Search
  • Follow NativePlanet
Share
» »ಈ ಟ್ರೆಕ್ಕಿಂಗ್ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ...

ಈ ಟ್ರೆಕ್ಕಿಂಗ್ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ...

By Sowmyabhai

ಟ್ರೆಕ್ಕಿಂಗ್ ಮಾಡುವುದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಯುವಕರಿಗೆ ಅಚ್ಚು-ಮೆಚ್ಚಿನ ಚಟುವಟಿಕೆ ಎಂದೇ ಹೇಳಬಹುದು. ಸ್ನೇಹಿತರೊಂದಿಗೆ ಮಧುರವಾದ ಅನುಭೂತಿಯನ್ನು ಪಡೆಯುವ ಸಲುವಾಗಿ ಹಾಗು ಸಾಹಸವನ್ನು ಇಷ್ಟ ಪಡುವವರು ಟ್ರೆಕ್ಕಿಂಗ್ ಮಾಡಲು ಇಷ್ಟ ಪಡುತ್ತಾರೆ. ಟ್ರೆಕ್ಕಿಂಗ್ ದೀರ್ಘವಾದ ಪ್ರಯಾಣದೊಂದಿಗೆ ಸಾಗುತ್ತದೆ. ಪ್ರಯಾಣದಲ್ಲಿ ಅನೇಕ ನೈಸರ್ಗಿಕವಾದ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಬಹುದು. ನಮ್ಮ ಭಾರತ ದೇಶದಲ್ಲಿ ಅನೇಕ ಟ್ರೆಕ್ಕಿಂಗ್‍ಗಳಿಗೆ ತೆರಳಲು ಸೂಕ್ತವಾದ ಸ್ಥಳಗಳಿವೆ. ರಾತ್ರಿ ಹಾಗು ಹಗಲಿನ ಸಮಯದಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೆ ಎಂದೇ ಪ್ರತ್ಯೇಕವಾದ ಸ್ಥಳಗಳಿವೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಅತ್ಯದ್ಭುತವಾದ ಟ್ರೆಕ್ಕಿಂಗ್ ತಾಣಗಳಿವೆ. ಆ ತಾಣಗಳಿಗೆ ಕೆಲವರು ಈಗಾಗಲೇ ಭೇಟಿ ನೀಡಿರಬಹುದು. ಇನ್ನು ಕೆಲವರಿಗೆ ಮಾಹಿತಿ ತಿಳಿಯದೇ ಇರಬಹುದು. ಹಾಗಾದರೆ ಬನ್ನಿ ಲೇಖನದ ಮೂಲಕ ಕರ್ನಾಟಕದ ಪ್ರಖ್ಯಾತ ಟ್ರೆಕ್ಕಿಂಗ್ ತಾಣಗಳ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.

1. ದಾಂಡೇಲಿ

1. ದಾಂಡೇಲಿ

PC: toufeeq hussain

ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖವಾದ ತಾಣಗಳಲ್ಲಿ ದಾಂಡೇಲಿ ಕೂಡ ಒಂದು. ಇದು ಸುಂದರವಾದ ಮತ್ತು ನೈಸರ್ಗಿಕವಾದ ಹಿನ್ನೆಲೆ, ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ದಾಂಡೇಲಿ ದಟ್ಟವಾದ ಅರಣ್ಯವನ್ನು ಹೊಂದಿದ್ದು, ವಿಶ್ವದ ಅತ್ಯುತ್ತಮವಾದ ನೈಸರ್ಗಿಕ ಆವಾಸಸ್ಥಾನಗಳಲ್ಲಿ ಒಂದಾಗಿದೆ. ದಾಂಡೇಲಿ ವನ್ಯಜೀವಿ ಧಾಮವು ಕರ್ನಾಟಕದ 2 ನೇ ಅತಿದೊಡ್ಡ ವನ್ಯಜೀವಿ ಧಾಮವಾಗಿದೆ.

ಅನೇಕ ಸಾಹಸಮಯವಾದ ಕ್ರೀಡೆಗಳನ್ನು ಇಲ್ಲಿ ಆನಂದಿಸಬಹುದು. ದಾಂಡೇಲಿ ಪ್ರಕೃತಿ ರಂಗಗಳು, ಚಾರಣಗಳು, ದೋಣಿ ವಿಹಾರಗಳು, ಪಕ್ಷಿ ವೀಕ್ಷಣೆಗಳನ್ನು ಸಹ ಒದಗಿಸುತ್ತದೆ. ದಾಂಡೇಲಿಯಲ್ಲಿನ ಇತರ ಜನಪ್ರಿಯವಾದ ಆಕರ್ಷಣೆಗಳೆಂದರೆ ಉಲಾವಿ ದೇವಾಲಯ, ಸಿಂಥೆರೆ ರಾಕ್ಸ್ ಮತ್ತು ಕವಲಾ ಗುಹೆಗಳು, ಮೊಲಂಗಿ, ಇನ್ನು ಅನೇಕ ಸ್ಥಳಗಳು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದಾಂಡೇಲಿಗೆ ಕೇವಲ 66 ಕಿ.ಮೀ ದೂರದಲ್ಲಿದೆ. ದಾಂಡೇಲಿಗೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆವಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

2.ಕವಲಾ ಕೇವ್ಸ್ (ಗುಹೆ)

2.ಕವಲಾ ಕೇವ್ಸ್ (ಗುಹೆ)

PC: J.varshini

ದಾಂಡೇಲಿಯಿಂದ ಕೇವಲ 24 ಕಿ.ಮೀ ದೂರದಲ್ಲಿ ಹಾಗು ಗೋಕರ್ಣದಿಂದ 139 ಕಿ.ಮೀ ದೂರದಲ್ಲಿ ಕವಲಾ ಗುಹೆ ಇದೆ. ಈ ಗುಹೆಗಳನ್ನು ಜ್ವಾಲಾಮುಖಿಯಿಂದಾಗಿ ರೂಪುಗೊಂಡವು ಎಂದು ನಂಬಲಾಗಿದೆ. ಇತಿಹಾಸ ಪೂರ್ವ ಕಾಲದಿಂದಲೂ ಈ ಗುಹೆಗಳು ಅಸ್ತಿತ್ವದಲ್ಲಿವೆ ಎಂದು ನಂಬಲಾಗಿದೆ. ಪ್ರಸುತ್ತ ಗುಹೆಗಳಲ್ಲಿ ಹಲವಾರು ಹಾವುಗಳು ಮತ್ತು ಬಾವಲಿಗಳು ನೆಲೆಸಿವೆ. ಗುಹೆಯನ್ನು ಪ್ರವೇಶ ಮಾಡಲು ಬಯಸುವವರು 375 ಹೆಜ್ಜೆಗಳು ಕೆಳಗೆ ಇಳಿಯಬೇಕು. ಗುಹೆಯ ಪ್ರವೇಶ ದ್ವಾರದಲ್ಲಿ ಒಂದು ದೇವಾಲಯವಿದೆ. ಆ ದೇವಾಲಯದಲ್ಲಿ ಮಹಾಶಿವನು ಲಿಂಗ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಆ ಶಿವಲಿಂಗವು ನೈಸರ್ಗಿಕವಾಗಿ ರೂಪುಗೊಂಡದ್ದು ಎಂದು ನಂಬಲಾಗಿದೆ.

ಇಲ್ಲಿನ ಶಿವಲಿಂಗವು ಸುಮಾರು 4 ಅಡಿ ಎತ್ತರದಲ್ಲಿದ್ದು, 3 ರಿಂದ 4 ಅಡಿ ವ್ಯಾಸವನ್ನು ಹೊಂದಿದೆ. ಇದೊಂದು ಉತ್ತಮವಾದ ಆಧ್ಯಾತ್ಮಿಕ ಚಾರಣವಾಗಲಿದೆ. ಈ ಸ್ಥಳಕ್ಕೆ ಟ್ರೆಕ್ಕಿಂಗ್ ಮಾಡಲು ಸೂಕ್ತವಾದ ಸಮಯವೆಂದರೆ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳ ನಡುವೆ. ಟ್ರೆಕ್ಕಿಂಗ್ ಶುಲ್ಕ ಪ್ರತಿ ವ್ಯಕ್ತಿಗೆ ರೂ 475.

3.ನಂದಿ ಬೆಟ್ಟ

3.ನಂದಿ ಬೆಟ್ಟ

PC: Koshy Koshy

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಈ ತಾಣ ಎಲ್ಲರ ಅಚ್ಚು-ಮೆಚ್ಚು ಎಂದೇ ಹೇಳಬಹುದು. ಇದು ಭೌಗೋಳಿಕವಾಗಿ ಸ್ಕಂದಗಿರಿಯ ಹತ್ತಿರದಲ್ಲಿದೆ. ಸುಮಾರು 1,478 ಮೀಟರ್‍ಗಳಷ್ಟು ಎತ್ತರದಲ್ಲಿರುವ ನಂದಿ ದುರ್ಗವು, ಬೆಂಗಳೂರಿನ ಟ್ರೆಕ್ಕಿಂಗ್‍ಗೆ ಜನಪ್ರಿಯವಾದ ತಾಣವಾಗಿದೆ. ವಾರಾಂತ್ಯದ ಸಮಯದಲ್ಲಿ ಒಂದು ದಿನದ ಮಟ್ಟಿನ ಪ್ರವಾಸಕ್ಕೆ ಸೂಕ್ತವಾದ ಸ್ಥಳ ಎಂದೇ ಹೇಳಬಹುದು. ಇದು ಶಿವನ ಪರ್ವತ ಎಂದು ಕರೆಯಲ್ಪಡುತ್ತದೆ. ಇಲ್ಲಿ ಟಿಪ್ಪುವಿನ ಬೇಸಿಗೆಯ ಮನೆ ಕೂಡ ಇದೆ. ನಂದಿ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1200 ಮೀಟರ್ ಎತ್ತರದಲ್ಲಿದೆ. ಇಲ್ಲಿ ಮುಖ್ಯವಾಗಿ ಭೋಗ ನಂದೀಶ್ವರ ದೇವಾಲಯವಿದೆ. ಇಲ್ಲಿ ನಂದಿಯ 1000 ವರ್ಷಗಳ ಹಿಂದಿನ ಶಿಲ್ಪವನ್ನು ಕಾಣಬಹುದಾಗಿದೆ.

ಟಿಪ್ಪು ಸುಲ್ತಾನನ ಬೇಸಿಗೆಯ ಅರಮನೆ ಮತ್ತು ಟಿಪ್ಪು ಡ್ರಾಪ್, ಸುಲ್ತಾನ್ ತನ್ನ ಖೈದಿಗಳನ್ನು ಎಸೆಯಲು ಬಳಸಿದ 600 ಅಡಿ ಬಂಡೆಯ ಕಣಿವೆ ಪ್ರವಾಸಿಗರಿಗೆ ಅದ್ಭುತವಾದ ನೋಟವನ್ನು ನೀಡುತ್ತದೆ. ಸೂರ್ಯೋದಯ ನೋಡಲು ಬಯಸುವವರಿಗೆ ಹಾಗು ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಅತ್ಯುತ್ತಮವಾದ ತಾಣ ಎಂದೇ ಹೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more