Search
  • Follow NativePlanet
Share
» »ಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ

ಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ

ಗೋವಾಕ್ಕೆ ಹೋಗೋದಂದ್ರೆ ಪ್ರತಿಯೊಬ್ಬರಿಗೂ ಎಕ್ಸೈಟ್‌ಮೆಂಟ್ ಆಗುತ್ತೆ. ಅದರಲ್ಲೂ ಗೋವಾ ಬೇಸಿಗೆಗಾಲವಿರಲಿ ಮಳೆಗಾಲವಿರಲೀ ಅಥವಾ ಚಳಿಗಾಲವೇ ಇರಲಿ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದಾದಂತಹ ಒಂದು ಸುಂದರ ತಾಣವಾಗಿದೆ. ಯುವಕರ ಎವರ್‌ಗ್ರೀನ್ ಪಾರ್ಟಿ ಡೆಸ್ಟಿನೇಶನ್ ಇದಾಗಿದೆ. ನೀವು ಗೋವಾಕ್ಕೆ ಫಸ್ಟ್‌ ಟೈಮ್ ಹೋಗುತ್ತಿದ್ದೀರೆಂದಾದರೆ ಸರಿಯಾಗಿ ತಯಾರಿಯಾಗಿಯೇ ಹೋಗಬೇಕಾಗುತ್ತದೆ. ಅದಕ್ಕೆ ಕೆಲವು ಟಿಪ್ಸ್ ಇಲ್ಲಿದೆ.

ಸನ್‌ಸ್ಕ್ರೀನ್‌ ತೆಗೆದುಕೊಳ್ಳಿ

ಸನ್‌ಸ್ಕ್ರೀನ್‌ ತೆಗೆದುಕೊಳ್ಳಿ

ನೀವು ಬೀಚ್‌ನಲ್ಲಿ ಸಮಯಕಳೆಯಬೇಕೆಂದಿದ್ದರೆ ಸನ್‌ಸ್ಕ್ರೀನ್‌ನ್ನು ತೆಗೆದುಕೊಳ್ಳಲು ಮರೆಯಬೇಡಿ. ಒಂದು ವೇಳೆ ನೀವು ಸನ್‌ಸ್ಕ್ರೀನ್‌ ಲೋಶನ್ ತೆಗೆದುಕೊಳ್ಳಲು ಮರೆತುಬಿಟ್ಟಿರಿ ಎಂದಾದಲ್ಲಿ ಗೋವಾದಲ್ಲಿ ಅನೇಕ ಮೆಡಿಕಲ್ ಶಾಪ್‌ಗಳಿವೆ ಅಲ್ಲಿ ಕೊಂಡುಕೊಳ್ಳಿ.

ಸನ್‌ಗ್ಲಾಸ್, ಕ್ಯಾಪ್

ಸನ್‌ಗ್ಲಾಸ್, ಕ್ಯಾಪ್

ನಿಮ್ಮಲ್ಲಿ ಕ್ಯಾಪ್ ಹಾಗೂ ಸನ್‌ಗ್ಲಾಸ್‌ಗಳಿದ್ದರೆ ಅದನ್ನು ಹಿಡಿದುಕೊಳ್ಳಿ. ಇಲ್ಲವಾದಲ್ಲಿ ಅಲ್ಲೇ ರೋಡ್‌ಸೈಡ್ ಶಾಪ್‌ಗಳಲ್ಲಿ ಸನ್‌ಗ್ಲಾಸ್ ಹಾಗೂ ಕ್ಯಾಪ್ ಲಭ್ಯವಿರುತ್ತದೆ. ಅಲ್ಲಿಂದ ಕೊಳ್ಳಬಹುದು. ಗೋವಾದ ಬಿಸಿಲಿಗೆ ಕ್ಯಾಪ್ ಹಾಗೂ ಸನ್‌ಗ್ಲಾಸ್ ಅಗತ್ಯ.

ಬೆತ್ತಲಾಗಿರುವ ಯಕ್ಷಿಯ 30 ಅಡಿ ಎತ್ತರದ ಪ್ರತಿಮೆಯನ್ನು ನೋಡಿದ್ದೀರಾ ?ಬೆತ್ತಲಾಗಿರುವ ಯಕ್ಷಿಯ 30 ಅಡಿ ಎತ್ತರದ ಪ್ರತಿಮೆಯನ್ನು ನೋಡಿದ್ದೀರಾ ?

ಎಲ್ಲದಕ್ಕೂ ಹೊಂದುವ ಶೂ

ಎಲ್ಲದಕ್ಕೂ ಹೊಂದುವ ಶೂ

ಶೂ ತರುವಾಗ ನಡೆದಾಡುವಾಗ ಹಾಕುಲು ಹಾಗೂ ಆಡುವಾಗ ಹಾಕಲು ಆಗುವಂತಹ ಒಂದೇ ಶೂ ತನ್ನಿ. ಗೋವಾದಲ್ಲಿ ನಿಮ್ಮ ಎಲ್ಲಾ ಆಕ್ಟಿವಿಟಿಗೆ ಸರಿಹೊಂದುವಂತಹ ಶೂವನ್ನೇ ತನ್ನಿ. ಇಲ್ಲವಾದಲ್ಲಿ ನೀರುತಾಗಿ ಶೂ ಹಾಳಾಗಬಹುದು.

ಚಿನ್ನಾಭರಣ ಕಡಿಮೆ ಧರಿಸಿ

ಚಿನ್ನಾಭರಣ ಕಡಿಮೆ ಧರಿಸಿ

ಗೋವಾಕ್ಕೆ ಪ್ರವಾಸ ಹೋಗುವಾಗ ಅಥವಾ ಸಮುದ್ರ ತೀರದಲ್ಲಿ ಆಟವಾಡಲು ಹೋಗುವಾಗ ಆದಷ್ಟು ಕಡಿಮೆ ಪ್ರಮಾಣದಲ್ಲಿ ಚಿನ್ನಾಭರಣವನ್ನು ಧರಿಸಿ. ಹೆಚ್ಚಿನ ಕ್ಯಾಶ್‌ನ್ನು ಹಿಡಿದುಕೊಳ್ಳಬೇಡಿ. ಅದಕ್ಕಿಂತ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬೆಸ್ಟ್. ಪ್ರಯಾಣದ ವೇಳೆ ಹೆಚ್ಚಿನ ಹಣ ಇಟ್ಟುಕೊಳ್ಳುವುದು ಸೇಫ್ ಅಲ್ಲ.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ಆಗಾಗ ನೀರನ್ನು ಕುಡಿಯುತ್ತಿರಿ. ನಿಂಬೆಹಣ್ಣಿನ ರಸ ಹಾಗೂ ಇನ್ನಿತರ ಜ್ಯೂಸ್‌ನ್ನು ಕುಡಿಯುತ್ತಿರಿ. ಇಲ್ಲವಾದಲ್ಲಿ ನಿರ್ಜಲೀಕರಣಕ್ಕೆ ತುತ್ತಾಗಬೇಕಾಗುತ್ತದೆ. ನೀವು ಕರಾವಳಿ ಪ್ರದೇಶದಲ್ಲಿದ್ದರೂ ಅಲ್ಲಿನ ಬಿಸಿಲು ನಿಮ್ಮ ದೇಹದ ಶಕ್ತಿಯನ್ನೆಲ್ಲಾ ಹೀರಿಬಿಡುತ್ತದೆ. ಅದಕ್ಕಾಗಿ ಆಗಾಗ ನೀರು ಕುಡಿಯಿರಿ.

ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

 ಡ್ರಿಂಕ್ಸ್

ಡ್ರಿಂಕ್ಸ್

ಇನ್ನು ಗೋವಾಕ್ಕೆ ಹೋಗಿ ಡ್ರಿಂಕ್ಸ್ ಮಾಡಿಲ್ಲಂದ್ರೆ ಹೇಗೆ ಅಲ್ವಾ? ನಿಮಗೆ ಗೋವಾದಲ್ಲಿ ಡ್ರಿಂಕ್ಸ್ ಟೇಸ್ಟ್ ಮಾಡಬೇಕೆಂದಿದ್ದರೆ ಫೆನ್ನಿ ಟೇಸ್ಟ್ ಮಾಡಬಹುದು. ಆದರೆ ಹೆಚ್ಚಾಗಿ ಕುಡಿಯಬೇಡಿ. ಮಿತಿಯಲ್ಲಿರಲಿ.

ಲೈಫ್‌ಗಾರ್ಡ್ ಸಲಹೆ ಪಡೆಯಿರಿ

ಲೈಫ್‌ಗಾರ್ಡ್ ಸಲಹೆ ಪಡೆಯಿರಿ

ನೀರಿನಲ್ಲಿ ಇಳಿಯುವಾಗ ಲೈಫ್‌ಗಾರ್ಡ್ ಹೇಳೋದನ್ನು ಕೇಳಿ. ಸಮುದ್ರದ ಅಲೆಗಳು ನಿಮಗೆ ಶಾಂತ ರೀತಿಯಲ್ಲಿ ಕಾಣಬಹುದು. ಆದರೆ ಒಮ್ಮೆಲೆ ರಭಸದಿಂದ ಬರುವ ಅಲೆಗಳು ಹಾನಿಯನ್ನುಂಟು ಮಾಡುತ್ತವೆ.

ಮ್ಯಾಪ್ ಹಿಡಿದುಕೊಳ್ಳಿ

ಮ್ಯಾಪ್ ಹಿಡಿದುಕೊಳ್ಳಿ

ಕಳೆದು ಹೋಗುತ್ತೀರಿ ಎನ್ನುವ ಭಯವಿದೆಯೇ? ಭಯವೇ ಬೇಡ. ಇಲ್ಲಿ ನೀವು ಸುತ್ತಾಡಬೇಕಾದರೆ ಲೋಕಲ್ ಗೈಡ್‌ನ್ನು ಬುಕ್ ಮಾಡಬಹುದು. ಇಲ್ಲವಾದಲ್ಲಿ ಮ್ಯಾಪ್ ತೆಗೆದುಕೊಳ್ಳಬಹುದು. ಇದು ನಿಮಗೆ ಹೋಟೆಲ್ ಹಾಗೂ ಸಮೀಪದ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಅಥವಾ ಗೂಗಲ್ ಮ್ಯಾಪ್ ಮೂಲಕವೂ ನೀವು ಗೋವಾದಲ್ಲಿ ಸುತ್ತಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X