Search
  • Follow NativePlanet
Share
» »ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಸೂಕ್ತವಾದ ಗಿರಿಧಾಮಗಳು

ಬೇಸಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಸೂಕ್ತವಾದ ಗಿರಿಧಾಮಗಳು

ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ, ಆದ್ದರಿಂದ ಹಿಲ್ ಸ್ಟೇಷನ್ ಮತ್ತು ಆಫ್-ಗ್ರಿಡ್ ಎಸ್ಕೇಪ್‌ಗಳು ಅತ್ಯುತ್ತವಾಗಿವೆ. ಈ ಸಮೂಹವು ದಂಪತಿಗಳಿಗಾಗಿ ಗಿರಿಧಾಮಗಳು, ಏಕಾಂಗಿ ಪ್ರಯಾಣಿಕರು, ಕುಟುಂಬದೊಂದಿಗೆ ಪ್ರಯಾಣಿಸುವವರು ಅಥವಾ ನಿವೃತ್ತಿಹೊಂದಿವರಾಗಿರಲಿ ಪ್ರವಾಸ ಮಾಡಲು ಬಯಸುವ ಯಾರೇ ಆಗಿರಲಿ ಇಲ್ಲಿ ಬೇಕಾದ ಸಂತೋಷವನ್ನು ಪಡೆಯಬಹುದಾಗಿದೆ.

ಗಿರಿಧಾಮಗಳಿಗೆ ಪ್ರಯಾಣ ಮಾಡುವುದು ಅಲ್ಲಿಯ ಹೊಸ ಅನುಭವವನು ಪಡೆಯುವುದು ಹಾಗೂ ಆಯಾ ಸ್ಥಳಗಳ ಆಹಾರ ಸವಿಯುವುದು ಇವೆಲ್ಲವೂ ನಿಮ್ಮ ರಜಾದಿನಗಳು ಅಥವಾ ಹಬ್ಬಗಳನ್ನು ಇನ್ನೂ ಅತ್ತ್ಯತ್ತಮಗೊಳಿಸುವ ಒಂದು ಮಾರ್ಗವಾಗಿದೆ. ದಕ್ಷಿಣಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ಕೊಡಬಹುದಾದ ಕೆಲವು ಅತ್ಯುತ್ತಮ ಸ್ಥಳಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಕುನೂರ್

ಕುನೂರ್

ನಗರದ ಸದ್ದುಗದ್ದಲ ಹಾಗೂ ಬ್ಯುಸಿ ಜೀವನದಿಂದ ಸ್ವಲ್ಪ ದಿನದ ಮಟ್ಟಿಗೆ ತಪ್ಪಿಸಿಕೊಳ್ಳ ಬೇಕೆಂದಿರುವವರಿಗೆ ಕೂನೂರು ಅತ್ಯಂತ ಸೂಕ್ತವಾದ ನಗರವಾಗಿದೆ. ಇದು ತನ್ನ ಅಸಾಮಾನ್ಯ ಭೂದೃಶ್ಯಗಳು, ಮನಮೋಹದ ಬೆಟ್ಟಗಳು, ಅದ್ಬುತವಾದ ಕಟ್ಟಡಗಳು ಮತ್ತು ಕಾಟೇಜ್ ಗಳಿಗೆ ನೆಲೆಯಾಗಿದೆ. ಮೇಲೆ ಹೇಳಿದ ಎಲ್ಲಾ ಕಾರಣಗಳಿಂದಾಗಿ ಕೂನೂರ್ ಒಂದು ಅತ್ಯಂತ ಉತ್ತಮವಾದ ಮತ್ತು ದಕ್ಷಿಣ ಭಾರತದ ಬೇಸಿಗೆಯಲ್ಲಿ ಭೇಟಿ ಕೊಡಬಹುದಾದ ಅತ್ಯಂತ ಉತ್ತಮವಾದ ಗಿರಿಧಾಮಗಳಲ್ಲೊಂದೆನಿಸಿದೆ.

ಕೂರ್ಗ್

ಕೂರ್ಗ್

ಹೆಕ್ಟೇರ್ ಗಟ್ಟಲೆಗಳಷ್ಟು ಪ್ರದೇಶದಲ್ಲಿ ಸುಂದರವಾದ ಪರ್ವತಗಳು ಮತ್ತು ತೋಟಗಳನ್ನು ಹೊಂದಿರುವ ಕೂರ್ಗ್ ಬೇಸಿಗೆಯಲ್ಲಿ ದಟ್ಟವಾದ ಹಸಿರು ಹಾಸಿನಂತೆ ಬದಲಾಗುತ್ತದೆ! ಭಾರತದ ಸ್ಕಾಟ್ ಲ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ಕೂರ್ಗ್ ತನ್ನದೇ ಆದ ಶೈಲಿಯ ಆಹಾರ , ದೇವಾಲಯಗಳು ಮತ್ತು ಪುರಾತನ ಅವಶೇಷಗಳಿಂದ ಜನರನ್ನು ಸೆಳೆಯುತ್ತದೆ. ತನ್ನ ನೈಸರ್ಗಿಕ ಸೌಂದರ್ಯದ ಜೊತೆಗೆ ಬೈಲಕುಪ್ಪೆಯಲ್ಲಿ ಟಿಬೇಟಿಯನ್ನರ ಮಠವನ್ನೂ ಹೊಂದಿರುವುದಕ್ಕೆ ಪ್ರಸಿದ್ದಿಯಾಗಿದೆ. ನಿಮ್ಮ ಮೈ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸಿಕೊಳ್ಳಲು ನೀವು ಈ ಮಠದಲ್ಲಿ ಒಂದೆರಡು ದಿನ ಕಾಲ ಕಳೆಯಬಹುದಾಗಿದೆ. ಎಲ್ಲಾ ವಯೋಮಾನದವರಿಗೂ ಕೂರ್ಗ್ ಬೇಕಾದುದನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು.

ಲೋನಾವಾಲ

ಲೋನಾವಾಲ

ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುವವರಿಗೆ ಲೋನಾವಾಲ ಒಂದು ಭೇಟಿ ನೀಡಲೇಬೇಕೆನ್ನುವಂತಹ ದಕ್ಷಿಣಭಾರತದ ಗಿರಿಧಾಮವಾಗಿದೆ. ಲೋನಾವಾಲದಲ್ಲಿ ಪಾಲ್ಗೊಳ್ಳಲು ಅಸಂಖ್ಯಾತ ಚಟುವಟಿಕೆಗಳನ್ನು ನೀಡುತ್ತದೆ ಮತ್ತು ಇದು ಮುಂಬೈನಿಂದ ಕೆಲವೇ ಗಂಟೆಗಳ ಡ್ರೈವ್ ಆಗಿದೆ. ಗುಹೆಗಳು, ಹಚ್ಚ ಹಸಿರಿನ ಭೂದೃಶ್ಯ ಮತ್ತು ಬೆಟ್ಟಗಳ ವಿಹಂಗಮ ನೋಟವು ಲೋನಾವಲಾವನ್ನು ನಗರವಾಸಿಗಳಿಗೆ ವಿಶ್ರಾಂತಿ ಪಡೆಯಲು ಹೆಚ್ಚು ಭೇಟಿ ನೀಡುವ ಗಿರಿಧಾಮವಾಗಿದೆ.

ಮಹಾಬಲೇಶ್ವರ

ಮಹಾಬಲೇಶ್ವರ

ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಮಹಾಬಲೇಶ್ವರವು ಎಲ್ಲಾ ಸಮಯದಲ್ಲೂ ಭೇಟಿ ನೀಡಬಹುದಾದಂತಹ ಅತ್ಯಂತ ಉತ್ತಮವಾದ ಗಿರಿಧಾಮವಾಗಿದೆ. ಈ ಪ್ರಶಾಂತವಾದ ಗಿರಿಧಾಮವು ನಿತ್ಯಹರಿದ್ವರ್ಣ ಕಾಡುಗಳು, ದೇವಾಲಯಗಳು, ಸರೋವರಗಳು, ವಿಂಟೇಜ್ ಪಾಯಿಂಟ್ ಗಳು ಮತ್ತು ಜಲಪಾತಗಳು ಎಲ್ಲವನ್ನೂ ಹೊಂದಿದ್ದು, ನಗರವಾಸಿಗಳಿಗೆ ಭೇಟಿ ಕೊಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ

ವಯನಾಡ್

ವಯನಾಡ್

ವಯನಾಡ್ ದಕ್ಷಿಣಭಾರತದಲ್ಲಿ ಭೇಟಿ ಕೊಡಲು ಹೆಚ್ಚು ಬೇಡಿಕೆಯಲ್ಲಿರುವ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಕೇರಳದ ಇತರ ಪ್ರವಾಸಿ ತಾಣಗಳ ಸಾರವನ್ನು ಹೊಂದಿದ್ದರೂ ಸಹ ಕೇರಳಕ್ಕೆ ವಯನಾಡ್ ಒಂದು ವಿಭಿನ್ನವಾದ ಆಯಾಮವನ್ನು ನೀಡುತ್ತದೆ. ಹಸಿರು ಹುಲ್ಲುಗಾವಲಿನ ಅನುಭವ, ದಟ್ಟವಾದ ಮೋಡ ಸಮೂಹ, ಎಲ್ಲವನ್ನೂ ತನ್ನ ಪ್ರಕೃತಿಯಲ್ಲಿ ಹೊಂದಿರುವ ವಯನಾಡ್ ಪ್ರಕೃತಿ ಪ್ರೇಮಿಗಳು ಮತ್ತು ಸಾಹಸಿಗಳಿಗೆ ಒಂದು ವಿಭಿನ್ನವಾದ ಅನುಭವ ಕೊಡುತ್ತದೆ.

ಕೊಡೈಕೆನಾಲ್

ಕೊಡೈಕೆನಾಲ್

ಕೊಡೈಕೆನಾಲ್ ಒಂದು ಬೆರಗುಗೊಳಿಸುವಂತಹ ತಮಿಳುನಾಡಿನಲ್ಲಿರುವ ಗಿರಿಧಾಮವಾಗಿದ್ದು ಬೇಸಿಗೆಯಲ್ಲಿ ಭೇಟಿ ಕೊಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಟ್ರಕ್ಕಿಂಗ್ ಸ್ವಲ್ಪ ಸವಾಲುದಾಯಕವಾಗಿದ್ದರೂ ಸಹ ಇಲ್ಲಿಯ ಮಂಜುಭರಿತ ಹಾಗೂ ಆಹ್ಲಾದಕರ ಮತ್ತು ತಂಪಾದ ವಾತಾವರಣವು ನಿಮ್ಮನ್ನು ಕೈಬೀಸಿ ಕರೆಯುತ್ತದೆ .

ಊಟಿ

ಊಟಿ

ಊಟಿ ಹಾಗೂ ಇಲ್ಲಿಯ ಗಿರಿಧಾಮಗಳ ಹೆಸರು ಕೇಳದೇ ಇರುವವರು ಇಲ್ಲವೆಂದೇ ಹೇಳಬಹುದು. ಅಧಿಕೃತವಾಗಿ ಉದಕಮಂಡಲಂ ಎಂದೂ ಕರೆಯಲ್ಪಡುವ ಊಟಿಯು ದಕ್ಷಿಣಭಾರತದ ಅತ್ಯಂತ ಪ್ರಸಿದ್ದ ಗಿರಿಧಾಮಗಳಲ್ಲೊಂದಾಗಿದೆ. ತಮಿಳುನಾಡಿನ ಈ ಗಿರಿಧಾಮಗಳ ರಾಣಿಯು ಸುಂದರ ದೃಶ್ಯ ಸವಿಯನ್ನು ನೋಡುಗರಿಗೆ ನೀಡುತ್ತದೆ. ಮಂಜಿನ ಹವಾಗುಣ, ಪ್ರಶಾಂತವಾದ ಪರಿಸರ, ಎತ್ತರದ ಬೆಟ್ಟಗಳು ಮತ್ತು ಗಿಡಮೂಲಿಕೆ ಮರಗಳು ಇದನ್ನು ಪರಿಪೂರ್ಣವಾದ ಕುಟುಂಬದೊಂದಿಗೆ ಭೇಟಿ ಮಾಡಲು ಯೋಗ್ಯವಾದಂತಹ ತಾಣವನ್ನಾಗಿಸಿದೆ.

ಮುನ್ನಾರ್

ಮುನ್ನಾರ್

ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲ್ಲೂಕಿನ ಕಣ್ಣನ್ ದೇವನ್ ಬೆಟ್ಟಗಳಲ್ಲಿರುವ ಒಂದು ಗಿರಿಧಾಮವೇ ಮುನ್ನಾರ್. ಮುನ್ನಾರ್ ಎಂಬ ಪದದ ಮೂಲ ಅರ್ಥವು ಮೂರು ನದಿಗಳು ಎಂದಾಗಿದ್ದು, ಮುನ್ನಾರ್ ಮಧುಚಂದ್ರದ ತಾಣವಾಗಿಯೂ ಪ್ರಸಿದ್ಧವಾಗಿದೆ.

ಅರಕು ಕಣಿವೆ

ಅರಕು ಕಣಿವೆ

ಅರಕು ಕಣಿವೆಯು ಆಂಧ್ರಪ್ರದೇಶದ ವೈಜಾಗ್ (ವಿಶಾಖಪಟ್ನಂ) ಜಿಲ್ಲೆಯಲ್ಲಿರುವ ಸುಂದರ ಗಿರಿಧಾಮವಾಗಿದೆ. ಈ ಗಿರಿಧಾಮವು ಬೇಸಿಗೆಯಲ್ಲಿ ಅತ್ಯಂತ ಮನಮೋಹಕವಾಗಿ ಕಾಣುತ್ತದೆ. ಪೂರ್ವ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಹರಡಿರುವ ಅರಕು ಕಣಿವೆಯು ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವಾಗಿದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಕರ್ನಾಟಕದ ಮತ್ತೊಂದು ಸುಂದರವಾದ ಗಿರಿಧಾಮವಾಗಿದೆ. ಬೇಸಿಗೆ ಕಾಲದಲ್ಲಿ, ಎತ್ತರದ ಪ್ರದೇಶಗಳ ಬೆಟ್ಟಗಳು ಮತ್ತು ಕಾಡುಗಳು ಪ್ರಕೃತಿಯ ಅಸಾಧಾರಣ ಸೌಂದರ್ಯದಿಂದ ಆವೃತವಾಗಿರತ್ತಾ ಮಂತ್ರಮುಗ್ಧಗೊಳಿಸುವ ಆಕರ್ಷಣೆಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X