Search
  • Follow NativePlanet
Share
» »2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದಂತಹ ತಾಣಗಳು

2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದಂತಹ ತಾಣಗಳು

ದೇಹಕ್ಕೆ ಸುಂದರವಾದ ಆಕೃತಿ, ವಿಶ್ರಾಂತಿ ಮತ್ತು ಶಕ್ತಿಯ ಸಲುವಾಗಿ ಯೋಗವು ಅತ್ಯಂತ ಉಪಯುಕ್ತವಾದ ವ್ಯಾಯಾಮವಾಗಿದೆ. ಇದರಿಂದಾಗಿ ನಾವು ಆರೋಗ್ಯವಂತ ಮನಸ್ಸು ಮತ್ತು ಉತ್ಸಾಹವನ್ನು ಹೊಂದಬಹುದಾಗಿದೆ ಇದರ ನಿರಂತರ ಅಭ್ಯಾಸದಿಂದಾಗಿ ನಮ್ಮ ಮಾನಸಿಕ ದೈಹಿಕ ಮತ್ತು ಆಧ್ಯಾತ್ಮಿಕ ಸದೃಡತೆ ಕಾಪಾಡಲು ಪರಿಣಾಮಕಾರಿಯಾಗಿದೆ. ಇಂದು ಯೋಗವು ಭಾರತದಲ್ಲಿಯ ವ್ಯಾಯಾಮಗಳಲ್ಲಿಯ ಒಂದು ಪ್ರಮುಖ ಅಂಗವಾಗಿದ್ದು, ಯೋಗಕ್ಕೆ ಭಾರತದಲ್ಲಿ ಹಲವಾರು ಶತಮಾನಗಳ ಹಿಂದಿನ ಇತಿಹಾಸವಿದೆ ಹಾಗೂ ಹಿಂದಿನಿಂದಲೂ ಮಹತ್ವವನ್ನು ಕೊಡುತ್ತಾ ಬಂದಿದ್ದಾರೆ. ಯೋಗಕ್ಕಾಗಿ ನೀವೇನಾದರೂ ಸ್ಥಳಗಳ ಅನ್ವೇಣೆಯಲ್ಲಿದ್ದಲ್ಲಿ ಭಾರತಾದ್ಯಂತ ಹಲವಾರು ಸ್ಥಳಗಳಲ್ಲಿ ಆಯಾ ಸಾಮರ್ಥ್ಯಕ್ಕೆ ಹಾಗೂ ಎಲ್ಲಾ ಹಂತದ ಅನುಭವಕ್ಕೆ ಅನುಗುಣವಾಗಿ ಯೋಗ ತರಗತಿಗಳನ್ನು ನಡೆಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಚಿಕ್ಕ ವಯಸ್ಸಿನಿಂದಲೂ ಈ ಪ್ರಾಚೀನ ಅಭ್ಯಾಸದ ಬಗ್ಗೆ ಕಲಿಯಲು ಬಯಸುವ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಹ ಹೊಂದಿವೆ.

ಭಾರತದಲ್ಲಿಯ ಕೆಲವು ಅತ್ಯುತ್ತಮ ಯೋಗ ತಾಣಗಳ ಪಟ್ಟಿ ಈ ಕೆಳಗಿವೆ:

1) ರಿಷಿಕೇಶ

ಯೋಗ, ಧ್ಯಾನ ಮತ್ತು ಆಯುರ್ವೇದಕ್ಕಾಗಿ ರಿಷಿಕೇಶವು ಭಾರತದ ಅತ್ಯುತ್ತಮ ಕೇಂದ್ರವಾಗಿದ್ದು, ಇದು ಭಾರತದ ಅತ್ಯುತ್ತಮ ಯೋಗ ತಾಣಗಳಲ್ಲಿ ಒಂದೆನಿಸಿದೆ. ಇದು ತನ್ನ ಬಿಸಿ ಖನಿಜಯುಕ್ತ ನೀರಿಗೆ ಸಹ ಪ್ರಸಿದ್ಧವಾಗಿದೆ. ಇಲ್ಲಿ ಯೋಗ ಗುರು ಸ್ವಾಮಿ ವಿವೇಕಾನಂದರ ಆಶ್ರಮವಿದೆ. ಋಷಿಕೇಶವು ಹಿಮಾಲಯದ ತಪ್ಪಲಿನಲ್ಲಿರುವುದರಿಂದ ಬಲವಾದ ಮತ್ತು ಶಕ್ತಿಯುತವಾದ ಆಧ್ಯಾತ್ಮಿಕ ಸೆಳೆತವನ್ನು ಹೊಂದಿದೆ. ಈ ಪ್ರದೇಶವು ದೇವಾಲಯಗಳು, ಗುರುಗಳು ಮತ್ತು ಆಶ್ರಮಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಆಶ್ರಮಗಳಿರುವುದರಿಂದ ನಿಮಗೆ ಶ್ರೇಷ್ಠ ಗುರುಗಳಿಂದ ಯೋಗವನ್ನು ಕಲಿಯಲು ಅನುವು ಮಾಡಿಕೊಡುತ್ತದೆ.

2)ಕೇರಳ

ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಯುರ್ವೇದ ಮತ್ತು ಗಿಡಮೂಲಿಕೆಗಳ ಚಿಕಿತ್ಸೆಯ ಮೂಲಕ ಜನರು ತಮ್ಮ ದೇಹವನ್ನು ಕಾಪಾಡಲು ಬಳಸುತ್ತಿದ್ದ ಪದ್ದತಿಗೆ ಕೇರಳವು ಹೆಸರುವಾಸಿಯಾಗಿದ್ದು, ಇದು ಭಾರತದಲ್ಲಿಯ ಅತ್ಯಂತ ಪ್ರಸಿದ್ದ ಯೋಗ ತಾಣಗಳಲ್ಲೊಂದಾಗಿದೆ. ಕೇರಳದಲ್ಲಿ ಹಲವಾರು ರೆಸಾರ್ಟ್ ಗಳು ಮತ್ತು ಹೋಟೇಲುಗಳಲ್ಲಿ ಅಲ್ಲಿಗೆ ಬರುವ ಅತಿಥಿಗಳಿಗಾಗಿ ಮಸಾಜ್ ಮತ್ತು ಯೋಗ ತರಗತಿಗಳ ಸೌಲಭ್ಯವನ್ನು ಒದಗಿಸಿಕೊಡುತ್ತವೆ.

3) ಆರೋವಿಲ್ಲೆ

ಅರೋವಿಲ್ಲೆ ಭಾರತದ ಮತ್ತೊಂದು ಜನಪ್ರಿಯ ಯೋಗ ತಾಣವಾಗಿದ್ದು, ಅದರ ವಿಶಿಷ್ಟವಾದ ವಾಸ್ತುಶಿಲ್ಪದ ಶೈಲಿಯಿಂದಾಗಿ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತದೆ, ಇದು ಬಾಹ್ಯಾಕಾಶದಿಂದ ಯುಎಫ಼್ ಒ (ವಿಶೇಷವಾದ ಹಾರಾಡುವ ಒಂದು ವಸ್ತು) ನಂತೆ ಕಾಣುತ್ತದೆ. ಆರೊವಿಲ್ಲೆಯನ್ನು "ಮಾನವ ಪ್ರಯೋಗ"(ಹ್ಯೂಮನ್ ಎ಼ಕ್ಸ್ಪ್ ರಿಮೆಂಟ್) ಎಂದು ಕರೆಯಲಾಗಿದೆ ಏಕೆಂದರೆ ಇದು ಮಾನವ ಜೀವನದ ಹೊಸ ವಿಧಾನವಾಗಿದೆ. ಇತರ ಆಶ್ರಮಗಳು ಅಥವಾ ಆಧ್ಯಾತ್ಮಿಕ ಸ್ಥಳಗಳಿಗಿಂತ ಭಿನ್ನವಾಗಿರುವ ಆರೋವಿಲ್ ತನ್ನದೇ ಆದ ತತ್ತ್ವವನ್ನು ಹೊಂದಿದೆ. ಆದ್ದರಿಂದ ಧ್ಯಾನ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಯೋಗವನ್ನು ಅಭ್ಯಾಸ ಮಾಡಲು ಪ್ರಪಂಚದಾದ್ಯಂತದ ಅನೇಕ ಜನರನ್ನು ಆಕರ್ಷಿಸುತ್ತದೆ.

Yoga destinations

4) ಗೋವಾ

ಗೋವಾವು ದೇಶ ಹಾಗೂ ವಿದೇಶಗಳ ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ನಿರಂತರವಾಗಿ ಭೇಟಿ ನೀಡಲ್ಪಡುವ ತಾಣವಾಗಿದೆ. ಈ ಬೀಚ್ ಗಳ ನಗರವು ವಾರಾಂತ್ಯದಲ್ಲಿ ಜನರಿಗೆ ಆನಂದ ಪಡುವಂತಹ ಸರ್ಫಿಂಗ್, ವಿಂಡ್ ಸರ್ಫಿಂಗ್, ಸ್ಕೂಬಾ ಡೈವಿಂಗ್, ಫಿಶ್ಶಿಂಗ್, ಅಥವಾ ಸಮುದ್ರ ತೀರಗಳಲ್ಲಿ ವಿಶ್ರಾಂತಿ ಪಡೆಯುವಂತಹ ಹಲವಾರು ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ. ಗೋವಾದ ಸುತ್ತಲಿನ ವಿವಿಧ ರೆಸಾರ್ಟ್‌ಗಳಲ್ಲಿ ನೀವು ಯೋಗ ತರಗತಿಗಳನ್ನು ಸಹ ಕಾಣಬಹುದಾಗಿದ್ದು, ಇಲ್ಲಿ ಒಂದೊಂದೇ ತರಗತಿಗಳು ಅಥವಾ ಸಹ ಪ್ರಯಾಣಿಕರೊಂದಿಗೆ ಗುಂಪು ತರಗತಿಗಳನ್ನು ನಡೆಸಿಕೊಡುವ ಸೌಲಭ್ಯವನ್ನು ಒದಗಿಸಿಕೊಡುತ್ತಾರೆ.

5) ಧರ್ಮಶಾಲ

ಭಾರತದ ಹಿಮಾಚಲಪ್ರದೇಶದಲ್ಲಿರುವ ಧರ್ಮಶಾಲ ಮತ್ತೊಂದು ಪ್ರಸಿದ್ದ ತಾಣವಾಗಿದ್ದು, ಇದನ್ನು ಬುದ್ದನು ಕಲಿಸಿದ ಸ್ಥಳ ಎಂದೂ ಕರೆಯುತ್ತಾರೆ. ಈ ಪಟ್ಟಣವು ಹಿಮಚ್ಛಾದಿತ ಪರ್ವತಗಳು, ಹುಲ್ಲುಗಾವಲುಗಳು, ಮತ್ತು ಕಾಡುಗಳಿಂದ ಆವೃತವಾಗಿದೆ. ಇಲ್ಲಿಯ ನಯನ ಮನೋಹರ ದೃಶ್ಯಾವಳಿಗಳು ಮತ್ತು ಆಧ್ಯಾತ್ಮಿಕತೆಗೆ ಸೂಕ್ತವಾದ ಸ್ಥಳವಾಗಿರುವುದರಿಂದ ಭಾರತದ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ.

6) ಗೋಕರ್ಣ

ಗೋಕರ್ಣವು ಅತ್ಯಂತ ಪ್ರಭಾವಶಾಲಿ, ಪ್ರಾಚೀನ, ಮತ್ತು ನಿಗೂಢವಾದ ಧಾರ್ಮಿಕ ಸ್ಥಳಗಳು ಇತ್ಯಾದಿಗಳಿಗೆ ನೆಲೆಯಾಗಿರುವ ಭಾರತದ ಪ್ರಸಿದ್ದ ತಾಣಗಳಲ್ಲಿ ಒಂದಾಗಿದ್ದು, ಭಾರತದಲ್ಲಿಯ ಹೆಸರುವಾಸಿಯಾದ ಯೋಗ ತಾಣಗಳಲ್ಲಿ ಒಂದೆನಿಸಿದೆ. ಈ ಆದರ್ಶವಾದ ಸ್ಥಳವು ಯೋಗಾಭ್ಯಾಸ ಅತ್ತು ಧ್ಯಾನಗಳಿಗಾಗಿ ತನ್ನಲ್ಲಿ ಅನ್ವೇಷಣೆ ಮಾಡಬಹುದಾದಂತಹ ಹಲವಾರು ಸ್ಥಳಗಳನ್ನು ಹೊಂದಿದೆ. ಗೋಕರ್ಣಾಗೆ ಸಾವಿರಾರು ವರ್ಷ ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ ಅಲ್ಲದೆ ಈ ಸ್ಥಳದಲ್ಲಿ ಯೋಗವು ಮೊದಲು ಭೂಮಿಗೆ ಬಂತು ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಮತ್ಸ್ಯೇಂದ್ರನಾಥ, ಗೋರಕ್ಷನಾಥ, ಬಾಣ ಮುಂತಾದ ಅನೇಕ ಮಹಾನ್ ಯೋಗಿಗಳು ವಾಸಿಸುತ್ತಿದ್ದರು ಹಾಗೂ ಇವರುಗಳು ತಮ್ಮ ಸುತ್ತಲಿನ ಇತರರಿಗೂ ಯೋಗವನ್ನು ಕಲಿಸಿದರು. ಅವರು ಬಿಟ್ಟು ಹೋದ ಬೋಧನೆಗಳು ಮತ್ತು ಅವರ ಆಶ್ರಮಗಳು ಇಂದು ಪ್ರಪಂಚದಾದ್ಯಂತದ ಯೋಗಿಗಳಿಗೆ ಯೋಗ ಅಭ್ಯಾಸ ಮಾಡವ ತೀರ್ಥಕ್ಷೇತ್ರಗಳಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ಇಲ್ಲಿಗೆ ಆಕರ್ಷಿಸುತ್ತದೆ.

7)ವಾರಣಾಸಿ

ಏಷ್ಯಾದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದೆಂದು ಪ್ರಸಿದ್ದ ವಾಗಿರುವ ವಾರಣಾಸಿಯು ಪ್ರಾಚೀನ ದೇವಾಲಯಗಳು , ಘಾಟ್ ಗಳು, ಮತ್ತು ಸ್ಮಾರಕಗಳನ್ನು ಹೊಂದಿರುವ ಅತ್ಯಂತ ಸುಂದರವಾದ ನಗರವಾವಾಗಿದೆ. ಇದರ ಶ್ರೀಮಂತ ಇತಿಹಾಸ, ಸುಂದರವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಗಳಿಂದಾಗಿ ಯೋಗ ಪಿಯರಿಗೆ ಹಲವಾರು ಅತ್ಯಂತ ಸೂಕ್ತವಾದ ಸ್ಥಳಗಳನ್ನು ಒದಗಿಸಿಕೊಡುತ್ತದೆ. ವಾರಣಾಸಿಯು ತನ್ನ ಉತ್ತಮ ಹವಾಮಾನದಿಂದಾಗಿ ಪ್ರಯಾಣಿಕರಿಗೆ ನೆಮ್ಮದಿಯನ್ನು ಒದಗಿಸಿಕೊಡುವುದಕ್ಕೆ ಹೆಸರುವಾಸಿಯಾಗಿದೆ. ವಾರಣಾಸಿಯು ಅನೇಕ ಯೋಗ ಮಾಡುವ ಸ್ಥಳಗಳನ್ನು ಹೊಂದಿದ್ದು, ಅಲ್ಲಿ ನೀವು ವಿವಿಧ ಶಿಕ್ಷಕರೊಂದಿಗೆ ಯೋಗ ತರಗತಿಗಳನ್ನು ಆನಂದಿಸಬಹುದಾಗಿದೆ ಅಥವಾ ಭಾರತದ ಈ ಪವಿತ್ರ ನಗರದಲ್ಲಿ ಏಕಾಂತತೆ ಮತ್ತು ಮೌನವನ್ನು ಆನಂದಿಸಲು ಧ್ಯಾನಮಾಡುವ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ, ಯೋಗಾಭ್ಯಾಸವನ್ನು ದಿನದ ಯಾವುದೇ ಸಮಯವಾಗಲಿ ಯಾವುದೇ ಸ್ಥಳದಲ್ಲಿಯಾಗಲಿ ಕೈಗೊಳ್ಳುವ ಅಭ್ಯಾಸವಾಗಿದೆ. ಯೋಗ ಮಾಡುವುದರಿಂದ ಹಲವಾರು ಪ್ರಯೋಜನವಿದೆ ಆದರೆ ಇದನ್ನು ಅನುಸರಿಸುವ ರೀತಿ ತಿಳಿದುಕೊಂಡರೆ ಅತ್ಯಂತ ಸುಲಭವೆನಿಸುತ್ತದೆ. ಇದನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು ಹೆಚ್ಚಾಗಿ ಅಭ್ಯಾಸ ಮಾಡಿದಲ್ಲಿ ಸುಲಭ ಮತ್ತು ಸರಳವೆನಿಸುತ್ತದೆ.

Read more about: yoga ayurveda kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X