Search
  • Follow NativePlanet
Share
» »800 ವರ್ಷ ಹಳೆಯ ಭೀಮಕಾಳಿ ದೇವಾಲಯದ ವಿಶೇಷತೆ ಏನು ಗೊತ್ತಾ?

800 ವರ್ಷ ಹಳೆಯ ಭೀಮಕಾಳಿ ದೇವಾಲಯದ ವಿಶೇಷತೆ ಏನು ಗೊತ್ತಾ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸ್ಥಳದಲ್ಲೇ ವೈವಾಹಿಕ ಸುಖ ಮತ್ತು ದೀರ್ಘಾಯುಷ್ಯಗಳ ಅಧಿದೇವತೆಯಾದ ಹಾಗು ಶಿವನ ಅರ್ಧಾಂಗಿಣಿಯಾದ 'ಸತಿ' ಯ ಎಡ ಕಿವಿ ಬಿದ್ದಿತ್ತೆನ್ನಲಾಗಿದೆ.

ಭೀಮಕಾಳಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾ ಸ್ಥಳವಾಗಿದೆ. ದೇವಿ ಭೀಮಕಾಳಿಗೆ ಮೀಸಲಾದ ಈ ದೇವಸ್ಥಾನವನ್ನು 800 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಿಂದೂ ಮತ್ತು ಬೌದ್ಧ ವಾಸ್ತುಶಿಲ್ಪಿಯ ಶೈಲಿಗಳ ಮಿಶ್ರಣವಾಗಿದ್ದು ತನ್ನ ಅನನ್ಯ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು ಗಳಿಸಿದೆ. ಈ ಹಳೆಯ ದೇವಾಲಯದಲ್ಲಿ ಈಗ ಬೆಳಿಗ್ಗೆ ಹಾಗೂ ಸಂಜೆಯ ಆರತಿಯ ಸಂದರ್ಭವನ್ನು ಹೊರತುಪಡಿಸಿ ಉಳಿದ ಸಮಯ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿಲ್ಲ.

ಶಕ್ತಿಪೀಠ

ಶಕ್ತಿಪೀಠ

PC: Gerd Eichmann
ಇನ್ನೊಂದು ನೂತನ ದೇವಾಲಯವನ್ನು 1943 ರಲ್ಲಿ ಈ ದೇವಾಲಯದ ಆವರಣದ ಒಳಗೆ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ ದೇವತೆ ಭೀಮಕಾಳಿಯ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಭೀಮಕಾಳಿ ದೇವಾಲಯವನ್ನು ಪ್ರಮುಖ 'ಶಕ್ತಿಪೀಠ' ಅಥವಾ ಭಾರತದಲ್ಲಿನ 'ಪವಿತ್ರ ತಾಣ' ಎಂದು ನಂಬಲಾಗಿದೆ.

 ಸತಿಯ ಎಡಕಿವಿ ಬಿದ್ದಿದ್ದು

ಸತಿಯ ಎಡಕಿವಿ ಬಿದ್ದಿದ್ದು

PC: Sanyam Bahga
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸ್ಥಳದಲ್ಲೇ ವೈವಾಹಿಕ ಸುಖ ಮತ್ತು ದೀರ್ಘಾಯುಷ್ಯಗಳ ಅಧಿದೇವತೆಯಾದ ಹಾಗು ಶಿವನ ಅರ್ಧಾಂಗಿಣಿಯಾದ 'ಸತಿ' ಯ ಎಡ ಕಿವಿ ಬಿದ್ದಿತ್ತೆನ್ನಲಾಗಿದೆ. ಇಲ್ಲಿ, ಜನಪ್ರಿಯ ಹಿಂದೂ ಹಬ್ಬವಾದ ದಸರಾವನ್ನು ಆಡಂಬರ ಮತ್ತು ಸಂಭ್ರಮದಿಂದ ಪ್ರತಿ ವರ್ಷ ಆಚರಿಸಲಾಗುತ್ತದೆ.

ಇತರ ದೇವಾಲಯಗಳು

ಇತರ ದೇವಾಲಯಗಳು

PC: Vivek.Joshi.us
ಶ್ರೀ ಭೀಮಕಾಳಿ ದೇವಾಲಯದ ಮೂಲ ದೇವತೆಗಳ ವಿಗ್ರಹವು ದೇವಾಲಯದ ಕಟ್ಟಡದ ಮೇಲ್ಭಾಗದಲ್ಲಿದೆ. ಈ ಸಂಕೀರ್ಣದಲ್ಲಿ ಇನ್ನೂ ಮೂರು ದೇವಾಲಯಗಳಿವೆ. ಅಲ್ಲದೆ ಲಾರ್ಡ್ ರಘುನಾಥ್, ನರಸಿಂಹ ಮತ್ತು ಪಾತಾಳ ಭೈರವ ದೇವಾಲಯದ ಇಲ್ಲಿನ ಸಂಕೀರ್ಣದಲ್ಲಿ ಕಂಡುಬರುವ ಪ್ರಮುಖ ದೇವಾಲಯಗಳಾಗಿವೆ.

ವಸ್ತುಸಂಗ್ರಹಾಲಯ

ವಸ್ತುಸಂಗ್ರಹಾಲಯ

PC: Smathur910
ಬೀಸ್ ನದಿಯ ದಂಡೆಯ ಮೇಲೆ ನಿಂತಿರುವ ಭೀಮಕಾಳಿ ದೇವಸ್ಥಾನವು ಮಂಡಿಯ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ದೇವಾಲಯದ ಪ್ರಮುಖ ದೇವತೆ ಭೀಮಾ ಕಾಳಿ. ಈ ದೇವಾಲಯದಲ್ಲಿ ಹಿಂದೂ ದೇವರುಗಳು ಮತ್ತು ದೇವತೆಗಳ ವಿಶೇಷ ಚಿತ್ರಗಳನ್ನು ಪ್ರದರ್ಶಿಸುವ ದೊಡ್ಡ ವಸ್ತುಸಂಗ್ರಹಾಲಯವಿದೆ. ಬಾನಾಸುರ ರಾಕ್ಷಸ ಹಾಗೂ ಕೃಷ್ಣನ ಮಧ್ಯೆ ಮಹಾ ಯುದ್ಧ ನಡೆದ ಸ್ಥಳ ಇದು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಬಾನಾಸುರನ ತಲೆಯು ದೇವಾಲಯದ ಪ್ರವೇಶದ್ವಾರದ ಮುಂಭಾಗದಲ್ಲಿ ಹೂಳಲ್ಪಟ್ಟಿದೆ ಎನ್ನಲಾಗುತ್ತದೆ.

ದೇವಾಲಯದ ವಾಸ್ತುಶಿಲ್ಪ

ದೇವಾಲಯದ ವಾಸ್ತುಶಿಲ್ಪ

PC: Vivek.Joshi.us
ದೇವಾಲಯದ ವಾಸ್ತುಶಿಲ್ಪವು ಅಲ್ಲಿನ ಏಕೈಕ ಆಕರ್ಷಣೆಯಾಗಿದೆ. ಕಟ್ಟಡದ ರಚನೆಯಲ್ಲಿ ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ವಿವಿಧ ವರ್ಗಗಳ ಸಮೃದ್ಧ ಮಿಶ್ರಣವಿದೆ. ಅದ್ಭುತವಾದ ರಚನೆಯಾಗಿ ಹೊರಹೊಮ್ಮಿದ ಭೀಮಕಾಳಿ ದೇವಸ್ಥಾನವು ಮರದ ಕೆತ್ತನೆಗಳಿಂದ ಅಲಂಕರಿಸಿದೆ. ದೇವಸ್ಥಾನದ ಗೋಡೆಗಳ ಮೇಲೆ ಪ್ರತಿಯೊಂದು ಕೆತ್ತನೆ ಭೀಮಾ ಕಾಳಿಯ ಕಥೆಯನ್ನು ಚಿತ್ರಿಸುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Dirk. Hartung
ಭೀಮ ಕಾಳಿ ದೇವಸ್ಥಾನ ಮುಖ್ಯ ಮಂಡಿ ಪಟ್ಟಣ ಅಥವಾ ಮಂಡಿ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದೆ. ಬಸ್ ನಿಲ್ದಾಣದಿಂದ 1 ಕಿಮೀ ವ್ಯಾಪ್ತಿಯಲ್ಲಿದೆ. ಬಸ್ ನಿಲ್ದಾಣದಿಂದ ಮತ್ತು ಪಟ್ಟಣದಿಂದ ಆಟೋಗಳು ಸುಲಭವಾಗಿ ಲಭ್ಯವಿದೆ.
ನೀವು ರೈಲಿನ ಮೂಲಕ ತಲುಪಲು ಬಯಸಿದರೆ ಮಂಡಿ ಜಿಲ್ಲೆಯ ಹತ್ತಿರದ ರೈಲ್ವೆ ನಿಲ್ದಾಣಗಳು ಜೋಗಿಂದರ್ ನಗರ ಮತ್ತು ಶಿಮ್ಲಾ, ಚಂಡೀಗಢ ಮತ್ತು ಕಲ್ಕಾಗಳಾಗಿವೆ. ಇವುಗಳು ನಿಯಮಿತ ಬಸ್ ಸೇವೆಗಳಿಂದ ಸಂಪರ್ಕ ಹೊಂದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X