Search
  • Follow NativePlanet
Share
» »ನೈನಿತಾಲ್ ಗೆ ಒಂದು ಸಣ್ಣ ಪ್ರವಾಸ

ನೈನಿತಾಲ್ ಗೆ ಒಂದು ಸಣ್ಣ ಪ್ರವಾಸ

By Manjula Balaraj Tantry

ಉತ್ತರಾಖಂಡದ ಕುಮಾವೂನ್ ಪ್ರದೇಶದ ನೈನಿತಾಲ್ ಒಂದು ಉತ್ತಮ ರಜಾ ತಾಣವಾಗಿದೆ. ಈ ನೆರೆಹೊರೆಯ ಪ್ರದೇಶವನ್ನು ಅನ್ವೇಷಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅತ್ಯಂತ ಪ್ರಶಾಂತ ಮುಕ್ತೇಶ್ವರ್ ಮತ್ತು ಕೌಸಾನಿಯಿಂದ ಅಥವಾ ಔಲಿಯ ಸ್ಕೈಯಿಂಗ್ ಪ್ರದೇಶವನ್ನು ಆರಿಸಿಕೊಳ್ಳಿ.ಇದಲ್ಲದೆ, ನಂದಾ ದೇವಿ ರಾಷ್ಟ್ರೀಯ ಉದ್ಯಾನವನ, ಬಿನ್ಸಾರ್ ವನ್ಯಜೀವಿ ಧಾಮ ಮತ್ತು ಕೋರ್ಬೆಟ್ .

ರಾಷ್ಟ್ರೀಯ ಉದ್ಯಾನವನಗಳು ಛಾಯಾ ಗ್ರಾಹಕರಿಗೆ ಸಾಹಸಿಗಳಿಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಒಂದು ಸೂಕ್ತವಾದ ಸ್ಥಳವಾಗಿದೆ. ಈ ಸ್ಥಳಗಳು ನೈನಿತಾಲ್ ನಿಂದ ಹತ್ತಿರದಲ್ಲಿರುವ ಪ್ರದೇಶವಾಗಿದೆ. ಇದು ನಗರದ ಸದ್ದು ಗದ್ದಲಗಳಿಂದ ದೂರ ಹೋಗಲು ಸೂಕ್ತವಾದ ರಜಾ ದಿನಗಳನ್ನು ಕಳೆಯುವ ಸ್ಥಳಗಳಾಗಿದೆ.

1. ಔಲಿ

1. ಔಲಿ

Sumitkhetwani

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಸುಂದರವಾದ ತಾಣವಾದ ಔಲಿ ದೇಶದ ಪ್ರಸಿದ್ಧ ಸ್ಕೈಯಿಂಗ್ ತಾಣವಾಗಿದೆ. ಔಲಿ ಹಿಮಾಲಯದ ಸ್ಕೈಯಿಂಗ್ ರೆಸಾರ್ಟ್ ಮತ್ತು ಉತ್ತರ ಭಾರತದ ರಾಜ್ಯವಾದ ಉತ್ತರಖಂಡದ ಗಿರಿಧಾಮಗಳಾಗಿದೆ.

ಇದು ಕಾನಿಫರಸ್ ಮತ್ತು ಓಕ್ ಮರಗಳನ್ನೊಳಗೊಂಡ ಅರಣ್ಯದ ಜೊತೆಗೆ ನಂದಾ ದೇವಿ ಮತ್ತು ನಾರ್ ಪರ್ವತ್ ಪರ್ವತ ಶ್ರೇಣಿಗಳಿಂದ ಸುತ್ತುವರೆದಿದೆ. ಒಂದು ದೊಡ್ಡ ಕೇಬಲ್ ಕಾರ್ ಔಲಿಯನ್ನು ಜೋಶೀಮಠದ ನಗರಕ್ಕೆ ಸಂಪರ್ಕಿಸುತ್ತದೆ.

2. ನಂದಾ ದೇವಿ ರಾಷ್ಟ್ರೀಯ ಉದ್ಯಾನವನ

2. ನಂದಾ ದೇವಿ ರಾಷ್ಟ್ರೀಯ ಉದ್ಯಾನವನ

Virag Sharma

ಒಂದು ವಿಭಿನ್ನವಾದ ಸ್ಥಳಾಕೃತಿಯನ್ನು ಹೊಂದಿದ್ದು ಪ್ರವಾಸಿಗರಿಗೆ ಕಡಿಮೆ ಸಕ್ರಿಯ ರಕ್ಷಣೆಗೆ ಸೀಮಿತವಾಗಿರುವಂತಹ ಪ್ರದೇಶವಾಗಿದೆ. ಈ ಉದ್ಯಾನವನವು ದೇಶದಲ್ಲಿ ಎಲ್ಲಿಯೂ ನೋಡಲು ಸಿಗದಂತಹ ಕೆಲವು ಶ್ರೀಮಂತ ಜೀವವೈವಿಧ್ಯಗಳನ್ನು ಹೊಂದಿದೆ.

ನಂದಾ ದೇವಿ ಬಯೋಸ್ಪಿಯರ್ ರಿಸರ್ವ್ 1988 ರಲ್ಲಿ ಸ್ಥಾಪನೆಯಾಯಿತು. ಈ ರಾಷ್ಟ್ರೀಯ ಉದ್ಯಾನವನವು ಉತ್ತರಭಾರತದ ಉತ್ತರಾಖಂಡ್ ರಾಜ್ಯದಲ್ಲಿಯ ನಂದಾದೇವಿ ಶಿಖರದ (7816 ಮೀ) ಸುತ್ತಲೂ ನೆಲೆಸಿದೆ. ಇಡೀ ಪಾರ್ಕ್ ಸುಮಾರು ಸಮುದ್ರ ಮಟ್ಟಕ್ಕಿಂತ 3,500 ಮೀ (11,500 ಅಡಿ) ಎತ್ತರದಲ್ಲಿದೆ.

3. ಕೋರ್ ಬೆಟ್ಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾ ಖಂಡ್

3. ಕೋರ್ ಬೆಟ್ಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾ ಖಂಡ್

Varun Sodhi 2004

ಪೌರಾಣಿಕ ಬೇಟೆಗಾರ-ಪರಿವರ್ತಿತ-ಸಂರಕ್ಷಕನ ಹೆಸರನ್ನು ಇಡಲಾಗಿದೆ. ಈ ಉದ್ಯಾನವನವು ಪ್ರಾಣಿ ಜೀವ ವೈವಿಧ್ಯತೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಇದು ಪ್ರಾಜೆಕ್ಟ್ ಹುಲಿಗಳ ಜನ್ಮಸ್ಥಳವಾಗಿದೆ.

4. ಕೌಸಾನಿ

4. ಕೌಸಾನಿ

Dr. Satyabrata Ghosh

ಬಿನ್ಸಾರ್ ನಿಂದ ಎರಡು ಗಂಟೆಗಳ ಪ್ರಯಾಣವು ಕುಮಾನ್ ನಲ್ಲಿರುವ ಸುಂದರವಾದ ಗಿರಿಧಾಮವಾದ ಕೌಸಾನಿಗೆ ತಲುಪ ಬಹುದು.ಸುಂದರವಾದ ಕೌಸಾನಿಯನ್ನು ಸಮೀಪಿಸುತ್ತಿದ್ದಂತೆ ಬಿನ್ಸರ್ನ್ ನ ಭವ್ಯವಾದ ವಿಸ್ಟಾ ಗಳು ಇನ್ನಷ್ಟು ಮೋಡಿ ಮಾಡುತ್ತವೆ. ನೀವು ಕೌಸಾನಿ ಪಟ್ಟಣವನ್ನು ತಲುಪುವ ಮೊದಲೇ ಇಲ್ಲಿಯ ಚಹಾ ತೋಟವನ್ನು ಭೇಟಿ ಮಾಡುವ ಮೂಲಕ ಪ್ರಾರಂಭಿಸಬಹುದು.

ಸ್ಥಳೀಯರು ಮಾಡುವ ಕರಕುಶಲ ಶಾಲುಗಳು ಮತ್ತು ಇನ್ನಿತರ ಉತ್ಪನ್ನಗಳು ಮತ್ತು ಚಹಾ ತೋಟಗಳಿಗೆ ಸಮೀಪವಿರುವ ಶಾಲು ಕಾರ್ಖಾನೆಗಳಿಗೆ ಭೇಟಿ ಕೊಡಿ. ಸ್ಥಳೀಯ ಕುರಿಗಳ ಉಣ್ಣೆಯಿಂದ ಈ ಶಾಲುಗಳನ್ನು ತಯಾರಿಸಲಾಗುತ್ತದೆ.

ಇದು ಕೌಸಾನಿಯಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲೊಂದಾಗಿದೆ. ಕೌಸಾನಿಯಲ್ಲಿ ಭೇಟಿ ಕೊಡಬಹುದಾದ ಇನ್ನೊಂದು ಉತ್ತಮವಾದ ಸ್ಥಳವೆಂದರೆ ಅದು ಗಾಂಧೀಜಿಯವರು ತಮ್ಮ ಜೀವನದ 14 ದಿನಗಳನ್ನು ಕಳೆದ ಅನಸಕ್ತಿ ಆಶ್ರಮ.

5. ಬಿನ್ಸರ್ ವನ್ಯಜೀವಿ ಧಾಮ

5. ಬಿನ್ಸರ್ ವನ್ಯಜೀವಿ ಧಾಮ

Rajborah123

ಬಿನ್ಸಾರ್ ಜಾಂಡೀ ಧಾರ್ ಬೆಟ್ಟಗಳ ಮೇಲಿನ ಭಾಗದಲ್ಲಿ ಆವರಿಸಿದೆ. ಮತ್ತು ಮಧ್ಯಮ ಎತ್ತರದ ವನ್ಯಜೀವಿ ಧಾಮವಾಗಿದೆ. ಈ ವನ್ಯಜೀವಿ ಧಾಮವು ಕಾಡು ಹಂದಿ, ಜಿಂಕೆ, ಮಂಕಿ, ಕಪ್ಪು ಕರಡಿ, ಮುಳ್ಳುಹಂದಿ, ಪರ್ವತ ಮೇಕೆ, ಕೆಂಪು ನರಿ, ಜಕಲ್, ಪೈನ್ ಮಾರ್ಟೆನ್, ಚಿರತೆಗಳು, 200 ಜಾತಿಯ ಪಕ್ಷಿಗಳು ಮತ್ತು ಹೆಚ್ಚಿನವುಗಳಿಗೆ ನೆಲೆಯಾಗಿದೆ.

6. ಮುಕ್ತೇಶ್ವರ್

6. ಮುಕ್ತೇಶ್ವರ್

ಮುಕ್ತೇಶ್ವರ್ ಕುಮಾವೂನ್ ನ ಬೃಹತ್ ಬೆಟ್ಟಗಳ ಮಧ್ಯೆ ಇರುವ ಸುಂದರವಾದ ಹಳ್ಳಿಯಾಗಿದೆ.ಇದು ನೌಕುಚೈತಾಲ್ ನಿಂದ 40 ಕಿ.ಮೀ ಅಂತರದಲ್ಲಿದೆ. ನಂತರ ರಾಮ್ ಗಢವಿದೆ. ಸಮುದ್ರ ಮಟ್ಟದಿಂದ 7500 ಅಡಿ ಎತ್ತರದಲ್ಲಿರುವ ಮುಕ್ತೇಶ್ವರ್ ಹಿಮಾಲಯದ ಭವ್ಯವಾದ ಮತ್ತು ವಿಸ್ತಾರವಾದ ವಿಸ್ಟಾಗಳನ್ನು ನೀಡುತ್ತವೆ. ಅದರಲ್ಲಿ ಭಾರತದ ಅತ್ಯಂತ ಎತ್ತರದ ಶಿಖರವಾದ ನಂದಾ ದೇವಿಯೂ ಸೇರಿದೆ.

7. ಅಲ್ಮೋರಾ

7. ಅಲ್ಮೋರಾ

Travelling Slacker

ಉತ್ತರಾಖಂಡದ ಕುಮಾವೂನ್ ಪ್ರದೇಶದ ಸುಂದರ ರಾಜಧಾನಿ ಅಲ್ಮೋರಾ ಲಕ್ನೌದಿಂದ 500 ಕಿ.ಮೀ. ದೂರದಲ್ಲಿದೆ. ಇದೊಂದು ಅತ್ಯಂತ ಉತ್ತಮವಾದ ಬೇಸಿಗೆಯ ರಜಾದಿನಗಳನ್ನು ಕಳೆಯಬಹುದಾದ ತಾಣವಾಗಿದೆ. ಅಲ್ಮೋರಾಗೆ ಹೋಗುವಾಗ ಪ್ರಯಾಣಿಕರು ದಾರಿಯಲ್ಲಿ ಅನೇಕ ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯತೆಗಳನ್ನು, ನಯನ ಮನೋಹರ ಹಿಮಾಲಯದ ದೃಶ್ಯಗಳನ್ನು, ಸುವಾಸನಾ ಭರಿತ ಕುಮಾವೋನಿ ಖ್ಯಾದ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X