Search
  • Follow NativePlanet
Share
» »ಭಾರತದಲ್ಲಿಯ ಈ 5 ಸಾಹಸಮಯ ಕ್ರೀಡೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ!

ಭಾರತದಲ್ಲಿಯ ಈ 5 ಸಾಹಸಮಯ ಕ್ರೀಡೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ!

ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಈ ಸಾಹಸಮಯ ಕ್ರೀಡೆಗಳಿದ್ದು ಅವುಗಳಲ್ಲಿ ಭಾಗವಹಿಸಬಹುದಾಗಿದೆ

ಭಾರತವು ತನ್ನಲ್ಲಿರುವ ವೈವಿಧ್ಯಮಯ ಸಂಸ್ಕೃತಿ ಮತ್ತು ವೈವಿಧ್ಯತೆಗೆ ಮತ್ತು ಸೌಂದರ್ಯತೆಗೆ ಇದರ ಹೆಸರುವಾಸಿಯಾಗಿದ್ದು ಇದರ ಅನುಭವ ಪಡೆಯಲು ಬಯಸುವ ವಿಶ್ವದಾದ್ಯಂತದ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಟೆ ಐತಿಹಾಸಿಕ ಸ್ಮಾರಕಗಳು, ನೈಸರ್ಗಿಕ ಸೌಂದರ್ಯತೆಗಳು ಇತ್ಯಾದಿಗಳನ್ನು ಒಳಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಇದರ ಹೊರತಾಗಿ ಈ ದೇಶವು ಪ್ರವಾಸಿಗರಿಗಾಗಿ ಹಲವಾರು ವಿಧದ ಸಾಹಸಿ ಕ್ರೀಡೆಗಳನ್ನು ಒದಗಿಸುತ್ತದೆ ಆದರೆ ಹಲವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಹೀಗೆ ಏಕೆ? ನೋಡೋಣ.

ಅಡ್ರಿನಾಲಿನ್ ಸಾಹಸಕ್ಕಾಗಿ ಹೆಚ್ಚಿನವರು ವಿದೇಶಕ್ಕೆ ಪ್ರಯಾಣ ಮಾಡುತ್ತಾರೆ ಮತ್ತು ಲೆಕ್ಕವಿಲ್ಲದಷ್ಟು ಹಣ ವ್ಯಯಿಸುತ್ತಾರೆ. ಅದು ಭಾರತದಲ್ಲೇ ಸಿಗುತ್ತದೆ ಎನ್ನುವುದು ಇನ್ನೂ ಕೆಲವರಿಗೆ ತಿಳಿಯದ ವಿಷಯ ಭಾರತವು ತನ್ನ ಸಂಪ್ರದಾಯ ಮತ್ತು ಸಂಸ್ಕೃತಿಯ ಹೊರತಾಗಿಯೂ ಈಗ ಸಾಹಸಮಯ ಚಟುವಟಿಕೆಗಳಿಗಾಗಿ ಹಲವಾರು ಜನಪ್ರಿಯ ತಾಣಗಳನ್ನು ಹೊಂದಿದ್ದು, ಇವುಗಳು ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿವೆ. ಕೆಲವು ಸಾಹಸಿ ಕ್ರೀಡೆಗಳು ಭಾರತದಲ್ಲಿಯೂ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಾ ಈ ಕೆಳಗೆ ಭಾರತದಲ್ಲಿರುವ ಪ್ರಮುಖ 5 ಸಾಹಸಿ ಚಟುವಟಿಕೆಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಓದಿ ತಿಳಿಯಿರಿ

whitewaterrafting

ವೈಟ್ ವಾಟರ್ ರಾಫ್ಟಿಂಗ್ (ಬಿಳಿನೀರಿನ ರಾಫ್ಟಿಂಗ್)

ಭಾರತವು ಹಲವಾರು ನದಿಗಳಿಂದ ಆಶೀರ್ವದಿಸಲ್ಪಟ್ಟ ದೇಶವಾಗಿದ್ದು, ಅವುಗಳಲ್ಲಿ ಕೆಲವು ಶಾಂತಿಯುತವಾಗಿದ್ದರೆ ಇನ್ನು ಕೆಲವು ಸುಂದರವಾದ ದೃಶ್ಯಗಳನ್ನು ಒದಗಿಸುವಂತವುಗಳಾಗಿವೆ. ಇನ್ನು ಕೆಲವು ಝುಳು ಝುಳು ಎಂದು ಹರಿಯುವ ಸದ್ದು ಮಾಡಿದರೆ ಇನ್ನು ಕೆಲವು ಘರ್ಜನೆ ಮಾಡುತ್ತಾ ಹರಿಯುತ್ತವೆ. ಇಂತಹ ನದಿಗಳು ವೈಟ್ ವಾಟರ್ ರಾಫ್ಟಿಂಗ್ ಮಾಡುವವರಿಗಾಗಿ ಅತ್ಯಂತ ಸೂಕ್ತವಾದವುಗಳಾಗಿವೆ.

ಥ್ರಿಲ್ ಅನ್ವೇಷಕರಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ವಿವಿಧ ಶ್ರೇಣಿಯ ರಾಪಿಡ್‌ಗಳಿವೆ, ಪ್ರತಿಯೊಂದೂ ಮಿತಿಗೆ ಒಂದನ್ನು ಪರೀಕ್ಷಿಸುತ್ತದೆ. ಕೆಲವು ಜನಪ್ರಿಯ ಸ್ಥಳಗಳೆಂದರೆ ಋಷಿಕೇಶ, ಕೂರ್ಗ್, ಕುಲು-ಮನಾಲಿ, ಝನ್ಸ್ಕಾರ್, ಇತ್ಯಾದಿ.

keralapara

ಪ್ಯಾರಾಸೈಲಿಂಗ್

ನೀವು ಆಕಾಶದಲ್ಲಿ ಹಾರಾಡುವುದನ್ನೊಮ್ಮೆ ಚಿತ್ರಿಸಿಕೊಳ್ಳಿ, ಕೆಳಗಿನ ಭೂಮಿಯನ್ನು ಪಕ್ಷಿನೋಟದೊಂದಿಗೆ ಮೇಲಿಂದ ಕೆಳಗೆ ನೋಡಬಹುದು ಈ. ಪ್ಯಾರಾಸೈಲಿಂಗ್ ನಿಮಗೆ ಕೈಗೆಟುಕುವ ಬೆಲೆಯಲ್ಲಿ ಈ ಆಹ್ಲಾದಕರ ಅನುಭವವನ್ನು ನೀಡುತ್ತದೆ.ಈ ಕ್ರೀಡೆಯು ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಬಹುಶಃ ದೇಶದ ಅತ್ಯಂತ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾಗಿದೆ.

ಗೋವಾ ಮತ್ತು ಗೋಕರ್ಣವು ಭಾರತದಲ್ಲಿ ಬೀಚ್ ಪ್ಯಾರಾಸೈಲಿಂಗ್‌ಗೆ ಅತ್ಯುತ್ತಮ ತಾಣಗಳಾಗಿವೆ. ಪ್ಯಾರಾಸೈಲಿಂಗ್‌ಗೆ ಇತರ ಜನಪ್ರಿಯ ತಾಣಗಳೆಂದರೆ ಉತ್ತರಾಖಂಡದ ಬೆಟ್ಟಗಳು ಮತ್ತು ರಾಜಸ್ಥಾನದ ಮರಳುಗಾಡುಗಳು.

sky diving

ಸ್ಕೈ ಡೈವಿಂಗ್

ನಾವು ಆಕಾಶವನ್ನು ನೋಡುತ್ತಾ ಹಕ್ಕಿಗಳು ಹೇಗೆ ಆಕಾಶದಷ್ಟೆತ್ತರಕ್ಕೆ ಹಾರುತ್ತವೆ ಎಂದು ಬೆರಗಾಗುತ್ತೇವೆ ಅಲ್ಲದೆ ನಾವೂ ಅವುಗಳಂತೆಯೇ ಸ್ವತಂತ್ರವಾಗಿ ಆಕಾಶದಲ್ಲಿ ಹಾರಬಹುದೇ ಎಂದು ಯೋಚಿಸುತ್ತೇವೆ ಅಲ್ಲವೆ? ಹೀಗೆ ಆಸೆ ಪಡುವವರಿಗೆಂದೇ ಸ್ಕೈ ಡೈವಿಂಗ್ ಸಾಹಸ ಕ್ರೀಡೆಯಿದೆ. ಇದು ಭಯ ಪಡುವಂತಿದ್ದರೂ ಕೂಡಾ ಅಷ್ಟೇ ಆನಂದದಾಯಕವಾಗಿದೆ; ಸ್ಕೈಡೈವಿಂಗ್ ಸುತ್ತಮುತ್ತಲಿನ ಪಕ್ಷಿನೋಟವನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.

ಈ ಅವಕಾಶವನ್ನು ಒದಗಿಸಲಿಕ್ಕೆಂದೇ ಹಲವಾರು ಸಂಸ್ಥಗಳಿವೆ. ಇಲ್ಲಿ ಸುರಕ್ಷತೆಯ ಬಗ್ಗೆ ಯಾವುದೇ ಚಿಂತೆ ಮಾಡದೆ ವಿಮಾನದಿಂದ ಜಿಗಿಯಬಹುದಾಗಿದೆ. ಈ ಕ್ರೀಡೆಗಳನ್ನು ನಡೆಸುವ ದೇಶದ ಕೆಲವು ಜನಪ್ರಿಯ ತಾಣಗಳೆಂದರೆ ಮೈಸೂರು, ಪಾಂಡಿಚೇರಿ ಮತ್ತು ಮಧ್ಯಪ್ರದೇಶದ ಧಾನಾ.

andaman

ಸ್ಕೂಬಾ ಡೈವಿಂಗ್

7,500 ಕಿ.ಮೀ ಗಳಷ್ಟು ಕರಾವಳಿ ಪ್ರದೇಶಗಳನ್ನೊಳಗೊಂಡ ಭಾರತವು ಹಲವಾರು ಬೀಚ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಗೋವಾ, ಪಾಂಡಿಚೇರಿ, ಮತ್ತು ಗೋಕರ್ಣಾ ಇವುಗಳಲ್ಲಿಯ ಕಡಲತೀರಗಳಿಗೆ ಹೆಸರುವಾಸಿಯಾಗಿದ್ದರೂ ಹೆಚ್ಚಿನವರು ಸಮುದ್ರದ ಆಳಕ್ಕೆ ಹೋಗುವುದಿಲ್ಲ.

ಅಲೆಗಳ ಕೆಳಗೆ ಏನಿದೆ ಎಂಬುದರ ಅನುಭವವನ್ನು ಹೊಂದಲು ಸಿದ್ಧರಿರುವವರಿಗೆ, ಸ್ಕೂಬಾ ಡೈವಿಂಗ್ ನಿಮಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ. ದೇಶದ ಕೆಲವು ಜನಪ್ರಿಯ ಸ್ಕೂಬಾ ಡೈವಿಂಗ್ ತಾಣಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗೋವಾ ಮತ್ತು ಪಾಂಡಿಚೇರಿ.

heliskiing

ಹೆಲಿ ಸ್ಕೀಯಿಂಗ್

ನಮ್ಮಲ್ಲಿ ಹೆಚ್ಚಿನವರಿಗೆ ಅಷ್ಟಾಗಿ ಪರಿಚಯವಿರದ ಕ್ರೀಡೆಯೆಂದರೆ ಅದು ಹೆಲಿಸ್ಕೀಯಿಂಗ್, ಭಾರತವೂ ಕೂಡ ಇಂದು ಹೆಲಿ ಸ್ಕೀಯಿಂಗ್ ಗೆ ಜನಪ್ರೀಯ ತಾಣವಾಗಿ ಮಾರ್ಪಡುತ್ತಿದೆ.

ಪರ್ವತದ ತುದಿಯಲ್ಲಿ ಹೆಲಿಕಾಪ್ಟರ್‌ನಿಂದ ಇಳಿದು ಹಿಮಭರಿತ ಇಳಿಜಾರಿನಲ್ಲಿ ಸ್ಕೀಯಿಂಗ್ ಮಾಡುವ ರೋಮಾಂಚಕ ಅನುಭವವನ್ನು ಕಲ್ಪಿಸಿಕೊಳ್ಳಿ, ಕಾಶ್ಮೀರದ ಹಿಮಭರಿತ ಪರ್ವತಗಳಲ್ಲಿ ಈ ಸಾಹಸ ಚಟುವಟಿಕೆಯು ತುಂಬಾ ಸಾಮಾನ್ಯವಾಗಿದೆ, ಇದು ಹೆಚ್ಚಿನ ಸಂಖ್ಯೆಯ ಹೆಲಿ-ಸ್ಕೀಯಿಂಗ್ ಉತ್ಸಾಹಿಗಳನ್ನು ಆಕರ್ಷಿಸುತ್ತದೆ. ಗುಲ್ಮಾರ್ಗ್ ಮತ್ತು ಮನಾಲಿ ಕೆಲವು ಜನಪ್ರಿಯ ತಾಣಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X