Search
  • Follow NativePlanet
Share
» »ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...

ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...

ವರ್ತಮಾನನದ ತುಲನೆಯಲ್ಲಿ ಭಾರತದ ಇತಿಹಾಸ ಬಹಳ ಆಸಕ್ತಿದಾಯಕವಾಗಿರುತ್ತದೆ. ಆಗಿನ ಕಾಲದಲ್ಲಿ ನಡೆದಿರುವ ಕೆಲವು ಘಟನೆಗಳು ಕೆಲವರಿಗೆ ಸುಳ್ಳೆಂದೆನಿಸಬಹುದು. ಆದರೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ತನ್ನ ಪೌರಾಣಿಕ ಚಮತ್ಕಾರಗಳಿಂದಾಗಿ ಇಂದಿಗೂ ಭಾರತದಲ್ಲಿ ಅನೇಕ ಸ್ಥಳಗಳಿವೆ. ಇಂದೂ ನಾವು ನಿಮಗೆ ಒಂದು ವಿಶೇಷ ಸ್ಥಳದ ಬಗ್ಗೆ ಹೇಳ ಹೊರಟಿದ್ದೇವೆ. ಅದರ ಇತಿಹಾಸ ಒಂದು ಮಹಾಭಾರತದ ಘಟನೆಗೆ ಸಂಬಂಧಿಸಿದೆ.

ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

ಸಣ್ಣ ಕಾಶಿಯಲ್ಲಿದೆ ಈ ಮಂದಿರ

ಸಣ್ಣ ಕಾಶಿಯಲ್ಲಿದೆ ಈ ಮಂದಿರ

ಸಣ್ಣ ಕಾಶಿಯೆಂದೇ ಪ್ರಸಿದ್ಧವಾಗಿರುವ ಹರಿಯಾಣದ ಜಜ್ಜಾರ್ ಜಿಲ್ಲೆಯ ಬೆರಿಯಲ್ಲಿ ಈ ಐತಿಹಾಸಿಕ ಮಂದಿರವಿದೆ. ಇದನ್ನು ಭೀಮೇಶ್ವರಿ ದೇವಿ ಮಂದಿರ ಎನ್ನಲಾಗುತ್ತದೆ. ಈ ದೇವಸ್ಥಾನವನ್ನು ಮಹಾಭಾರತದ ಧೃತರಾಷ್ಟ್ರನ ಪತ್ನಿ ಗಾಂಧಾರಿ ಮಾಡಿಸಿದ್ದಳಂತೆ. ಈ ಮಂದಿರದಲ್ಲಿ ವರ್ಷಕ್ಕೆ ಎರಡು ಸಲ 9 ದಿನಗಳ ಕಾಲ ಉತ್ಸವವನ್ನು ನಡೆಸಲಾಗುತ್ತದೆ.

ದೇವಿಯ ಸ್ಥಾಪನೆಯ ಹಿಂದಿದೆ ಒಂದು ಪೌರಾಣಿಕ ಕಥೆ

ದೇವಿಯ ಸ್ಥಾಪನೆಯ ಹಿಂದಿದೆ ಒಂದು ಪೌರಾಣಿಕ ಕಥೆ

ಈ ಮಂದಿರದ ನಿರ್ಮಾಣ ಹಾಗೂ ದೇವಿಯ ಸ್ಥಾಪನೆಯ ಹಿಂದಿದೆ ಒಂದು ಪೌರಾಣಿಕ ಕಥೆ. ಪಾಂಡವರು ಹಾಗೂ ಕೌರವರ ನಡುವೆ ಮಹಾಭಾರತದ ಯುದ್ಧ ನಡೆಯುತ್ತ ಇದ್ದ ಸಂದರ್ಭ ಭೀಮನು ತನ್ನ ವಿಜಯಕ್ಕೋಸ್ಕರ ಕುಲದೇವಿಯನ್ನು ತರಲು ಈಗಿನ ಪಾಕಿಸ್ತಾನದಲ್ಲಿರುವ ಹಿಂಗಲಾಜ್ ಬೆಟ್ಟಕ್ಕೆ ಹೋಗುತ್ತಾನೆ. ದೇವಿ ಭೀಮನ ಜೊತೆ ಹೊರಡಲು ತಯಾರಾಗಿದ್ದಳು ಆದರೆ ಒಂದು ಷರತ್ತನ್ನು ಇಟ್ಟಳು, ಅದೇನೆಂದರೆ ಭೀಮನು ದೇವಿಯನ್ನು ತನ್ನ ಭುಜದ ಮೇಲೆ ಕುಳ್ಳಿರಿಸಿ ಯುದ್ದಭೂಮಿಗೆ ಹೋಗಬೇಕು. ಆಗ ಮಾತ್ರ ಭೀಮನ ಜೊತೆ ಬರುವುದಾಗಿ ಷರತ್ತನ್ನಿಡುತ್ತಾಳೆ. ಒಂದು ವೇಳೆ ದೇವಿಯನ್ನು ಹೆಗಲಿನಿಂದ ಇಳಿಸಿದ್ದಲ್ಲಿ ಅಲ್ಲೇ ಪ್ರತಿಷ್ಟಾಪಿತಳಾಗುವುದಾಗಿ ಹೇಳುತ್ತಾಳೆ.

 ದೇವಿಯನ್ನು ಹೆಗಲಿನಿಂದ ಇಳಿಸಿದ ಭೀಮ

ದೇವಿಯನ್ನು ಹೆಗಲಿನಿಂದ ಇಳಿಸಿದ ಭೀಮ

PC- Ranveig

ಭೀಮ ದೇವಿಯ ಮೂರ್ತಿಯನ್ನು ಹೆಗಲಿನಲ್ಲಿ ಹೊತ್ತುಕೊಂಡು ಬರುತ್ತಿರುವಾಗ ಶಂಖನಾದ ಕೇಳಿಸುತ್ತದೆ. ದೇವಿಯನ್ನು ಮರದ ಕೆಳಗೆ ಇಟ್ಟು ಅತ್ತ ಹೋಗಿ ಮರಳಿ ಬಂದು ದೇವಿಯ ಮೂರ್ತಿಯನ್ನು ಎತ್ತಲು ಪ್ರಯತ್ನಿಸಿದಾಗ ಮೂರ್ತಿಯನ್ನು ಎತ್ತಲು ಸಾಧ್ಯವಾಗಲಿಲ್ಲ, ತನ್ನ ಶಕ್ತಿಯಿಂದಾಗಿ ಪ್ರಸಿದ್ಧನಾಗಿರುವ ಭೀಮ ಸೋಲೊಪ್ಪಿಕೊಳ್ಳಬೇಕಾಯಿತು. ಈ ಘಟನೆಯ ನಂತರ ದೇವಿ ಅದೇ ಸ್ಥಳದಲ್ಲಿ ನೆಲೆಯೂರಿದಳು. ಮಹಾಭಾರತ ಯುದ್ಧದ ನಂತರ ಧೃತರಾಷ್ಟ್ರನ ಪತ್ನಿ ಗಾಂಧಾರಿ ಈ ದೇವಸ್ಥಾನವನ್ನು ನಿರ್ಮಿಸಿದಳು ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ಮಂದಿರವು ಹರಿಯಾಣದ ಜಜ್ಜಾರ್ ಜಿಲ್ಲೆಯಲ್ಲಿರುವ ಬೆರಿ ಎಂಬಲ್ಲಿದೆ. ಇಲ್ಲಿಗೆ ನೀವು ದೆಹಲಿಯಿಂದ ಸುಲಭವಾಗಿ ತಲುಪಬಹುದು. ದೆಹಲಿಯಿಂದ ಹರಿಯಾಣಕ್ಕೆ ಪ್ರತಿ ಗಂಟೆಗೊಮ್ಮೆ ಬಸ್ ಇದೆ. ಇಲ್ಲಿಗೆ ಸಸಮೀಪದ ವಿಮಾನ ನಿಲ್ದಾಣವೆಂದರೆ ಅದು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

Read more about: india temple haryana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X