Search
  • Follow NativePlanet
Share
» »ತಮಿಳುನಾಡಿನ ಅತ್ಯುತ್ತಮವಾದ ಪರಿಸರ ಪ್ರವಾಸೋದ್ಯಮ ತಾಣಗಳು

ತಮಿಳುನಾಡಿನ ಅತ್ಯುತ್ತಮವಾದ ಪರಿಸರ ಪ್ರವಾಸೋದ್ಯಮ ತಾಣಗಳು

ಪರಿಸರ ಪ್ರವಾಸೋದ್ಯಮದ ಪ್ರಮುಖ ಉದ್ದೇಶವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ, ಪರಿಸರವನ್ನು ವರ್ಧಿಸುವ ಹಾಗೂ ಸ್ಥಳೀಯ ಜನರಿಗೆ ಪ್ರವಾಸೋದ್ಯಮದ ಮೂಲಕ ಪ್ರಯೋಜನಕಾರಿ ಅಂಶಗಳ ಮೂಲಕ ಉತ್ತೇಜನ ನೀಡುವುದು ಆಗಿದೆ. ಹಲವಾರು ಕ್ಷೇತ್ರಗಳಲ್ಲಿ ಆದಾಯ ಮತ್ತು ಉದ್ಯೋಗಗಳನ್ನು ಕಲ್ಪಿಸಿ ಕೊಡುವುದರ ಮೂಲಕ ಪ್ರವಾಸೋದ್ಯಮವು ಆರ್ಥಿಕತೆಯ ಒಂದು ಪ್ರಮುಖ ಅಂಗವಾಗಿದೆ. ಪರಿಸರ-ಪ್ರವಾಸೋದ್ಯಮವು ಸಂದರ್ಶಕರು ತಮ್ಮ ಸಮುದಾಯದ ಪರಿಸರ ಅಥವಾ ಜನರಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅನ್ವಯಿಸುವ ನೈತಿಕ ಮಾರ್ಗಸೂಚಿಗಳನ್ನು ಒಳಗೊಂಡಿರುತ್ತದೆ.

ತಮಿಳುನಾಡಿನಲ್ಲಿ ಇಂತಹ ಪ್ರಬಲವಾದ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತಹ ತಾಣಗಳನ್ನು ಕಾಣಬಹುದಾಗಿದ್ದು ಈ ತಾಣಗಳಲ್ಲಿ ವನ್ಯಜೀವಿ ಅಭಯಾರಣ್ಯಗಳಿಂದ ಕಾಡುಗಳು, ಗಿರಿಧಾಮಗಳು ಮತ್ತು ಭವ್ಯವಾದ ವೈವಿಧ್ಯಮಯ ಕರಾವಳಿಯನ್ನು ಹೊಂದಿದ್ದು ಇಲ್ಲಿ ಪ್ರವಾಸಿಗರು ಪ್ರಕೃತಿ ಸೌಂದರ್ಯದಲ್ಲಿ ಆನಂದಿಸಬಹುದಾದಂತಹ ಎಲ್ಲವನ್ನೂ ಒಳಗೊಂಡಿದ್ದು ಹಾಗೆಯೇ ಇಲ್ಲಿ ಇರುವಾಗ ಪ್ರವಾಸಿಗರು ಪರಿಸರವನ್ನು ಸಂರಕ್ಷಿಸುವುದಕ್ಕೆ ಅಷ್ಟೇ ಮಹತ್ವವನ್ನು ಕೊಡಬೇಕಾಗುತ್ತದೆ. ಇದು ಜನರು ಪ್ರಕೃತಿ ಮತ್ತು ಅದರ ಸುತ್ತಮುತ್ತಲಿನ ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವ ಸ್ಥಳವಾಗಿದೆ.

ಈ ಕೆಳಗೆ ತಮಿಳುನಾಡಿನಲ್ಲಿಯ ಪರಿಸರ ಪ್ರವಾಸೋದ್ಯಮದ ತಾಣಗಳ ಪಟ್ಟಿಯಿದೆ

ಮೂಡುಮಲೈ ಅಭಯಾರಣ್ಯ

ಮೂಡುಮಲೈ ಅಭಯಾರಣ್ಯ

ಕೊಯಮತ್ತೂರಿನ ವಾಯುವ್ಯಕ್ಕೆ 150 ಕಿಮೀ ದೂರದಲ್ಲಿದೆ. ತಮಿಳುನಾಡಿನ ಮುದುಮಲೈ ಅಭಯಾರಣ್ಯದ ಸೌಂದರ್ಯವು ನಿಜವಾಗಿಯೂ ರುದ್ರರಮಣೀಯವಾಗಿದೆ. ದಟ್ಟವಾದ ಹಸಿರು, ಹರಿಯುವ ತೊರೆಗಳು ಮತ್ತು ಹಲವಾರು ಜಲಪಾತಗಳನ್ನೊಳಗೊಂಡ ಈ ಸ್ಥಳವು ನಿಜವಾಗಿಯೂ ಇಲ್ಲಿಗೆ ಭೇಟಿ ಕೊಡುವವರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದ್ಬುತವಾದ ಮತ್ತು ಅಸಮಾನ್ಯವಾದ ನೀಲಗಿರಿ ಪರ್ವತಗಳಲ್ಲಿ ನೆಲೆಯನ್ನು ಹೊಂದಿದ್ದು, ನೀಲಗಿರಿ ಜೀವಗೋಳದ ಸಂರಕ್ಷಿತ ಮುದುಮಲೈ ಅಭಯಾರಣ್ಯ ಭಾಗವು ಮದುಮಲೈ ಹುಲಿಗಳ ಸಂರಕ್ಷಿತ ಅಭಯಾರಣ್ಯವೆಂದೂ ಕರೆಯಲ್ಪಡುತ್ತದೆ. ಇದು ಸರಿಸುಮಾರು 48 ಹುಲಿಗಳಿಗೆ ನೆಲೆಯಾಗಿದೆ.

ಅಣ್ಣಾಮಲೈ ಅಭಯಾರಣ್ಯ

ಅಣ್ಣಾಮಲೈ ಅಭಯಾರಣ್ಯ

ಸುಮಾರು 958 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರ ಪ್ರದೇಶಗಳವರೆಗೆ ಹರಡಿಕೊಂಡಿರುವ ಅಣ್ಣಾಮಲೈ ಅಭಯಾರಣ್ಯವು ಆನೆಗಳು, ಚಿರತೆಗಳು, ಹುಲಿಗಳು ಕಪ್ಪುಚಿರತೆಗಳು ಕರಡಿಗಳು ಘೇಂಡಾಮೃಗಗಳು ಮತ್ತು ಇನ್ನೂ ಅಳಿವಂಚಿನಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಒಳಗೊಂಡಿದೆ. ಈ ಅಭಯಾರಣ್ಯವು ವಿಶೇಷ ತಳಿಯ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶವು ಅಣ್ಣಾಮಲೈ ಅಭಯಾರಣ್ಯದೊಳಗೆ ಇದ್ದು, ಈ ಅಭಯಾರಣ್ಯವು 800 ಕ್ಕೂ ಹೆಚ್ಚು ಜಾತಿಯ ಹೂವಿನ ಸಸ್ಯಗಳು, 300 ಜಾತಿಯ ಮರಗಳು ಮತ್ತು ಪೊದೆಗಳು, 160 ಜಾತಿಯ ಪಕ್ಷಿಗಳು, 50 ಜಾತಿಯ ಸಸ್ತನಿಗಳು ಮತ್ತು ಸರಿಸುಮಾರು 1000 ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳೊಂದಿಗೆ ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ.

ಕೊಡೈಕೆನಾಲ್

ಕೊಡೈಕೆನಾಲ್

ಕೊಡೈಕೆನಾಲ್ ತಮಿಳುನಾಡಿನಲ್ಲಿರುವ ಒಂದು ಗಿರಿಧಾಮವಾಗಿದ್ದು, ಇದು ಸಮುದ್ರ ಮಟ್ಟದಿಂದ 2,000 ಮೀಟರ್ ಎತ್ತರದಲ್ಲಿದೆ ಹಾಗೂ ಕಾಫಿಯ ತೋಟಗಳ ದಟ್ಟವಾದ ಹಸಿರು, ತೆಂಗಿನ ಮರಗಳು, ಮತ್ತು ಹುಲ್ಲಿನ ಪೊದೆಗಳ ಗದ್ದೆಗಳು ಇವೆಲ್ಲವನ್ನೂ ಒಳಗೊಂಡಿದೆ. ಈ ಸ್ಥಳವು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಇವೆಲ್ಲವುದರ ಉಪಸ್ಥಿತಿಯಿಂದಾಗಿ ಈ ಸ್ಥಳವನ್ನು ಪರಿಸರ ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವನ್ನಾಗಿಸಿದೆ. ಕೊಡೈಕೆನಾಲ್ ಪರಿಸರ ಪರಿಸರೋದ್ಯಮವು ಗುಣ ಗುಹೆಗಳು, ಕೊಡೈ ಸರೋವರ, ಬೆರಿಜಾಮ್ ಲೇಕ್ ಮತ್ತು ಜಲಪಾತಗಳು ಮತ್ತು ಪರಿಸರ - ಚಟುವಟಿಗಳಲ್ಲಿ ಬೋಟಿಂಗ್, ಹೈಕಿಂಗ್ ಮತ್ತು ಸೈಕ್ಲಿಂಗ್ ಇತ್ಯಾದಿಗಳನ್ನು ಒಳಗೊಂಡಿದೆ.

ನೀಲಗಿರಿ

ನೀಲಗಿರಿ

ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನ ಒಂದು ಭಾಗ ಮತ್ತು ದೊಡ್ಡ ಪರ್ವತ ಸರಪಳಿಯನ್ನು ಪಶ್ಚಿಮ ಘಟ್ಟಗಳು ಎಂದು ಕರೆಯಲಾಗುತ್ತದೆ, ಇದು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹರಡಿಕೊಂಡಿದೆ. ನೀಲಗಿರಿ ಮೌಂಟೇನ್ ರೈಲ್ವೇಯು ಯುನೆಸ್ಕೋದಿಂದ ಭಾರತದ ಮೌಂಟೇನ್ ರೈಲ್ವೇಗಳ ಅಡಿಯಲ್ಲಿ ಸೇರಿಸಲ್ಪಟ್ಟಿದೆ. ನೀಲಗಿರಿಯು ಪರಿಸರ-ಪ್ರವಾಸಿಗರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತ ತಾಣವಾಗಿದೆ. ಈ ಪ್ರದೇಶವು ಹಲವಾರು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಗೆ ನೆಲೆಯಾಗಿದೆ. ಪ್ರಾಣಿಗಳು, ಸರೀಸೃಪಗಳು, ಉಭಯಚರಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ಹೊಂದಿರುವಂತಹ ಹಲವಾರು ಸ್ಥಳಗಳಿವೆ. ಅತ್ಯಂತ ಸುಂದರವಾದ ಪಾದಯಾತ್ರೆಯೊಂದಿಗೆ ಪರಿಸರ-ಪ್ರವಾಸಿಗರಿಗೆ ಅತ್ಯಂತ ಸೂಕ್ತವಾದ ತಾಣವಾಗಿದೆ.

ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮ

ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮ

ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿ ಧಾಮ ಪ್ರದೇಶವು. ಭಾರತದ ತಮಿಳುನಾಡು ರಾಜ್ಯದಲ್ಲಿನ ಸಂರಕ್ಷಿತ ಪ್ರದೇಶವಾಗಿದ್ದು, ಕೊಡಿಯಾಕರೈನಲ್ಲಿ ನೆಲೆಗೊಂಡಿದೆ, ಈ ಅಭಯಾರಣ್ಯವು ಅಳಿವಿನಂಚಿನಲ್ಲಿರುವ ಸಸ್ತನಿಗಳು ಮತ್ತು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿದೆ.ಆನೆಗಳು ತಮ್ಮ ನೈಸರ್ಗಿಕ ವಾಸಸ್ಥಳದಲ್ಲಿ ಜೀವಿಸುವ ಭಾರತದ ಕೆಲವೇ ಕೆಲವು ಸ್ಥಳಗಳಲ್ಲಿ ಈ ಸ್ಥಳವೂ ಒಂದಾಗಿದೆ. ಈ ಅಭಯಾರಣ್ಯವನ್ನು ಪಕ್ಷಿ ಹಾಗೂ ವನ್ಯಜೀವಿ ಧಾಮವೆಂದು ಹೆಸರಿಸಲಾಗಿದೆ. ಕ್ಯಾಲಿಮೆರ್ ವನ್ಯಜೀವಿ ಪಕ್ಷಿಧಾಮವನ್ನು ಭಾರತದ ರಾಮ್ಸಾರ್ ತಾಣಗಳಲ್ಲಿ ಒಂದೆಂದು ಘೋಷಿಸಲಾಗಿದೆ. ಆಗ್ನೇಯ ಭಾರತ ಮತ್ತು ಉತ್ತರ ಶ್ರೀಲಂಕಾ ನಡುವೆ ಬಂಗಾಳಕೊಲ್ಲಿಯನ್ನು ಸಂಪರ್ಕಿಸುವ ಪಾಲ್ಕ್ ಜಲಸಂಧಿಯನ್ನು ಸಹ ಇಲ್ಲಿ ನೀವು ವೀಕ್ಷಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X