Search
  • Follow NativePlanet
Share
» »ಗೋವಾದಲ್ಲಿದೆ ಅದ್ಭುತವಾದ ಅಭಯಾರಣ್ಯ ಮತ್ತು ನ್ಯಾಷನಲ್ ಪಾರ್ಕ್

ಗೋವಾದಲ್ಲಿದೆ ಅದ್ಭುತವಾದ ಅಭಯಾರಣ್ಯ ಮತ್ತು ನ್ಯಾಷನಲ್ ಪಾರ್ಕ್

ಗೋವಾ ರಾಜ್ಯ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ. ಈ ತಾಣವನ್ನು ಕಂಡು ಆನಂದದಿಂದ ಕಾಲಕಳೆಯಲು ಯುವಕರು ಹೆಚ್ಚಾಗಿ ಹಂಬಲಿಸುತ್ತಿರುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ, ದೊಡ್ಡ ದೊಡ್ಡ ಕಟ್ಟಡಗಳು, ಬೀಚ್‍ಗಳು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂ

ಗೋವಾ ರಾಜ್ಯ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ. ಈ ತಾಣವನ್ನು ಕಂಡು ಆನಂದದಿಂದ ಕಾಲಕಳೆಯಲು ಯುವಕರು ಹೆಚ್ಚಾಗಿ ಹಂಬಲಿಸುತ್ತಿರುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ, ದೊಡ್ಡ ದೊಡ್ಡ ಕಟ್ಟಡಗಳು, ಬೀಚ್‍ಗಳು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದುದು. ಈ ತಾಣಕ್ಕೆ ಭೇಟಿ ನೀಡಲು ಕೇವಲ ದೇಶದಿಂದ ಅಲ್ಲದೇ ವಿದೇಶಗಳಿಂದಲೂ ಕೂಡ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪಾರ್ಟಿ, ಮೋಜು, ಮಸ್ತಿಗೆ ಸೂಕ್ತವಾದ ಸ್ಥಳವೆಂದರೆ ಅದು ಗೋವಾ.

ಕರ್ನಾಟಕದ ಅದ್ಭುತ ಅಭಯಾರಣ್ಯಗಳುಕರ್ನಾಟಕದ ಅದ್ಭುತ ಅಭಯಾರಣ್ಯಗಳು

<strong></strong>ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳುಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಗೋವಾದಲ್ಲಿ ಷಾಪಿಂಗ್ ಮಾಲ್‍ಗಳು, ದೊಡ್ಡ ಕಟ್ಟಡಗಳು, ಬೀಚ್‍ಗಳ ಬಗ್ಗೆ ಸಾಮಾನ್ಯವಾಗಿ ನಿಮಗೆ ತಿಳಿದೇ ಇರುತ್ತದೆ. ಪ್ರಸಿದ್ಧ ಪ್ರವಾಸಿ ಆಕರ್ಷಣೆ ಹೊಂದಿರುವ ಗೋವಾದಲ್ಲಿ ಒಂದು ಅಭಯಾರಣ್ಯವು ಇದೆ ಎಂಬುದು ನಿಮಗೆ ಗೊತ್ತ? ಹಾಗೆಯೇ ಆ ಅಭಯಾರಣ್ಯದ ಜೊತೆ ಜೊತೆಗೆ ಒಂದು ನ್ಯಾಷನಲ್ ಪಾರ್ಕ್ ಕೂಡ ಇದೆ. ಪ್ರಸ್ತುತ ಲೇಖನದಲ್ಲಿ ಗೋವಾದಲ್ಲಿನ ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್‍ನ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್

ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್

ಈ ಅಭಯಾರಣ್ಯವು ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿರುವ 240 ಚದರ ಕಿ.ಮೀ ರಕ್ಷಿತವಾದ ಪ್ರದೇಶವಾಗಿದೆ. ಈ ಅದ್ಭುತವಾದ ಪ್ರದೇಶವು ಗೋವಾದ ರಾಜಧಾನಿಯಾದ ಪಣಜಿಯಿಂದ ಸುಮಾರು 57 ಕಿ.ಮೀ ದೂರದಲ್ಲಿರುವ ಮೋಲೆಮ್ ಎಂಬ ಪಟ್ಟಣಕ್ಕೆ ಸಮೀಪದಲ್ಲಿದೆ.


tskamdi

ವನ್ಯಜೀವಿ ಅಭಯಾರಣ್ಯ

ವನ್ಯಜೀವಿ ಅಭಯಾರಣ್ಯ

ಈ ಅಭಯಾರಣ್ಯವನ್ನು ಮೊದಲು ಮೊಲೆಮ್ ಗೇಮ್ ಅಭಯಾರಣ್ಯ ಎಂದು ಕರೆಯಲಾಗುತ್ತಿತ್ತು. ನಂತರ 1969 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಣೆಯಾಯಿತು. ತದನಂತರ ಈ ಅಭಯಾರಣ್ಯವನ್ನು ಭಗವಾನ್ ಮಹಾವೀರ್ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು. ಈ ಸುಂದರವಾದ ಅಭಯಾರಣ್ಯವು 107 ಚದರ ಕಿ.ಮೀನಷ್ಟು ವ್ಯಾಪ್ತಿಯನ್ನು ಹೊಂದಿದೆ. ಪ್ರಮುಖವಾದ ಪ್ರದೇಶವಾದ ಈ ಸ್ಥಳವನ್ನು 1978 ರಲ್ಲಿ ಮೊಲೆಮ್ ನ್ಯಾಷನಲ್ ಪಾರ್ಕ್ ಕೂಡ ಸೂಚಿಸಲಾಯಿತು.

Shefali Kumar

ನಿತ್ಯ ಹರಿದ್ವರ್ಣ ಕಾಡುಗಳು

ನಿತ್ಯ ಹರಿದ್ವರ್ಣ ಕಾಡುಗಳು

ನಿತ್ಯ ಹರಿದ್ವರ್ಣ ಕಾಡುಗಳಿಂದ ಕಂಗೊಳಿಸುತ್ತಿರುವ ಈ ಸ್ಥಳಕ್ಕೆ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿನ ನ್ಯಾಷನಲ್ ಪಾರ್ಕ್ ಅನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳು ಯಾವುವು ಎಂದರೆ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು, ಪಶ್ಚಿಮ ಕರಾವಳಿ ಅರೆ-ನಿತ್ಯ ಹರಿದ್ವರ್ಣ ಕಾಡುಗಳು ಮತ್ತು ತೇವಾಂಶವುಳ್ಳ ಕಾಡುಗಳು. ಇಲ್ಲಿ ಅತಿ ಹೆಚ್ಚಾಗಿ ನೀರು ಇರುವುದರಿಂದ ಪ್ರಾಣಿ ಸಂಕುಲಗಳಿಗೆ ನೀರಿನ ಕೊರತೆ ಎಂದಿಗೂ ಉಂಟಾಗುವುದಿಲ್ಲ.

Microporus P.

ಪ್ರಾಣಿ ಸಂಕುಲ

ಪ್ರಾಣಿ ಸಂಕುಲ

ಭಗವಾನ್ ಮಹಾವೀರ್ ರಾಷ್ಟೀಯ ಉದ್ಯಾನವನದಲ್ಲಿ 722 ಜಾತಿಯ ಹೂವಿನ ಗಿಡಗಳನ್ನು ಕಾಣಬಹುದು. ಇಲ್ಲಿ ಮುಖ್ಯವಾಗಿ ಕಪ್ಪು ಚಿರತೆ, ಜಿಂಕೆ, ಬಂಗಾಳದ ಹುಲಿ, ಚಿರತೆ, ಹಾರುವ ಆಳಿಲು, ಕಾಡು ಹಂದಿ, ಕಾಡು ನಾಯಿ ಇನ್ನು ಹಲವಾರು ಪ್ರಾಣಿಗಳನ್ನು ಇಲ್ಲಿ ಕಂಡು ಬರುವ ಪ್ರಾಣಿ ಸಂಕುಲವಾಗಿದೆ.


bm.iphone

ಪಕ್ಷಿಧಾಮ

ಪಕ್ಷಿಧಾಮ

ಈ ಅಭಯಾರಣ್ಯದಲ್ಲಿ ಕೇವಲ ಪ್ರಾಣಿಗಳೇ ಅಲ್ಲದೇ ಪಕ್ಷಿಗಳು ಕೂಡ ಇವೆ. ಅವುಗಳು ಯಾವುವು ಎಂದರೆ ಡ್ರಾಂಗೋ, ಪಾರಿವಾಳ, ನೀಲಿ ಬಣ್ಣದ ಹಕ್ಕಿ, ಗೋಲ್ಡನ್ ಓನಿಯನ್, ಮರಕುಟಿಕ, ಇನ್ನೂ ಹಲವಾರು ದೇಶಿಯ ಹಾಗು ವಿದೇಶಿಯ ಹಕ್ಕಿಯ ಪಕ್ಷಿಧಾಮವನ್ನು ಕೂಡ ಇಲ್ಲಿ ಕಂಡು ಆನಂದಿಸಬಹುದಾಗಿದೆ.


jgphaneuf

ಬಣ್ಣದ ಚಿಟ್ಟೆಗಳು

ಬಣ್ಣದ ಚಿಟ್ಟೆಗಳು

ಈ ತಾಣದಲ್ಲಿ ಬಣ್ಣ ಬಣ್ಣದ ಚಿಟ್ಟೆಗಳನ್ನು ಕೂಡ ಕಾಣಬಹುದು. ನೀಲಿ ಮಾರ್ಮನ್, ಸಾಮಾನ್ಯ ಜೀಝೆಲ್, ಸಾಮಾನ್ಯ ಮಾರ್ಮನ್, ಕ್ರಿಮ್ಸ್‍ನ್ ಗುಲಾಬಿ, ಸಣ್ಣ ಚಿಟ್ಟೆ, ಸರಳ ಹುಲಿ ಇನ್ನು ಹಲವಾರು ಆಕರ್ಷಣೆಗಳನ್ನು ಕಣ್ಣು ತುಂಬಿಕೊಳ್ಳಬಹುದು.


Conal Gallagher

ಸರೀಸೃಪಗಳು

ಸರೀಸೃಪಗಳು

ಈ ಅಭಯಾರಣ್ಯದಲ್ಲಿ ಸರೀಸೃಪಗಳು ಕೂಡ ಇವೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ ಕಿಂಗ್ ಕೋಬ್ರಾ, ಕಂಚಿನ ಮರದ ಹಾವು, ಬೆಕ್ಕು ಹಾವು, ಹಿಪ್-ಮೂಸ್, ಪಿಟ್ ವೈಪರ್, ಇಂಡಿಯನ್ ರಾಕ್ ಫೈಥಾನ್, ಮಲಬಾರ್ ಪಿಟ್ ವೈಪರ್, ಇಲಿ ಹಾವು, ಇಂಡಿಯನ್ ಕೋಬ್ರಾ ಮತ್ತು ಸಾಮಾನ್ಯವಾದ ಹಾವುಗಳು ಇತ್ಯಾದಿ. ಕೇವಲ ಪ್ರಾಣಿಗಳು, ಪಕ್ಷಿಗಳೇ ಅಲ್ಲದೇ ಸರೀಸೃಪಗಳನ್ನು ಕೂಡ ಕಂಡು ಆನಂದಿಸಬಹುದಾಗಿದೆ.

ಮಹಾದೇವ ದೇವಾಲಯ

ಮಹಾದೇವ ದೇವಾಲಯ

ಈ ಸುಂದರವಾದ ಅಭಯಾರಣ್ಯವನ್ನು ಕಂಡ ನಂತರ ಸಮೀಪದಲ್ಲಿ ಒಂದು ದೇವಾಲಯವು ಕೂಡ ಇದೆ. ಅದೇ ದೇವಾಲಯವೇ ಮಹಾದೇವ ದೇವಾಲಯ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಮಹಾಶಿವನಿಗೆ ಅರ್ಪಿತವಾದುದುದಾಗಿದೆ.

ಇದು ಬೊಲ್ಕಾರ್ನೆಮ್ ಎಂಬ ಗ್ರಾಮದ ಪೂರ್ವಕ್ಕೆ ಕೇವಲ 13 ಕಿ.ಮೀ ದೂರದಲ್ಲಿ ಈ ಪುರಾತನವಾದ ದೇವಾಲಯವಿದೆ. ಅತ್ಯಂತ ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ದೇವಾಲಯವು ಪ್ರವಾಸಿಗರ ಆಕರ್ಷಣೆ ಕೂಡ ಆಗಿದೆ.

Marcus334

ತಂಬದಿ ಜಲಪಾತ

ತಂಬದಿ ಜಲಪಾತ

ಈ ಸುಂದರವಾದ ಜಲಪಾತವು ಕರ್ನಾಟಕದ ಗಡಿಯಲ್ಲಿರುವ ತಂಬದಿ ಸುರ್ಲಾದ ನೈರುತ್ಯ ದಿಕ್ಕಿನಲ್ಲಿ ಇದೆ. ಇಲ್ಲಿಂದ ಕೇವಲ 2 ಕಿ.ಮೀ ದೂರದಲ್ಲಿ ಈ ಜಲಪಾತವು ದೂದ್ ಸಾಗರ್ ಜಲಪಾತಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆ ಎತ್ತರದಲ್ಲಿದೆ.

ಆದರೆ ಈ ಜಲಪಾತದ ಕಡಿದಾದ ಅಂಕುಡೊಂಕಾದ ಕಲ್ಲಿನ ಮಾರ್ಗ ಅದ್ಭುತವಾದ ಅನುಭವವನ್ನು ನಮಗೆ ಒದಗಿಸುತ್ತದೆ. ಈ ಜಲಪಾತದ ಮಾರ್ಗ ಕಷ್ಟಕರವಾದುದು ಎಂದೇ ಹೇಳಬಹುದಾಗಿದೆ.


Marcus334

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X