Search
  • Follow NativePlanet
Share
» »ನಮ್ಮ ಚಿತ್ತ... ವನ್ಯ ಜಗತ್ತಿನತ್ತ...

ನಮ್ಮ ಚಿತ್ತ... ವನ್ಯ ಜಗತ್ತಿನತ್ತ...

By Divya

ವನ್ಯ ಪ್ರಾಣಿ-ಪಕ್ಷಿಗಳನ್ನು ನೋಡುವಾಗ ಉಂಟಾಗುವ ಆಶ್ಚರ್ಯ ಹಾಗೂ ಕುತೂಹಲಗಳ ನಡುವೆ ನಮ್ಮ ಸಮಸ್ಯೆಗಳು ಮರೆತು ಹೋಗುತ್ತವೆ. ಅವುಗಳ ಓಡಾಟ, ಮುಗ್ಧ ಸಂಜ್ಞೆ ಹಾಗೂ ತಮ್ಮವರೊಡನೆ ಒಡಗೂಡಿ ಓಡಾಡುವುದು ಎಲ್ಲವೂ ಒಂದು ಬಗೆಯ ಚೆಂದ. ಇಂತಹ ಸುಂದರ ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ನಮ್ಮ ನಾಡಲ್ಲಿ ಅನೇಕ ವನ್ಯ ಜೀವಿಧಾಮಗಳಿವೆ.

ಹಸಿರು ಸಿರಿಯ ನಾಡು ನಮ್ಮ ಕರುನಾಡು. ಅನೇಕ ಗಿರಿಧಾಮಗಳು ಹಾಗೂ ನದಿ ಕಣಿವೆಗಳನ್ನು ಹೊಂದಿರುವುದರಿಂದ ವನ್ಯ ಜೀವಿಗಳ ಸ್ವರ್ಗ ತಾಣ. ಬೆಂಗಳೂರಿಗೆ ಹತ್ತಿರ ಇರುವ ಈ ವನ್ಯಧಾಮಗಳಿಗೆ ವಾರದ ರಜೆಯಲ್ಲಿ ಭೇಟಿ ನೀಡಬಹುದು. ಬೇಸಿಗೆ ರಜೆಯ ಪ್ರವಾಸ ಇಂತಹ ಸ್ಥಳಗಳಿಗಾದರೆ ಮಕ್ಕಳಿಗೂ ಹೊಸಬಗೆಯ ಅನುಭವ.

ಬಂಡೀಪುರ ಅಭಯಾರಣ್ಯ

ಬಂಡೀಪುರ ಅಭಯಾರಣ್ಯ

ಮೈಸೂರಿನಿಂದ 80 ಕಿ.ಮೀ. ಹಾಗೂ ಬೆಂಗಳೂರಿನಿಂದ 215 ಕಿ.ಮೀ. ದೂರ ಇರುವ ಈ ಉದ್ಯಾನವನ ಚಾಮರಾಜ ನಗರ ಜಿಲ್ಲೆಯ ಆವೃತ್ತಿಯಲ್ಲಿ ಬರುತ್ತದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವುದರಿಂದ ದಟ್ಟವಾದ ಅರಣ್ಯ ಸಂಪತ್ತು ಹಲವಾರು ಪ್ರಾಣಿ-ಪಕ್ಷಿಗಳ ದರ್ಶನ ಮಾಡಬಹುದು. ಈ ಅಭಯಾರಣ್ಯ 7.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ವಾರದಲ್ಲಿ ಗುರುವಾರ ರಜೆಯ ದಿನ. ಉಳಿದ ದಿನದಲ್ಲಿ ಬೆಳಗ್ಗೆ 9 ರಿಂದ 5ರ ವರೆಗೆ ತೆರೆದಿರುತ್ತದೆ. ಇಲ್ಲಿ ಒಳಪ್ರವೇಶಕ್ಕೆ ಟಿಕೆಟ್ ಪಡೆಯಬೇಕು.
PC: wikipedia.org

ದಾಂಡೇಲಿ ವನ್ಯಜೀವಿ ಧಾಮ

ದಾಂಡೇಲಿ ವನ್ಯಜೀವಿ ಧಾಮ

ಕರ್ನಾಟಕದ ಎರಡನೇ ಅತಿ ದೊಡ್ಡ ವನ್ಯಧಾಮ ಇದು. ಬೆಂಗಳೂರಿನಿಂದ 459 ಕಿ.ಮೀ. ಹಾಗೂ ದಾಂಡೇಲಿ ನಗರ ಪ್ರದೇಶದಿಂದ 13 ಕಿ.ಮೀ. ವ್ಯಾಪ್ತಿಯಲ್ಲಿದೆ. ಹುಲಿಗಳ ಸಂರಕ್ಷಣಾ ತಾಣವಾದ ಇದು 866.41 ಸ್ಕ್ವೇರ್ ಕಿ.ಮೀ. ದೂರದವರೆಗೆ ಪಸರಿಸಿಕೊಂಡಿದೆ. ಕಾಳಿ ನದಿ ದಡದಲ್ಲಿರುವ ಈ ತಾಣದ ವಾತಾವರಣ ನಯನ ಮನೋಹರವಾಗಿದೆ. ಇಲ್ಲಿ ಪರಿಸರ ಪ್ರೇಮಿಗಳು ಜಂಗಲ್ ಸಫಾರಿ, ಪಕ್ಷಿಗಳ ವೀಕ್ಷಣೆ, ಚಾರಣ ಹಾಗೂ ನೇಚರ್ ಕ್ಯಾಂಪ್‍ಗಳನ್ನು ಮಾಡಬಹುದು. ಇಲ್ಲಿಯ ಪ್ರವೇಶ ಶುಲ್ಕು 40 ರೂ. ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ.
PC: wikipedia.org

ನಾಗರಹೊಳೆ ಅಭಯಾರಣ್ಯ

ನಾಗರಹೊಳೆ ಅಭಯಾರಣ್ಯ

ಕೊಡಗು ಜಿಲ್ಲೆಯ ಆವೃತ್ತಿಯಲ್ಲಿರುವ ಈ ಅಭಯಾರಣ್ಯ ಹುಲಿಗಳ ಸಂರಕ್ಷಣಾ ತಾಣವೂ ಹೌದು. ಬೆಂಗಳೂರಿನಿಂದ 218 ಕಿ.ಮೀ. ಹಾಗೂ ಮೈಸೂರಿನಿಂದ 88 ಕಿ.ಮೀ. ದೂರದಲ್ಲಿದೆ. ನೀಲಗಿರಿ ಬೆಟ್ಟಗಳಿಂದ ಆವೃತ್ತವಾಗಿದೆ. ಸದಾಕಾಲ ಹಸಿರಿನಿಂದ ಕೂಡಿದ್ದು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ. ಇದರ ಸಮೀಪದಲ್ಲೇ ಕಬಿನಿ ಜಲಾಶಯ ಇರುವುದರಿಂದ ಪ್ರವಾಸಿಗರು ಜಲಕ್ರೀಡೆಗಳನ್ನು ಆಡಬಹುದು. ಪ್ರವಾಸಿಗರು ಬಸ್ ಸಫಾರಿ, ಜೀಪ್ ಸಫಾರಿಗಳಲ್ಲಿ ಹೋಗಬಹುದು. ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ.
PC: wikipedia.org

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನ

ಬೆಂಗಳೂರು ಹೃದಯ ಭಾಗದಿಂದ 23 ಕಿ.ಮೀ. ದೂರದಲ್ಲಿರುವ ಈ ತಾಣ ವಾರದ ರಜೆಗೆ ಹೇಳಿ ಮಾಡಿಸಿದಂತಿದೆ. 25,000 ಎಕರೆ ಪ್ರದೇಶದಲ್ಲಿರುವ ಈ ತಾಣದಲ್ಲಿ ಮಕ್ಕಳಿಗಾಗಿಯೇ ಒಂದು ಉದ್ಯಾನವವಿದೆ. ಇಲ್ಲಿ ಕೆಲವು ವಿಶೇಷ ಪ್ರಾಣಿ ಹಾಗೂ ಪಕ್ಷಿಗಳನ್ನು ಪಂಜರದಲ್ಲಿ ಇಡಲಾಗಿದೆ. ಸಫಾರಿ ಹೋಗಲು ಇಷ್ಟ ಪಡುವವರು ಅಲ್ಲಿಗೂ ತೆರಳಬಹುದು. ಅತ್ಯಂತ ಆಕರ್ಷಕವಾದ ಚಿಟ್ಟೆಗಳ ಉದ್ಯಾನವಿರುವುದು ಇಲ್ಲಿಯ ಒಂದು ವಿಶೇಷ. ಬೋಟಿಂಗ್ ಹಾಗೂ ಪ್ರಕೃತಿ ಸಿರಿಯ ಮಧ್ಯೆ ಸ್ವಲ್ಪ ಸಮಯ ಕಳೆಯಲು ಉತ್ತಮ ಸ್ಥಳ. ಇಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.
PC: wikipedia.org

ದುಬಾರೆ ಆನೆಗಳ ಶಿಬಿರ

ದುಬಾರೆ ಆನೆಗಳ ಶಿಬಿರ

ಮಡಿಕೇರಿಯಿಂದ 29 ಕಿ.ಮೀ., ಬೆಂಗಳೂರಿನಿಂದ 253 ಕಿ.ಮೀ. ದೂರದಲ್ಲಿರುವ ಈ ತಾಣದಲ್ಲಿ ಆನೆಗಳ ಹಿಂಡನ್ನೇ ನೋಡಬಹುದು. ಇಷ್ಟ ಪಡುವುದಾದರೆ ಆನೆಗಳ ಮೇಲೆ ಸವಾರಿ ಸಹ ಹೋಗಬಹುದು. ಕಾವೇರಿ ನದಿ ದಡದಲ್ಲಿ ಇರುವ ಈ ತಾಣದಲ್ಲಿ ರಾಫ್ಟಿಂಗ್ ಹಾಗೂ ಇನ್ನಿತರ ಜಲಕ್ರೀಡೆಯನ್ನು ಆಡಬಹುದು. ಬೇಸಿಗೆ ಉರಿಯಲ್ಲಿ ತಂಪಾದ ಅನುಭವ ಈ ತಾಣ ನೀಡುವುದು. ಇಲ್ಲಿ ಪ್ರತಿಯೊಂದು ಆಟಗಳಿಗೆ ಹಾಗೂ ಸವಾರಿಗೆ ಟಿಕೆಟ್ ಪಡೆಯಬೇಕು. ಆನೆ ಸವಾರಿ ಹೋಗಲು ಬೆಳಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಅವಕಾಶ ಇರುತ್ತದೆ.
PC: wikipedia.org

ಬಿಳಿಗಿರಿ ರಂಗನ ಬೆಟ್ಟ

ಬಿಳಿಗಿರಿ ರಂಗನ ಬೆಟ್ಟ

ಮೈಸೂರಿನಿಂದ 85 ಕಿ.ಮೀ., ಚಾಮರಾಜನಗರದಿಂದ 40 ಕಿ.ಮೀ., ಬೆಂಗಳೂರಿನಿಂದ 170 ಕಿ.ಮೀ. ವ್ಯಾಪ್ತಿಯಲ್ಲಿದೆ. 540 ಕಿ.ಮೀ ಅಷ್ಟು ಪ್ರದೇಶವನ್ನು ಹೊಂದಿರುವ ಈ ಉದ್ಯಾನವನದಲ್ಲಿ ಜಿಂಕೆ, ಆನೆ ಹುಲಿ, ಕರಡಿ, ಕಾಡೆಮ್ಮೆ ಹಾಗೂ ಇನ್ನಿತರ ವಿಶೇಷ ಪ್ರಾಣಿ-ಪಕ್ಷಿಗಳನ್ನು ನೋಡಬಹುದು. ಇಲ್ಲಿಯ ಗುಡ್ಡದ ತುದಿಯಲ್ಲಿ 500 ವರ್ಷದಷ್ಟು ಹಳೆಯ ಶ್ರೀಕೃಷ್ಣ ದೇಗುಲವಿದೆ. ಇಲ್ಲಿಯ ಸುಂದರವಾದ ಪ್ರಕೃತಿ ಸೌಂದರ್ಯ ಹಾಗೂ ಚಾರಣದ ಅದ್ಭುತ ಅನುಭವವನ್ನು ಪಡೆಯಬಹುದು. ಪ್ರವೇಶಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶವಿದೆ.
PC: wikipedia.org

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ

ಕೊಕ್ಕರೆ ಬೆಳ್ಳೂರು ಪಕ್ಷಿಧಾಮ

ಮೈಸೂರಿನಿಂದ 71 ಕಿ.ಮೀ. ಬೆಂಗಳೂರಿನಿಂದ 85 ಕಿ.ಮೀ. ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಆವೃತ್ತಿಯಲ್ಲಿ ಬರುವ ಈ ತಾಣ ಪಕ್ಷಿ ಪ್ರಿಯರಿಗೊಂದು ಸ್ವರ್ಗ. ಮಂಡ್ಯದ ಹಳ್ಳಿ ತಾಣಗಳನ್ನು ವೀಕ್ಷಿಸುತ್ತಾ ಈ ಧಾಮಕ್ಕೆ ಸಾಗಬಹುದು. ಇಲ್ಲಿಯ ಹಳ್ಳಿಯ ಸೊಗಡು ಹಾಗೂ ಪಕ್ಷಿ ಧಾಮವು ಮರೆಯದ ಅನುಭವ ನೀಡುತ್ತದೆ. ಇದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ.
PC: wikipedia.org

ಮೈಸೂರು ಮೃಗಾಲಯ

ಮೈಸೂರು ಮೃಗಾಲಯ

ಇದನ್ನು 1892ರಲ್ಲಿ ಚಾಮರಾಜೇಂದ್ರ ಒಡೆಯರು ನಿರ್ಮಿಸಿದರು. ದಕ್ಷಿಣ ಭಾರತದಲ್ಲಿರುವ ಒಂದು ಪುರಾತನ ಮೃಗಾಲಯವಿದು. 10 ಎಕರೆ ವಿಸ್ತೀರ್ಣದಲ್ಲಿರುವ ಈ ಮೃಗಾಲಯದಲ್ಲಿ ಸಿಂಹ, ಹುಲಿ, ಜಿಂಕೆ, ಕರಡಿ, ಆನೆ, ಹಾವು ಸೇರಿದಂತೆ ಹಲವಾರು ಪ್ರಾಣಿಗಳ ಸಂಗ್ರಹವಿದೆ. ಮಕ್ಕಳಿಗೆ ಇದೊಂದು ಅಚ್ಚು ಮೆಚ್ಚಿನ ತಾಣವಾಗಬಲ್ಲದು. ಇದು ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 5.30ರ ವರೆಗೆ ತೆರೆದಿರುತ್ತದೆ.
PC: wikimedia.org

ಭದ್ರಾ ವನ್ಯ ಜೀವಿ ಅಭಯಾರಣ್ಯ

ಭದ್ರಾ ವನ್ಯ ಜೀವಿ ಅಭಯಾರಣ್ಯ

ಬೆಂಗಳೂರಿನಿಂದ 293 ಕಿ.ಮೀ., ಚಿಕ್ಕಮಗಳೂರಿನಿಂದ 79 ಕಿ.ಮೀ. ಶಿವಮೊಗ್ಗದಿಂದ 33 ಕಿ.ಮೀ. ದೂರದಲ್ಲಿದೆ. ಹುಲಿ ಮತ್ತು ಸಿಂಹಗಳ ಸಂರಕ್ಷಣಾ ತಾಣವೆಂದು ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟಕ್ಕಿಂತ 1875 ಮೀ. ಎತ್ತರದಲ್ಲಿದೆ. ಇದಕ್ಕೆ ಹತ್ತಿರದಲ್ಲೇ ಲಕ್ಕವಳ್ಳಿ, ಭದ್ರಾ ಅಣೆಕಟ್ಟುಗಳನ್ನು ವೀಕ್ಷಿಸಬಹುದು. ಇದು ಬೆಳಗ್ಗೆ 6.30 ರಿಂದ 8.30 ಹಾಗೂ ಸಂಜೆ 4.30 ರಿಂದ 6.30ರ ವರೆಗೆ ತೆರೆದಿರುತ್ತದೆ.
PC: wikimedia.org

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ 16 ಕಿ.ಮೀ. ಶ್ರೀರಂಗಪಟ್ಟಣದಿಂದ 3 ಕಿ.ಮೀ. ದೂರದಲ್ಲಿದೆ. 67 ಸ್ಕ್ವೇರ್ ಕಿ.ಮೀ ದೂರದವರೆಗೆ ಹರಡಿಕೊಂಡಿದೆ. ಇನ್ನೂ ಕಂಡರಿಯದ ವಿಶೇಷ ಪಕ್ಷಿಗಳನ್ನು ಇಲ್ಲಿ ನೋಡಬಹುದು. ದೂಣಿ ಪ್ರಯಾಣವನ್ನು ಬೆಳೆಸಿ ಪರಿಸರದ ಸೌಂದರ್ಯವನ್ನು ಸವಿಯಬಹುದು. ಇಲ್ಲಿಯ ಪ್ರವೇಶದ ಸಮಯ ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಇರುತ್ತದೆ.
PC: wikimedia.org

Read more about: mysore coorg dandeli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X