Search
  • Follow NativePlanet
Share
» » ಮೃತದೇಹ ಈ ನೀರಿನ ಮೇಲೆ ತೇಲುವುದಿಲ್ಲವಂತೆ, ಹಾಗಾದ್ರೆ ಏನಾಗುತ್ತೆ?

ಮೃತದೇಹ ಈ ನೀರಿನ ಮೇಲೆ ತೇಲುವುದಿಲ್ಲವಂತೆ, ಹಾಗಾದ್ರೆ ಏನಾಗುತ್ತೆ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪವಿತ್ರ ತೀರ್ಥ ಸ್ನಾನಗಳಿವೆ. ಒಂದೊಂದು ತೀರ್ಥಕ್ಕೆ ಅದರದ್ದೇ ಆದ ಮಹತ್ವವಿದೆ. ಪುರಾಣವಿದೆ. ಕೆಲವು ತೀರ್ಥಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದೆ. ಇನ್ನು ಕೆಲವು ತೀರ್ಥದಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣವಾಗುತ್ತದೆ ಎನ್ನೋದನ್ನು ನೀವು ಕೇಳಿರುತ್ತೀರಿ. ಆದರೆ ಇಂದು ನಾವು ಹೇಳ ಹೊರಟಿರುವುದು ಒಂದು ವಿಶೇಷ ತೀರ್ಥ ಸ್ನಾನದ ಬಗ್ಗೆ.

ಭೀಮ ಕುಂಡದ ಬಗ್ಗೆ ನಿಮಗೆ ಗೊತ್ತಾ? ಇದನ್ನು ಪುರಾಣದಲ್ಲಿ ನೀಲ ಕುಂಡ ಎಂದು ಕರೆಯಲಾಗಿದೆ. ಪ್ರಪಂಚದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸುವಾಗ ಈ ಕುಂಡಕ್ಕೆ ಮೊದಲು ಸೂಚನೆ ಸಿಗುತ್ತದೆ ಎನ್ನಲಾಗುತ್ತದೆ. ಆಗ ಈ ಕುಂಡದ ನೀರು ಮೇಲಕ್ಕೇರುತ್ತದಂತೆ. ಹೀಗಾಗಿ ಜನರು ಮೊದಲೇ ಬರುವ ಆಪತ್ತನ್ನು ಗ್ರಹಿಸಲು ಸಾಧ್ಯವಾಗುತ್ತದಂತೆ.

ಎಲ್ಲಿದೆ ಈ ಕುಂಡ?

ಎಲ್ಲಿದೆ ಈ ಕುಂಡ?

ಭೀಮಕುಂಡ ಎನ್ನುವುದು ಒಂದು ಪ್ರಸಿದ್ಧ ತೀರ್ಥ ಸ್ನಾನವಾಗಿದೆ. ಇದು ಮಧ್ಯಪ್ರದೇಶದ ಚತ್ತರ್‌ಪುರ್‌ ಜಿಲ್ಲೆಯಲ್ಲಿದೆ. ಈ ಜಲಕುಂಡದಲ್ಲಿ ಸ್ನಾನ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

 ಮೃತದೇಹ ಮೇಲೆ ತೇಲುವುದಿಲ್ಲ

ಮೃತದೇಹ ಮೇಲೆ ತೇಲುವುದಿಲ್ಲ

ಈ ಜಲಕುಂಡವು ಬೆಟ್ಟದಲ್ಲಿ ಒಂದು ಗುಹೆಯ ಒಳಗೆ ಇದೆ. ಸೂರ್ಯನ ಕಿರಣ ಈ ಕುಂಡದ ನೀರಿಗೆ ಬಿದ್ದಾಗ ನೀರು ಹೊಳೆಯುತ್ತದೆ. ಈ ಕುಂಡದಲ್ಲಿ ಯಾರಾದರೂ ಬಿದ್ದು ಸತ್ತರೆ ಮೃತದೇಹ ನೀರಿನ ಮೇಲೆ ತೇಲುವುದಿಲ್ಲ ಬದಲಾಗಿ ನೀರಿನ ಒಳಗೆ ಹೋಗಿ ಮಾಯವಾಗುತ್ತದೆ.

ಆಳ ಎಷ್ಟಿರಬಹುದು?

ಆಳ ಎಷ್ಟಿರಬಹುದು?

ಈ ಜಲಕುಂಡದ ಆಳ ಸುಮಾರು 50 ಫೀಟ್ ಇರಬಹುದೆಂದು ಊಹಿಸಲಾಗಿದೆ. ಆದರೆ ಈ ವರೆಗೂ ಇದರ ಆಳ ಎಷ್ಟು ಎನ್ನುವುದು ಯಾರಿಗೂ ತಿಳಿದಿಲ್ಲ. ಡಿಸ್ಕವರಿ ಚಾನೆಲ್‌ ಅವರೂ ಪ್ರಯತ್ನ ಪಟ್ಟರೂ ಸಫಲರಾಗಲಿಲ್ಲ.

ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಒಳಗೆ ಎರಡು ಕುಂಡಗಳಿವೆ

ಒಳಗೆ ಎರಡು ಕುಂಡಗಳಿವೆ

ಸುನಾಮಿ ಸಂದರ್ಭದಲ್ಲಿ ಅಲೆ ಉಂಟಾಗಿತ್ತು. ಇದರೊಳಗೆ ಎರಡು ಕುಂಡಗಳಿವೆ, ಒಂದು ನೀರು ಬರಲು ಇನ್ನೊಂದು ನೀರು ಹೊರ ಹೋಗುತ್ತದೆ. ಇಲ್ಲಿನ ನೀರು ಯಾವತ್ತೂ ಕಡಿಮೆಯಾಗೋದಿಲ್ಲ. ಇಲ್ಲಿನ ನೀರನ್ನು ಖಾಲಿ ಮಾಡಲು ಪ್ರಯತ್ನಿಸಿದರೂ ನೀರು ಮಾತ್ರ ಕಡಿಮೆಯಾಗಿಲ್ಲ.

ಮಹಾಭಾರತ ಕಾಲಕ್ಕೆ ಸಂಬಂಧಿಸಿದೆ

ಮಹಾಭಾರತ ಕಾಲಕ್ಕೆ ಸಂಬಂಧಿಸಿದೆ

PC:Gunawan Kartapranata

ಪಾಂಡವರು ಬೆಟ್ಟ ಗುಡ್ಡಗಳನ್ನು ಸುತ್ತುತ್ತಾ ಅವರಲ್ಲಿದ್ದ ನೀರು ಖಾಲಿಯಾಗುತ್ತದೆ. ಆಗ ದ್ರೌಪದಿಗೆ ಬಾಯಾರಿಕೆಯಾಗುತ್ತದೆ. ಎಲ್ಲೂ ನೀರು ಸಿಗೋದಿಲ್ಲ. ಆಗ ಭೀಮನು ತನ್ನ ಗಧೆಯಿಂದ ನೆಲಕ್ಕೆ ಹೊಡೆಯುತ್ತಾನೆ. ಆ ಜಾಗದಲ್ಲಿ ನೀರು ಒಳಕ್ಕೆ ಹೋಗಿ ನೀರು ಚಿಮುಕುತ್ತದೆ. ಹಾಗಾಗಿ ಆ ಕುಂಡಕ್ಕೆ ಭೀಮ ಕುಂಡ ಎನ್ನುವ ಹೆಸರು ಬಂದಿದೆ.

ವಿಪತ್ತಿನ ಮುನ್ಸೂಚನೆ ನೀಡುತ್ತದೆ

ವಿಪತ್ತಿನ ಮುನ್ಸೂಚನೆ ನೀಡುತ್ತದೆ

PC:Jnanaranjan sahu

2004ರ ಸುನಾಮಿ ಸಂಭವಿಸಿದಾಗ ಈ ಕುಂಡದಲ್ಲಿ ಅಲೆಗಳು ಉಂಟಾಗಿದ್ದವು ಜೊತೆಗೆ ನೀರು ಸುಮಾರು 15ಮೀ. ಹೆಚ್ಚಿತ್ತು. ಈ ನೀರು ಎಲ್ಲಿಂದ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ನೈಸರ್ಗಿಕ ವಿಪತ್ತು ಸಂಭವಿಸುವ ಮೊದಲು ಈ ಕುಂಡದಲ್ಲಿ ನೀರಿನಲ್ಲಿ ಬದಲಾವಣೆಯಾಗುತ್ತದಂತೆ. ಇದನ್ನು ಗಮನಿಸಿ ಜನರು ವಿಪತ್ತು ಎದುರಾಗುವುದನ್ನು ಗ್ರಹಿಸುತ್ತಾರೆ.

ಜಯಲಲಿತಾ, ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?ಜಯಲಲಿತಾ, ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ಪವಿತ್ರ ನೀರು

ಪವಿತ್ರ ನೀರು

ಇಲ್ಲಿನ ನೀರು ನೀಲಿ ಬಣ್ಣದಲ್ಲಿರುತ್ತದೆ ಹಾಗೂ ಶುಭ್ರವಾಗಿ ಪಾರದರ್ಶಕವಾಗಿರುತ್ತದೆ. ಇಲ್ಲಿನ ನೀರು ಹಿಮಾಲಯದ ನೀರಿನಷ್ಟೇ ಪ್ರಾಮುಖ್ಯವಾಗಿದೆ ಎನ್ನಲಾಗುತ್ತದೆ. ಜನರು ಇಲ್ಲಿನ ನೀರನ್ನು ಬಾಟಲಿನಲ್ಲಿ ತುಂಬಿ ಮನೆಗೆ ಕೊಂಡೊಯ್ಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X