India
Search
  • Follow NativePlanet
Share
» »ಒಂದು ದಿನದಲ್ಲಿ ಬೆಂಗಳೂರಿನಿಂದ ಕೈಗೊಳ್ಳಬಹುದಾದ ಪ್ರವಾಸಿ ತಾಣಗಳು

ಒಂದು ದಿನದಲ್ಲಿ ಬೆಂಗಳೂರಿನಿಂದ ಕೈಗೊಳ್ಳಬಹುದಾದ ಪ್ರವಾಸಿ ತಾಣಗಳು

ಬೆಂಗಳೂರು ತನ್ನ ಆಹ್ಲಾದಕರ ಹವಾಮಾನಕ್ಕಾಗಿ ಮಾತ್ರವಲ್ಲದೆ ಅದು ನೀಡುವ ಅವಕಾಶಗಳಿಗಾಗಿಯೂ ಜನರನ್ನು ಆಕರ್ಷಿಸುತ್ತದೆ. ಈ ನಗರವು ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಎಕ್ಸ್ -ಪ್ಯಾಟ್ಸ್ , ವಲಸಿಗರು , ಬೇರೆ ನಗರದಿಂದ ಬಂದ ಜನರು, ಮತ್ತು ಬೆಂಗಳೂರಿನ ವಾಸಿಗಳು ಎಲ್ಲರನ್ನೂ ತನ್ನಲ್ಲಿ ಹೊಂದಿದೆ. ನಗರದಲ್ಲಿರುವ ಅಪರೂಪವಾದ ಆಕರ್ಷಣೆಗಳ ಹೊರತಾಗಿಯೂ ಬೆಂಗಳೂರು ಕೆಲವು ಪ್ರಮುಖವಾದ ತಾಣಗಳನ್ನು ತನ್ನಲ್ಲಿ ಮತ್ತು ಸುತ್ತಮುತ್ತಗಳ ಪ್ರದೇಶಗಳಲ್ಲಿ ಹೊಂದಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಸಾಮರಸ್ಯದ ಜೀವನವನ್ನು ಹೊಂದಲು ಅತ್ಯಗತ್ಯ ಆದುದರಿಂದ ಬೆಂಗಳೂರಿನ ಈ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟು ನಿಮ್ಮ ಪ್ರೀತಿ ಪಾತ್ರರನ್ನು ಸಂತೋಷಗೊಳಿಸಿ.

ವಂಡರ್ಲಾ

ವಂಡರ್ಲಾ

ಲೇಜೀ ನದಿಯ ಉದ್ದಕ್ಕೂ ಪ್ರಶಾಂತವಾಗಿ ವಿಹಾರ ಮಾಡುತ್ತಾ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆಗೆ ಆಕಾಶ ಚಕ್ರದಲ್ಲಿ ಖಾಸಗಿ ಸಮಯವು ಒಂದು ಅನನ್ಯ ಅನುಭವವಾಗಿದೆ. ವಂಡರ್ಲಾ ಅನೇಕ ಮೋಜಿನ ಸವಾರಿಗಳು, ವಾಟರ್ ಸ್ಲೈಡ್‌ಗಳು ಮತ್ತು ಚಟುವಟಿಕೆಗಳನ್ನು ನೀಡುತ್ತದೆ; ಅದು ನಿಮ್ಮನ್ನು ದಿನವಿಡೀ ಚಟುವಟಿಕೆಯಲ್ಲಿ ತೊಡಗಿಸುವಂತೆ ಮಾಡುತ್ತದೆ. ಅದು ಭೂಮಿಯ ಮೇಲೆ ಅಥವಾ ನೀರಿನ ಸವಾರಿಯಾಗಿರಲಿ, ಪ್ರತಿ ಸವಾರಿಯು ಒಂದು ಥೀಮ್ ಅನ್ನು ಹೊಂದಿರುತ್ತದೆ ವಿಶೇಷವಾಗಿ ಜೋಡಿಗಳಿಗೆ ಹೊಸ ಒಳ್ಳೆಯ ಅನುಭವವನ್ನು ನೀಡುವುದರ ಮೂಲಕ ಕೆಟ್ಟ ಸ್ಮರಣೆಯನ್ನು ಅಳಿಸಲು ಉತ್ತಮ ಮಾರ್ಗವಾಗಿದೆ ಮತ್ತು ವಂಡರ್ಲಾ ದ ಭೇಟಿಯು ನಿಮಗೆ ದೀರ್ಘಕಾಲದವರೆಗೆ ಮೋಜಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

 ನಂದಿ ಬೆಟ್ಟಗಳು

ನಂದಿ ಬೆಟ್ಟಗಳು

ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮವಾದ ಅನುಭವವನ್ನು ಪಡೆಯಲು ಮತ್ತು ಒಂದೊಳ್ಳೆಯ ಸಮಯವನ್ನು ಕಳೆಯಲು ನಂದಿಬೆಟ್ಟಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ ಎನ್ನಬಹುದು. ನಂದಿಬೆಟ್ಟವು ಬೆಂಗಳೂರಿನ 360-ಡಿಗ್ರಿ ನೋಟವನ್ನು ನೀಡುತ್ತದೆ, ಇದು ಹಚ್ಚ ಹಸಿರಿನ ಭೂದೃಶ್ಯಗಳು ಮತ್ತು ಮುಂಜಾನೆ ಕೆಂಪು ಮತ್ತು ಗುಲಾಬಿ ಮಿಶ್ರಿತ ಬಣ್ಣಗಳನ್ನು ಹೊತ್ತು ಸುಂದರವಾಗಿ ಕಾಣುತ್ತದೆ. . ಹೀಗಾಗಿ, ದೈನಂದಿನ ನಿರಂತರ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಂದಿಬೆಟ್ಟವು ಅತ್ಯುತ್ತಮ ಸ್ಥಳವಾಗಿದೆ.

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯಲು ಕಬ್ಬನ್ ಪಾರ್ಕ್ ಅತ್ಯುತ್ತಮವಾದ ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಸ್ಥಳವಾಗಿದ್ದು ಇಲ್ಲಿ ಪ್ರಶಾಂತವಾದ ಮತ್ತು ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಸಂಗಾತಿಯೊಡನೆ ವಾಕಿಂಗ್ ಅಥವಾ ಸಂವಾದ ಮಾಡಲು ಅನುಕೂಲಕರವಾದ ಸ್ಥಳವೆಂದರೆ ತಪ್ಪಾಗಲಾರದು. ನಗರದ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್, ಬೃಹತ್ 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ, ವೈವಿಧ್ಯಮಯ ಸಸ್ಯಗಳು ಮತ್ತು ಮರಗಳಿಂದ ಅಲಂಕರಿಸಲ್ಪಟ್ಟ ವಿಶಾಲವಾದ ಸ್ಥಳಗಳನ್ನು ಹೊಂದಿದೆ. ಸಂತೋಷವನ್ನು ನೀಡುವ ಸ್ವರ್ಗದಂತಿರುವ ಈ ಸ್ಥಳದಲ್ಲಿ ತಂಪಾದ ಗಾಳಿಯ ಜೊತೆಗೆ ಅರಳುವ ಹೂವುಗಳ ಕಂಪು ಇತ್ಯಾದಿಗಳನ್ನು ಒಳಗೊಂಡ ಮಾರ್ಗಗಳು ನಿಮ್ಮ ಪ್ರೀತಿಪಾತ್ರರೊಂದಿಗೆ ಹೊಸ ಅನುಭವವನ್ನು ನೀಡುತ್ತದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಹಿಂದಿನ ಪೀಳಿಗೆಯಿಂದ ಇಂದಿನ ಪೀಳಿಗೆಯವರೆಗೂ ಭೇಟಿ ಕೊಡುತ್ತಾ ಬರುವ ಸ್ಥಳವೆನಿಸಿದೆ.

 ಗ್ರೊವರ್ ವೈನ್ ಯಾರ್ಡ್

ಗ್ರೊವರ್ ವೈನ್ ಯಾರ್ಡ್

ದ್ರಾಕ್ಷಿಗೂ ಪ್ರೀತಿಗೂ ಒಂದು ಪ್ರೀತಿಯ ಸಂಬಂಧವಿದೆ. ಚಲನಚಿತ್ರಗಳಿಂದ ಹಿಡಿದು ಕಥೆಗಳವರೆಗೆ ದ್ರಾಕ್ಷಿಯನ್ನು ಶತಮಾನಗಳಿಂದ ಪ್ರಣಯದ ಜೊತೆಗೆ ಕಾಣಿಸಿಕೊಂಡಿವೆ. ಹಳೆಯ ಹ್ಯಾಕ್ ಅನ್ನು ಅರ್ಥಮಾಡಿಕೊಂಡು, ಬೆಂಗಳೂರು ಅನೇಕ ದ್ರಾಕ್ಷಿತೋಟಗಳಿಗೆ ಸಾಕ್ಷಿಯಾಗಿದೆ; ಅವುಗಳಲ್ಲಿ ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಗ್ರೋವರ್ ವೈನ್ ಯಾರ್ಡ್ ಪ್ರಮುಖವಾಗಿದ್ದು, ಬೆಂಗಳೂರು ನಗರ ಕೇಂದ್ರದಿಂದ 41 ಕಿ.ಮೀ ದೂರದಲ್ಲಿದೆ, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದರ ಕಟಾವು ಋತುವಿನಲ್ಲಿ, ಅಂದರೆ, ಏಪ್ರಿಲ್ ನಿಂದ ಆಗಸ್ಟ್ ವರೆಗೆ. ಈ ದ್ರಾಕ್ಷಿತೋಟವು ಸ್ವರ್ಗ ಸದೃಶವಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ.

ಗುಹಾಂತರ - ಕನಕಪುರ ರಸ್ತೆ

ಗುಹಾಂತರ - ಕನಕಪುರ ರಸ್ತೆ

ಗುಹಾಂತರವು ಭಾರತದ ಮೊದಲ ಭೂಮಿಯ ಒಳಗೆ ಗುಹೆಯ ತರಹದ ರಚನೆಗಳಲ್ಲಿ ನಿರ್ಮಿಸಲಾದ ರೆಸಾರ್ಟ್ ಆಗಿದ್ದು, ಇದು ಸುಂದರವಾದ ಅಡೆತಡೆಯಿಲ್ಲದ ಗೌಪ್ಯತೆ ಮತ್ತು ಸಾಟಿಯಿಲ್ಲದ ಆರಾಮದ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತದೆ. ನಿಮ್ಮ ಜೊತೆಗಾರರು ಸಾಹಸಿಗಳಾಗಿದ್ದಲ್ಲಿ ಈ ರೆಸಾರ್ಟ್ಗೆ ಭೇಟಿ ಕೊಡಿ. ಮತ್ತು ನಿಮ್ಮ ಒಳಮನಸ್ಸಿನ ಮಗುವನ್ನು ಜಾಗೃತಗೊಳಿಸಿ. ಗುಹಾಂತರಾ ರೆಸಾರ್ಟ್ ಬೆಂಗಳೂರಿನ ಅತ್ಯಂತ ಬೇಡಿಕೆಯ ಮತ್ತು ಶಾಂತಿಯುತ ವಿಶ್ರಾಂತಿ ಸ್ಥಳಗಳಲ್ಲೊಂದಾಗಿದೆ ಇಲ್ಲಿ ಸ್ಪಾ ಥೆರಪಿಯಿಂದ ಹಿಡಿದು ಐಷಾರಾಮಿ ಹೋಟೇಲುಗಳವರೆಗೆ , ಸಾಹಸ ಕ್ರೀಡೆಗಳಿಂದ ಹಿಡಿದು ವೈನ್ ಗಳನ್ನು ಸವಿಯುವವರೆಗೆ, ಬೆರಗುಗೊಳಿಸುವ ರೆಸಾರ್ಟ್ ಪ್ರತಿಯೊಂದು ಹೆಜ್ಜೆಗೂ ಏನನ್ನಾದರೂ ನೀಡುತ್ತಾ ಮತ್ತೆ ಮತ್ತೆ ಭೇಟಿ ಕೊಡಬೇಕೆನ್ನುವ ಹಂಬಲವನ್ನು ಹೆಚ್ಚಿಸುವಂತೆ ಮಾಡುತ್ತದೆ.
ವಂಡರ್ಲಾ

ಲೇಜೀ ನದಿಯ ಉದ್ದಕ್ಕೂ ಪ್ರಶಾಂತವಾಗಿ ವಿಹಾರ ಮಾಡುತ್ತಾ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆಗೆ ಆಕಾಶ ಚಕ್ರದಲ್ಲಿ ಖಾಸಗಿ ಸಮಯವು ಒಂದು ಅನನ್ಯ ಅನುಭವವಾಗಿದೆ. ವಂಡರ್ಲಾ ಅನೇಕ ಮೋಜಿನ ಸವಾರಿಗಳು, ವಾಟರ್ ಸ್ಲೈಡ್‌ಗಳು ಮತ್ತು ಚಟುವಟಿಕೆಗಳನ್ನು ನೀಡುತ್ತದೆ; ಅದು ನಿಮ್ಮನ್ನು ದಿನವಿಡೀ ಚಟುವಟಿಕೆಯಲ್ಲಿ ತೊಡಗಿಸುವಂತೆ ಮಾಡುತ್ತದೆ. ಅದು ಭೂಮಿಯ ಮೇಲೆ ಅಥವಾ ನೀರಿನ ಸವಾರಿಯಾಗಿರಲಿ, ಪ್ರತಿ ಸವಾರಿಯು ಒಂದು ಥೀಮ್ ಅನ್ನು ಹೊಂದಿರುತ್ತದೆ ವಿಶೇಷವಾಗಿ ಜೋಡಿಗಳಿಗೆ ಹೊಸ ಒಳ್ಳೆಯ ಅನುಭವವನ್ನು ನೀಡುವುದರ ಮೂಲಕ ಕೆಟ್ಟ ಸ್ಮರಣೆಯನ್ನು ಅಳಿಸಲು ಉತ್ತಮ ಮಾರ್ಗವಾಗಿದೆ ಮತ್ತು ವಂಡರ್ಲಾ ದ ಭೇಟಿಯು ನಿಮಗೆ ದೀರ್ಘಕಾಲದವರೆಗೆ ಮೋಜಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X