Search
  • Follow NativePlanet
Share
» »ರಿವರ್ ರಾಫ್ಟಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ರಿವರ್ ರಾಫ್ಟಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

By Manjula Balaraj Tantry

ರಿವರ್ ರಾಫ್ಟಿಂಗ್ ನೀವು ಎಂದಾದರೂ ಮಾಡಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಟ್ರೈ ಮಾಡಲೇ ಬೇಕು. ಜಲ ಕ್ರೀಡೆಯನ್ನು ಇಷ್ಟಪಡುವವರಿಗೆ ಅನೇಕ ಜಲಕ್ರೀಡೆ ತಾಣಗಳಿವೆ. ಭಾರತದಲ್ಲಿ ಅನೇಕ ರಿವರ್ ರಾಫ್ಟಿಂಗ್ ತಾಣಗಳಿವೆ. ಅವುಗಳು ಯಾವುವು ಅನ್ನೋದನ್ನು ತಿಳಿಯೋಣ.

ಗಂಗಾನದಿ , ಉತ್ತರಾಖಂಡ

ಗಂಗಾನದಿ , ಉತ್ತರಾಖಂಡ

PC: AbinoamJr

ಗಂಗಾನದಿಯಲ್ಲಿ ರಾಫ್ಟಿಂಗ್ ಮಾಡುವುದು ಅತ್ಯಂತ ಸಾಹಸಮಯ ಹೊರಾಂಗಣ ಚಟುವಟಿಕೆಯಾಗಿದೆ ಮತ್ತು ಇದು ಭಾರತದ ಜನಪ್ರಿಯ ಸಾಹಸಮಯ ಕ್ರೀಡೆಯಾಗಿದೆ. ರಿಷಿಕೇಶದಲ್ಲಿ ಮಾರ್ಚ್ ನಲ್ಲಿ ರಾಫ್ಟಿಂಗ್ ಪ್ರಾರಂಭವಾಗುತ್ತದೆ ಮತ್ತು ಕೆಲವು ಜನಪ್ರಿಯ ಚಟುವಟಿಕೆಗಳಾದ ಬಂಗೀ ಜಂಪಿಂಗ್, ಕಯಾಕಿಂಗ್, ಮತ್ತು ಹೈಕಿಂಗ್ ಇಲ್ಲಿ ನಡೆಸಲಾಗುತ್ತದೆ.

ಅಲಕ್ ನಂದಾ ನದಿ, ಉತ್ತರಾಖಂಡ್

ಅಲಕ್ ನಂದಾ ನದಿ, ಉತ್ತರಾಖಂಡ್

PC: Gengiskanhg

ಅಲಕಾನಂದಾ ನದಿಯು ಭಾರತದಲ್ಲಿಯ ಅತ್ಯುತ್ತಮವಾದ ಬಿಳಿ ನೀರಿನ ನದಿಗಳಲ್ಲೊಂದಾಗಿದೆ ಇದರ ರಾಫ್ಟಿಂಗ್ ಗುಣಮಟ್ಟವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿಯೇ ಪ್ರಸಿದ್ದಿಯನ್ನು ಪಡೆದಿದೆ. ಅಲಕಾನಂದಾ ನದಿಯು ಗಂಗಾನದಿಯ ಉಪನದಿಯಾಗಿದ್ದು ಇದು ಭಾಗೀರಥಿ ನದಿಯನ್ನು ದೇವ್ ಪ್ರಯಾಗ್ ನಲ್ಲಿ ಸೇರುತ್ತದೆ.

ಭಾಗೀರಥಿ ನದಿ, ಉತ್ತರಾಖಂಡ್

ಭಾಗೀರಥಿ ನದಿ, ಉತ್ತರಾಖಂಡ್

PC:wikicommons

ಭಾಗೀರಥಿ ನದಿಯು ಗಂಗಾನದಿಯ ಎರಡು ಪ್ರಮುಖ ಉಪನದಿಗಳಲ್ಲಿ ಒಂದಾಗಿದ್ದು ಇದು ಉತ್ತಮವಾದ ಸಾಹಸಮಯವಾದ ನದಿ ರಾಫ್ಟಿಂಗ್ ಆಯ್ಕೆಗಳನ್ನು ಒದಗಿಸಿಕೊಡುತ್ತದೆ. ಈ ಹಿಮಾಲಯದ ನದಿಯು ವಿಶಾಲ ಶ್ರೇಣಿಯ ನದಿ ರಾಫ್ಟಿಂಗ್ ಪ್ರದೇಶಗಳನ್ನು ಹೊಂದಿದೆ.

ಟೀಸ್ಟಾ ನದಿ, ಸಿಕ್ಕಿಂ

ಟೀಸ್ಟಾ ನದಿ, ಸಿಕ್ಕಿಂ

ರಾಂಗ್ಫೋ ಸಮೀಪದ ಟೀಸ್ಟಾ ನದಿಯಲ್ಲಿ ಬಿಳಿ ನೀರಿನ ರಾಫ್ಟಿಂಗ್ ಭಾರತದಲ್ಲಿಯ ಒಂದು ಅತ್ಯುತ್ತಮ ವಾದ ರಾಫ್ಟಿಂಗ್ ಶ್ರೇಣಿಗಳಲ್ಲೊಂದಾಗಿದೆ. ಟೀಸ್ಟಾ ನದಿಯು ಸಿಕ್ಕಿಂ ನಲ್ಲಿ ಭವ್ಯವಾಗಿ ಮತ್ತು ವೇಗವಾಗಿ ಹರಿಯುತ್ತದೆ ಆದುದರಿಂದ ಇದು ರಾಫ್ಟಿಂಗ್ ಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ.

ಬರಪೋಲೇ ನದಿ , ಕರ್ನಾಟಕ

ಬರಪೋಲೇ ನದಿ , ಕರ್ನಾಟಕ

PC: Prestonpresto

ಬರಪೋಲೆ ನದಿಯಲ್ಲಿ ಬಿಳಿ ನೀರಿನ ರಾಫ್ಟಿಂಗ್, ಈ ನದಿಯು ಕೂರ್ಗ್ ಅಥವಾ ಕೊಡಗು ಜಿಲ್ಲೆಯಲ್ಲಿ ಇದ್ದು ಇದು ದಕ್ಷಿಣ ಭಾರತದಲ್ಲಿಯ ಒಂದು ನದಿ ರಾಫ್ಟಿಂಗ್ ಪ್ರದೇಶವೆನಿಸಿದೆ. ಮೊದಲನೇ ಸಲ ನದಿ ರಾಫ್ಟಿಂಗ್ ಮಾಡುವ ಉತ್ಸಾಹಿಗಳಿಗೆ ಕೂರ್ಗ್ ನ ಬರಪೋಲೆ ನದಿಯು ಸೂಕ್ತವಾದ ಆಯ್ಕೆಯಾಗಿದೆ.

ಕುಂಡಲಿಕ ನದಿ, ಮಹಾರಾಷ್ಟ್ರ

ಕುಂಡಲಿಕ ನದಿ, ಮಹಾರಾಷ್ಟ್ರ

PC: Sumita Roy Dutta

ಕೋಲಡ್ ನಲ್ಲಿರುವ ಕುಂಡಲಿಕ ನದಿಯಲ್ಲಿ ಬಿಳಿನೀರಿನ ನದಿಯಲ್ಲಿ ರಾಫ್ಟಿಂಗ್ ಮಹಾರಾಷ್ಟ್ರದ ಏಕೈಕ ನದಿ ರಾಫ್ಟಿಂಗ್ ಸ್ಥಳವಾಗಿದೆ. ಕೊಲಾಡ್ ರಾಜ್ಯದ ಸಾಹಸಮಯ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ ಮತ್ತು ಮಾನ್ಸೂನ್ ಸಮಯದಲ್ಲಿ ಮಹಾರಾಷ್ಟ್ರದ ಈ ಸ್ಥಳವನ್ನು ವಾರಾಂತ್ಯದಲ್ಲಿ ಭೇಟಿ ಮಾಡಬೇಕು.

ಝಾನ್ಸ್ಕಾರ್ ನದಿ ಜಮ್ಮು ಮತ್ತು ಕಾಶ್ಮೀರ್

ಝಾನ್ಸ್ಕಾರ್ ನದಿ ಜಮ್ಮು ಮತ್ತು ಕಾಶ್ಮೀರ್

PC: Pierre0841

ಲಡಾಖ್ ನಲ್ಲಿರುವ ಝಾನ್ಕಾರ್ ನದಿಯು ನದಿ ರಾಪ್ಟಿಂಗ್ ನ ಅತ್ಯುತ್ತಮ ಅನುಭವ ಮತ್ತುಅವಕಾಶವನ್ನು ಒದಗಿಸಿ ಕೊಡುತ್ತದೆ ಮತ್ತು ಇದೊಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ ಪ್ರತ್ಯೇಕವಾದ ಸ್ಥಳವಾಗಿದೆ ಮತ್ತು ಜಗತ್ಪ್ರಸಿದ್ದ ಹಿಮದಿಂದ ಹೆಪ್ಪುಗಟ್ಟಿದ ನದಿಯ ಮೇಲೆ ಚಾದರ್ ಟ್ರಕ್ಕಿಂಗ್ ಅನುಭವವನ್ನು ಪಡೆಯಲು ಸೂಕ್ತವಾದ ಸ್ಥಳವಾಗಿದೆ.

ಬಿಯಾಸ್ ನದಿ, ಹಿಮಾಚಲ ಪ್ರದೇಶ

ಬಿಯಾಸ್ ನದಿ, ಹಿಮಾಚಲ ಪ್ರದೇಶ

PC: Zachary Collier

ಕುಲ್ಲುಗೆ ಹತ್ತಿರದ ಬಿಯಾಸ್ ನದಿಯು ಅನೇಕ ನೀರಿನ ಚಟುವಟಿಕೆಗಳಿಗೆ ಕೇಂದ್ರವಾಗಿದೆ ಮತ್ತು ಹಿಮಾಚಲ ಪ್ರದೇಶದಲ್ಲಿ ನದಿ ರಾಫ್ಟಿಂಗ್ ಅವಕಾಶವನ್ನು ಒದಗಿಸುವ ರಾಜ್ಯದ ನಾಲ್ಕು ನದಿಗಳಲ್ಲಿ ಇದೂ ಒಂದಾಗಿದೆ.

ಸ್ಪಿತಿ ನದಿ, ಹಿಮಾಚಲ ಪ್ರದೇಶ

ಸ್ಪಿತಿ ನದಿ, ಹಿಮಾಚಲ ಪ್ರದೇಶ

PC: eyeintim

ಹಿಮಾಚಲ ಪ್ರದೇಶದ ಸ್ಪಿತಿ ಮತ್ತು ಪಿನ್ ನದಿಗಳಲ್ಲಿ ಬಿಳಿ ನೀರಿನ ನದಿ ರಾಫ್ಟಿಂಗ್ ಮಾಡುವುದು ಒಂದು ಅತ್ಯಂತ ಉತ್ತಮವಾದ ಮತ್ತು ಸುಂದರವಾದ ರಾಫ್ಟಿಂಗ್ ಪ್ರವಾಸದಲ್ಲೊಂದಾಗಿದೆ. ಲಹೌಲ್ ಮತ್ತು ಸ್ಪಿತಿಯಂತಹ ಅವಳಿ ಕಣಿವೆಗಳ ಅದ್ಬುತವಾದ ಭೂದೃಶ್ಯವು ಸಾಹಸಪ್ರಿಯರಿಗೆ ಉತ್ತಮವಾದ ಸಾಹಸ ಚಟುವಟಿಕೆಗಳನ್ನು ಒದಗಿಸಿ ಕೊಡುತ್ತದೆ.

ಕಾಳೀ ನದಿ, ಕರ್ನಾಟಕ

ಕಾಳೀ ನದಿ, ಕರ್ನಾಟಕ

PC:Sonam Thombre

ದಾಂಡೇಲಿಯಲ್ಲಿರುವ ಕಾಳೀ ನದಿಯಲ್ಲಿ ನದಿ ನೀರಿನ ರಾಫ್ಟಿಂಗ್ ಮಾಡುವುದು ಕರ್ನಾಟಕ ಒಂದು ಸೂಕ್ತವಾದ ರಜಾದಿನಗಳ ತಾಣವಾಗಿದೆ. ದಾಂಡೇಲಿ ವನ್ಯಜೀವಿ ಮತ್ತು ಸಾಹಸ ಕ್ರೀಡಾ ತಾಣಗಳಿಗೆ ನೈಸರ್ಗಿಕ ಆವಾಸಸ್ಥಾನವಾಗಿದೆ ಮತ್ತು ದಕ್ಷಿಣ ಭಾರತದ ಅತ್ಯುತ್ತಮ ಬಿಳಿ ನೀರಿನ ರಾಫ್ಟಿಂಗ್ ತಾಣವಾಗಿದೆ.

Read more about: india river adventure summer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X