Search
  • Follow NativePlanet
Share
» »ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. . ಇದನ್ನು ಉತ್ತರ ಕರ್ನಾಟಕದ ಗೇಟ್‌ ವೇ ಎಂದೂ ಕರೆಯಲಾಗುತ್ತದೆ. ಗದಗ್ ಜಿಲ್ಲೆಯ ಜೊತೆ ಹಾವೇರಿ ಕೂಡಾ ಹಿಂದೆ ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ನಂತರ ಅದನ್ನು ಧಾರವಾಡದಿಂದ ಬೇರ್ಪಡಿಸಿ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ತುಂಗಭದ್ರಾ ಹಾಗೂ ವರದಾ ನದಿಯ ಸುತ್ತಮುತ್ತಲು ಪೂರ್ವ ಐತಿಹಾಸಿಕತೆಗೆ ಸಂಬಂಧಿಸಿದಂತಹ ಅನೇಕ ಸಾಕ್ಷ್ಯಗಳು ಸಿಕ್ಕಿವೆ.

ಸಿದ್ದೇಶ್ವರ ಮಂದಿರ

ಸಿದ್ದೇಶ್ವರ ಮಂದಿರ

PC: Dineshkannambadi

ಹಾವೇರಿಯ ಪ್ರವಾಸವನ್ನು ನೀವು ಮೊದಲಿಗೆ ಅಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಸಿದ್ದೇಶ್ವರ ಮಂದಿರದಿಂದ ಪ್ರಾರಂಭಿಸಬಹುದು. ಇದು ಇಲ್ಲಿನ ಪ್ರಸಿದ್ಧ ಮಂದಿರವಾಗಿದೆ. ಜಿಲ್ಲೆಯ ಹೊರವಲಯದಲ್ಲಿದೆ. ಹೊಯ್ಸಳ ವಾಸ್ತುಶೈಲಿಯಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ಈ ಮಂದಿರದಲ್ಲಿ ಶಿವಲಿಂಗದ ಜೊತೆ ಗಣೇಶನ ಮೂರ್ತಿಯನ್ನೂ ಸ್ಥಾಪಿಸಲಾಗಿದೆ.

ತಾರಕೇಶ್ವರ ಮಂದಿರ

ತಾರಕೇಶ್ವರ ಮಂದಿರ

PC: wikipedia

ಸಿದ್ದೇಶ್ವರ ಮಂದಿರವನ್ನು ಹೊರತುಪಡಿಸಿ ಇಲ್ಲಿ ತಾರಕೇಶ್ವರ ಮಂದಿರದ ದರ್ಶನವನ್ನೂ ಪಡೆಯಬಹುದು. ಇದು ತಾರಕೇಶ್ವರ ಮಂದಿರದ ಹಂಗಲ ಜಿಲ್ಲೆಯಲ್ಲಿದೆ. ಇದೊಂದು ಪ್ರಸಿದ್ಧ ಮಂದಿರವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ತನ್ನ ಆಕರ್ಷಕ ವಾಸ್ತುಕಲೆಗೆ ಪ್ರಸಿದ್ಧವಾಗಿದೆ. ಮಂದಿರದ ಹೊರಾಂಗಣದಲ್ಲಿ ವಿವಿಧ ಮೂರ್ತಿಯನ್ನು ಕಾಣಬಹುದಾಗಿದೆ.

ಬಂಕಾಪುರ ನವಿಲು ಅಭಯಾರಣ್ಯ

ಬಂಕಾಪುರ ನವಿಲು ಅಭಯಾರಣ್ಯ

PC:Dineshkannambadi

ಹಾವೇರಿಯಲ್ಲಿ ಧಾರ್ಮಿಕ ಸ್ಥಳಗಳನ್ನು ಹೊರತುಪಡಿಸಿ ನೀವು ಇತರ ಪ್ರವಾಸಿ ತಾಣಗಳನ್ನೂ ಕಾಣಬಹುದು.
ಬಂಕಾಪುರದ ನವಿಲು ಅಭಯಾರಣ್ಯವು ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ಇಲ್ಲಿ ನೀವು ಒಂದು ಸಾವಿರಕ್ಕಿಂತಲೂ ಅಧಿಕ ನವಿಲನ್ನು ನೋಡಬಹುದು. ಈ ಅಭಯಾರಣ್ಯವು ಸುಮಾರು ೧೩೯ ಎಕರೆ ಪ್ರದೇಶದಲ್ಲಿದೆ. ಇಲ್ಲಿ ನೀವು ಬಂಕಾಪುರ ಕೋಟೆಯ ಅವಶೇಷಗಳನ್ನು ಕಾಣಬಹುದು.

ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ

ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ

PC:Tejas054

ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯವು ಹಾವೇರಿಯಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಹೆಚ್ಚಾಗಿ ಕೃಷ್ಣಮೃಗಗಳಿಗೆ ಸುರಕ್ಷಿತ ತಾಣವನ್ನು ಒದಗಿಸುವ ದೃಷ್ಠಿಯಿಂದ ಇದನ್ನು ೧೯೭೪ರಲ್ಲಿ ಬ್ಲ್ಯಾಕ್‌ಬಕ್ ಸೆಂಚುರಿ ಎಂದು ಘೋಷಿಸಲಾಯಿತು. ೧೪.೮೭ಕಿ.ಮಿ ನಲ್ಲಿ ಇರುವ ಈ ಅಭಯಾರಣ್ಯದಲ್ಲಿ ಸುಂಆರು ೬ ಸಾವಿರ ಕೃಷ್ಣಮೃಗಗಳಿವೆ. ಇಲ್ಲಿ ಇನ್ನಿತರ ಪ್ರಾಣಿಗಳನ್ನೂ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X