India
Search
  • Follow NativePlanet
Share
» »ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2022: ಬೆಂಗಳೂರಿನಲ್ಲಿರುವ ಅತ್ಯುತ್ತಮ ವಸ್ತುಸಂಗ್ರಹಾಲಯಗಳು.

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2022: ಬೆಂಗಳೂರಿನಲ್ಲಿರುವ ಅತ್ಯುತ್ತಮ ವಸ್ತುಸಂಗ್ರಹಾಲಯಗಳು.

ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.
ವಸ್ತುಸಂಗ್ರಹಾಲಯಗಳು ನಮ್ಮ ಸಂಸ್ಕೃತಿ, ಪರಂಪರೆ, ಮಾನವೀಯತೆ, ಕಲೆ ಮತ್ತು ಇನ್ನೂ ಹಲವಾರು ವಿಷಯಗಳ ಇತಿಹಾಸಗಳೊಂದಿಗೆ ನಮಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುತ್ತವೆ. ಇವುಗಳಿಂದಾಗಿ ಒಂದು ಯುಗದ ಬದುಕಿನ ಬಗ್ಗೆ ನಮಗೆ ತಿಳಿಯಲು ಅನುಕೂಲ ಮಾಡಿಕೊಡುವುದು ಮಾತ್ರವಲ್ಲದೆ ಇದರಿಂದಾಗಿ ಅಸಾಮಾನ್ಯ ಮತ್ತು ಅಂತ್ಯವೇ ಇಲ್ಲದ ಜ್ಞಾನವನ್ನು ಎಷ್ಟು ಸಾಧ್ಯವೋ ಅಷ್ಟು ಗಳಿಸಬಹುದಾಗಿದೆ ಹಾಗೂ ಈ ವಸ್ತು ಸಂಗ್ರಹಾಲಯಗಳು ಇತಿಹಾಸದ ದಿನಗಳನ್ನು ಮೆಲುಕು ಹಾಕಲು ಇರುವ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ.
ವಸ್ತು ಸಂಗ್ರಹಾಲಯಗಳ ಪ್ರವಾಸಗಳು ನಮಗೆ ಸಾಮಾನ್ಯವಾಗಿ ಪ್ರಮುಖವಾದ ಕೌಶಲ್ಯಗಳು, ಪರಾನುಭೂತಿ, ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಕಲಿಸಿಕೊಡುತ್ತವೆ. ಅಲ್ಲದೆ ಈ ವಸ್ತು ಸಂಗ್ರಹಾಲಯಗಳು ಇತಿಹಾಸ ಉತ್ಸಾಹಿಗಳಿಗಾಗಿ ಶಿಕ್ಷಣ ಮತ್ತು ಸಂಶೋಧನಾ ವಲಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಯೋಜನೆಗಳ ಬಗ್ಗೆ ಉತ್ಸುಕರಾಗುತ್ತಾರೆ ಏಕೆಂದರೆ ಅವರು ಯಾವಾಗಲೂ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಲು ಅವಕಾಶವನ್ನು ಪಡೆದು ಅವರು ಕೆಲಸ ಮಾಡುತ್ತಿರುವ ಯೋಜನೆಗಳ ಬಗ್ಗೆ ಉತ್ತಮ ಜ್ಞಾನವನ್ನು ಇವುಗಳ ಮೂಲಕ ಗಳಿಸಲು ಅನುಕೂಲವಾಗುತ್ತದೆ.
ಬೆಂಗಳೂರಿನಲ್ಲಿ ಹಲವಾರು ವಸ್ತುಸಂಗ್ರಹಾಲಯಗಳಿದ್ದು , ಇವುಗಳಲ್ಲಿ ಅವರವರ ಆಸಕ್ತಿಗೆ ಮತ್ತು ಉತ್ಸಾಹಕ್ಕೆ ಅನುಗುಣವಾಗಿ ಅನ್ವೇಷಿಸಲು ಮತ್ತು ಕಲಿಯಲು ಬೇಕಾದಷ್ಟಿದೆ. ಅವುಗಳಲ್ಲಿ ನಾವು ನಿಮಗಾಗಿ ಅತ್ಯುತ್ತಮವಾದ ಬೆಂಗಳೂರಿನ 5 ವಸ್ತುಸಂಗ್ರಹಾಲಯಗಳ ಪಟ್ಟಿ ಮಾಡಿದ್ದು, ಇಲ್ಲಿ ನೀವು ನಿಮ್ಮ ಸ್ನೇಹಿತರು, ಕುಟುಂಬದವರು ಮಕ್ಕಳು, ಸಹೋದ್ಯೋಗಿಗಳು, ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಭೇಟಿಕೊಡಬಹುದಾಗಿದೆ.

hal

1) ಹೆಚ್ಎಎಲ್ ಹೆರಿಟೇಜ್ ಸೆಂಟರ್ ಮತ್ತು ಎರೋಸ್ಪೇಸ್ ಮ್ಯೂಸಿಯಂ (ವಸ್ತು ಸಂಗ್ರಹಾಲಯ)

ಸ್ಥಾಪನೆ-2001.
ಇದು ವಾಯುಯಾನ(ಏವಿಯೇಷನ್) ಉದ್ಯಮದ ಪರಂಪರೆಯನ್ನು ಅನ್ನು ಸಂರಕ್ಷಿಸುತ್ತದೆ ಹಾಗೂ ಭಾರತದಲ್ಲಿನ ಮೊದಲ ಏರೋಸ್ಪೇಸ್ ಮ್ಯೂಸಿಯ್ಂ ಆಗಿರುವ ಇಲ್ಲಿ ಯುದ್ದವಿಮಾನಗಳು ಮತ್ತು ವಾಣಿಜ್ಯ ವಿಮಾನಗಳ ಅನುಭವವನ್ನು ಪಡೆಯಬಹುದಾಗಿದೆ. ಹಾಗೂ ಭಾರತೀಯ ಏರೋಸ್ಪೇಸ್ ಮತ್ತು ವಾಯುಯಾನದ ರೋಚಕ ಇತಿಹಾಸವನ್ನು ಸಾರುವ ಈ ಸಂಗ್ರಹಾಲಯವು ಸುಮಾರು 4 ಎಕರೆಗಳಷ್ಟು ಭೂಮಿಯಲ್ಲಿ ಹರಡಿದೆ. ಈ ಭೂಮಿಯು ಸುಂದರವಾದ ಗುಲಾಬಿ ಮತ್ತು ಗಿಡಮೂಲಿಕೆಗಳ ಉದ್ಯಾನಗಳಿಂದ ಅಲಂಕೃತವಾಗಿದೆ. ಅಲ್ಲದೆ ಈ ವಸ್ತು ಸಂಗ್ರಹಾಲಯದಲ್ಲಿ ಎರಡು ಪ್ರಮುಖ ಸಭಾಂಗಣಗಳಿದ್ದು, ಅವುಗಳಲ್ಲಿ ಮೊದಲನೆಯದು "ಹಾಲ್ ಆಫ್ ಫೇಮ್" ಎಂದು ಕರೆಯಲಾಗುತ್ತದೆ ಇನ್ನೊಂದರಲ್ಲಿ 1940 ರಿಂದ ಇಲ್ಲಿಯವರೆಗೆ ಭಾರತದಲ್ಲಿ ವಾಯುಯಾನದ ಅಭಿವೃದ್ಧಿಯನ್ನು ಒಳಗೊಂಡ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸ್ಥಳ ಮಾಹಿತಿ:ಪೊಲೀಸ್ ಠಾಣೆ, ಹೆಚ್ ಎ ಎಲ್ (HAL) ಹತ್ತಿರ, ಹೆಚ್ ಎ ಎಲ್(HAL) ಹಳೆಯ ವಿಮಾನ ನಿಲ್ದಾಣ ರಸ್ತೆ, ಮಾರತಹಳ್ಳಿ, ಬೆಂಗಳೂರು, ಕರ್ನಾಟಕ 560037
ಸಮಯ: ಬೆಳಗ್ಗೆ 9 ರಿಂದ ಸಂಜೆ 4:30
ಪ್ರವೇಶ ಶುಲ್ಕ: ವಯಸ್ಕರಿಗೆ 50/-ರೂಪಾಯಿಗಳೂ, ವಿದ್ಯಾರ್ಥಿಗಳಿಗೆ 30/-ರೂಪಾಯಿಗಳು

visveshvaraya museum

2) ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ

ಸ್ಥಾಪನೆ : 1962.
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾದ ಈ ವಸ್ತು ಸಂಗ್ರಹಾಲಯವನ್ನು ಆಕಾಲದ ಪ್ರಧಾನಮಂತ್ರಿಯಾಗಿದ್ದ ಜವಹರಲಾಲ್ ನೆಹರು ಅವರಿಂದ ಉದ್ಘಾಟನೆ ಮಾಡಿಸಲಾಯಿತು. ಈ ವಸ್ತುಸಂಗ್ರಹಾಲಯವು ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕಲಾಕೃತಿಗಳು ಮತ್ತು ಸಾಧನಗಳನ್ನು ತನ್ನಲ್ಲಿ ಹೊಂದಿದೆ. ವಿಜ್ಞಾನದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆಂದೇ ಮೀಸಲಾದ ಐದು ಉತ್ತಮ ಮಟ್ಟದ ಗ್ಯಾಲರಿಗಳನ್ನು ಇಲ್ಲಿ ಕಾಣಬಹುದಾಗಿದೆ ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಮಕ್ಕಳು ಮೋಜಿನ ಕಲಿಕೆಯನ್ನು ಕೂಡಾ ಮಾಡಬಹುದು. 4000 ಚ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ವಸ್ತು ಸಂಗ್ರಹಾಲಯವು ತಾರಮಂಡಲ,ಒಂದು ಗೋಳದ ಮೇಲೆ ವಿಜ್ಞಾನ, ವಿಜ್ಞಾನ ಪ್ರದರ್ಶನ ಮತ್ತು 3D ಚಲನಚಿತ್ರ ಪ್ರದರ್ಶನದಂತಹ ಉತ್ತಮ ಪ್ರದರ್ಶನಗಳನ್ನು ಇಲ್ಲಿಯ ಸಂದರ್ಶಕರಿಗೆ ಒದಗಿಸಿಕೊಡುತ್ತದೆ.
ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ, ಅಂಬೇಡ್ಕರ್ ವೀದಿ, ಬೆಂಗಳೂರು , ಕರ್ನಾಟಕ -560001
ಸಮಯ: ಬೆಳಗ್ಗೆ9. 30ರಿಂದ ಸಂಜೆ 6
ಪ್ರವೇಶ ಶುಲ್ಕ: ಪ್ರತಿ ವಯಸ್ಕರಿಗೆ 85/-. ರೂಪಾಯಿಗಳು.

govenament museum

3) ಸರಕಾರಿ ವಸ್ತುಸಂಗ್ರಹಾಲಯ (ಗವರ್ನ್ ಮೆಂಟ್ ಮ್ಯೂಸಿಯಂ)

ಸ್ಥಾಪನೆ: 1865.
ಈ ವಸ್ತುಸಂಗ್ರಹಾಲಯವು ಭಾರತದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಈ ಐತಿಹಾಸಿಕ ಕೆಂಪು ಕಟ್ಟಡದಲ್ಲಿ 1877 ರಿಂದ ಪುರಾತತ್ತ್ವ ಶಾಸ್ತ್ರ, ಶಸ್ತ್ರಾಸ್ತ್ರಗಳು ಮತ್ತು ಕೆತ್ತನೆಗಳನ್ನು ಇತ್ಯಾದಿಗಳನ್ನು ಪ್ರದರ್ಶಿಸುತ್ತದೆ. ಅಲ್ಲದೆ 450ನೇ ಶತಮಾನದ ಹಳೆಯ ಹಲ್ಮಿಡಿ ಕನ್ನಡ ಭಾಷೆಯ ಶಾಸನವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ವಿವಿಧ ಭೂವೈಜ್ಞಾನಿಕ ಮತ್ತು ಪುರಾತತ್ವ ಕಲಾಕೃತಿಗಳನ್ನು ಚಿತ್ರಿಸುವ ಒಟ್ಟು 18 ಗ್ಯಾಲರಿಗಳು ಕಲಾ ಪ್ರೇಮಿಗಳಿಗಾಗಿ 600 ಅಸಾಮಾನ್ಯ ಐತಿಹಾಸಿಕ ವರ್ಣಚಿತ್ರಗಳು ಇತ್ಯಾದಿಗಳನ್ನು ಹೊಂದಿದೆ.
ಸ್ಥಳ: ಕಸ್ತೂರ್ಬಾ ರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು ಕರ್ನಾಟಕ -560001
ಸಮಯ: ಬೆಳಗ್ಗೆ10ರಿಂದ ಸಂಜೆ 5
ಪ್ರವೇಶ ಶುಲ್ಕ: ಪ್ರತಿ ವಯಸ್ಕರಿಗೆ 30 /-. ರೂಪಾಯಿಗಳು ಮತ್ತು ಮಕ್ಕಳಿಗೆ 20 ರೂಪಾಯಿಗಳು

nimmans

4) ನಿಮ್ಹಾನ್ಸ್ ಮೆದುಳು(ಬ್ರೈನ್) ವಸ್ತುಸಂಗ್ರಹಾಲಯ

ಈ ವಸ್ತು ಸಂಗ್ರಹಾಲಯವು ವಿಜ್ಞಾನ ಮತ್ತು ಜೀವಶಾಸ್ತ್ರದ ಉತ್ಸಾಹಿಗಳಿಗೆ ಚಿನ್ನದ ಗಣಿ ಎನಿಸಿದೆ.
ಈ ವಸ್ತುಸಂಗ್ರಹಾಲಯವು 600 ಮೆದುಳಿನ ಮಾದರಿಗಳನ್ನು ಪ್ರದರ್ಶಿಸುತ್ತದೆ
2013-2014 ರ ಅವಧಿಯಲ್ಲಿ, ಮೆದುಳಿನ ದ್ರವ್ಯರಾಶಿಯ ಗಾಯಗಳು, ಸ್ಕಿಜೋಫ್ರೇನಿಯಾ, ಪಾರ್ಶ್ವವಾಯು, ಹೆಚ್ ಐವಿ ಮತ್ತು ಟಿಬಿಎಂ ಪ್ರಕರಣಗಳಿಂದ ಹಾನಿಗೊಳಗಾದ ಮಿದುಳುಗಳನ್ನು ಸಂಗ್ರಹಿಸಲಾಯಿತು. ಮೆದುಳಿನ ಕೆಲಸ ಮತ್ತು ಆಂತರಿಕ ಕಾರ್ಯಚಟುವಟಿಕೆಯನ್ನು ಕಲಿಯುವ ಅವಕಾಶವನ್ನು ಇಲ್ಲಿರುವ ವಿವಿಧ ಮೆದುಳಿನ ಸೋಂಕುಗಳು, ಮೆದುಳಿನ ಗೆಡ್ಡೆಗಳು, ತಲೆ ಗಾಯಗಳು ಮತ್ತು ಧೂಮಪಾನಿಗಳ ಶ್ವಾಸಕೋಶಗಳನ್ನು ಇಲ್ಲಿ ಪ್ರದರ್ಶಿಸುವ ಹಾಗೂ ಮಾನವ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಿ ಅದರ ಅನುಭವ ಪಡೆಯಲು ಅವಕಾಶವಿರುವ ಈ ವಸ್ತು ಸಂಗ್ರಹಾಲಯವು ದುರ್ಬಲ ಹೃದಯದ ಜನರಿಗೆ ನೋಡಲು ಕಷ್ಟಕರವಾಗಬಹುದು.
ಸ್ಥಳ: ವಿಲ್ಸನ್ ಗಾರ್ಡನ್, ಬೆಂಗಳೂರು , ಕರ್ನಾಟಕ 560029
ಸಮಯ: ಬುಧವಾರ, ಮಧ್ಯಾಹ್ನ 2:30 ರಿಂದ 4:30 ರವರೆಗೆ, ಮತ್ತು ಶನಿವಾರ, 10:30 ರಿಂದ
12:30 ರವರೆಗೆ, ಮಧ್ಯಾಹ್ನ 2:30 ರಿಂದ 4:30 ರವರೆಗೆ.
ಪ್ರವೇಶ ಶುಲ್ಕ: ಉಚಿತ

jawahara lal nehru museum

5) ಜವರಹರಲಾಲ್ ನೆಹರೂ ಪ್ಲಾನೆಟೇರಿಯಮ್(ಖಗೋಳ ವೀಕ್ಷಣಾ ಕೇಂದ್ರ)

1989 ರಲ್ಲಿ ಸ್ಥಾಪಿಸಲಾಯಿತು
ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರು ಅವರ ಹೆಸರನ್ನು ಹೊಂದಿದ ಐದು ವಸ್ತು ಸಂಗ್ರಹಾಲಯಗಳು ಭಾರತದಲ್ಲಿದ್ದು, ಅವುಗಳಲ್ಲಿ ಅತ್ಯುತ್ತಮವಾದುದು ಬೆಂಗಳೂರಿನಲ್ಲಿರುವ ವಸ್ತು ಸಂಗ್ರಹಾಲಯವಾಗಿದೆ. ನೆಹರು ಭೂಮಿ ಮತ್ತು ಬಾಹ್ಯಾಕಾಶದ ವೈಜ್ಞಾನಿಕ ಅಂಶಗಳ ಜ್ಞಾನವನ್ನು ವಿನೋದ ಮತ್ತು ಉತ್ತೇಜಕ ರೀತಿಯಲ್ಲಿ ಪಡೆದುಕೊಳ್ಳುತ್ತಿದ್ದರು. ಈ ಸಂಗ್ರಹಾಲಯಗಳಲ್ಲಿ ನಕ್ಷತ್ರಗಳು ಹೇಗೆ ರೂಪುಗೊಂಡಿವೆ ಮತ್ತು ಗ್ರಹಗಳು ಹೇಗೆ ವಿಕಸನಗೊಂಡಿವೆ ಎಂಬುದನ್ನು ಕಲಿಯಲು ಅನುಕೂಲವಾಗುವಂತಹ ಅವಕಾಶಗಳನ್ನು ಇಲ್ಲಿಯ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ ಪಡೆದುಕೊಂಡು ಅವುಗಳ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿಯ ಸ್ಕೈಥಿಯೇಟರ್ ಮಕ್ಕಳು ಮತ್ತು ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರೊಂದಿಗೆ ಭೇಟಿ ನೀಡಲೇಬೇಕಾದ ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ಸ್ಥಳ: ಸ್ಯಾಂಕಿ ರಸ್ತೆ, ಹೈ ಗ್ರೌಂಡ್ಸ್, ಬೆಂಗಳೂರು ಕರ್ನಾಟಕ-560001.
ಸಮಯ: 10 ರಿಂದ 5:30 ರವರೆಗೆ, ಎಲ್ಲಾ ಸೋಮವಾರ ಮತ್ತು ತಿಂಗಳ ಎರಡನೇ
ಮಂಗಳವಾರ ತೆರೆದಿರುವುದಿಲ್ಲ
ಪ್ರವೇಶ ಶುಲ್ಕ: ಪ್ರತಿ ವಯಸ್ಕರಿಗೆ 75/-, ರೂಪಾಯಿಗಳು, ಪ್ರತಿ ಮಗುವಿಗೆ 50/-.ರೂಪಾಯಿಗಳು
ಗಮನಿಸಿ: ಸಮಯ ಮತ್ತು ಪ್ರವೇಶ ಶುಲ್ಕಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ಕೊನೆಯದಾಗಿ ಹೇಳುವುದಾದರೆ ಕೆಲವು ವಿಶಿಷ್ಟ ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವಲ್ಲಿ ಈ ವಸ್ತುಸಂಗ್ರಹಾಲಯಗಳು ಜವಾಬ್ದಾರವಾಗಿವೆ.ಇವುಗಳ ಮೂಲಕ ನಮ್ಮ ಪರಂಪರೆಯನ್ನು ಹಾಗೂ ಆರೋಗ್ಯಕರ ಮತ್ತು ಸಮೃದ್ಧ ಸಮಾಜವನ್ನು ಸಂರಕ್ಷಿಸುವುದು ನಮ್ಮ ಮೂಲಭೂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X