Search
  • Follow NativePlanet
Share
» »ಪರ್ವತ ಪ್ರೇಮಿಗಳಿಗೆ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

ಪರ್ವತ ಪ್ರೇಮಿಗಳಿಗೆ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

ನಮ್ಮ ಭೂಮಿಯು ಅಗಾಧವಾದ ಮತ್ತು ಸವಾಲಿನ ಭೂಪ್ರದೇಶ ಹಾಗೂ ಮೋಡಿಮಾಡುವ ಭೂದೃಶ್ಯಗಳನ್ನು ಹೊಂದಿದೆ. ಅದರ ಜೊತೆಗೆ ಆಕರ್ಷಕ ಪರ್ವತಗಳ ವಿಶಿಷ್ಟವಾದ ಸೆಳೆತವನ್ನು ಹೊಂದಿದ್ದು, ಮಳೆಗಾಲವು ಇದಕ್ಕೆ ವಿಶೇಷವಾದ ಸೌಂದರ್ಯವನ್ನು ಸೇರಿಸುತ್ತದೆ. ಪರ್ವತಗಳ ಪ್ರತಿಯೊಂದು ಒಳ ಮತ್ತು ಹೊರಭಾಗಗಳ ನೋಟವು ಯಾರೋ ಹಸಿರುಮಯವಾದ ಹಾಸಿನಿಂದ ಇವುಗಳನ್ನು ಹೊದಿಸಿದ್ದಾರೋ ಎನ್ನುವ ಭಾವನೆ ಬರುವಂತೆ ಮಾಡುತ್ತದೆ. ಅಲ್ಲದೆ ಈ ಪರ್ವತಗಳಲ್ಲಿಯ ಗಾಢವಾದ ಹಳದಿ ಕಾಡು ಹೂವುಗಳು ಮತ್ತು ಹಿತವಾದ ಪರ್ವತದ ತಂಗಾಳಿಯಲ್ಲಿ ಅವು ತೂಗಾಡುತ್ತಿರುವ ದೃಶ್ಯವು ಮನಸ್ಸಿಗೆ ಹಿತವನ್ನು ನೀಡುತ್ತದೆ.

ಸಾಹಸವನ್ನು ಇಷ್ಟಪಡುವ ಪರ್ವತ ಪ್ರೇಮಿಗಳಿಗೆ ಚಾರಣವು ಅಲ್ಲಿರುವಾಗ ಮಾಡಬಹುದಾದ ಅತ್ಯಂತ ಉತ್ತಮವಾದ ಚಟುವಟಿಕೆಯಾಗಿದೆ. ಮಾನ್ಸೂನ್‌ನಲ್ಲಿ ಚಾರಣವು ನಿಜವಾಗಿಯೂ ಸವಾಲಿನದ್ದಾಗಿರಬಹುದು ಆದರೆ ಅದರಿಂದ ಆಗುವ ಅನುಭವವು ಬಹಳ ಕಾಲ ಉಳಿಯುತ್ತದೆ . ಆದ್ದರಿಂದ ಮಳೆಗಾಲದಲ್ಲಿ ಪರ್ವತಗಳ ಈ ಅದ್ಬುತ ನೋಟ ಮತ್ತು ರೋಮಾಂಚಕ ಅನುಭವವನ್ನು ಪಡೆಯಲು ಬೆಂಗಳೂರಿನ ಆಸುಪಾಸಿನಲ್ಲಿರುವ ಟ್ರಕ್ಕಿಂಗ್ ತಾಣಗಳಿಗೆ ಭೇಟಿ ನೀಡಲು ಸಿದ್ದರಾಗಿ.

thadiyanmol hill

ತಾಡಿಯಾನ್ಮೊಲ್

ಸರಿಸುಮಾರು 5700 ಅಡಿ ಎತ್ತರದಲ್ಲಿರುವ ಕೂರ್ಗ್ ನ ಪಶ್ಚಿಮಘಟ್ಟದಲ್ಲಿರುವ ತಾಡಿಯಾನ್ಮೋಲ್ ಅತ್ಯಂತ ಎತ್ತರವಾದ ಪರ್ವತ ಶಿಖರವಾಗಿದೆ. ಆಹ್ಲಾದಕರವಾದ ಹವಾಮಾನದ ಜೊತೆಗೆ ಮನಮೋಹಕ ಕಣಿವೆಗಳು ಮತ್ತು ಪಶ್ಚಿಮಘಟ್ಟಗಳ ಬೆಟ್ಟಗಳ ರಮಣೀಯವಾದ ನೋಟಗಳನ್ನೊಳಗೊಂಡ ಈ ಸ್ಥಳವು ಅತ್ಯಂತ ಸುಂದರವಾದ ಚಾರಣ ಪ್ರದೇಶಗಳಲ್ಲಿ ಒಂದೆನಿಸಿದೆ . ಇದು ಸುಲಭ-ಮಧ್ಯಮ ಟ್ರಕ್ಕಿಂಗ್ ಪ್ರದೇಶವಾಗಿದ್ದು, ಇನ್ನೂ ಹೆಚ್ಚು ಜನರಿಗೆ ಪರಿಚಿತವಾಗಿಲ್ಲ ಆದುದರಿಂದ ಇಲ್ಲಿಗೆ ಭೇಟಿ ಕೊಡುವವರಿಗೆ ಹೆಚ್ಚಿನ ಅನ್ವೇಷಣೆ ಮಾಡಲು ಅವಕಾಶ ನೀಡುತ್ತದೆ.

ಕುಮಾರ ಪರ್ವತ

ಭಾರತದದ ಸ್ಕಾಟ್ ಲ್ಯಾಂಡ್ ಎಂದೇ ಕರೆಯಲ್ಪಡುವ ಕೊಡಗಿನ ಇನ್ನೊಂದು ಸುಂದರ ಟ್ರಕ್ಕಿಂಗ್ ತಾಣವೆಂದರೆ ಅದು ಕುಮಾರ ಪರ್ವತವಾಗಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 5600 ಅಡಿ ಎತ್ತರದಲ್ಲಿದೆ. ಇದು ಕೊಡಗಿನ ಎರಡನೇ ಎತ್ತರದ ಶಿಖರವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಾದ್ಯಂತ ಹರಡಿರುವ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಅತಿ ಎತ್ತರವಾಗಿರುವ ಕುಮಾರ ಪರ್ವತವು ಜನಪ್ರಿಯ ಚಾರಣವಾಗಿದೆ ಮತ್ತು ಚಾರಣಿಗರು ಮತ್ತು ಸಾಹಸಿಗಳಿಂದ ಹೆಚ್ಚು ಬೇಡಿಕೆಯಿರುವ ಸ್ಥಳವಾಗಿದೆ.

kodachadri-trekroutes-1-1656237438.jpg -Properties

ಕೊಡಚಾದ್ರಿ

ಪಶ್ಚಿಮ ಘಟ್ಟಗಳ ಹೆಬ್ಬಾಗಿಲಾಗಿರುವ ಶಿವಮೊಗ್ಗದ ಸಮೀಪದಲ್ಲಿರುವ ಕೊಡಚಾದ್ರಿ ಕರ್ನಾಟಕದ ಹತ್ತನೇ ಅತಿ ಎತ್ತರದ ಶಿಖರವಾಗಿದೆ. ಇದು ಸಮುದ್ರ ಮಟ್ಟದಿಂದ ಸರಿ ಸುಮಾರು 4400 ಅಡಿ ಎತ್ತರದಲ್ಲಿದ್ದು ಈ ಪರ್ವತ ಶಿಖರವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ ಮತ್ತು ಇದು ಸರಕಾರದಿಂದ ಘೋಷಿತ ನೈಸರ್ಗಿಕ ಪರಂಪರೆಯ ತಾಣವಾಗಿದೆ. ಈ ಪರ್ವತ ತಾಣವು ಅನೇಕ ಗುಪ್ತ ಜಲಪಾತಗಳಿಗೆ ಹಾಗು ಸುಂದರ ಕಾಡಿನೊಳಗೆ ಸುರಕ್ಷಿತವಾದ ಮತ್ತು ಅದ್ಬುತವಾದ ಚಾರಣ ಮಾಡುವ ತಾಣಗಳಿಗೆ ನೆಲೆಯಾಗಿದೆ. ಈ ಎಲ್ಲಾ ಸುಂದರ ಅನುಭವವನ್ನು ಪಡೆಯಲು ಕರ್ನಾಟಕದ ಕೊಡಚಾದ್ರಿಗೆ ಚಾರಣ ಮಾಡಿ ಮತ್ತು ಪ್ರಕೃತಿಯ ಗುಪ್ತ ರತ್ನಗಳನ್ನು ಅನ್ವೇಷಿಸಿ.

mullayanagiri hill

ಮುಳ್ಳಯ್ಯನಗಿರಿ

ಸಮುದ್ರ ಮಟ್ಟದಿಂದ 6300ಅಡಿ ಎತ್ತರದಲ್ಲಿರುವ ಚಿಕ್ಕಮಗಳೂರಲ್ಲಿ ನೆಲೆಸಿರುವ ಮುಳ್ಳಯ್ಯನಗಿರಿಯು ಕರ್ನಾಟಕದ ಅತ್ಯಂತ ಎತ್ತರದ ಶಿಖರವಾಗಿದ್ದು ಇಲ್ಲಿ ಟ್ರಕ್ಕಿಂಗ್ ಅದೂ ವಿಶೇಷವಾಗಿ ಇದರ ಶಿಖರವನ್ನು ತಲುಪಿದಾಗ ನಿಮ್ಮನ್ನು ರೋಮಾಂಚನಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಈ ಶಿಖರದ ಇನ್ನೊಂದು ಉತ್ತಮ ಸಂಗತಿಯೆಂದರೆ, ಇದರ ಶಿಖರದವರೆಗೂ ತಲುಪಲು ರಸ್ತೆ ಇದ್ದು ಮೋಟಾರುಗಳ ಮೂಲಕ ಚಲಿಸಬಹುದಾಗಿದೆ (ಆದರೆ ಪರ್ವತದ ತುದಿಯನ್ನು ತಲುಪಲು ಇನ್ನೂ ಕೆಲವು ಕಿಲೋಮೀಟರುಗಳಷ್ಟು ನಡೆಯಬೇಕಾಗುತ್ತದೆ). ಆದ್ದರಿಂದ ಚಾರುಣಿಗರಲ್ಲದವರೂ ಸಹ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

brahmagiri-scenery-3-1656237455.jpg -Properties

ಬ್ರಹ್ಮಗಿರಿ

ಸಮುದ್ರ ಮಟ್ಟದಿಂದ ಸುಮಾರು 5200 ಅಡಿ ಎತ್ತರದಲ್ಲಿ ನೆಲೆಸಿರುವ ಬ್ರಹ್ಮಗಿರಿ ಬೆಟ್ಟಗಳು ಕೆಲವು ಸುಂದರವಾದ ಜಲಪಾತಗಳು, ಗುಹೆಗಳು ಮತ್ತು ದಟ್ಟ ಕಾಡುಗಳು ಮತ್ತು ಶ್ರೀಮಂತ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ ಬ್ರಹ್ಮಗಿರಿಯಲ್ಲಿ ಚಾರಣವು ಸಾಕಷ್ಟು ಸುಲಭವಾದುದಾಗಿದ್ದು, ಇದು ಆರಂಭಿಕ ಚಾರುಣಿಗರಿಗೆ ಸೂಕ್ತವಾದುದಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಚಾರಣಕ್ಕೆ ಇದು ಮೊದಲ ಆಯ್ಕೆಯಾಗಿದೆ. ಕರ್ನಾಟಕದ ಕೊಡಗು ಜಿಲ್ಲೆ ಮತ್ತು ಕೇರಳದ ವಯನಾಡು ಜಿಲ್ಲೆಯ ನಡುವೆ ನೆಲೆಸಿರುವ ಬ್ರಹ್ಮಗಿರಿಯು ಎರಡೂ ರಾಜ್ಯಗಳ ಚಾರಣಿಗರಿಗೆ ಜನಪ್ರಿಯ ಆಯ್ಕೆಯಾಗಿದೆ.

sholagrasslandforest-kudremukh-4-1656237463.jpg -Properties

ಕುದುರೆಮುಖ

ಸಮುದ್ರಮಟ್ಟದಿಂದ ಸುಮಾರು 6200 ಅಡಿ ಎತ್ತರದಲ್ಲಿರುವ ಪಶ್ಚಿಮಘಟ್ಟಗಳಲ್ಲಿರುವ ಕುದುರೆಮುಖವು ಕರ್ನಾಟಕದ ಮೂರನೇ ಅತಿದೊಡ್ಡ ಶಿಖರವಾಗಿದೆ. ಸ್ಥಳೀಯ ಭಾಷೆಯಲ್ಲಿ, 'ಕುದುರೆ-ಮುಖ' ಎಂದರೆ ಈ ಶಿಖರವು ಒಂದು ನಿರ್ದಿಷ್ಟ ಕೋನದಿಂದ ಕುದುರೆಯ ಮುಖವನ್ನು ಹೋಲುತ್ತದೆ. ಆದುದರಿಂದ ಈ ಸ್ಥಳಕ್ಕೆ ಅದೇ ಹೆಸರಿನಿಂದ ಕರೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಜೀವವೈವಿಧ್ಯಗಳಿಂದ ಕೂಡಿದ ಕುದುರೆಮುಖವು ಗುಡ್ಡಗಾಡು ಪ್ರದೇಶ ಹಾಗೂ ದಟ್ಟವಾದ ಕಾಡುಗಳನ್ನೊಳಗೊಂಡ ಅತ್ಯಂತ ಸುಂದರವಾದ ಚಾರಣ ತಾಣವಾಗಿರುವ ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X