Search
  • Follow NativePlanet
Share
» »ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!

ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!

"ಒಬ್ಬರು ಚೆನ್ನಾಗಿ ಊಟ ಮಾಡದಿದ್ದರೆ, ಒಬ್ಬರು ಚೆನ್ನಾಗಿ ಯೋಚಿಸಲು, ಪ್ರೀತಿಸಲು, ಮಲಗಲು ಸಾಧ್ಯವಿಲ್ಲ, " - ವರ್ಜೀನಿಯಾ ವೂಲ್ಫ್, ಅವರ ಹೇಳಿಕೆ. ಸರಿ! ನಾವೆಲ್ಲರೂ ಇದನ್ನು ಒಪ್ಪಿಕೊಳ್ಳಬಹುದು. ಪ್ರತಿಯೊಬ್ಬರ ಜೀವನದಲ್ಲಿ ಆಹಾರವು ಅವಶ್ಯಕತೆಯಾಗಿದ್ದು ನಿಮ್ಮ ಪ್ರಯಾಣದಲ್ಲಿ ಹಲವು ನೆನಪುಗಳನ್ನು ಸೃಷ್ಟಿಸುತ್ತದೆ. ಆಹಾರವಿಲ್ಲದೆ ಯಾವುದೇ ಪ್ರಯಾಣದ ಮಜವನ್ನು ಅನುಭವಿಸಲು ಸಾಧ್ಯವಿಲ್ಲ, ವಿಶೇಷವಾಗಿ ದಕ್ಷಿಣ ಭಾರತದಾದ್ಯಂತ ಪ್ರವಾಸದಲ್ಲಿರುವಾಗ.

ನಾವು ದಕ್ಷಿಣ ಭಾರತದ ಪಾಕಪದ್ಧತಿಯ ಬಗ್ಗೆ ಯೋಚಿಸುವಾಗ, ನಮ್ಮ ಮನಸ್ಸಿನಲ್ಲಿ ಬರುವ ವಿಶೇಷತೆಗಳೆಂದರೆ ರುಚಿಕರ, ರೋಮಾಂಚಕಾರಿ, ವೈವಿಧ್ಯಮಯ ಮತ್ತು ಖಾರ. ಆದಾಗ್ಯೂ, ಮಸಾಲೆ ಪದಾರ್ಥಗಳಿಂದ ಹಿಡಿದು, ಅಡುಗೆ ವಿಧಾನವು ಅದರ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿ ಮತ್ತಷ್ಟು ಭಿನ್ನವಾಗಿರುತ್ತದೆ. ಮತ್ತು ದಕ್ಷಿಣ ಭಾರತದಲ್ಲಿ ಪ್ರಯಾಣಿಸುವಾಗ ನೂರಾರು ಆಹಾರ ಆಯ್ಕೆಗಳ ಮಧ್ಯೆ ಉತ್ತಮ ಆಹಾರ ಅನುಭವವನ್ನು ಪಡೆಯಲು ಸ್ವಲ್ಪ ಕಷ್ಟವಾಗುವುದು. ಆದ್ದರಿಂದ, ನಿಮಗೆ ಸಹಾಯ ಮಾಡಲು, ದಕ್ಷಿಣ ಭಾರತದ ಎಂಟು ಪ್ರಮುಖ ನಗರಗಳು ನೀಡುವ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನು ನಾವು ಇಲ್ಲಿ ಸಂಗ್ರಹಿಸಿದ್ದೇವೆ.

1. ಚೆನ್ನೈ - ಫಿಲ್ಟರ್ ಕಾಫಿ, ದೋಸೆ ಮತ್ತು ಬಜ್ಜಿಗಳು

1. ಚೆನ್ನೈ - ಫಿಲ್ಟರ್ ಕಾಫಿ, ದೋಸೆ ಮತ್ತು ಬಜ್ಜಿಗಳು

ಚೆನ್ನೈನಲ್ಲಿ ಪ್ರಯಾಣಿಸುವಾಗ, ಸಂತೋಷದಿಂದ ಆಹಾರವನ್ನು ಸವಿಯದೇ ಇರಲು ಉತ್ತಮ ಮಾರ್ಗವಿಲ್ಲ! ಚೆನ್ನೈ ದಕ್ಷಿಣ ಭಾರತದ ಪಾಕಪದ್ಧತಿಯ ಸಮಾನಾರ್ಥಕವಾಗಿದೆ, ಮತ್ತು ಇಲ್ಲಿ ದೊರೆಯುವ ಆಹಾರವು ಅತ್ಯುತ್ತಮವಾಗಿರುತ್ತದೆ.

ಫಿಲ್ಟರ್ ಕಾಫಿ ಮತ್ತು ದೋಸೆಗಳು ಚೆನ್ನೈನಲ್ಲಿ ಹೆಚ್ಚು ಸೇವಿಸುವ ಪಾನೀಯ ಮತ್ತು ಖಾದ್ಯ. ನೀವು ಸಿಹಿ-ವಾಸನೆಯ ಫಿಲ್ಟರ್ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸಬಹುದು ಅಥವಾ ಕುರುಕುಲಾದ ಮಸಾಲ ದೋಸೆಗಳೊಂದಿಗೆ ಬೆಳಿಗ್ಗೆ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು ಮತ್ತು ತಂಪಾದ ಗಾಳಿ, ಆಹ್ಲಾದಕರ ಸೂರ್ಯಾಸ್ತದ ಮಧ್ಯೆ ಮರೀನಾ ಬೀಚ್‌ನಲ್ಲಿ ಕೆಲವು ಬಿಸಿ ಮೊಲಾಗ ಭಜ್ಜಿಗಳೊಂದಿಗೆ ನಿಮ್ಮ ಸಂಜೆಯನ್ನು ಆನಂದಿಸಬಹುದು.

2. ಬೆಂಗಳೂರು - ಕ್ರಾಫ್ಟ್ ಬಿಯರ್ಸ್ ಮತ್ತು ಸ್ಟೀಕ್ಸ್

2. ಬೆಂಗಳೂರು - ಕ್ರಾಫ್ಟ್ ಬಿಯರ್ಸ್ ಮತ್ತು ಸ್ಟೀಕ್ಸ್

ಬೆಂಗಳೂರು ಚೆನ್ನೈನ ಆಹಾರ ಸಂಸ್ಕೃತಿಯ ವಿಸ್ತರಣೆಯಾಗಿದೆ. ಆದಾಗ್ಯೂ, ಈ ಸ್ಟಾರ್ಟ್ ಅಪ್ ಗಳ ರಾಜಧಾನಿ ಅನೇಕ ನವೀನ ಪಬ್‌ಗಳು ಮತ್ತು ಡೈನಿಂಗ್ ರೆಸ್ಟೋರೆಂಟ್‌ಗಳಿಗೆ ನೆಲೆಯಾಗಿದೆ. ಪ್ರವಾಸಿಗರು ಉಡುಪಿ ಶೈಲಿಯ ದೋಸೆ ಮತ್ತು ಕೂರ್ಗ್ ಮೂಲದ ಕೊಡವ ಆಹಾರಗಳು ಮಾತ್ರ ಸಿಗುವ ದಿನಗಳು ಮುಗಿದಿವೆ. ಬೆಂಗಳೂರು ಈಗ ಹಳೆಯ ಮತ್ತು ಹೊಸ ಪಾಕಪದ್ಧತಿಗಳ ಮಿಶ್-ಮ್ಯಾಶ್ ಆಗಿದೆ.

ಬೆಂಗಳೂರು ಭಾರತದ ಅನಧಿಕೃತ ಬಿಯರ್ ರಾಜಧಾನಿ. ಬೆಂಗಳೂರಿನಲ್ಲಿ ತಯಾರಿಸಿದ ಕ್ರಾಫ್ಟ್ ಬಿಯರ್‌ಗಳ ರುಚಿ ನೋಡಿಲ್ಲವೆಂದರೆ, ಬೆಂಗಳೂರಿನಲ್ಲಿ ದೊರೆಯಬಹುದಾದ ಅತ್ಯುತ್ತಮ ಅನುಭವನವನ್ನು ಕಳೆದುಕೊಂಡಿದ್ದೀರಿ ಎಂದೇ ಅರ್ಥ. ಇತ್ತೀಚಿನ ರೆಸ್ಟೋರೆಂಟ್‌ಗಳಲ್ಲಿ ರಸಭರಿತವಾದ ಸ್ಟೀಕ್‌ಗಳೊಂದಿಗೆ ಜೋಡಿಸಿ ನಿಮ್ಮ ಸಂಜೆಯನ್ನು ಕಳೆಯಬಹುದು. ಟೋಸ್ಟ್ & ಟಾನಿಕ್, ಪ್ರೊಸ್ಟ್, ಮಿಲ್ಲರ್ಸ್ 46 ಸ್ಟೀಕ್ ಹೌಸ್ ಮತ್ತು ಬಾರ್, ಪರ್ಮಿಟ್ ಹೌಸ್ ಮತ್ತು ಬ್ರಹ್ಮ ಬ್ರೂ ವರ್ಕ್ಸ್ ಬೆಂಗಳೂರಿನಲ್ಲಿ ಇರುವ ಕೆಲವು ಜನಪ್ರಿಯ ರೆಸ್ಟೊ-ಬಾರ್ಗಳಾಗಿವೆ.

3. ಹೈದರಾಬಾದ್ - ಬಿರಿಯಾನಿ, ಮಟನ್ ಸಮೋಸಾ ಮತ್ತು ಹಲೀಮ್

3. ಹೈದರಾಬಾದ್ - ಬಿರಿಯಾನಿ, ಮಟನ್ ಸಮೋಸಾ ಮತ್ತು ಹಲೀಮ್

ಭಾರತದ ಪ್ರಾಚೀನ ನಗರವಾದ ಹೈದರಾಬಾದ್ ಒಂದು ಮಾರ್ಕ್ಯೂ ಆಹಾರ ತಾಣವಾಗಿದ್ದು, ಅದ್ಭುತವಾದ ಸಾಂಪ್ರದಾಯಿಕ ನಿಜಾಮ್ ಪಾಕಪದ್ಧತಿಯು ಇನ್ನೂ ಜೀವಂತವಾಗಿದೆ. ಭಾರತದಲ್ಲಿ ಅತ್ಯುತ್ತಮ ಬಿರಿಯಾನಿ ದೊರೆಯುತ್ತದೆ ಎಂದರೆ ಅದು ಕೇವಲ ಲಕ್ನೋ ಮತ್ತು ಹೈದರಾಬಾದ್ ನಗರಗಳು ಮಾತ್ರ. ಆದ್ದರಿಂದ, ನೀವು ಹೈದರಾಬಾದ್‌ನಲ್ಲಿರುವಾಗ, ನೀವು ಸವಿಯಬೇಕು ಮೊದಲ ಆಹಾರ ಬಿರಿಯಾನಿ ಆಗಿರಬೇಕು. ಹೈದರಾಬಾದ್‌ನಲ್ಲಿ ಅತ್ಯುತ್ತಮ ಬಿರಿಯಾನಿಯನ್ನು ಸವಿಯಲು ಭೇಟಿ ನೀಡುವ ಸ್ಥಳವೆಂದರೆ ಪ್ಯಾರಡೈಸ್ ರೆಸ್ಟೋರೆಂಟ್.

ಮಾರ್ಕ್ಯೂ ಖಾದ್ಯವಲ್ಲದೆ, ನೀವು ಹೈದೆರಾಬಾದಿನ ಬೀದಿಗಳಲ್ಲಿ ದೊರೆಯುವ ಬಾಯಲ್ಲಿ ನೀರೂರಿಸುವ ಮಟನ್ ಸಮೋಸಾವನ್ನು ಸಹ ಪ್ರಯತ್ನಿಸಬಹುದು. ಹಲೀಮ್ ಮತ್ತೊಂದು ಸಾಂಪ್ರದಾಯಿಕ ಖಾದ್ಯವಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಹೈದರಾಬಾದ್ನ ಆಹಾರ ಸಂಸ್ಕೃತಿಯಲ್ಲಿ ತನ್ನದೇ ಛಾಪು ಮೂಡಿಸಿದೆ.

4. ಕೊಜ್ಹಿಕೊಡೆ - ಸುಲೈಮಾನಿ ಟೀ, ಪಾಜ್ಹಂ ಪೋರಿ ಮತ್ತು ಮಲಬಾರ್ ಶೈಲಿಯ ಬಿರಿಯಾನಿ

4. ಕೊಜ್ಹಿಕೊಡೆ - ಸುಲೈಮಾನಿ ಟೀ, ಪಾಜ್ಹಂ ಪೋರಿ ಮತ್ತು ಮಲಬಾರ್ ಶೈಲಿಯ ಬಿರಿಯಾನಿ

ಕೊಜ್ಹಿಕೊಡೆ ಅಥವಾ ಕ್ಯಾಲಿಕಟ್ ಕೇರಳ ರಾಜ್ಯದ ಅತಿದೊಡ್ಡ ನಗರವಾಗಿದೆ ಮತ್ತು ದಕ್ಷಿಣ ಭಾರತದ ಅತ್ಯುತ್ತಮ ಮಲಬಾರ್ ಶೈಲಿಯ ಪಾಕಪದ್ಧತಿಗಳಿಗೆ ನೆಲೆಯಾಗಿದೆ. ಸಾಂಪ್ರದಾಯಿಕ ಸ್ಥಳೀಯ ರುಚಿಗಳಿಂದ ಹಿಡಿದು ಅಂತರರಾಷ್ಟ್ರೀಯ ಪಾಕಪದ್ಧತಿಗಳವರೆಗೆ ನಗರದ ಆಹಾರಗಳ ಶೈಲಿಯು ಮುಂದುವರಿಯುತ್ತಿದೆ.

ಕೊಜ್ಹಿಕೊಡೆ ನ ಪ್ರಮುಖ ಪಾನೀಯಗಳಲ್ಲಿ ಸುಲಮಣಿ ಚಹಾ ಕೂಡ ಒಂದು. ತಾಜಾ ಗಿಡಮೂಲಿಕೆಗಳ ಸುಲಮಣಿ ಚಹಾದ ಸುವಾಸನೆ ನಿಮಗೆ ಆಹ್ಲಾದಕರ ಅನುಭವ ನೀಡುತ್ತದೆ. ಚಹಾದ ಹೊರತಾಗಿ, ಪಾಜ್ಹಂ ಪೋರಿ ಅಥವಾ ಬಾಳೆಹಣ್ಣಿನ ಫ್ಲಿಟರ್ಗಳು ಮತ್ತೊಂದು ಸ್ಥಳೀಯ ಮತ್ತು ಪ್ರವಾಸಿ ಪ್ರಿಯವಾಗಿದ್ದು ಕೇರಳದ ಆಹಾರ ಸಂಸ್ಕೃತಿಗೆ ಸಮಾನಾರ್ಥಕವಾಗಿದೆ. ಅತ್ಯುತ್ತಮ ಮಲಬಾರ್ ಶೈಲಿಯ ಬಿರಿಯಾನಿ ಸವಿಯಲು ನೀವು ಪ್ಯಾರಾಗಾನ್ ರೆಸ್ಟೋರೆಂಟ್‌ಗೆ ಭೇಟಿ ನೀಡಬಹುದು. ಮಸಾಲೆಗಳು, ಹುರಿದ ಈರುಳ್ಳಿ ಮತ್ತು ಫ್ರೆಶ್ ಮಾಂಸದ ಮಿಶ್ರಣದಿಂದ ಮಾಡಿದ ಈ ಬಿರಿಯಾನಿಯನ್ನು ನೀವು ಟ್ರೈ ಮಾಡಲೇಬೇಕು.

5. ಪಾಂಡಿಚೆರಿ - ಸೀಗಡಿ ಥರ್ಮೈಡರ್ ಮತ್ತು ರಟಾಟೂಲ್

5. ಪಾಂಡಿಚೆರಿ - ಸೀಗಡಿ ಥರ್ಮೈಡರ್ ಮತ್ತು ರಟಾಟೂಲ್

ಪಾಂಡಿಚೆರಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಪಾಕಪದ್ಧತಿಗಳು ದೊರೆಯುವ ತಾಣವಾಗಿದ್ದು, ಆಹಾರ ಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ. ಪಾಂಡಿಚೆರಿಯಲ್ಲಿನ ರುಚಿಕರವಾದ ಪಾಕಪದ್ಧತಿಯು ಫ್ರೆಂಚ್ ಮತ್ತು ತಮಿಳಿಗರ ರುಚಿಗಳ ಪರಿಪೂರ್ಣ ಮಿಶ್ರಣವಾಗಿದೆ. ರತಾಟೂಲ್ ಪಾಂಡಿಚೆರಿಯಲ್ಲಿ ಹೆಚ್ಚು ಸವಿಯುವ ಭಕ್ಷ್ಯಗಳಲ್ಲಿ ಒಂದಾಗಿದೆ. ಇದು ಕ್ಲಾಸಿಕ್ ಫ್ರೆಂಚ್ ಖಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಬ್ರೆಡ್ ಮತ್ತು ಪಾಸ್ಟಾಗಳೊಂದಿಗೆ ಸೇರಿಸಲಾಗುತ್ತದೆ.

ಇದು ಕರಾವಳಿ ಪ್ರದೇಶದಲ್ಲಿರುವುದರಿಂದ, ಸೀಫುಡ್ ಕೂಡ ಬಹಳ ಪ್ರಸಿದ್ಧವಾಗಿದೆ. ಪಾಂಡಿಚೆರಿಯ ಸ್ವಂತ-ಪ್ರಾನ್ ಥರ್ಮಿಡರ್ ರುಚಿಯನ್ನು ಹೊಂದಿದ್ದು, ಪ್ರತಿಯೊಂದು ತುತ್ತಿನಲ್ಲೂ ಅದ್ಬುತ ಅನುಭವ ನೀಡುತ್ತದೆ.

ಇದನ್ನು ಕಡಿಮೆ ಎಣ್ಣೆಯಿಂದ ಬೇಯಿಸಲಾಗುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಪ್ರವಾಸಿಗರು ಮತ್ತು ಪ್ರಯಾಣಿಕರು ಪಾಂಡಿಚೆರಿಗೆ ಮತ್ತೆ ಮತ್ತೆ ಭೇಟಿ ನೀಡಲು ಅದರ ರುಚಿಕರವಾದ ಪಾಕಪದ್ಧತಿಯು ಕೂಡ ಒಂದು.

6. ಉಡುಪಿ - ಗೋಲಿ ಬಾಜೆ, ನೀರ್ ದೋಸೆ, ಮತ್ತು ಕೇನ್

6. ಉಡುಪಿ - ಗೋಲಿ ಬಾಜೆ, ನೀರ್ ದೋಸೆ, ಮತ್ತು ಕೇನ್

ಉಡುಪಿ ಕರ್ನಾಟಕದ ಒಂದು ಸಣ್ಣ ಕರಾವಳಿ ಪಟ್ಟಣವಾಗಿರಬಹುದು; ಆದಾಗ್ಯೂ, ಇದು ಕರ್ನಾಟಕ ಮತ್ತು ಇತರ ರಾಜ್ಯಗಳ ಮೇಲೆ ಬೀರಿರುವ ಪಾಕಪದ್ಧತಿಯ ಪ್ರಭಾವವನ್ನು ಕಡೆಗಣಿಸಲಾಗುವುದಿಲ್ಲ. ಬೆಂಗಳೂರು, ಮುಂಬೈ ಅಥವಾ ಚೆನ್ನೈ ಆಗಿರಲಿ, ಉಡುಪಿ ಶೈಲಿಯ ರೆಸ್ಟೋರೆಂಟ್‌ಗಳು ದಕ್ಷಿಣ ಭಾರತದಾದ್ಯಂತ ತನ್ನದೇ ಛಾಪು ಮೂಡಿಸಿವೆ.

ಗೋಲಿ ಬಾಜೆ ಮತ್ತು ನೀರ್ ದೋಸೆ ಪ್ರಮುಖ ಭಕ್ಷ್ಯಗಳಾಗಿದ್ದು, ನೀವು ಇದನ್ನು ಉಡುಪಿಯ ಪ್ರತಿಯೊಂದು ಮೂಲೆಯಲ್ಲಿಯೂ ಕಾಣಬಹುದು. ಈ ಡೀಪ್ ಫ್ರೈಡ್ ಪ್ಲೈನ್ ಮತ್ತು ನೀರ್ ದೋಸೆ ಉಡುಪಿಯಲ್ಲಿ ಪ್ರಯತ್ನಿಸಬೇಕಾದ ಆಹಾರ ಪದಾರ್ಥಗಳಾಗಿವೆ. ಈ ತಿಂಡಿಗಳು ಅಷ್ಟೇ ಅಲ್ಲದೆ, ಮೀನು ತಿನ್ನುವವರಿಗೆ ಉಡುಪಿ ಪ್ರಸಿದ್ಧ ಆಹಾರ ತಾಣವಾಗಿದೆ. ಇದು ಕರಾವಳಿ ಪ್ರದೇಶದಲ್ಲಿರುವುದರಿಂದ, ನಿಮ್ಮ ತಟ್ಟೆಯಲ್ಲಿ ಕೆಲವು ಉತ್ತಮ ಮತ್ತು ತಾಜಾ ಮೀನುಗಳನ್ನು ನೀಡಲಾಗುವುದು ಎಂದು ನೀವು ನಿರೀಕ್ಷಿಸಬಹುದು. ಕೇನ್ (ಲೇಡಿಫಿಶ್) ಅತ್ಯಂತ ಪ್ರಸಿದ್ಧವಾಗಿದೆ! ಕೇನ್ ಫ್ರೈನ ರುಚಿ ಖಂಡಿತವಾಗಿಯೂ ನೀವು ಇನ್ನೊಮ್ಮೆ ಕೇಳಿ ತಿನ್ನುವಂತೆ ಮಾಡುತ್ತದೆ.

7. ಮಧುರೈ - ಮಟನ್ ಬಾಲ್ಸ್ , ಕೋತು ಪರೋಟಾ ಮತ್ತು ಇಡ್ಲಿ

7. ಮಧುರೈ - ಮಟನ್ ಬಾಲ್ಸ್ , ಕೋತು ಪರೋಟಾ ಮತ್ತು ಇಡ್ಲಿ

ಆರ್ಥಿಕ ಉದಾಸೀನತೆಯಿಂದಾಗಿ ಚೆನ್ನೈಗಿಂತ ಕೆಳಸ್ಥರದಲ್ಲಿರುವ, ಮಧುರೈ ದಕ್ಷಿಣ ಭಾರತದ ಆಹಾರ ಕ್ರಾಂತಿಯನ್ನು ಪ್ರಾರಂಭಿಸಿದ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರ ರೋಮಾಂಚಕ ಪಾಕಶಾಲೆಯ ಗುರುತನ್ನು ಹೊಂದಿರುವ ಮಧುರೈ ತಮಿಳುನಾಡಿನ ಪ್ರಮುಖ ಆಹಾರ ಕೇಂದ್ರವಾಗಿದೆ.

ಮಟನ್ ಬಾಲ್ಸ್ ಮಧುರೈನಲ್ಲಿ ಹೆಚ್ಚು ಸವಿಯುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಹೊರಭಾಗದಲ್ಲಿ ಗರಿಗರಿಯಾಗಿದ್ದು ಒಳಭಾಗದಲ್ಲಿ ಮೃದುವಾಗಿರುತ್ತದೆ; ಇದರ ವಿವರಣೆಯೇ ಕೆಲವು ಮಾಂಸಾಹಾರಿಗಳ ಬಾಯಲ್ಲಿ ನೀರೂರಿಸುತ್ತದೆ! ಕೋತು ಪರೋಟಾ ಮಧುರೈನ ಪ್ರಸಿದ್ಧ ಬೀದಿ ಬದಿ ದೊರೆಯುವ ಖಾದ್ಯವಾಗಿದೆ. ಈ ಫ್ಲಾಕಿ ಫ್ಲಾಟ್‌ಬ್ರೆಡ್ ಯಾವುದೇ ಕರ್ರಿಸ್ ಜೊತೆಗೆ ಸವಿಯಬಹುದು ಮತ್ತು ಮಧುರೈನಲ್ಲಿ ಟ್ರೈ ಮಾಡಲೇ ಬೇಕಾದ ಆಹಾರವಾಗಿದೆ. ಮತ್ತೊಂದು ಅಧಿಕೃತ ಮಧುರೈ ಖಾದ್ಯವೆಂದರೆ ಇಡ್ಲಿ, ನೀವು ಇಡ್ಲಿಯನ್ನು ಬೇರೆಡೆ ತಿಂದಿರಬಹುದು, ಆದರೆ ಮಧುರೈನಲ್ಲಿ ತಯಾರಿಸಿದ ತುಪ್ಪುಳಿನಂತಿರುವ ಇಡ್ಲಿ ನಿಮ್ಮನ್ನು ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಸರಿ ಹಾಗಾದ್ರೆ ಮಧುರೈ ಇಡ್ಲಿಯ ವಿಶೇಷವೇನು? ಅದನ್ನು ಕೇವಲ ಪದಗಳಲ್ಲಿ ವಿವರಿಸಲಾಗುವುದಿಲ್ಲ, ಅದನ್ನು ಅನುಭವಿಸಲು ನೀವು ಮಧುರೈಗೆ ಭೇಟಿ ನೀಡಬೇಕು.

8. ಕೂರ್ಗ್ - ಪಾಂಡಿ ಕರಿ ಮತ್ತು ಕಡುಂಬಟ್ಟು

8. ಕೂರ್ಗ್ - ಪಾಂಡಿ ಕರಿ ಮತ್ತು ಕಡುಂಬಟ್ಟು

ಕೂರ್ಗ್ಸ್‌ನ ಪ್ರಮುಖ ಆಕರ್ಷಣೆಗಳೆಂದರೆ ಕೇವಲ ಸುಂದರವಾದ ವೀಕ್ಷಣೆಗಳು, ಭೂದೃಶ್ಯಗಳು ಮತ್ತು ಕ್ಯಾಸ್ಕೇಡ್‌ಗಳು ಅಷ್ಟೇ ಅಲ್ಲ. ಅನೇಕ ಮಸಾಲೆ ತೋಟಗಳಿಗೆ ಇದು ನೆಲೆಯಾಗಿದೆ, ಕೂರ್ಗ್ ತನ್ನದೇ ಆದ ರುಚಿಕರವಾದ ತಿನಿಸುಗಳನ್ನು ಹೊಂದಿದೆ. ಇದು ಮಾಂಸಭರಿತ ಸತ್ಕಾರಗಳಾಗಲಿ ಅಥವಾ ಬೆಳಗಿನ ಉಪಾಹಾರವಾಗಲಿ, ಕೂರ್ಗ್ ಪಾಕಪದ್ಧತಿಯು ನಿಮಗೆ ಅದ್ಬುತ ರುಚಿಯ ಅನುಭವ ನೀಡುತ್ತದೆ.

ಪಾಂಡಿ ಕರಿ ಕೂರ್ಗ್ಸ್‌ನ ಅತ್ಯುತ್ತಮ ಖಾದ್ಯ! ಹಂದಿಯ ತುಂಡುಗಳನ್ನು ಕಟುವಾದ ಗ್ರೇವಿಯೊಂದಿಗೆ ಬೇಯಿಸಿ, ಅನ್ನದೊಂದಿಗೆ ಬಡಿಸಲಾಗುತ್ತದೆ, ಇದು ಯಾವುದೇ ಆಹಾರ ಪ್ರಿಯರಿಗೆ ಅದ್ಬುತ ಪಾಕವಿಧಾನವಾಗಿದೆ. ಕಡಂಬುಟ್ಟುಗಳು ಅಲ್ಪ ಪ್ರಮಾಣದ ತುರಿದ ತೆಂಗಿನಕಾಯಿಯೊಂದಿಗೆ ಬೆರೆಸಿದ ಅಕ್ಕಿ ಬಾಲ್ಸ್. ಪಾಂಡಿ ಕರಿ ಅಥವಾ ಚಿಕನ್ ಕರ್ರಿಸ್ ಜೊತೆಗೆ ಇದನ್ನು ಸವಿಯಬಹುದು. ಕೂರ್ಗ್‌ನ ರುಚಿಕರವಾದ ತಿನಿಸುಗಳು ನಿಮಗೆ ಹೆಚ್ಚಿನದನ್ನು ಹಂಬಲಿಸುವಂತೆ ಮಾಡುತ್ತವೆ.

Read more about: south india foods
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X