Search
  • Follow NativePlanet
Share
» »ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ

ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕೇರಳ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಶಿವನಿಗೆ ಸಮರ್ಪಿಸಲಾಗಿದೆ.

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: Rkrish67

ಈ ಸ್ಥಳಕ್ಕೆ ಶ್ರೀ ಭಾಗಂಧ ಮಹರ್ಷಿಯ ಹೆಸರನ್ನು ಇಡಲಾಗಿದೆ. ಇವರು ತಮ್ಮ ಶಿಷ್ಯರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಈ ಮಹರ್ಷಿಯು ಶಿವನ ಆಶೀರ್ವಾದವನ್ನು ಪಡೆಯಲು ತಪಸ್ಸು ಮಾಡಿದನು. ಮಹರ್ಷಿಯ ತಪಸ್ಸಿಗೆ ಮೆಚ್ಚಿ ಶಿವನು ದರ್ಶನವಿತ್ತನು. ಇಲ್ಲಿನ ಶಿವಲಿಂಗವನ್ನು ಶ್ರೀ ಭಾಗಂಧ ಮಹರ್ಷಿ ಸ್ಥಾಪಿಸಿದರು, ಹಾಗಾಗಿ ಇಲ್ಲಿಗೆ ಭಾಗಂಡೇಶ್ವರ ಎನ್ನುವ ಹೆಸರು ಬಂದಿದೆ.

ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್<br /> ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್‌ ಕಳೆಯಲು ಬೆಸ್ಟ್ ಸ್ಪಾಟ್

ಭೇಟಿ ನೀಡಲು ಸೂಕ್ತ

ಭೇಟಿ ನೀಡಲು ಸೂಕ್ತ

PP Yoonus

ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಅಕ್ಟೋಬರ್‌ನಲ್ಲಿ ಈ ದೇವಸ್ಥಾನದಲ್ಲಿ ಹುತ್ತರಿ ಉತ್ಸವ ನಡೆಯುತ್ತದೆ.

ತ್ರಿವೇಣಿ ಸಂಗಮ

ತ್ರಿವೇಣಿ ಸಂಗಮ

PC: Rkrish67

ತ್ರಿವೇಣಿ ಸಂಗಮದಲ್ಲಿರುವ ಸ್ನಾನವು ಮಂಗಳಕರ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ ಎಂದು ಪರಿಗಣಿಸಲಾಗಿದೆ. 1790ಕ್ರಿ.ಶದಲ್ಲಿ ಮೈಸೂರು ರಾಜಮನೆತನವು ದೇವಸ್ಥಾನವನ್ನು ನವೀಕರಿಸಿದೆ ಎಂದು ತಿಳಿದುಬಂದಿದೆ. ದೇವಾಲಯದ ಮೇಲ್ಛಾವಣಿಯು ಪೌರಾಣಿಕ ಕಥೆಗಳನ್ನು ಪ್ರದರ್ಶಿಸುವ ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿದೆ.

ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಇತರ ದೇವತೆಗಳು

ಇತರ ದೇವತೆಗಳು

PC: youtube

ದೇವಾಲಯದ ಪ್ರಮುಖ ದೇವತೆ ಶಿವ. ಆದರೆ ಇಲ್ಲಿ ವಿಷ್ಣು, ಗಣಪತಿ ಮತ್ತು ಸುಬ್ರಹ್ಮಣ್ಯರ ಗುಡಿಗಳೂ ಇವೆ. ಪ್ರತಿದಿನ ಈ ಎಲ್ಲಾ ದೇವರಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ.

ತುಲಾ ಸಂಕ್ರಮಣ

ತುಲಾ ಸಂಕ್ರಮಣ

PC:Rudolph.A.furtado

ಇದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರೆ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿವರ್ಷ ಅಕ್ಟೋಬರ್ 18 ರಂದು ಬರುವ ತುಲಾ ಸಂಕ್ರಮಣದಂದು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ

ವಾಸ್ತುಶಿಲ್ಪ

ವಾಸ್ತುಶಿಲ್ಪ

PC: Ayan Mukherjee

ಭಾಗಂಡೇಶ್ವರ ದೇವಸ್ಥಾನದ ವಾಸ್ತುಶಿಲ್ಪವು ಶ್ರೀಮಂತವಾಗಿದ್ದು, ಇದು ಪ್ರಸಿದ್ಧ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಮರದ ಮೇಲ್ಛಾವಣಿಯ ಮೇಲೆ ಸುಂದರವಾದ ಕೆತ್ತನೆಗಳನ್ನು ತೋರಿಸುತ್ತದೆ. ಗ್ರಾನೈಟ್ ಗೋಡೆಗಳು ಹೂವಿನ ಅಲಂಕಾರಗಳಿಂದ ಆವೃತವಾಗಿದೆ ಮತ್ತು ಭಿತ್ತಿಚಿತ್ರಗಳನ್ನು ತರಕಾರಿ ವರ್ಣಗಳಿಂದ ಅಲಂಕರಿಸಲಾಗಿದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Pranchiyettan

ಪ್ರಸಿದ್ಧ ದೇವಸ್ಥಾನ ಮತ್ತು ತ್ರಿವೇಣಿ ಸಂಗಮವನ್ನು ಹೊರತುಪಡಿಸಿ, ಈ ಸ್ಥಳದಲ್ಲಿ ಹಲವಾರು ಇತರ ಆಕರ್ಷಣೆಗಳಿವೆ. ಇವುಗಳಲ್ಲಿ ಕಾವೇರಿ ನಿಸರ್ಗಧಾಮ, ದುಬಾರೆ, ಚಿನ್ನಥಪ್ಪ ದೇವಸ್ಥಾನ ಮತ್ತು ತಲಕಾವೇರಿ ಕೂಡಾ ಸೇರಿವೆ. ಚಾರಣದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡುತ್ತದೆ. ಮೌಂಟ್. ತವೂರ್ ಒಂದು ಪರ್ವತ ಶಿಖರವಾಗಿದ್ದು,ಶೋಲಾ ಅರಣ್ಯಗಳ ನೋಟವನ್ನು ಒದಗಿಸುವ ಟ್ರೆಕ್ಕಿಂಗ್‌ಗೆ ಅತ್ಯುತ್ತಮ ಮಾರ್ಗವಾಗಿದೆ.

ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ? ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Rkrish67

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಇದು ಸುಮಾರು ೨೪೦ ಕಿ.ಮಿ ದೂರದಲ್ಲಿದೆ.

ಸಮೀಪದ ರೈಲು ನಿಲ್ದಾಣವೆಂದರೆ ಬೆಂಗಳೂರು ಹಾಗೂ ಮೈಸೂರು ರೈಲು ನಿಲ್ದಾಣ. ಇನ್ನು ಭಾಗಮಂಡೇಶ್ವರ ದೇವಾಲಯವು ಮಡಿಕೇರಿಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಆರಾಮವಾಗಿ ರಾಜ್ಯ ಸಾರಿಗೆ ಮುಖಾಂತರ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X