Search
  • Follow NativePlanet
Share
» »ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣಗಳಿವು

ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣಗಳಿವು

ಚಳಿಗಾಲದಲ್ಲಿ ಭೇಟಿಕೊಡಲು ಉತ್ತಮವಾದಂತಹ ಹಲವಾರು ಸ್ಥಳಗಳನ್ನು ಭಾರತದಲ್ಲಿ ಕಾಣಬಹುದಾಗಿದೆ. ತಂಪಾದ ಗಾಳಿ, ಬಿಸಿಬಿಸಿಯಾದ ಕಾಫಿ, ರುಚಿಕರವಾದ ಆಹಾರ, ದಟ್ಟವಾದ ಹಸಿರು ತೋಟಗಳು, ರಮಣೀಯ ಭೂದೃಶ್ಯಗಳು ಮತ್ತು ವಿನೋದದ ಚಟುವಟಿಕೆಗಳು ಇತ್ಯಾದಿಗಳನ್ನು ಒಳಗೊಂಡಂತಹ ವಿಭಿನ್ನವಾದ ಅನುಭವವನ್ನು ಕೊಡುವಂತಹ ಸ್ಥಳಗಳಿಗೆ ಭೇಟಿ ನೀಡುವುದೇ ಒಂದು ಆನಂದ ಅಲ್ಲವೆ? ಚಳಿಗಾಲದ ಕೆಲವು ತಾಣಗಳಲ್ಲಿಯ ತಂಪಾದ ವಾತಾವರಣದಲ್ಲಿ ಸಂತೋಷದ ಅನುಭವವನ್ನು ಪಡೆಯಲು ಭೇಟಿ ಕೊಡಲು ಕೆಲವರು ಅತ್ಯಂತ ಉತ್ಸುಕರಾಗಿ ಕಾಯುತ್ತಿರುತ್ತಾರೆ. ಅದೃಷ್ಟಾವಶತ್ ನೀವು ಇದಕ್ಕಾಗಿ ಬೇರೆ ದೇಶಗಳಿಗಾಗಿ ಹೋಗುವ ಅವಶ್ಯಕತೆಯಿಲ್ಲ ಏಕೆಂದರೆ ಚಳಿಗಾಲದ ಸಮಯದಲ್ಲಿ ಭೇಟಿಗೆ ಯೋಗ್ಯವಾದಂತಹ ಹಲವಾರು ಅತ್ಯುತ್ತಮ ಸ್ಥಳಗಳನ್ನು ನೀವು ಭಾರತದಲ್ಲಿಯೇ ಕಾಣಬಹುದು ಅದರಲ್ಲೂ ದಕ್ಷಿಣ ಭಾರತದಲ್ಲಿ ಅತ್ಯಂತ ಸುಂದರವಾದ ಹಲವಾರು ಸ್ಥಳಗಳನ್ನು ಚಳಿಗಾಲದಲ್ಲಿ ಭೇಟಿ ನೀಡಲು ಯೋಗ್ಯವಾಗಿವೆ.

ಚಳಿಗಾಲದಲ್ಲಿ ಭೇಟಿ ನೀಡಲು ನೀವೇನಾದರೂ ಒಳ್ಳೆಯ ಸ್ಥಳಗಳ ಹುಡುಕಾಟದಲ್ಲಿದ್ದರೆ, ಈ ಲೇಖನವನ್ನು ಓದಿ. ಇಲ್ಲಿ ದಕ್ಷಿಣಭಾರತದಲ್ಲಿ ಚಳಿಗಾಲದ ರಜಾದಿನಗಳಲ್ಲಿ ಭೇಟಿ ಕೊಡಬಹುದಾದಂತಹ ಹಲವಾರು ತಾಣಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ. ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ಭಾರತದ ತಾಣಗಳು ಪ್ರವಾಸೋದ್ಯಮಕ್ಕೆ ಹೇಗೆ ಕೊಡುಗೆಯನ್ನು ನೀಡಿದೆ ಎಂಬುದನ್ನು ನೋಡೋಣ

ಕೂರ್ಗ್

ಕೂರ್ಗ್

ಕಾಫಿ ಮತ್ತು ಟೀ ತೋಟಗಳು ಪ್ರಶಾಂತವಾದ ಹುಲ್ಲುಗಾವಲುಗಳು, ತುಂಬಿ ಹರಿಯುತ್ತಿರುವ ಸರೋವರಗಳು, ನದಿಗಳು, ಮತ್ತು ಭವ್ಯವಾದ ಜಲಪಾತಗಳು ಇವೆಲ್ಲವನ್ನೂ ಹೊಂದಿರುವ ಕೂರ್ಗ್ ಕರ್ನಾಟಕದ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ ಕೂರ್ಗ್ ಗೆ ಹಲವಾರು ಬಸ್ಸುಗಳು ಓಡಾಡುತ್ತವೆ. ಅಲ್ಲದೆ ಕೂರ್ಗ್ ನಲ್ಲಿ ಬೇಕಾದಷ್ಟು ರೆಸಾರ್ಟ್ ಗಳು ಮತ್ತು ಕಾಟೇಜ್ಗ್ ಗಳಲ್ಲಿ ತಂಗಬಹುದಾಗಿದೆ.

ಅಲೆಪ್ಪಿ

ಅಲೆಪ್ಪಿ

ಅಲೆಪ್ಪಿ ಅಥವಾ ಅಲಪ್ಪುಜಾ ಎಂದೂ ಕರೆಯಲಾಗುವ ಅಲೆಪ್ಪಿಯನ್ನು ಪೂರ್ವದ ವೆನಿಸ್ ಎಂದೂ ಕರೆಯಲಾಗುತ್ತದೆ ಈ ತಾಣವು ಕೇರಳದ ಚಳಿಗಾಲದ ಪ್ರಮುಖ ಪ್ರವಾಸಿ ತಾಣವಾಗಿದೆ. ಹಚ್ಚ ಹಸಿರು ಭೂದೃಶ್ಯದ ನಡುವೆ ನೆಲೆಸಿರುವ ಈ ತಾಣವು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ನೀವೆಂದಾದರೂ ವೆನಿಸ್ ಗೆ ಭೇಟಿ ಕೊಟ್ಟಿರುವಿರಾದರೆ ಈ ತಾಣವು ಅದೇ ತರಹದ ಹೋಲಿಕೆ ಇರುವುದು ಕಂಡುಬರುತ್ತದೆ.

ಕೊಡೈಕೆನಾಲ್

ಕೊಡೈಕೆನಾಲ್

ಕೊಡೆಕೆನಾಲ್ ತಮಿಳುನಾಡಿನ ರಮಣೀಯ ಗಿರಿಧಾಮವಾಗಿದೆ. ಇದು ಬೇಸಿಗೆ ಮತ್ತು ಚಳಿಗಾಲದಲ್ಲಿ ಭೇಟಿಕೊಡಬಹುದಾದಂತಹ ಸ್ಥಳವಾಗಿದೆ. ಇಲ್ಲಿ ಟ್ರಕ್ಕಿಂಗ್ ಸ್ವಲ್ಪ ಸವಾಲುದಾಯಕವೆನಿಸಬಹುದು ಆದರೂ ಮಂಜು ಮತ್ತು ಹಿಮವು ನಿಮ್ಮನ್ನು ಒಂದು ಆಹ್ಲಾದಕರ ವಾತಾವರಣಕ್ಕೆ ಆಹ್ವಾನಿಸುತ್ತಾ ಅದರ ತಣ್ಣಗಿನ ಹವಾಮಾನದಲ್ಲಿ ಆನಂದಹೊಂದುವಂತೆ ಮಾಡುತ್ತದೆ.

ಕಬಿನಿ ವನ್ಯಜೀವಿ ಅಭಯಾರಣ್ಯ

ಕಬಿನಿ ವನ್ಯಜೀವಿ ಅಭಯಾರಣ್ಯ

ಕಬಿನಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಒಂದು ಅಪರೂಪದ ಅಭಯಾರಣ್ಯವಾಗಿದ್ದು, ಇದು ಇಲ್ಲಿಗೆ ಭೇಟಿ ಕೊಡುವವರಿಗೆ ಒಂದು ವಿಭಿನ್ನ ಅನುಭವ ನೀಡುತ್ತದೆ. ನೀವು ನಗರದ ಸದ್ದುಗದ್ದಲದಿಂದ ಬೇಸತ್ತು ವಿಶ್ರಾಂತಿ ಪಡೆಯಬೇಕೆಂದು ಬಯಸುವಿರಾದಲ್ಲಿ ಮತ್ತು ಯಾವುದಾದರೂ ಆಫ್ಬೀಟ್ ಪ್ರವಾಸಿ ತಾಣಗಳನ್ನು ಚಳಿಗಾಲದಲ್ಲಿ ಹುಡುಕುವಿರಾದಲ್ಲಿ ಕಬಿನಿಯನ್ನು ಆಯ್ಕೆ ಮಾಡಿಕೊಳ್ಳಿ.

ಆಗುಂಬೆ

ಆಗುಂಬೆ

ಕರ್ನಾಟಕದಲ್ಲಿ ಮಳೆಕಾಡುಗಳಿಗೆ ಪ್ರಸಿದ್ದವಾದ ಆಗುಂಬೆಯು ತನ್ನದೇ ಆದ ಮಹತ್ವವನ್ನು ಹೊಂದಿದ್ದು ಇದು ದಕ್ಷಿಣ ಭಾರತದಲ್ಲಿ ಭೇಟಿ ಕೊಡಲು ಯೋಗ್ಯವಾದ ಸ್ಥಳಗಳಲ್ಲಿ ಒಂದಾಗಿದೆ. ವೈವಿಧ್ಯಮಯವಾದ ಜೀವ ಜಗತ್ತಿಗೆ ನೆಲೆಯಾಗಿರುವ ನಿತ್ಯ ಹರಿದ್ವರ್ಣದ ಕಾಡುಗಳು ಪ್ರಕೃತಿ ಪ್ರೇಮಿಗಳ ಸ್ವರ್ಗವೆಂದರೆ ತಪ್ಪಾಗಲಾರದು. ವಿಶೇಷವಾಗಿ ಆಗುಂಬೆಯ ಸುತ್ತಮುತ್ತಲಿನ ಹಲವಾರು ಜಲಪಾತಗಳಿಗೆ ಭೇಟಿ ನೀಡಲು ಚಳಿಗಾಲವು ಸರಿಯಾದ ಸಮಯ.

ವಯನಾಡ್

ವಯನಾಡ್

ಸುಂದರವಾದ ಪಶ್ಚಿಮ ಘಟ್ಟಗಳಲ್ಲಿ ಮತ್ತು ಸುತ್ತಮುತ್ತಲಿನ ವನ್ಯಜೀವಿಗಳು ಮತ್ತು ವಯನಾಡಿನ ಹಚ್ಚ ಹಸಿರಿನ ಕಾಡುಗಳು ಅದರ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಈ ಗಿರಿಧಾಮವು ಕೇರಳದ ಸುಲ್ತಾನ್ ಬತ್ತೇರಿಯಿಂದ ಸುಮಾರು 16 ಕಿಮೀ ದೂರದಲ್ಲಿದೆ.

ಭೀಮೇಶ್ವರಿ

ಭೀಮೇಶ್ವರಿ

ಭೀಮೇಶ್ವರಿ ನಿಜವಾಗಿಯೂ ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಸುಂದರ ಸ್ಥಳವಾಗಿದೆ. ಭೀಮೇಶ್ವರಿಯು ಬೆಂಗಳೂರಿನಿಂದ 100 ಕಿಮೀ ದೂರದಲ್ಲಿರುವ ಮಂಡ್ಯದಲ್ಲಿರುವ ಒಂದು ರಮಣೀಯ ಸ್ಥಳವಾಗಿದೆ.

ಕುಮಾರ ಪರ್ವತ

ಕುಮಾರ ಪರ್ವತ

ಕುಮಾರ ಪರ್ವತ ದ ಪುಷ್ಪಗಿರಿಯಲ್ಲಿ ಚಳಿಗಾಲದ ಸಮಯದಲ್ಲಿ ಟ್ರಕ್ಕಿಂಗ್ ಮಾಡುವುದು ಒಂದು ಆತ್ಮತೃಪ್ತಿಯಾಗುವಂತಹ ಅನುಭವವಾಗಿದೆ. ಭಾರತಾದ್ಯಂತದ ರೋಚಕತೆಯ ಅನುಭವ ಪಡೆಯ ಬಯಸುವವರು ಮತ್ತು ಪ್ರಕೃತಿ ಪ್ರೇಮಿಗಳು ಇಲ್ಲಿಗೆ ಭೇಟಿ ಕೊಟ್ಟು ಇಲ್ಲಿಯ ಸುಂದರ ಅನುಭವ ಪಡೆಯುತ್ತಾರೆ. ಚಳಿಗಾಲದಲ್ಲಿ ಈ ಸ್ಥಳವು ದಟ್ಟವಾದ ಹಸಿರು ಮತ್ತು ಮೋಡ ಕುಮಾರ ಪರ್ವತದ ಹಚ್ಚ ಹಸಿರಿನ ಮತ್ತು ಮೋಡದಿಂದ ತುಂಬಿದಂತೆ ಕಾಣುವ ಬಂಡೆಗಳು ಮಂತ್ರಮುಗ್ದಗೊಳಿಸುತ್ತವೆ ಅಲ್ಲದೆ ಈ ಸ್ಥಳಗಳು ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳವಾಗಿದೆ.

ತಲಕೋನ ಜಲಪಾತಗಳು

ತಲಕೋನ ಜಲಪಾತಗಳು

ಇದು ಆಂಧ್ರ ಪ್ರದೇಶದ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಜಲಪಾತಗಳಲ್ಲೊಂದಾಗಿದ್ದು, ಇದು ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವನ ಚಿತ್ತೂರು ಜಿಲ್ಲೆಯಲ್ಲಿದೆ. ತಲಕೋನಾ ಜಲಪಾತವು ಆಂಧ್ರಪ್ರದೇಶದ ಅತಿ ಎತ್ತರದ ಜಲಪಾತವಾಗಿದ್ದು, 270 ಅಡಿ ಎತ್ತರದಲ್ಲಿದೆ.

ನಾಗಾರ್ಜುನ ಸಾಗರ

ನಾಗಾರ್ಜುನ ಸಾಗರ

ನಾಗಾರ್ಜುನ ಸಾಗರ ಜಲಾಶಯವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಪ್ರಸಿದ್ದ ಪ್ರವಾಸಿ ತಾಣವು ತೆಲಂಗಾಣದ ನಲಗೊಂಡಾ ಜಿಲ್ಲೆಯಲ್ಲಿ ನೆಲೆಸಿದೆ. ಚಳಿಗಾಲದ ಸಮಯದಲ್ಲಿ ಜಲಾಶಯದಲ್ಲಿ ನೀರು ತುಂಬಿರುವುದನ್ನು ನೋಡುವುದೇ ಒಂದು ಸುಂದರ ಅನುಭವವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X