Search
  • Follow NativePlanet
Share
» »ಗುಜರಾತ್‌ನಲ್ಲಿ ನೀವು ನೋಡಲೇ ಬೇಕಾದ ಅದ್ಭುತ ತಾಣಗಳಿವು

ಗುಜರಾತ್‌ನಲ್ಲಿ ನೀವು ನೋಡಲೇ ಬೇಕಾದ ಅದ್ಭುತ ತಾಣಗಳಿವು

ಗುಜರಾತ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಒಂದು ರಾಜ್ಯವಾಗಿದೆ. ಗುಜರಾತ್‌ನ ಸಂಸ್ಕೃತಿ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ. ದಯಾನಂದ ಸರಸ್ವತೀ, ನರಸಿಂಹ ಮೆಹ್ತಾ, ಮಹಾತ್ಮ ಗಾಂಧೀ ಮತ್ತಿತರರ ಜೀವನ ದರ್ಶನ ಸಾಹಿತ್ಯಗಳು ಗುಜರಾತಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿದೆ. ಗುಜರಾತ್‌ನಲ್ಲಿ ಸಾಕಷ್ಟು ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ದ್ವಾರಕಾದೀಶ ಮಂದಿರ

ದ್ವಾರಕಾದೀಶ ಮಂದಿರ

PC:Scalebelow

ಪ್ರಸಿದ್ಧ ನಾಲ್ಕು ಧಾಮಗಳಲ್ಲಿ ದ್ವಾರಕಾದೀಶ ಜಗತ್ ಮಂದಿರ ಕೂಡಾ ಒಂದು. ಈ ಐದು ಅಂತಸ್ತಿನ ದೇವಾಲಯವು 72 ಸ್ತಂಭಗಳ ಮೇಲೆ ನಿಂತಿದ್ದು, ಆರ್ಚಿಯೋ-ಖಗೋಳವಿಜ್ಞಾನದ ವಿಜ್ಞಾನದ ಪ್ರಕಾರ ಇದು ಬಹಳ ಮಹತ್ವದ್ದಾಗಿದೆ. ಮರಳುಗಲ್ಲಿನ ಪೀಠ ಮತ್ತು ದೇವಾಲಯಗಳ ಗೋಡೆಗಳು ನರ್ತಕರು, ಆನೆಗಳು, ಸಂಗೀತಗಾರರ ಚಿತ್ರಗಳನ್ನು ಕೆತ್ತುವ ಮೂಲಕ ಅಲಂಕರಿಸಲ್ಪಟ್ಟಿದೆ.

ಸಬರಮತಿ ಆಶ್ರಮ

ಸಬರಮತಿ ಆಶ್ರಮ

PC:Bernard Gagnon

ಸಬರಮತಿ ಇದು ಮಹಾತ್ಮ ಗಾಂಧಿಯವರ ಎರಡನೇ ಆಶ್ರಮವಾಗಿದೆ. . ಇಲ್ಲಿ ಅವರು 1917 ರಿಂದ 1930 ರ ನಡುವೆ ಗಣನೀಯ ಪ್ರಮಾಣದ ಸ್ವಾತಂತ್ರ್ಯ ಚಳುವಳಿಗಳನ್ನು ಯೋಜಿಸಿದರು. ಸಬರಮತಿ ಆಶ್ರಮ, ಮತ್ತು ಅವರ ಜೀವನ ಮತ್ತು ಬೋಧನೆಗಳ ಮಾಹಿತಿಯುಕ್ತ ದಾಖಲೆಯನ್ನು ಒದಗಿಸುವ ತೆರೆದ ವಸ್ತುಸಂಗ್ರಹಾಲಯ ಇಲ್ಲಿದೆ.

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

PC: Anhilwara

ಶಿವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸೋಮನಾಥ ದೇವಸ್ಥಾನವು ಗುಜರಾತ್‌ನ ಜುನಾಗಡ್ ಜಿಲ್ಲೆಯ ಸಣ್ಣ ಪಟ್ಟಣದಲ್ಲಿದೆ. ಇಲ್ಲಿನ ಶಿವಲಿಂಗವನ್ನು ಸ್ವಯಂ ಭೂ ಶಿವಲಿಂಗ ಎನ್ನಲಾಗುತ್ತದೆ. ಚಾಲುಕ್ಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ರಣ್ ಆಫ್ ಕಚ್

ರಣ್ ಆಫ್ ಕಚ್

PC: Superfast1111

ಗುಜರಾತ್‌ಗೆ ಭೇಟಿ ನೀಡಬೇಕಾದರೆ, ಗ್ರೇಟ್ ರಣ್ ಆಫ್ ಕಚ್ ಗೆ ಭೇಟಿ ನೀಡಲೇ ಬೇಕು. ಇದು ವಿಶ್ವದ ಅತಿ ದೊಡ್ಡ ಬಿಳಿ ಉಪ್ಪು ಮರುಭೂಮಿ ಎಂದೇ ಖ್ಯಾತಿ ಪಡೆದಿದೆ. ಗುಜರಾತ್‌ನ ಪಶ್ಚಿಮ ತುದಿಯಲ್ಲಿ 7505 ಚ.ಕಿ.ಮೀ. ಪ್ರದೇಶವನ್ನು ಇದು ವ್ಯಾಪಿಸಿದೆ. ನವೆಂಬರ್ ಮತ್ತು ಮಾರ್ಚ್ ನಡುವೆ ನಡೆಯುವ ರಣ್ ಉತ್ಸವದ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ.

ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!<br /> ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಸೂರ್ಯ ದೇವಾಲಯ ಮೋದೇರಾ

ಸೂರ್ಯ ದೇವಾಲಯ ಮೋದೇರಾ

PC: Bernard Gagnon

1027 AD ಯಲ್ಲಿ ಕಟ್ಟಲಾಗಿರುವ ಈ ದೇವಾಲಯವು ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ದೇವಸ್ಥಾನದ ಒಳಗೆ ಸೂರ್ಯಕಾಂಡ ಮೆಟ್ಟಿಲು ಬಾವಿಯನ್ನು ನೋಡಬಹುದು. ಪ್ರಾರ್ಥನಾ ಮಂದಿರವೂ ಇದೆ. ಸೂರ್ಯ ದೇವಾಲಯವು ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿದೆ.

ಲಕ್ಷ್ಮೀ ವಿಲಾಸ್ ಪ್ಯಾಲೇಸ್, ವಡೋದರ

ಲಕ್ಷ್ಮೀ ವಿಲಾಸ್ ಪ್ಯಾಲೇಸ್, ವಡೋದರ

PC: Notnarayan

1890 ರಲ್ಲಿ ಮಹಾರಾಜ ಸಯಾಜಿರಾವ್ ಗೈಕ್ವಾಡ್ III ರ ಖಾಸಗಿ ನಿವಾಸವಾಗಿ ಕಟ್ಟಲ್ಪಟ್ಟ ಲಕ್ಷ್ಮಿ ವಿಲಾಸ್ ಪ್ಯಾಲೇಸ್ ವಾಸ್ತವವಾಗಿ ಭಾರತದ ಅತ್ಯಂತ ದೊಡ್ಡ ಕಟ್ಟಡಗಳಲ್ಲಿ ಒಂದಾಗಿದೆ.ಇದು 700 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X