಲ್ಲಿ ಇನ್ನು ಹಲವಾರು ಸಂಕೀರ್ಣವಾದ ಕೆತ್ತನೆಗಳ ಚಿತ್ರಗಳು ಇಲ್ಲಿವೆ. ದೇವಾಲಯದ ಹೊರಗಿನ ಗೋಡೆಗಳಲ್ಲಿಯೂ ಕೂಡ ಸುಂದರವಾದ ಕೆತ್ತನೆಗಳಿಂದ ತುಂಬಿವೆ. ಈ ದೇವಾಲಯದ ಹೊರಗಿನ ಗೋಡೆಗಳ ಮೇಲೆ ಸಪ್ತ ಋಷಿಗಳ ಕೆತ್ತನೆಗಳು ದೇವಾಲಯಕ್ಕೆ ಮತ್ತಷ್ಟು ಸೊಬಗನ್ನು ಹೆಚ್ಚಿಸುತ್ತದೆ.

Bikashrd

ಮುಖ್ಯವಾದ ದೇವಾಲಯಗಳು

ಮುಖ್ಯವಾದ ದೇವಾಲಯಗಳು

ಈ ದೇವಾಲಯದಲ್ಲಿ ಮುಖ್ಯವಾಗಿ ಭೋಗನಂದೀಶ್ವರ ಮತ್ತು ಅರುಣಾಚಲೇಶ್ವರರ 2 ದೇವಾಲಯಗಳಿವೆ. ಭೋಗನಂದೀಶ್ವರ ದೇವಾಲಯಕ್ಕೆ ಎದುರಾಗಿ ದೊಡ್ಡ ನಂದಿಯು ಸಣ್ಣದಾದ ಮಂಟಪದಲ್ಲಿ ನೆಲೆಸಿದ್ದಾನೆ. ಮುಖ್ಯವಾದ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ದೇವಿಯ ದೇವಾಲಯವನ್ನು ಕೂಡ ದರ್ಶನ ಮಾಡಿಕೊಳ್ಳಬಹುದಾಗಿದೆ.

Dineshkannambadi

ಯಾವುದಕ್ಕೆ ಪ್ರಸಿದ್ಧ ಈ ದೇವಾಲಯ?

ಯಾವುದಕ್ಕೆ ಪ್ರಸಿದ್ಧ ಈ ದೇವಾಲಯ?

ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗೆಯೇ ಈ ದೇವಾಲಯಕ್ಕೆ ಹಲವಾರು ದಂಪತಿಗಳೇ ಅಲ್ಲದೇ ಎಲ್ಲರು ಕೂಡ ಭೇಟಿ ನೀಡುತ್ತಾರೆ.

Bikashrd

ದೊಡ್ಡ ಮಂಟಪ

ದೊಡ್ಡ ಮಂಟಪ

ಇದು ಭೋಗನಂದೀಶ್ವರ ದೇವಾಲಯದ ಸಂಕೀರ್ಣದಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಿರ್ಮಾಣಗೊಂಡ ದೊಡ್ಡದಾದ ಮುಖ್ಯ ಸಭಾಂಗಣ(ದೊಡ್ಡ ಮಂಟಪ).

Dineshkannambadi

ಕಲ್ಯಾಣಿ

ಕಲ್ಯಾಣಿ

ಭೋಗ ನಂದೀಶ್ವರ ದೇವಾಲಯದ ಸಂಕೀರ್ಣಕ್ಕೆ ವಿಜಯನಗರದ ಕೊಡುಗೆ. ಈ ಕಲ್ಯಾಣಿಯು ಅತ್ಯಂತ ಸುಂದರವಾಗಿದ್ದು, ಈ ಕಲ್ಯಾಣಿಯು ಶ್ರೀ ಕೃಷ್ಣ ದೇವರಾಯರ ಹೆಸರನ್ನು ಸೇರಿಸಲ್ಪಟ್ಟಿದೆ.

Dineshkannambadi

ಶಿಲ್ಪ

ಶಿಲ್ಪ

ಭೋಗನಂದೀಶ್ವರ ದೇವಾಲಯದಲ್ಲಿನ ಅಪೂರ್ವವಾದ ಶಿಲ್ಪ. ಇದೊಂದು ಕಿಟಕಿ ಕಲೆ ಮತ್ತು ಸುಂದರವಾದ ಸಂಕೀರ್ಣ ಇದಾಗಿದೆ.

Dineshkannambadi


ಸ್ತಂಭ

ಸ್ತಂಭ

ಭೋಗನಂದಿಶ್ವರ ದೇವಾಲಯದಲ್ಲಿನ ಈ ಅದ್ಭುತವಾದ ಸ್ತಂಭವು ವಿಜಯನಗರ ಯುಗದ ಸೇರ್ಪಡೆಯಾದ ವಸಂತ ಮಂಟಪದ ಸ್ತಂಭವಾಗಿದೆ.

Dineshkannambadi

ವಸಂತ ಮಂಟಪ

ವಸಂತ ಮಂಟಪ

ಈ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಅದು ವಸಂತ ಮಂಟಪ. ಇದು ಕೂಡ ವಿಜಯನಗರ ಯುಗದ ಕೊಡುಗೆಯಾಗಿದೆ.

Dineshkannambadi

ತೆರೆದ ಮಂಟಪ

ತೆರೆದ ಮಂಟಪ

ಇದು ಭೋಗನಂದೀಶ್ವರ ದೇವಾಲಯ ದೊಡ್ಡದಾದ ತೆರದ ಮಂಟಪವಾಗಿದ್ದು, ಅಲಂಕೃತ ಸ್ತಂಭವಾಗಿದೆ.

Dineshkannambadi

ವಸಂತ ಮಂಟಪದ ಸ್ತಂಭಗಳು

ವಸಂತ ಮಂಟಪದ ಸ್ತಂಭಗಳು

ಒಂದು ಅದ್ಭುತವಾದ ಕಲ್ಲಿನಿಂದ ನಿರ್ಮಾಣ ಮಾಡಿರುವ ಈ ವಸಂತ ಮಂಟಪದ ಅಲಂಕೃತವಾದ ಸ್ತಂಭಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೊಂದು ಸೂಕ್ಷ್ಮವಾದ ಕೆತ್ತನೆಯನ್ನು ಹೊಂದಿದ್ದು, ಇದು ಹೊಯ್ಸಳ ಯುಗದ ಕೊಡುಗೆಯಾಗಿದೆ.

Dineshkannambadi

ಸಣ್ಣ ದೇವಾಲಯ

ಸಣ್ಣ ದೇವಾಲಯ

ಭೋಗನಂದೀಶ್ವರ ದೇವಾಲಯದ ಹಿಂಭಾಗದಲ್ಲಿರುವ ಸಣ್ಣದಾದ ದೇವಾಲಯದ ಮಂಟಪವಾಗಿದೆ.

Dineshkannambadi

ಅದ್ಭುತವಾದ ಕೆತ್ತನೆ

ಅದ್ಭುತವಾದ ಕೆತ್ತನೆ

ವಸಂತ ಮಂಟಪದ ಅಲಂಕೃತವಾದ ಸ್ತಂಭದ ಕೆತ್ತನೆ ಇದಾಗಿದೆ.

Bikashrd

ಉಮಾ ಮಹೇಶ್ವರ ದೇವಾಲಯದ ಕೆತ್ತನೆ

ಉಮಾ ಮಹೇಶ್ವರ ದೇವಾಲಯದ ಕೆತ್ತನೆ

ಈ ಸುಂದರವಾದ ಶಿಲ್ಪಗಳು ಉಮಾ ಮಹೇಶ್ವರ ಶೃಂಗದಲ್ಲಿನ ಅಲಂಕೃತವಾದ ಕೆತ್ತನೆಯಾಗಿದೆ.

Bikashrd

ವಸಂತ ಮಂಟಪದ ಅಲಂಕೃತ ಸ್ತಂಭ

ವಸಂತ ಮಂಟಪದ ಅಲಂಕೃತ ಸ್ತಂಭ

ವಸಂತ ಮಂಟಪದ ಅಲಂಕೃತ ಸ್ತಂಭ

Bikashrd

ಕಿಟಕಿ ಕೆತ್ತನೆ

ಕಿಟಕಿ ಕೆತ್ತನೆ

ಇದು ಭೋಗನಂದೀಶ್ವರ ದೇವಾಲಯದ ಸಂಕೀರ್ಣದಲ್ಲಿ ಅರುಣಾಚಲೇಶ್ವರ ದೇವಾಲಯದ ಹೊರಭಾಗದಲ್ಲಿನ ಕಿಟಕಿಯ ಕೆತ್ತನೆಯಾಗಿದೆ.

Bikashrd

ಪಾರ್ವತಿ ದೇವಾಲಯ

ಪಾರ್ವತಿ ದೇವಾಲಯ

ಈ ಸುಂದರವಾದ ದೇವಾಲಯವು ಪಾರ್ವತಿ ಮಾತೆಯ ಗುಡಿಯಾಗಿದೆ.

Chefbb

ಭೋಗನಂದೀಶ್ವರ ಪವಿತ್ರವಾದ ಹಾಗು ಸುಂದರವಾದ ದೇವಾಲಯ

ಭೋಗನಂದೀಶ್ವರ ಪವಿತ್ರವಾದ ಹಾಗು ಸುಂದರವಾದ ದೇವಾಲಯ

ಇದು ಭೋಗನಂದೀಶ್ವರ ಪವಿತ್ರವಾದ ಹಾಗು ಸುಂದರವಾದ ದೇವಾಲಯವಾಗಿದೆ.


Bikashrd

ಭೋಗ ನಂದೀಶ್ವರ ದೇವಾಲಯ

ಭೋಗ ನಂದೀಶ್ವರ ದೇವಾಲಯ

ಭೋಗ ನಂದೀಶ್ವರ ದೇವಾಲಯದ ಸಂಕೀರ್ಣದಲ್ಲಿ ಊಮಾ ಮಹೇಶ್ವರ ದೇವಾಲಯಕ್ಕೆ ಹೊಯ್ಸಳ ಯುಗದಲ್ಲಿ ಅಂದರೆ 13 ನೇ ಶತಮಾನದ ಕೊಡುಗೆಯೇ ಈ ವಸಂತ ಮಂಟಪವಾಗಿದೆ.

Dineshkannambadi


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X