Search
  • Follow NativePlanet
Share
» »ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...

ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...

ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗಳೂರಿನ ಜನರಿಗಂತು ವಾಹನ ದಟ್ಟನೆಯಿಂದ ಸ್ವಲ್ಪ ಕಾಲ ದೂರ ಇದ್ದು, ಕಾ

ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗಳೂರಿನ ಜನರಿಗಂತು ವಾಹನ ದಟ್ಟನೆಯಿಂದ ಸ್ವಲ್ಪ ಕಾಲ ದೂರ ಇದ್ದು, ಕಾಲ ಕಳೆಯಲು ಬಯಸುತ್ತಾರೆ. ಅಂಥಹವರಿಗೆ ಬೆಂಗಳೂರು ನಗರದ ಸಮೀಪದಲ್ಲಿಯೇ ಅಂದರೆ ಒಂದೇ ದಿನದಲ್ಲಿ ಭೇಟಿ ನೀಡಲು ಅನುಕೂಲಕರವಾದ ಪ್ರದೇಶಗಳಿಗೆ ಸಂಬಂಧಿಸಿದಂತೆ ಲೇಖನದ ಮೂಲಕ ತಿಳಿಯಿರಿ.

ಅತ್ಯಂತ ಪ್ರಸಿದ್ಧವಾದ ಈ ಸ್ಥಳಗಳಿಗೆ ನೀವು ಕೂಡ ಭೇಟಿ ನೀಡಿರಬಹುದು, ಕೆಲವು ಇಲ್ಲದೇ ಇರಬಹುದು. ಒಮ್ಮೆ ಭೇಟಿ ನೀಡಿ ಬನ್ನಿ.

ಸಿದ್ಧರ ಬೆಟ್ಟ

ಸಿದ್ಧರ ಬೆಟ್ಟ

ತುಮಕೂರಿನಲ್ಲಿ ನೋಡಬೇಕಾಗಿರುವ ಪ್ರವಾಸಿ ಕೇಂದ್ರಗಳಲ್ಲಿ ಒಂದು ಸಿದ್ಧರ ಬೆಟ್ಟ. ತುಮಕೂರಿಗೆ ಇದು ಕೇವಲ 35 ಕಿ.ಮೀ ದೂರದಲ್ಲಿದೆ. ಅಡ್ವೇಂಚರ್ ಟೂರಿಸಂ ಎಂದರೆ ಇಷ್ಟವಿರುವವರಿಗೆ ಈ ಸಿದ್ಧರ ಬೆಟ್ಟ ಖಚಿತವಾಗಿ ಇಷ್ಟವಾಗುತ್ತದೆ. ನಿಮಗೆ ಗೊತ್ತ? ಇದು ಏಷಿಯಾದಲ್ಲಿಯೇ ಎರಡನೇ ಅತಿ ದೊಡ್ಡ ಏಕಶಿಲ ಬೆಟ್ಟ ಎಂದು ಗುರುತಿಸಲಾಗಿದೆ.

PC:YOUTUBE

ಸಿದ್ಧರ ಬೆಟ್ಟ

ಸಿದ್ಧರ ಬೆಟ್ಟ

ಈ ಸಿದ್ಧರ ಬೆಟ್ಟದ ಮೇಲೆ ಪೂರ್ವದಲ್ಲಿ 9 ಸಾವಿರ ಮಂದಿ ಸಾಧುಗಳು ತಪಸ್ಸು ಮಾಡುತ್ತಿದ್ದರಂತೆ ಅದ್ದರಿಂದಲೇ ಇದಕ್ಕೆ ಸಿದ್ಧರ ಬೆಟ್ಟ ಎಂದು ಹೆಸರು ಬಂದಿತು. ಸಿದ್ಧರು ಎಂದು ಸಾಧುಗಳು, ಬೆಟ್ಟ ಎಂಬ ಅರ್ಧವಿದೆ. ವಾರಾಂತ್ಯದಲ್ಲಿ ಈ ತಾಣಕ್ಕೆ ಹೆಚ್ಚು ಮಂದಿ ಯುವಕ ಯುವತಿಯರು ಭೇಟಿ ನೀಡುತ್ತಿರುತ್ತಾರೆ.

PC:YOUTUBE

ದೇವರಾಯನ ದುರ್ಗ ಅರಣ್ಯ ಪ್ರದೇಶ

ದೇವರಾಯನ ದುರ್ಗ ಅರಣ್ಯ ಪ್ರದೇಶ

ದೇವರಾಯನ ದುರ್ಗಾ ಅರಣ್ಯ ಪ್ರದೇಶವು ಒಂದು ಅದ್ಭುತವಾದ ಪ್ರವಾಸಿ ಕೇಂದ್ರ. ನಿತ್ಯವು ಹಚ್ಚ-ಹಸಿರಿನಿಂದ ಕೂಡಿರುತ್ತದೆ ಈ ಸುಂದರವಾದ ತಾಣ. ಮುಖ್ಯವಾಗಿ ಚಳಿಗಾಲದಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣವಿದ್ದು, ಮನಸ್ಸಿಗೆ ಹಿತವಾಗಿರುತ್ತದೆ. ಪ್ರವಾಸಿ ಪ್ರೇಮಿಗಳಿಗೆ ಈ ತಾಣವು ಅತಿ ಹೆಚ್ಚಾಗಿ ಆಕರ್ಷಿಸುತ್ತದೆ ಎಂದೇ ಹೇಳಬಹುದು. ಇದು ಇತ್ತೀಚೆಗೆ ಅಷ್ಟೇ ಪ್ರಸಿದ್ಧವಾಗುತ್ತಿದೆ.

PC:YOUTUBE

ದೇವರಾಯನ ದುರ್ಗ ಅರಣ್ಯ ಪ್ರದೇಶ

ದೇವರಾಯನ ದುರ್ಗ ಅರಣ್ಯ ಪ್ರದೇಶ

ವಾರಾಂತ್ಯದಲ್ಲಿ ಹೆಚ್ಚು ಮಂದಿ ಯವಕರು ಟ್ರೆಕ್ಕಿಂಗ್‍ಗಾಗಿ ದೇವರಾಯನ ದುರ್ಗಕ್ಕೆ ಭೇಟಿ ನೀಡುತ್ತಿರುತ್ತಾರೆ. ತಮಕೂರಿನಿಂದ ದೇವರಾಯನ ದುರ್ಗಾಕ್ಕೆ ಕೇವಲ 11 ಕಿ.ಮೀ ದೂರದಲ್ಲಿದ್ದರೆ, ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟ

PC:YOUTUBE

ದೇವರಾಯನ ದುರ್ಗ ಅರಣ್ಯ ಪ್ರದೇಶ

ದೇವರಾಯನ ದುರ್ಗ ಅರಣ್ಯ ಪ್ರದೇಶ

ಸಮುದ್ರ ಮಟ್ಟದಿಂದ ಸುಮಾರು 3940 ಅಡಿ ಎತ್ತರದಲ್ಲಿ ಈ ದೇವರಾಯನ ದುರ್ಗಾ ಕೋಟೆ ಇದೆ. ಇದು ತಮಕೂರಿನಿಂದ ಕೇವಲ 11 ಕಿ.ಮೀ ದೂರದಲ್ಲಿದ್ದು, ಈ ತಾಣಕ್ಕೆ ಸೇರಲು ಮೂರು ಮಾರ್ಗಗಳು ಇವೆ.

PC:YOUTUBE

ದೇವರಾಯನ ದುರ್ಗ ಅರಣ್ಯ ಪ್ರದೇಶ

ದೇವರಾಯನ ದುರ್ಗ ಅರಣ್ಯ ಪ್ರದೇಶ

ಈ ಕೋಟೆಗೆ ಸಮೀಪದಲ್ಲಿಯೇ ಎರಡು ಸುಂದರವಾದ ಜಲಪಾತಗಳು ನಯನ ಮನೋಹರವಾಗಿ ಕಾಣಿಸುತ್ತವೆ. ಇನ್ನು ಈ ದೇವರಾಯನ ದುರ್ಗಾದ ಕೋಟೆಯಲ್ಲಿ ರಾಮ, ಸೀತೆ, ಲಕ್ಷ್ಮಣ ವಿಗ್ರಹಗಳಿಂದು ಕೂಡಿದ ಚಿಕ್ಕದಾದ ದೇವಾಲಯ ಕೂಡ ಇದೆ. ಅಷ್ಟೇ ಅಲ್ಲದೇ, ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯವು ಕೂಡ ಇದೆ.

PC:YOUTUBE

ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯ

ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯ

ತಮಕೂರಿನಿಂದು ಗೊರವನಹಳ್ಳಿ ಲಕ್ಷ್ಮಿ ದೇವಿ ದೇವಾಲಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿದೆ. ಇಲ್ಲಿ ನೆಲೆಸಿರುವ ಲಕ್ಷ್ಮಿ ದೇವಿಯು ಅತ್ಯಂತ ಮಹಿಮಾನ್ವಿತವಾದವಳು ಎಂದು ಭಕ್ತರು ದೃಢವಾಗಿ ನಂಬುತ್ತಾರೆ. ವಿವಾಹವಾಗದೇ ಇರುವವರು ಈಕೆಯನ್ನು ದರ್ಶನ ಮಾಡಿದರೆ ತ್ವರಿತವಾಗಿ ವಿವಾಹವಾಗುತ್ತದೆ ಎಂದು ನಂಬಲಾಗಿದೆ.

PC:YOUTUBE

ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯ

ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯ

ಮುಖ್ಯವಾಗಿ ಈ ದೇವಿಯನ್ನು ದರ್ಶಿಸುವ ಸಲುವಾಗಿ ಮಂಗಳವಾರ ಹಾಗು ಶುಕ್ರವಾರ ಭಕ್ತರ ದಂಡೇ ಆಗಮಿಸುತ್ತದೆ. ಪ್ರತ್ಯೇಕವಾಗಿ ಈ ವಾರದಲ್ಲಿಯೇ ಭೇಟಿ ನೀಡಲು ಕಾರಣವೆನೆಂದರೆ ಸಕಲ ಇಷ್ಟಾರ್ಥಗಳು ಹಾಗು ಐಶ್ವರ್ಯವನ್ನು ದೇವಿ ಕರುಣಿಸುತ್ತಾಳೆ ಎಂದು ನಂಬಲಾಗಿದೆ. ಬೆಂಗಳೂರಿನಿಂದ ಸುಮಾರು 82 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಅತ್ಯಂತ ಪ್ರಸಿದ್ಧವಾದುದು ಎಂದೇ ಹೇಳಬಹುದು.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X