Search
  • Follow NativePlanet
Share
» »ಕುಂಭಕರ್ಣನ ಮಗನನ್ನು ಶಿವ ಸಂಹರಿಸಿದ್ದು ಇಲ್ಲೇ

ಕುಂಭಕರ್ಣನ ಮಗನನ್ನು ಶಿವ ಸಂಹರಿಸಿದ್ದು ಇಲ್ಲೇ

ಶ್ರಾವಣ ಮಾಸವನ್ನು ಶಿವನಿಗೆ ಬಹಳ ವಿಶೇಷವಾಗಿರುವ ತಿಂಗಳು ಎನ್ನಲಾಗುತ್ತದೆ. ಈ ತಿಂಗಳಲ್ಲಿ ಶಿವನ 12 ಜ್ಯೋತಿರ್ಲಿಂಗದ ದರ್ಶನ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ಈ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಭೀಮಶಂಕರ್‌ ಸ್ಥಾನ ಆರನೇಯದಾಗಿದೆ. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಪುಣೆಯಿಂದ ಸುಮಾರು 110 ಕಿ.ಮಿ ದೂರದಲ್ಲಿ ಸಹ್ಯಾದ್ರಿ ಎನ್ನುವ ಪರ್ವತದಲ್ಲಿದೆ. ಈ ಜ್ಯೋತಿರ್ಲಿಂಗದ ಸ್ಥಾಪನೆಯ ಹಿಂದೆ ಕುಂಭಕರ್ಣನ ಪುತ್ರ ಭೀಮನ ಕಥೆ ಇದೆ.

ಕುಂಭಕರ್ಣನ ಪುತ್ರ ಭೀಮಾಸುರ

ಕುಂಭಕರ್ಣನ ಪುತ್ರ ಭೀಮಾಸುರ

PC: British Museum online gallery

ಕುಂಭಕರ್ಣನ ಓರ್ವ ಪುತ್ರನ ಹೆಸರು ಭೀಮಾಸುರ. ಕುಂಭಕರ್ಣನಿಗೆ ಕರ್ಕಟಿ ಎನ್ನುವ ಮಹಿಳೆಯು ಪರ್ವತದ ಮೇಲೆ ಸಿಕ್ಕಿರುತ್ತಾಳೆ. ಆಕೆಯನ್ನು ನೋಡಿ ಕುಂಭಕರ್ಣ ಮೋಹಿತನಾಗುತ್ತಾನೆ. ಆಕೆಯೊಂದಿಗೆ ವಿವಾಹವಾಗುತ್ತಾನೆ. ವಿವಾಹದ ನಂತರ ಕುಂಭಕರ್ಣನು ಲಂಕೆಗೆ ತೆರಳುತ್ತಾನೆ. ಆದರೆ ಕರ್ಕಟಿ ಮಾತ್ರ ಪರ್ವತದಲ್ಲೇ ನೆಲೆಸಿದ್ದಳು. ಸ್ವಲ್ಪ ಸಮಯದ ನಂತರ ಕರ್ಕಟಿಗೆ ಭೀಮ ಎನ್ನುವ ಮಗನ ಜನನವಾಗುತ್ತದೆ.

ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು

ಜ್ಯೋತಿರ್ಲಿಂಗದ ಸ್ಥಾಪನೆ ಹೇಗಾಯಿತು?

ಜ್ಯೋತಿರ್ಲಿಂಗದ ಸ್ಥಾಪನೆ ಹೇಗಾಯಿತು?

PC: Pradeep245

ಶ್ರೀರಾಮನು ಕುಂಭಕರ್ಣನ ವಧೆ ಮಾಡಿದಾಗ ಕರ್ಕಟಿಯು ತನ್ನ ಮಗನನ್ನು ದೇವತೆಗಳಿಂದ ದೂರವಿಡಲು ನಿರ್ಧರಿಸಿದಳು. ದೊಡ್ಡದಾದ ನಂತರ ಭೀಮನಿಗೆ ತನ್ನ ತಂದೆಯ ಸಾವಿನ ಕಾರಣ ತಿಳಿಯುತ್ತದೆ. ಹಾಗಾಗಿ ದೇವತೆಗಳಲ್ಲಿ ಸೇಡು ತೀರಿಸಲು ನಿರ್ಧರಿಸಿ ಬ್ರಹ್ಮದೇವನನ್ನು ಕುರಿತಾಗಿ ತಪಸ್ಸು ಮಾಡುತ್ತಾನೆ.

ರಾಜನನ್ನು ಬಂಧಿಸಿದ ಭೀಮ

ರಾಜನನ್ನು ಬಂಧಿಸಿದ ಭೀಮ

PC:Sumit Sarswat

ಕಾಮರೂಪೇಶ್ವರ ಎನ್ನುವ ರಾಜ ಶಿವನ ಭಕ್ತನಾಗಿದ್ದನು. ಆತನು ಶಿವಲಿಂಗದ ಪೂಜೆ ಮಾಡುತ್ತಿದ್ದನು. ಭೀಮನು ರಾಜನಿಗೆ ದೇವರ ಪೂಜೆ ಮಾಡದಂತೆ ಬದಲಾಗಿ ತನ್ನ ಪೂಜೆ ಮಾಡುವಂತೆ ಆದೇಶಿಸುತ್ತಾನೆ. ಆದರೆ ರಾಜನ ಮಾತನ್ನು ಆಲಿಸದ ಕಾರಣ ಭೀಮನು ಅವರನ್ನು ಬಂಧಿಸುತ್ತಾನೆ.

ಶಿವಲಿಂಗದಿಂದ ಪ್ರತ್ಯಕ್ಷನಾದ ಶಿವ

ಶಿವಲಿಂಗದಿಂದ ಪ್ರತ್ಯಕ್ಷನಾದ ಶಿವ

PC: ସୁରଥ କୁମାର ପାଢ଼ୀ

ರಾಜನು ತನ್ನ ಕಕ್ಷೆಯಲ್ಲೇ ಶಿವಲಿಂಗವನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದ, ಭೀಮನು ತನ್ನ ಕತ್ತಿಯಿಂದ ರಾಜನು ನಿರ್ಮಿಸಿರುವ ಶಿವಲಿಂಗವನ್ನು ಕೆಡವಲು ಪ್ರಯತ್ನಿಸಿದನು. ಹಾಗೆ ಕೆಡವಲು ಯತ್ನಿಸಿದಾಗ ಶಿವಲಿಂಗದಿಂದ ಸ್ವಯಂ ಶಿವನು ಪ್ರತ್ಯಕ್ಷನಾದನು.

ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ? ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ?

ಭೀಮಾಸುರ ಸಂಹರಿಸಿದ ಶಿವ

ಭೀಮಾಸುರ ಸಂಹರಿಸಿದ ಶಿವ

ಶಿವ ಹಾಗೂ ಭೀಮನ ನಡುವೆ ದೊಡ್ಡ ಯುದ್ಧವೇ ನಡೆಯಿತು. ಇದರಲ್ಲಿ ಭೀಮಾಸುರ ಸಾವನ್ನಪ್ಪುತ್ತಾನೆ. ದೇವತೆಗಳೆಲ್ಲಾ ಶಿವನನ್ನು ಅಲ್ಲೇ ನೆಲೆಸುವಂತೆ ಪ್ರಾರ್ಥೀಸುತ್ತಾರೆ. ಹಾಗಾಗಿ ಶಿವನು ಲಿಂಗದ ರೂಪದಲ್ಲಿ ಅಲ್ಲಿ ನೆಲೆಸಿದ್ದಾನೆ. ಈ ಸ್ಥಳದಲ್ಲಿ ಭೀಮನೊಂದಿಗೆ ಯುದ್ಧ ಮಾಡಿದ ಪರಿಣಾಮವಾಗಿ ಈ ಜ್ಯೋತಿರ್ಲಿಂಗವನ್ನು ಭೀಮಶಂಕರ ಜ್ಯೋತಿರ್ಲಿಂಗ ಎನ್ನುತ್ತಾರೆ.

ಭೀಮರತಿ ನದಿ

ಭೀಮರತಿ ನದಿ

PC: Lambofordtesla

ಭೀಮನೊಂದಿಗೆ ಯುದ್ಧ ಮಾಡಿ ಆತನನ್ನು ಸಂಹರಿಸಿದ ನಂತರ ಶಿವನ ಮೈಯಿಂದ ಹರಿಯುತ್ತಿದ್ದ ಬೆವರು ಭೀಮರತಿ ನದಿಯಾಗಿ ಮಾರ್ಪಾಟಾಗಿದ್ದು ಎನ್ನಲಾಗುತ್ತದೆ. ಶಿವನು ದೇವತೆಗಳ ಕೋರಿಕೆಯ ಮೇರೆಗೆ ಸಹ್ಯಾದ್ರಿ ಬೆಟ್ಟಗಳ ಮೇಲೆ ಭೀಮಾಶಂಕರ್ ರೂಪದಲ್ಲಿ ನೆಲೆಸಿದ್ದಾನೆಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X