Search
  • Follow NativePlanet
Share
» »ಬೇಸಿಗೆಯಲ್ಲಿ ಮನಾಲಿಯಲ್ಲಿ ಭೇಟಿ ನೀಡಬಹುದಾದ 10 ಅತ್ಯುತ್ತಮ ಸ್ಥಳಗಳು

ಬೇಸಿಗೆಯಲ್ಲಿ ಮನಾಲಿಯಲ್ಲಿ ಭೇಟಿ ನೀಡಬಹುದಾದ 10 ಅತ್ಯುತ್ತಮ ಸ್ಥಳಗಳು

ಮನಾಲಿಯು ವರ್ಷದಾದ್ಯಂತ ಭೇಟಿ ಕೊಡಲು ಯೋಗ್ಯವಾದ ಸ್ಥಳವಾಗಿದ್ದರೂ ಸಹ ಬೇಸಿಗೆ ಕಾಲದಲ್ಲಿ ಈ ಸ್ಥಳವು ಹೆಚ್ಚು ಆಹ್ಲಾದಕರವೆನಿಸುವಂತಿರುತ್ತದೆ. ಮಾರ್ಚ್ ನಿಂದ ಪ್ರಾರಂಭವಾಗಿ ಏಪ್ರಿಲ್ ವರೆಗಿನ ಸಮಯಯವು ಅನ್ವೇಷಣೆಗೆ ಮತ್ತು ಭೇಟಿ ಕೊಡಲು ಸೂಕ್ತವಾದ ಸ್ಥಳವಾಗಿದೆ.

ಇಲ್ಲಿನ ಅನುಕೂಲಕರ ಹವಾಮಾನ ಮತ್ತು ನೈಸರ್ಗಿಕ ಸೌಂದರ್ಯತೆಗಳು ಕುಟುಂಬ ಸಮೇತರಾಗಿ ಜನರು ಭೇಟಿ ಕೊಡುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಒಂಟಿಯಾಗಿ ಮತ್ತು ಮಧುಚಂದ್ರಕ್ಕೆ ಹೋಗುವವರಿಗೂ ಇದು ಹೆಚ್ಚಾಗಿ ಆಕರ್ಷಿಸುವಂತಹ ಸ್ಥಳವೆನಿಸಿದೆ. ಪ್ಯಾರಾಗೈಡ್ಲಿಂಗ್, ಟ್ರೆಕ್ಕಿಂಗ್, ಮತ್ತು ಕ್ಯಾಂಪಿಂಗ್ ನಂತಹ ಸಾಹಸಮಯ ಕ್ರೀಡೆಗಳನ್ನು ಇಲ್ಲಿ ಆನಂದಿಸಲು ಬೇಸಿಗೆ ಕಾಲವು ಸೂಕ್ತವಾದ ಸಮಯವಾಗಿದೆ.

ಈ ಬೇಸಿಗೆಯಲ್ಲಿ ಮನಾಲಿಯಲ್ಲಿ ಭೇಟಿ ಕೊಡಲು ಯೋಗ್ಯವಾದಂತಹ ಹತ್ತು ಅತ್ಯುತ್ತಮ ಸ್ಥಳಗಳ ಪಟ್ಟಿ ಇದೆ.

1. ಭೃಗು ಸರೋವರ

1. ಭೃಗು ಸರೋವರ

ಒಂದು ಕ್ಷಣ ಇಲ್ಲಿಯ ಮನಮೋಹಕ ಹಾಗೂ ಸ್ಥಬ್ದವಾಗಿರುವ ಜಲಭಾಗ ಹಾಗೂ ಇದರ ಪಕ್ಕದಲ್ಲಿ ಇರುವ ಎತ್ತರವಾದ ಹುಲ್ಲುಗಾವಲುಗಳು ಮತ್ತು ನಿತ್ಯ ಹರಿದ್ವರ್ಣ ಮರದ ಕಾಡುಗಳು ಯಾರನ್ನಾದರೂ ತನ್ಮಯರನ್ನಾಗಿಸುತ್ತದೆ.

ಈ ಚಿತ್ರಣ ಭೃಗು ಸರೋವರದ್ದು. ಈ ಸ್ಥಳವು ಮನಾಲಿಯ ಅತ್ಯಂತ ಉತ್ತಮವಾದ ಬೇಸಿಗೆ ತಾಣಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ 4,000 ಮೀಟರ್ ಎತ್ತರದಲ್ಲಿ ಈ ಸರೋವರ ಇರುವುದರಿಂದ ಚಾರಣಕ್ಕೆ ಹೋಗುವವರಾಗಿದ್ದವರು ಈ ಸ್ಥಳಕ್ಕೆ ಸ್ವಲ್ಪ ಒಗ್ಗುವ ಅಗತ್ಯವಿದೆ. ಪಿರ್ ಪಂಜಾಲ್ ಶ್ರೇಣಿಯ ಭೂದೃಶ್ಯ ಮತ್ತು ಸುಂದರವಾದ ನೋಟಗಳು ಈ ಸ್ಥಳಕ್ಕೆ ಹೆಚ್ಚಿನ ಪ್ರವಾಸಿಗರನ್ನು ಮತ್ತು ಪ್ರಯಾಣಿಕರನ್ನು ಆಕರ್ಷಿಸುತ್ತವೆ.

2. ನೆಹರೂ ಕುಂಡ್

2. ನೆಹರೂ ಕುಂಡ್

ಮನಾಲಿ-ರೋಹ್ತಾಂಗ್ ಹೆದ್ದಾರಿಯಲ್ಲಿ ನೈಸರ್ಗಿಕ ಬುಗ್ಗೆ ಕಾಣುತ್ತದೆ, ಇದೇ ನೆಹರೂ ಕುಂಡ್. ಇದು ಬೇಸಿಗೆಯಲ್ಲಿ ಭೇಟಿ ಕೊಡಲು ಉತ್ತಮವಾದ ತಾಣವಾಗಿದೆ. ಭಾರತದ ಪ್ರಥಮ ಪ್ರಧಾನ ಮಂತ್ರಿಯಾದ ನೆಹರೂ ಅವರ ಹೆಸರನ್ನು ಇಡಲಾಗಿದೆ.

ನೆಹರೂರವರು ಮನಾಲಿಯಲ್ಲಿ ತಂಗಿದ ಸಮಯದಲ್ಲಿ ಈ ಇಲ್ಲಿಗೆ ಭೇಟಿ ಕೊಡುತ್ತಿದ್ದು ಇಲ್ಲಿಯ ನೈಸರ್ಗಿಕ ಬುಗ್ಗೆಯ ನೀರನ್ನು ಕುಡಿಯುತ್ತಿದ್ದರು ಎಂದು ಹೇಳಲಾಗುತ್ತದೆ. ಸ್ವಚ್ಚವಾದ ನೀರು ಮತ್ತು ಶಾಂತ ಹಿಮಾಲಯದ ದೃಶ್ಯಗಳ ಒಳಗೊಂಡಿರುವ ಈ ಸ್ಥಳವು ರೋಹ್ಟಾಂಗ್ ಪಾಸ್ ಗೆ ಹೋಗುವವರಿಗೆ ಉತ್ತಮ ನಿಲುಗಡೆಯಾಗಿದೆ. ಅಷ್ಟೇ ಅಲ್ಲದೆ ನೆಹರೂ ಕುಂಡ್ ಛಾಯಾಗ್ರಾಹಕರು ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತವಾದ ಬೇಸಿಗೆಯ ತಾಣವಾಗಿದೆ.

3. ಸೋಲಾಂಗ್ ಕಣಿವೆ

3. ಸೋಲಾಂಗ್ ಕಣಿವೆ

ಸಮುದ್ರ ಮಟ್ಟದಿಂದ ಸುಮಾರು 2,600 ಎತ್ತರದಲ್ಲಿರುವ ಸಣ್ಣ ಕಣಿವೆಯಾದ ಸೋಲಾಂಗ್ ನಾಲಾವು ಮನಾಲಿಯಿಂದ ಸ್ವಲ್ಪ ದೂರದಲ್ಲಿದೆ. ಇದು ಸಾಹಸಪ್ರಿಯರು ಮತ್ತು ಕ್ರೀಡಾಪ್ರಿಯರ ಸ್ವರ್ಗವೆಂದೇ ಹೇಳಬಹುದಾಗಿದೆ.

ಇಲ್ಲಿ ಹಿಮದಲ್ಲಿ ಸಾಹಸಗಳನ್ನು ಪ್ರಯತ್ನಿಸಲು ನಾನಾ ಬಗೆಯ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಅಲ್ಲದೇ, ಹಿಮವಾಹದಲ್ಲಿಯೂ ಪರಿಶೋಧನೆ ಮಾಡಬಹುದಾಗಿದೆ. ಇದಲ್ಲದೇ, ಹವಾಮಾನವು ಬೆಚ್ಚಗಾದಾಗ, ಜನರು ಇಲ್ಲಿ ಜೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಗಾಗಿ ಸೇರುತ್ತಾರೆ.

ಇಲ್ಲಿ ಕೇಬಲ್ ಕಾರಿನ ಮೂಲಕ ಹಿಮಾಲಯದ ಮನಮೋಹಕ ದೃಶ್ಯಗಳನ್ನು ನೋಡಬಹುದಾಗಿದೆ. ಸಾಹಸಮಯ ಕ್ರೀಡೆಗಳಿಗಾಗಿ ನೋಡುವವರು ಮನಾಲಿಯು ಬೇಸಿಗೆ ಕಾಲದಲ್ಲಿ ಭೇಟಿ ಕೊಡಲು ಹೆಚ್ಚು ಸೂಕ್ತವಾದ ಸ್ಥಳವಾಗಿದೆ.

4. ಜೋಗಿನಿ ಜಲಪಾತ

4. ಜೋಗಿನಿ ಜಲಪಾತ

ಜೋಗಿನಿ ಜಲಪಾತದ ಧುಮ್ಮಿಕ್ಕಿ ಹರಿಯುವ ಕ್ಯಾಸ್ಕೇಡ್ ಗಳು ಮನಾಲಿಯ ಮುಖ್ಯ ಪಟ್ಟಣದಿಂದ ದೂರದಲ್ಲಿರುವ ಒಂದು ಸಣ್ಣ ಮತ್ತು ಹೆಚ್ಚು ಉತ್ತೇಜಕ ಚಾರಣವಾಗಿದೆ. ಈ ಜಲಪಾತದ ಕಡೆಗೆ ಹೋಗುವ ಹಾದಿಯು ಹೆಚ್ಚು ರಮಣೀಯವಾಗಿದ್ದು, ಇದು ಬಿಯಾಸ್ ನದಿ ಮತ್ತು ರೋಹ್ಟಾಂಗ್‌ನ ಹಿಮದಿಂದ ಆವೃತವಾದ ಶಿಖರಗಳ ಒಂದು ನೋಟವನ್ನು ನೀಡುವುದರಿಂದ ಈ ಜಲಪಾತಕ್ಕೆ ಇನ್ನಷ್ಟು ಮೆರುಗನ್ನು ತಂದು ಕೊಡುತ್ತದೆ.

ಈ ಪ್ರಶಾಂತವಾದ ಪರಿಸರದ ಚೌಕಟ್ಟಿನ ಹೊರತಾಗಿಯೂ ಜೋಗಿನಿಯ ಕೆಳಭಾಗದಲ್ಲಿರುವ ಕೊಳದ ಸುತ್ತಲೂ ಅನೇಕ ಹಳೆಯ ದೇವಾಲಯಗಳನ್ನು ಕಾಣಬಹುದಾಗಿದೆ. ಆದುದರಿಂದ, ಇದು ತೀರ್ಥಯಾತ್ರೆಯ ಪ್ರಮುಖ ಸ್ಥಳವಾಗಿದೆ .

ಬೆಳಿಗ್ಗೆ ಬೇಗ ಇಲ್ಲಿಗೆ ಪ್ರಯಾಣಿಸುವುದನ್ನು ಶಿಫಾರಸು ಮಾಡಲಾಗಿದೆ ಇದರಿಂದ ನೀವು ಈ ಸುಂದರವಾದ ನೈಸರ್ಗಿಕ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯಬಹುದು, ಇದು ಮನಾಲಿಯ ಉನ್ನತ ಚಾರಣ ಮತ್ತು ಪಿಕ್ನಿಕ್ ಸ್ಥಳಗಳಲ್ಲಿ ಒಂದಾಗಿದೆ.

5. ಮನಾಲಿ ಗೋಂಪಾ

5. ಮನಾಲಿ ಗೋಂಪಾ

ಅಲಂಕೃತ ವಿನ್ಯಾಸ ಮತ್ತು ಅತ್ಯುತ್ಕೃಷ್ಟವಾದ ಟಿಬೆಟಿಯನ್ ವಾಸ್ತುಶಿಲ್ಪವು ಗಧನ್ ತೆಖೋಕ್ಲಿಂಗ್ ಗೊಂಪಾವನ್ನು ಸಾಮಾನ್ಯವಾಗಿ ಮನಾಲಿ ಗೊಂಪಾ ಎಂದು ಕರೆಯಲಾಗುತ್ತದೆ, ಇದು ಮನಾಲಿಯ ಅತ್ಯುತ್ತಮ ಹೆಗ್ಗುರುತುಗಳಲ್ಲಿ ಒಂದಾಗಿದೆ.

1960ರ ದಶಕದಲ್ಲಿ ಟಿಬೆಟಿಯನ್ ನಿರಾಶ್ರಿತರು ನಿರ್ಮಿಸಿದ ಈ ಮಠವು ತನ್ನಲ್ಲಿಯ ಶಾಂತವಾದ ಪರಿಸರ ಮತ್ತು ಸಾಟಿಯಿಲ್ಲದ ಆಧ್ಯಾತ್ಮಿಕ ಸೆಳೆತಗಳನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಮನಾಲಿ ಗೊಂಪಾದ ಕೆಲವು ಪ್ರಮುಖ ಅಂಶಗಳಲ್ಲಿ ಬೌದ್ಧಧರ್ಮದ ಪ್ರಮುಖ ಘಟನೆಗಳನ್ನು ಎದ್ದುಕಾಣುವ ಬಣ್ಣಗಳಲ್ಲಿ ಮತ್ತು ಪಗೋಡಾ ಶೈಲಿಯಲ್ಲಿ ನಿರ್ಮಿಸಲಾದ ಚಾವಣಿಗಳಲ್ಲಿ ಚಿತ್ರಿಸುವ ಸೊಗಸಾದ ಭಿತ್ತಿಚಿತ್ರಗಳನ್ನು ಒಳಗೊಂಡಿವೆ. ಸಂಕೀರ್ಣದಲ್ಲಿನ ಅಂಗಡಿಗಳು ಕೆಲವು ಸ್ಮಾರಕಗಳು ಮತ್ತು ಟಿಬೆಟಿಯನ್ ಕರಕುಶಲ ವಸ್ತುಗಳನ್ನು ತೆಗೆದುಕೊಳ್ಳಲು ಉತ್ತಮ ಸ್ಥಳವಾಗಿದೆ.

6. ಹಂಪ್ಟಾ ಪಾಸ್

6. ಹಂಪ್ಟಾ ಪಾಸ್

ಸುಲಭ-ಮಧ್ಯಮ-ಕಷ್ಟದ ಹಿಮಾಲಯದ ಚಾರಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಹಂಪ್ಟಾ ಪಾಸ್ ಚಾರಣವು ಕುಲ್ಲು ಕಣಿವೆ ಮತ್ತು ಲಾಹೌಲ್ ಕಣಿವೆಯ ಮೋಡಿ ಮಾಡುವ ನೋಟಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

ಇದಲ್ಲದೇ ಚಾರಣದ ಮಾರ್ಗದಲ್ಲಿರುವ ಚಂದ್ರಾತಾಲ್ ಸರೋವರವು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಪಾಸ್ ಪಿರ್ ಪಾಂಜಲ್ ಶ್ರೇಣಿಯಲ್ಲಿ ಸುಮಾರು 4,000 ಮೀಟರ್ ಗಳಷ್ಟು ಎತ್ತರದಲ್ಲಿದೆ ಹಾಗೂ ಇಲ್ಲಿಯ ಮಾರ್ಗಗಳಲ್ಲಿ ಚಲಿಸುವಾಗ ಸುಂದರವಾದ ನದಿಗಳನ್ನು ದಾಟಬೇಕಾಗುತ್ತದೆ. ಅನೇಕ ಗುಂಪುಗಳು ಹ್ಯಾಂಪ್ಟಾ ಪಾಸ್ ಚಾರಣ ಪ್ರವಾಸಗಳನ್ನು ನಡೆಸುತ್ತವೆ ಮತ್ತು ವಿವರಗಳು ಮತ್ತು ದಿನಗಳ ಸಂಖ್ಯೆಯನ್ನು ಆಧರಿಸಿ ಅವುಗಳ ಶುಲ್ಕಗಳನ್ನು ನಿಗಧಿ ಮಾಡಲಾಗುತ್ತದೆ.

7. ವಶಿಷ್ಟ್ ಬಿಸಿನೀರಿನ ಬುಗ್ಗೆ ಮತ್ತು ದೇವಾಲಯ

7. ವಶಿಷ್ಟ್ ಬಿಸಿನೀರಿನ ಬುಗ್ಗೆ ಮತ್ತು ದೇವಾಲಯ

ದೊಡ್ಡ ಆಧ್ಯಾತ್ಮಿಕ ಪ್ರಾಮುಖ್ಯತೆಯ ಸ್ಥಳವಾದ ವಶಿಷ್ಟ್ ಗ್ರಾಮವು ಹಿಮಾಲಯದ ಮನಮೋಹಕ ಸ್ಥಳಾಕೃತಿಯ ಮಧ್ಯೆ ಸುಂದರವಾದ ದೇವಾಲಯವನ್ನು ಹೊಂದಿದೆ. ಈ ದೇವಾಲಯವು 4000 ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ನಂಬಲಾಗಿದೆ ಮತ್ತು ದೇವಾಲಯದ ಒಳಾಂಗಣದಲ್ಲಿ ಮರದ ಕೆತ್ತನೆಗಳು, ಪೌರಾಣಿಕ ವ್ಯಕ್ತಿಗಳ ಮತ್ತು ಇನ್ನಿತರ ವರ್ಣಚಿತ್ರಗಳನ್ನು ಹೊಂದಿದೆ.

ಇಲ್ಲಿರುವ ಬಿಸಿ ನೀರಿನ ಬುಗ್ಗೆಗೆ ರೋಗಗಳನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದರ ಉಪಸ್ಥಿತಿಯಿಂದಾಗಿ ಈ ಸ್ಥಳಕ್ಕೆ ಇನ್ನಷ್ಟು ಹೆಚ್ಚಿನ ಪ್ರಾಧಾನ್ಯತೆ ಬರಲು ಕಾರಣವಾಗಿದೆ. ಇವೆಲ್ಲರದರ ಹೊರತಾಗಿ ಆಧುನಿಕ ಪ್ರವಾಸಿಗರಿಗೆ ಮನಾಲಿಯು ಹಳೆಯ ಇತಿಹಾಸದ ಒಂದು ನೋಟವನ್ನು ನೀಡುತ್ತದೆ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಶಾಪಿಂಗ್ ಮಾಡಲು ಅವಕಾಶವಿದ್ದು ಇಲ್ಲಿ ಆನಂದಿಸಬಹುದಾಗಿದೆ. ಇಲ್ಲಿಯ ಉಣ್ಣೆಯು ಬಹಳ ಪ್ರಸಿದ್ದವಾಗಿದೆ.

8.ಕೋಥಿ ಮನಾಲಿ

8.ಕೋಥಿ ಮನಾಲಿ

2500 ಮೀಟರ್ ಎತ್ತರದಲ್ಲಿ ಅಪ್ರತಿಮ ಸ್ಪಿಟಿ ಹೆದ್ದಾರಿಯಲ್ಲಿರುವ ಕೋಥಿಯು, ಪರ್ವತ ಪ್ರದೇಶಗಳಲ್ಲಿಯ ಒಂದು ಆಕರ್ಷಕ ಕುಗ್ರಾಮವಾಗಿದ್ದು, ಈ ಸ್ಥಳವು ಅದರ ಸುಂದರವಾದ ಚೌಕಟ್ಟು ಮತ್ತು ಹಿಮದಿಂದ ಆವೃತವಾದ ಶಿಖರಗಳು ಮತ್ತು ಹಿಮನದಿಗಳ ಭವ್ಯ ನೋಟಗಳಿಗೆ ಹೆಸರುವಾಸಿಯಾಗಿದೆ.

ಇದು ರೋಹ್ಟಾಂಗ್ ಪಾಸ್ ನ ತಪ್ಪಲಿನಲ್ಲಿದೆ ಮತ್ತು ಈ ಪ್ರದೇಶದ ಈ ಭಾಗದ ಮೂಲಕ ಹರಿಯುವ ಬಿಯಾಸ್ನಿಂದ ಈ ಭೂಪ್ರದೇಶದ ನಿರ್ಮಾಣವಾಗಿದೆ. ವಿಶೇಷವಾಗಿ ರೋಹ್ಟಾಂಗ್ ಪಾಸ್ ಅನ್ನು ಕಾಲ್ನಡಿಗೆಯಲ್ಲಿ ಅನ್ವೇಷಿಸಲು ಯೋಜಿಸುತ್ತಿದ್ದರೆ, ಈ ಗ್ರಾಮವು ಕ್ಯಾಂಪಿಂಗ್‌ಗೆ ಸೂಕ್ತವಾದ ತಾಣವಾಗಿದೆ. ಮಾತ್ರವಲ್ಲದೆ ಈ ಗ್ರಾಮದಲ್ಲಿ ಶುವಾಂಗ್ ಚಂಡಿಕಾ ದೇವಿಗೆ ಅರ್ಪಿತವಾದ ದೇವಾಲಯವೂ ಇದೆ.

9. ಬಿಯಾಸ್ ನದಿ, ಮನಾಲಿ

9. ಬಿಯಾಸ್ ನದಿ, ಮನಾಲಿ

ಬಿಯಾಸ್ ನದಿಯು ಇಲ್ಲಿಯ ಒಂದು ನೈಸರ್ಗಿಕ ಗುರುತಾಗಿದ್ದು ಇದು ನಿಮ್ಮ ಮನಾಲಿ ಪ್ರವಾಸದಲ್ಲಿ ಹೆಚ್ಚಿನ ಭಾಗದಲ್ಲಿ ಪ್ರವಾಸಿಗರ ಜೊತೆಯಲ್ಲಿರುತ್ತದೆ. ಅವುಗಳಲ್ಲಿ ವಶಿಷ್ಟ್ ಗ್ರಾಮವನ್ನು ನದಿ ಕಣಿವೆಯ ಅತ್ಯುತ್ತಮ ನೋಟಗಳನ್ನು ಆನಂದಿಸಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾದರೆ ಕೋಥಿ ಪ್ರವಾಸವು ನಿಮ್ಮನ್ನು ಅದರ ಸ್ಪಷ್ಟ ಹಾಗೂ ಸ್ವಚ್ಚ ನೀಲಿ ನೀರಿನ ಹತ್ತಿರಕ್ಕೆ ತರುತ್ತದೆ. ಬಿಯಾಸ್ ಕಯಾಕಿಂಗ್ ಮತ್ತು ರಾಫ್ಟಿಂಗ್‌ ನಂತಹ ಜಲ ಕ್ರೀಡೆಗಳ ಕೇಂದ್ರವಾಗಿದೆ ಮತ್ತು ಪ್ರಿಡಿ ಗ್ರಾಮವು ಅತ್ಯಂತ ರೋಮಾಂಚಕಾರಿ ಚಟುವಟಿಕೆಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

10. ಗ್ರೇಟ್ ಹಿಮಾಲಯನ್ ನ್ಯಾಶನಲ್ ಪಾರ್ಕ್ ( ರಾಷ್ಟ್ರೀಯ ಉದ್ಯಾನವನ)

10. ಗ್ರೇಟ್ ಹಿಮಾಲಯನ್ ನ್ಯಾಶನಲ್ ಪಾರ್ಕ್ ( ರಾಷ್ಟ್ರೀಯ ಉದ್ಯಾನವನ)

ಮನಾಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ, ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.ಈ ಉದ್ಯಾನವು ಹಲವಾರು ಅಪರೂಪದ ಪ್ರಭೇದಗಳಿಗೆ ನೆಲೆಯಾಗಿದೆ.

ಇದರಲ್ಲಿ 1,000 ಕ್ಕೂ ಹೆಚ್ಚು ಸಸ್ಯಗಳು, 209 ಪಕ್ಷಿ ಪ್ರಭೇದಗಳು ಮತ್ತು 31 ಸಸ್ತನಿ ಜಾತಿಗಳು ಸೇರಿವೆ. ಅಪರೂಪದ ಹಿಮಚಿರತೆ ಇಲ್ಲಿಯ ಅತ್ಯುನ್ನತ ಪರಭಕ್ಷಕ ಪ್ರಾಣಿಯಾಗಿ. ಇದಲ್ಲದೆ ಹಿಮಾಲಯನ್ ತಹರ್ ಮತ್ತು ಕಂದು ಕರಡಿಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಇಡೀ ಭೂಪ್ರದೇಶವನ್ನು ಹೊಂದಿರುವ ವೈಲ್ಡ್ ಫ್ಲವರ್ಸ್(ಕಾಡು ಹೂಗಳು) ಮತ್ತು ಹಿಮನದಿ ಕಣಿವೆಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಕಾತುರರಾಗಿರುತ್ತಾರೆ. ರಾಷ್ಟ್ರೀಯ ಉದ್ಯಾನದ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಪಾದಯಾತ್ರೆ ಮತ್ತು ಕ್ಯಾಂಪಿಂಗ್‌ನಂತಹ ಕೆಲವು ಮೋಜಿನ ಪ್ರಕೃತಿ ಚಟುವಟಿಕೆಗಳಲ್ಲಿ ನೀವು ತೊಡಗಬಹುದು. ಉದ್ಯಾನವನಕ್ಕೆ ಪ್ರವೇಶಿಸಲು ಪರವಾನಗಿಗಳನ್ನು ಮುಂಚಿತವಾಗಿ ಪಡೆಯಬೇಕಾಗಿದೆ ಮತ್ತು ಉದ್ಯಾನವು ಅದರೊಳಗೆ ಅನೇಕ ಸರಳ ಮತ್ತು ಯೋಗ್ಯವಾದ ವಸತಿ ಸೌಕರ್ಯಗಳನ್ನು ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X