• Follow NativePlanet
Share
» »ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

Written By:

ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ಸ್ಥಳಗಳು ನಮ್ಮ ಭಾರತದಲ್ಲಿ ಅನೇಕ ಸ್ಥಳಗಳಿವೆ. ವಿದೇಶಗಳ ಸ್ಥಳಗಳಿಗೆ ಸೆಡ್ಡು ಹೊಡೆಯುವಂತೆ ಇದೆ ನಮ್ಮ ದೇಶದ ಸ್ಥಳಗಳು. ಗಡ..ಗಡ ನಡುಗಿಸುವ ಚಳಿಯಲ್ಲಿ ಬೆಚ್ಚಗಿನ ಕಂಬಳಿ ಹೊದ್ದುಕೊಂಡು ಸಂಗಾತಿಯೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಾಲವನ್ನು ಕಳೆಯುವುದು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಸಾಹಸಿಗಳು ವರ್ಷಪೂರ್ತಿ ಈ ಕಾಲಕ್ಕೆಂದೇ ಎದುರು ನೋಡುತ್ತಿರುತ್ತಾರೆ.

ಚಳಿಗಾಲದಲ್ಲಿ ಅನೇಕ ಯುವ ಉತ್ಸಾಹಿಗಳು ಸ್ಕೀಯಿಂಗ್/ಸ್ಕೇಟಿಂಗ್ ಕ್ರೀಡೆಗಳನ್ನು ಆಡಲು ಇಷ್ಟ ಪಡುತ್ತಾರೆ. ಅಂದರೆ ಹಿಮದ ರಾಶಿಯ ಮೇಲೆ ವೇಗವಾಗಿ ಜಾರುತ್ತಾ ಸಾಗುವುದು, ಆಹಾ ಅಹ್ಲಾದಕರವಾಗಿರುತ್ತದೆ. ಪ್ರಸ್ತುತ ಲೇಖನದ ಮೂಲಕ ಚಳಿಗಾಲದ ಸಮಯದಲ್ಲಿ ಭಾರತ ಯಾವೆಲ್ಲಾ ಸ್ಥಳಗಳಲ್ಲಿ ರೋಮಾಂಚನಕಾರಿ ಅನುಭೂತಿಯನ್ನು ನೀಡುವ ಕ್ರೀಡೆಗಳು ಹಾಗು ಸ್ಥಳಗಳಿವೆ ಎಂಬುದನ್ನು ತಿಳಿಯೋಣ.

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಗುಲ್ಮಾರ್ಗ್ ಒಂದು ಸುಂದರವಾದ ಗಿರಿಧಾಮವಾಗಿದ್ದು, ಸ್ಕೀಯಿಂಗ್ ಕ್ರೀಡೆಗೆ ಭಾರತದಲ್ಲಿಯೇ ಅತಿ ಹೆಚ್ಚು ಪ್ರಸಿದ್ಧಿ ಗಳಿಸಿರುವ ಪ್ರದೇಶವೇ ಆಗಿದೆ. ಏಷಿಯಾ ಖಂಡದಲ್ಲಿಯೇ ಸ್ಕೀಯಿಂಗ್ ಕ್ರೀಡೆಗೆ 7 ನೇ ಶ್ರೇಷ್ಟವಾದ ಸ್ಥಲ ಎಂಬ ಕೀರ್ತಿ ಗುಲ್ಮಾರ್ಗ್ ಪಾತ್ರವಾಗಿದೆ. ಬೇಸಿಗೆಯ ರಾಜಧಾನಿ ನಗರವಾದ ಶ್ರೀನಗರಕ್ಕೆ ಅತಿ ಹತ್ತಿರದಲ್ಲಿದ್ದು, ಸುಲಭವಾಗಿ ತಲುಪಬಹುದಾಗಿರುವುದರಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ.

Peter

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಜನವರಿ ತಿಂಗಳ ಆರಂಭದಿಂದ ಮಾರ್ಚ್ ತಿಂಗಳ ಮಧ್ಯದವರೆಗೆ ಗುಲ್ಮಾರ್ಗ್ ಹಿಮಪಾತವನ್ನು ಅನುಭವವನ್ನು ಪಡೆಯಬಹುದಾಗಿದೆ. ಈ ಕಾಲಮಾನವು ಸ್ಕೀಯಿಂಗ್ ಕ್ರೀಡೆಗೆ ಹೇಳಿ ಮಾಡಿಸಿದಂತಿರುತ್ತದೆ. ಪ್ರಕೃತಿಯ ವಿವಿಧ ಬಣ್ಣಗಳಿಂದ ಕಂಗೊಳಿಸುವ ಬೆಟ್ಟ, ಗುಡ್ಡಗಳು, ಹಸಿರು ಮರಗಳು, ಬಣ್ಣ ಬಣ್ಣದ ಹೂವು ಉದ್ಯಾನವನಗಳು ಇಲ್ಲಿ ಕಣ್ಣು ತುಂಬಿಕೊಳ್ಳಬಹುದು.


Colin Tsoi

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದಲ್ಲಿರುವ ಔಲಿಯು ಒಂದು ಗಿರಿಧಾಮ ಪ್ರದೇಶವಾಗಿದ್ದು ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ನೆಲೆಸಿದೆ. ಇದು ಸ್ಕೀಯಿಂಗ್ ಆಟಕ್ಕೆ ಜನಪ್ರಿಯವಾಗಿದೆ. ಈ ಔಲಿ ಗಿರಿಧಾಮ ಪ್ರದೇಶವು ತನ್ನ ಸುತ್ತಲೂ ಓಕ್ ಮರಗಳ ಕಾಡಿನಿಂದ ಕೂಡಿದೆ. ಅಷ್ಟೇ ಅಲ್ಲ ಪ್ರದೇಶವು ಹತ್ತಿರದಲ್ಲಿಯೇ ಗೋಚರಿಸುವ ಹಿಮಾಲಯದ ಅದ್ಭುತವಾದ ಹಾಗು ರೋಮಾಂಚನಗೊಳಿಸುವಂತಹ ದೃಶ್ಯಾವಳಿಗಳನ್ನು ಕರುಣಿಸುತ್ತದೆ.


Ishan Manjrekar


ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಜೋಶಿಮಠ ಎಂತಲೂ ಸಹ ಕರೆಯಲ್ಪಡುವ ಈ ಸ್ಥಳವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ಔಲಿ ಗಿರಿಧಾಮಕ್ಕೆ ಬಹು ಹತ್ತಿರದಲ್ಲಿದೆ. ಔಲಿಯ ಕೇಬಲ್ ಕಾರಿನ ಮೂಲಕ ಜೋಶಿಮಠಕ್ಕೆ ತಲುಪಬಹುದಾಗಿದೆ. ಈ ಸ್ಥಳದ ಇನ್ನೊಂದು ವಿಶೇಷವೆನೆಂದರೆ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಜಗತ್‍ಪೀಠಗಳ ಪೈಕಿ ಇದು ಸಹ ಒಂದು.


christian0702

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಭಾರತದಲ್ಲಿ ಚಳಿಗಾಲವನ್ನು ಏಂಜಾಯ್ ಮಾಡಬೇಕಾದ ತಾಣಗಳು...

ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿರುವ ಪುಟ್ಟ ಗಿರಿಧಾಮವಾಗಿದೆ ಕುಫ್ರಿ. ಸ್ಥಳೀಯವಾಗಿ ಮಾತಾನಾಡುವ ಭಾಷೆಯ ಕುಫ್ರ್ ಎಂಬ ಪದದಿಂದ ಈ ಸ್ಥಳಕ್ಕೆ ಕುಫ್ರಿ ಎಂಬ ಹೆಸರು ಬಂದಿದೆ. ಕುಫ್ರ್ ಎಂಬ ಕೆರೆ ಅಥವಾ ಸರೋವರ ಎಂದಾಗಿದೆ. ಹಿಮಾಲಯನ್ ಪ್ರಾಣಿ ಸಂಗ್ರಹಾಲವನ್ನು ಕುಫ್ರಿ ಹೊಂದಿದ್ದು, ಉತ್ತರಾಖಂಡ ರಾಜ್ಯದ ಪಕ್ಷಿಯಾದ ಹಿಮಾಲಯನ್ ಮೋನಲ್‍ಗಳನ್ನು ಸಹ ಇಲ್ಲಿ ಕಾಣಬಹುದು.


timeflicks

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more