Search
  • Follow NativePlanet
Share
» »ಮನ ಸೋಲಿಸುವ ಮಧುಚಂದ್ರದ ತಾಣ

ಮನ ಸೋಲಿಸುವ ಮಧುಚಂದ್ರದ ತಾಣ

ಹಿತಕರವಾದ ವಾತಾವರಣ ಹಾಗೂ ಕಡಿಮೆ ಜನ ನಿಬಿಡವಿರುವ ಪ್ರದೇಶಗಳು ಪರಸ್ಪರ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗುತ್ತವೆ. ಪ್ರಾಕೃತಿಕ ಸಿರಿಯಲ್ಲಿ ತನ್ನದೇ ವಿಶೇಷತೆಯನ್ನು ಹೊಂದಿರುವ ಕರ್ನಾಟಕ ಅನೇಕ ಮಧುಚಂದ್ರ ಪ್ರದೇಶಗಳನ್ನು ಒಳಗೊಂಡಿದೆ.

By Divya

ಸಂಸಾರ ಎನ್ನುವ ಸಾಗರಕ್ಕೆ ಕಾಲಿಟ್ಟಾಗ ಎರಡು ಜೀವಗಳು ಪರಸ್ಪರ ಅರಿತುಕೊಳ್ಳಬೇಕು. ಹೊಂದಾಣಿಕೆ ಎನ್ನುವುದು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ಸಾಧ್ಯ. ಮನಸ್ಸಿನ ತುಡಿತಗಳನ್ನು ತಾನಾಗಿಯೇ ಹೇಳಿಕೊಳ್ಳುವಂತೆ ಮಾಡುವಂತಹ ಪರಿಸರ ನಮ್ಮ ಕರ್ನಾಟಕದಲ್ಲಿದೆ.

ಹಿತಕರವಾದ ವಾತಾವರಣ ಹಾಗೂ ಕಡಿಮೆ ಜನ ನಿಬಿಡವಿರುವ ಪ್ರದೇಶಗಳು ಪರಸ್ಪರ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗುತ್ತವೆ. ನಿಸರ್ಗ ಸೌಂದರ್ಯದಲ್ಲಿ ತನ್ನದೇ ವಿಶೇಷತೆಯನ್ನು ಹೊಂದಿರುವ ಕರ್ನಾಟಕ ಅನೇಕ ಮಧುಚಂದ್ರ ಪ್ರದೇಶಗಳನ್ನು ಒಳಗೊಂಡಿದೆ.

ಮುಳ್ಳಯ್ಯನ ಗಿರಿ

ಮುಳ್ಳಯ್ಯನ ಗಿರಿ

ಕರ್ನಾಟಕದ ಅತಿ ಎತ್ತರದ ಶಿಖರ ಮುಳ್ಳಯ್ಯನ ಗಿರಿ ಹೊಸ ಜೋಡಿಗಳಿಗೊಂದು ಹೊಸ ಅನುಭವ ನೀಡುತ್ತದೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಬರುವ ಈ ತಾಣ ತಂಪಾದ ವಾತಾವರಣವನ್ನು ಹೊಂದಿದೆ. ಬೆಂಗಳೂರಿನಿಂದ 264 ಕಿ.ಮೀ ದೂರದಲ್ಲಿರುವ ಈ ತಾಣದಲ್ಲಿ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು.

ಕುದುರೆ ಮುಖ

ಕುದುರೆ ಮುಖ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಇನ್ನೊಂದು ಮಧುಚಂದ್ರದ ತಾಣ ಕುದುರೆಮುಖ. ಪಶ್ಚಿಮ ಘಟ್ಟದ ಸಾಲಲ್ಲಿ ನಿಲ್ಲುವ ಈ ತಾಣ ಸುಂದರ ಹಸಿರು ಸಿರಿಯಿಂದ ಕೂಡಿದೆ. ವಿಶಾಲವಾದ ಜಾಗ ಹಾಗೂ ಕಡಿಮೆ ಜನ ಸಂದಣಿ ಇರುವ ಈ ಪ್ರದೇಶ ಮನಸ್ಸಿಗೊಂದು ಪ್ರಸನ್ನತೆಯ ಅನುಭವ ನೀಡುತ್ತದೆ.
PC: flickr.com

ಕೊಡಗು

ಕೊಡಗು

ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಈ ತಾಣ ತಂಪಾದ ವಾತಾವರಣವನ್ನು ಹೊಂದಿದೆ. ಸುಂದರವಾದ ಜಲಪಾತಗಳು, ಕಾಫಿ ತೋಟಗಳು, ಸುಂದರವಾದ ಗಿರಿಧಾಮಗಳು ಇಲ್ಲಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ತಾಣ ಪರಸ್ಪರ ಅಗತ್ಯತೆಗಳ ಅರಿವನ್ನು ಮೂಡಿಸುತ್ತವೆ. ಬೆಂಗಳೂರಿನಿಂದ 243.3 ಕಿ.ಮೀ ದೂರದಲ್ಲಿರುವ ಈ ತಾಣದಲ್ಲಿ ಉತ್ತಮ ವ್ಯವಸ್ಥೆಯ ವಸತಿ ಹೊಂದಲು ಯಾವುದೇ ತೊಂದರೆಯಿಲ್ಲ.
PC: flickr.com

ದಾಂಡೇಲಿ

ದಾಂಡೇಲಿ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ಪಟ್ಟಣ ದಾಂಡೇಲಿ. ಸಾಹಸ ಜಲಕ್ರೀಡೆಗೆ ಹೆಸರುವಾಸಿಯಾಗಿರುವ ಈ ತಾಣ ಹೊಸ ಜೋಡಿಗಳಿಗೆ ಹೆಚ್ಚು ಖುಷಿಯನ್ನು ನೀಡಬಲ್ಲದು. ಪಶ್ಚಿಮ ಘಟ್ಟದ ಹಸಿರು ಸಿರಿಯಲ್ಲಿ ಇರುವ ಈತಾಣದಲ್ಲಿ ವನ್ಯ ಜೀವಿ ಧಾಮ, ಕವಲ ಗುಹೆ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳೂ ಇವೆ. ಇದು ಬೆಂಗಳೂರಿನಿಂದ 461.9 ಕಿ.ಮೀ. ದೂರದಲ್ಲಿದೆ.
PC: flickr.com

ಗೋಕರ್ಣ

ಗೋಕರ್ಣ

ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಸುಂದರ ತಾಣ ಗೋಕರ್ಣ. ಸುಂದರ ಸಮುದ್ರ ತೀರಗಳು ಹಾಗೂ ದೇವಸ್ಥಾನಗಳನ್ನು ಒಳಗೊಂಡಿದೆ. ಈ ತಾಣ ಸಂಸಾರಕ್ಕೆ ಹೊಸದಾಗಿ ಕಾಲಿಟ್ಟವರಿಗೊಂದು ಹೊಸತನವನ್ನು ನೀಡುತ್ತದೆ. ಇಲ್ಲಿರುವ ಓಂ ಸಮುದ್ರ ನವಜೋಡಿಗಳು ಭಾವನೆಗಳನ್ನು ಹಂಚಿಕೊಳ್ಳಲ್ಲೊಂದು ಮುಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಇದು ಬೆಂಗಳೂರಿನಿಂದ 452 ಕಿ.ಮೀ. ದೂರದಲ್ಲಿದೆ.
PC: wikimedia.org

ಕಾರವಾರ

ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಕಡಲ ತೀರದ ಪ್ರದೇಶ ಕಾರವಾರ. ಪ್ರಶಾಂತವಾದ ಕಡಲ ತೀರ, ತಂಪಾದ ಗಾಳಿ ಹಾಗೂ ಕಡಿಮೆ ಜನ ಜಂಗುಳಿ ಇರುವ ಈ ತಾಣ ಪ್ರೇಮಿಗಳಿಗೆ ಹಾಗೂ ನವ ಜೋಡಿಗಳಿಗೆ ಸುಂದರ ಅನುಭವವನ್ನು ನೀಡಬಲ್ಲದು. ವಸತಿ ವ್ಯವಸ್ಥೆ ಹಾಗೂ ಊಟ-ತಿಂಡಿಗಳಿಗೂ ಯಾವುದೇ ತೊಂದರೆ ಉಂಟಾಗದು. ಬೆಂಗಳೂರಿನಿಂದ 424 ಕಿ.ಮೀ. ದೂರದಲ್ಲಿದೆ.
PC: flickr.com

ಮಂಗಳೂರು

ಮಂಗಳೂರು

352 ಕಿ.ಮೀ. ದೂರದಲ್ಲಿರುವ ಈ ತಾಣವೂ ಸಮುದ್ರ ತೀರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಸುಂದರವಾದ ಪ್ರಕೃತಿ ಸೌಂದರ್ಯ ಹಾಗೂ ಸಮುದ್ರ ತೀರವು ನವಜೋಡಿಗೊಂದು ಆಕರ್ಷಣಾ ಸ್ಥಳವಾಗಿದೆ.
PC: flickr.com

Read more about: madikeri mangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X