Search
  • Follow NativePlanet
Share
» »ಬೆಂಗಳೂರಿನ ಈ ಹೆಸರಾಂತ ಪುಸ್ತಕ ಮಳಿಗೆಗಳಿಗೆ ಎಂದಾದರೂ ಭೇಟಿ ನೀಡಿದ್ದೀರಾ?

ಬೆಂಗಳೂರಿನ ಈ ಹೆಸರಾಂತ ಪುಸ್ತಕ ಮಳಿಗೆಗಳಿಗೆ ಎಂದಾದರೂ ಭೇಟಿ ನೀಡಿದ್ದೀರಾ?

ಭಾರತದಲ್ಲಿ ಓದುವ ಹವ್ಯಾಸವನ್ನು ಹೆಚ್ಚು ಇಷ್ಟ ಪಡುವ ಜನರನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಇದೇ ಕಾರಣಕ್ಕಾಗಿ ಇಲ್ಲಿ ವಿವಿಧ ಪುಸ್ತಕ ಮಳಿಗೆಗಳಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಹಾಗೂ ಹೊಸದಾಗಿ ಬರವಣಿಗೆಗಳ ಆವೃತಿಗಳನ್ನು ಒಳಗೊಂಡ ಪುಸ್ತಕ ಮಾರಾಟಗಾರರನ್ನು ಒಳಗೊಂಡ ಒಂದು ಜಗತ್ತನ್ನೇ ಕಾಣಬಹುದಾಗಿದೆ.

ಬೆಂಗಳೂರಿನ ಜನ ಓದುವಿಕೆಯ ಆರಾಧಕರು ಮತ್ತು ಉತ್ತಮ ಓದುಗಾರಿಕೆ ಪ್ರವೃತ್ತಿಯುಳ್ಳವರಾಗಿರುವುದರಿಂದ ಈ ಉತ್ತಮ ಅಭ್ಯಾಸವನ್ನು ಬೆಂಬಲಿಸುವ ಮತ್ತು ಸಂರಕ್ಷಿಸುವ ಸಂಕೇತವಾಗಿ ಅನೇಕ ಜನರು ಮತ್ತು ಕೆಲವು ಕುಟುಂಬಗಳು ನಗರದ ಮೂಲೆ ಮೂಲೆಗಳಲ್ಲಿ ಸ್ವತಂತ್ರವಾಗಿ ಪುಸ್ತಕ ಮಳಿಗೆಗಳನ್ನು ತೆರೆದಿದ್ದಾರೆ.

ಆದುದರಿಂದ ಬೆಂಗಳೂರನ್ನು 'ಓದುಗರ ಸ್ವರ್ಗ' ಎಂದರೆ ತಪ್ಪಾಗಲಾರದು. ನೀವು ಬೆಂಗಳೂರಿನ ಯಾವುದೇ ಬೀದಿಯಲ್ಲಿ ನಡೆದರೂ ಒಂದಲ್ಲ ಒಂದು ಪುಸ್ತಕದ ಅಂಗಡಿಯು ಕಾಣಸಿಗುವುದು ಸರ್ವೇ ಸಾಮಾನ್ಯವಾಗಿದೆ.

ನೀವು ಬೆಂಗಳೂರಿನಲ್ಲಿ ಭೇಟಿ ನೀಡಲು ಬಯಸುವಿರಾದಲ್ಲಿ ಅನೇಕ ಪುಸ್ತಕ ಮಳಿಗೆಗಳಿವೆ ಮತ್ತು ಈ ಕೆಳಗೆ ಪಟ್ಟಿ ಮಾಡಿದ್ದೇವೆ. ಆದರೆ, ನಿಮ್ಮ ಸಮಯ ಮತ್ತು ಶಕ್ತಿಯನ್ನು ಗಮನದಲ್ಲಿರಿಸಿಕೊಂಡು, ನೀವು ಯಾವುದನ್ನು ಭೇಟಿ ಮಾಡಲು ಯೋಚಿಸುತ್ತಿದ್ದೀರಿ ಎಂದು ನಮಗೆ ತಿಳಿಸಿ ...

ಬುಕ್ ಸ್ಟಾಪ್ ! (ಕೋರಮಂಗಲ)

ಬುಕ್ ಸ್ಟಾಪ್ ! (ಕೋರಮಂಗಲ)

ಇದೊಂದು ನೆಲಮಾಳಿಗೆಯಲ್ಲಿರುವ ಒಂದು ವಿಶೇಷವಾದ ಸಣ್ಣ ಅಂಗಡಿಯಾಗಿದೆ. ಈ ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸಲು ಸಾಂಪ್ರದಾಯಿಕ ಬೆಲ್ ಸೆಟ್ಟಿಂಗ್ ಇದೆ. ನಗರದ ಇತರೆ ಪುಸ್ತಕ ಮಳಿಗೆಗಳಿಗೆ ಇದನ್ನು ಹೋಲಿಸಿದರೆ ಗಾತ್ರದಲ್ಲಿ ಇದು ಸಣ್ಣದಾದರೂ ಅತ್ಯುತ್ತಮ ಆವೃತಿಗಳನ್ನು ತನ್ನಲ್ಲಿ ಹೊಂದಿರುವ ಅಂಗಡಿಗಳಲ್ಲಿ ಒಂದೆನಿಸಿದೆ.

ಇಲ್ಲಿ ಅನೇಕ ಪ್ರಸಿದ್ಧ ಬರಹಗಾರರು ಬರೆದ ಜನಪ್ರಿಯವಲ್ಲದ ಪುಸ್ತಕಗಳೂ ಕೂಡಾ ಕಾಣ ಸಿಗುತ್ತದೆ. ಪುಸ್ತಕದಂಗಡಿಯು ಒಂದು ಕುಟುಂಬದ ಒಡೆತನದಲ್ಲಿದೆ ಮತ್ತು ಅವರು ಸಾಕಷ್ಟು ಪುಸ್ತಕಗಳನ್ನು ತಮ್ಮ ಮಳಿಗೆಗೆ ಸಂಗ್ರಹಿಸಿದ್ದಾರೆ. ಆದರೆ, ಇಲ್ಲಿ ಕುಳಿತುಕೊಳ್ಳಲು ಮತ್ತು ಓದಲು ಸ್ಥಳವಿಲ್ಲ, ಏಕೆಂದರೆ ಇದು ಕೇವಲ ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಲು ಮಾಡಿದ ವಾಕ್-ಇನ್ ಅಂಗಡಿಯಾಗಿದ್ದು ಈ ಮಳಿಗೆ ಭೇಟಿ ಮಾಡಲು ಯೋಗ್ಯವಾಗಿದೆ.

ಬ್ಲಾಸಂ ಬುಕ್ ಹೌಸ್ ( ಚರ್ಚ್ ರಸ್ತೆ)

ಬ್ಲಾಸಂ ಬುಕ್ ಹೌಸ್ ( ಚರ್ಚ್ ರಸ್ತೆ)

ಬ್ಲಾಸಮ್ ಬುಕ್ ಹೌಸ್ ನಗರದ ಅತ್ಯಂತ ಪ್ರಸಿದ್ಧ ಪುಸ್ತಕ ಮಳಿಗೆಗಳಲ್ಲಿ ಒಂದಾಗಿದೆ. ನೀವು ಓದುಗರಾಗಿದ್ದರೆ, ನೀವು ಈ ಮಳಿಗೆಯ ಬಗ್ಗೆ ಒಮ್ಮೆಯಾದರೂ ಕೇಳಿರುವಿರಿ. ನೀವು ಬೆಂಗಳೂರಿಗೆ ಹೊಸಬರಾಗಿದ್ದಲ್ಲಿ ಈ ಸ್ವರ್ಗಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಇಲ್ಲಿರುವ ರಾಶಿ ರಾಶಿ ಪುಸ್ತಕಗಳು ಅಕ್ಷರಶಃ ನಿಮ್ಮ ಮೆದುಳನ್ನು ಒಮ್ಮೆ ಚುರುಕುಗೊಳಿಸುತ್ತದೆ.

ಪುಸ್ತಕದಂಗಡಿಯು ಬಹುತೇಕ ಅರಣ್ಯ ಗ್ರಂಥಾಲಯದಂತಿದೆ - ಕಾಲುದಾರಿಗಳ ನಂತರದ ಕಾಲುದಾರಿಗಳು, ಇದು ಎಂದಿಗೂ ಮುಗಿಯದ ಪುಸ್ತಕಗಳ ಸಾಲುಗಳನ್ನು ಹೊಂದಿದ್ದು ಕೆಲವು ಸೀಮಿತ ಆವೃತ್ತಿಗಳು ಮತ್ತು ಶತಮಾನದಷ್ಟು ಹಳೆಯ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಸ್ಥಳವು ಸುಸಜ್ಜಿತವಾಗಿದ್ದು, ಇಲ್ಲಿ ಹೊಸ ಪುಸ್ತಕಗಳನ್ನೂ ಕೂಡಾ ಮಾರಾಟ ಮಾಡಲಾಗುತ್ತದೆ. ಈ ಮಳಿಗೆಯು ಕಡಿಮೆ ಬೆಲೆಗೆ ಪುಸ್ತಕಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಪುಸ್ತಕ ಮೇಳಗಳಿಗಿಂತ ಇಲ್ಲಿ ಬೆಲೆ ಹೆಚ್ಚಾಗಿದ್ದರೂ ಬ್ಲಾಸಂ ತನ್ನದೇ ಆದ ಒಂದು ಛಾಪನ್ನು ಮೂಡಿಸುವಲ್ಲಿ ಇದು ಯಶಸ್ವಿಯಾಗುತ್ತದೆ. ನೀವು ಈ ಮಳಿಗೆಯಲ್ಲಿದ್ದಲ್ಲಿ, ಇಲ್ಲಿ ಯಾವುದಾದರೂ ಪುಸ್ತಕವನ್ನು ಖರೀದಿಸಿದೇ ಇರಲಾರರು.

ಹಿಗ್ಗಿನ್‌ ಬೋಥಮ್ಸ್ (ಎಂಜಿ ರಸ್ತೆ)

ಹಿಗ್ಗಿನ್‌ ಬೋಥಮ್ಸ್ (ಎಂಜಿ ರಸ್ತೆ)

ಇದು ಬೆಂಗಳೂರಿನ ಅತ್ಯಂತ ಹಳೆಯ ಪುಸ್ತಕ ಮಳಿಗೆಗಳಲ್ಲಿ ಒಂದಾಗಿದೆ. ಒಂದು ಶತಮಾನದಷ್ಟು ಹಳೆಯದಾದ, ವಸಾಹತುಶಾಹಿ ಶೈಲಿಯ ಕಟ್ಟಡದಲ್ಲಿ ನೆಲೆಗೊಂಡಿರುವ ಹಿಗ್ಗಿನ್‌ ಬೋಥಮ್ಸ್ ಪ್ರತಿ ಓದುಗರನ್ನು ಅದರ ದೊಡ್ಡ, ದ್ವಾರದ ಮೇಲೆ ನಿರ್ಮಿಸಲಾದ ನೀಲಿ-ಅಕ್ಷರದ ಚಿಹ್ನೆಯೊಂದಿಗೆ ಸ್ವಾಗತಿಸುತ್ತದೆ. ಇಲ್ಲಿನ ಸಂಗ್ರಹವು ನಿಮ್ಮ ಪುಸ್ತಕ ಓದುವಿಕೆಯ ದಣಿವನ್ನು ತಣಿಸುವಷ್ಟು ಇಲ್ಲವಾದರೂ , ಇದು ಭೇಟಿಗೆ ಯೋಗ್ಯವಾದ ಮಳಿಗೆಗಳಲ್ಲೊಂದಾಗಿದೆ.

ಓದುಗರು ತಮ್ಮ ಆಯ್ಕೆಯ ಪುಸ್ತಕವನ್ನು ಪಡೆದು ಓದಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳಲು ಇಚ್ಚಿಸುವವರಿಗೆ ಇಲ್ಲಿ ಅಂಗಳದಂತ ಸ್ಥಳವೂ ಇದೆ. ಭಾರತದ ಓದುವ ದಾಹವುಳ್ಳ ಪ್ರತೀಯೊಬ್ಬ ಓದುಗನೂ ಒಮ್ಮೆಯಾದರೂ ಈ ರೀತಿಯ ಮಳಿಗೆಗೆ ಭೇಟಿ ಕೊಡುವುದು ಸೂಕ್ತವಾದುದಾಗಿದೆ. ಹಿಗ್ಗಿನ್‌ ಬೋಥಮ್ಸ್ ದಕ್ಷಿಣ ಭಾರತದ ಸಾಹಿತ್ಯ ಇತಿಹಾಸದ ಅವಿಭಾಜ್ಯ ಅಂಗವಾಗಿದೆ.

ಬುಕ್ ಫೇರ್ (ಕೋರಮಂಗಲ)

ಬುಕ್ ಫೇರ್ (ಕೋರಮಂಗಲ)

ಈ ಪ್ರದೇಶದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಪುಸ್ತಕದಂಗಡಿಯಾಗಿರುವ ಬುಕ್ ಫೇರ್ ಕೆಲವು ವಿಶಿಷ್ಟ ಸಂಗ್ರಹಗಳನ್ನು ಹೊಂದಿದೆ. ಇಲ್ಲಿ ಪುಸ್ತಕಗಳ ದರಕ್ಕೆ ಅನುಗುಣವಾಗಿ ವಿಭಾಗ ಮಾಡಲಾಗಿದ್ದು 100, 200 ಮತ್ತು 500 ರೂಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗಗಳಿಂದ ನೀವು ಯಾವುದೇ ಪುಸ್ತಕವನ್ನು ಆಯ್ಕೆ ಮಾಡಬಹುದು. ನಿಮ್ಮ ಲೈಬ್ರರಿಗೆ ಕೆಲವು ಉತ್ತಮ ಸೇರ್ಪಡೆಗಳನ್ನು ನೀವು ಹುಡುಕುತ್ತಿದ್ದರೆ ಈ ಅಂಗಡಿಯು ಕಡಿಮೆ ದರಗಳಲ್ಲಿ ಪುಸ್ತಕಗಳನ್ನು ನಿಮಗೆ ಒದಗಿಸುತ್ತದೆ.

ಮಾರ್ಕ್ ಟ್ವೈನ್ ಸೀಮಿತ ಆವೃತ್ತಿಗಳಿಂದ ಹಿಡಿದು ಕಾಫಿ-ಟೇಬಲ್ ಪುಸ್ತಕಗಳವರೆಗೆ, ನಿಮ್ಮ ವೈವಿಧ್ಯಮಯ ಆಸಕ್ತಿಗಳಿಗೆ ಸೂಕ್ತವಾದ ಎಲ್ಲವನ್ನೂ ನೀವು ಕಾಣಬಹುದು. ಒಂದೇ ಒಂದು ವಿಷಯವೆಂದರೆ ಇಲ್ಲಿಯ ಸಾವಿರಾರು ಪುಸ್ತಕಗಳ ನಡುವೆ ನಿಮ್ಮ ಪುಸ್ತಕವನ್ನು ಕಂಡುಹಿಡಿಯಬೇಕಾಗುತ್ತದೆ ಇಲ್ಲಿ ಹಳೆಯ ಮತ್ತು ಹೊಚ್ಚ ಹೊಸ ಪುಸ್ತಕಗಳಿವೆ. ನಿಮ್ಮ ಓದುವ ಹವ್ಯಾಸಕ್ಕೆ ಸೂಕ್ತವಾದ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು.

ಸಪ್ನ ಬುಕ್ ಹೌಸ್ (ಕೋರಮಂಗಲ/ಇಂದಿರಾನಗರ

ಸಪ್ನ ಬುಕ್ ಹೌಸ್ (ಕೋರಮಂಗಲ/ಇಂದಿರಾನಗರ

ಎಂಬಿಎ ಮತ್ತು ಐಐಟಿ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡುವ ಪುಸ್ತಕಗಳನ್ನು ಈ ಮಳಿಗೆಯು ಮಾರಾಟ ಮಾಡುವುದರಿಂದ ಇದು ವಾಣಿಜ್ಯ ಮಳಿಗೆಯಾಗಿಯೂ ಗುರುತಿಸಲ್ಪಡುತ್ತದೆ. ಈ ಮಳಿಗೆಯು ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪುಸ್ತಕ ಖರೀದಿಗೆ ಒಂದು ದೊಡ್ಡ ಕೇಂದ್ರವಾಗಿದೆ. ಆದುದರಿಂದ, ಏಷ್ಯಾದ ಅತಿ ದೊಡ್ಡ ಪುಸ್ತಕದ ಅಂಗಡಿಯೆಂದು ಕರೆಸಿಕೊಂಡಿದೆ.

ಇಲ್ಲಿ ಜನಪ್ರಿಯ ಮತ್ತು ಹೊಸ ಆವೃತಿ ಯ ಪುಸ್ತಕಗಳು ಇಲ್ಲಿ ಕಾಣಬಹುದೆಂದು ಹೇಳುವ ಅಗತ್ಯವೇ ಇಲ್ಲ. ಅಷೇ ಅಲ್ಲದೆ ಈ ಅಂಗಡಿಯಲ್ಲಿ ಲೇಖನ ಸಾಮಗ್ರಿಗಳು, ಮತ್ತು ಕಲಾ ಸಾಮಗ್ರಿಗಳನ್ನೂ ಸಹ ಮಾರಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಕಚೇರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸುವ ಒಂದು ವಿಭಾಗವಿದೆ ಇದರ ಜೊತೆಗೆ ಇಲ್ಲಿ ಸುಂದರವಾದ ಡೈರಿಗಳು, ನಕ್ಷೆಗಳು, ಪ್ಲಾನರ್ಸ್ ಇತ್ಯಾದಿಗಳನ್ನು ಇಲ್ಲಿ ಶಾಪ್ಪಿಂಗ್ ಮಾಡಬಹುದು.

ಅಲ್ಲದೆ ಇಲ್ಲಿ ಡಿಜಿಟಲ್ ಕಿಯೋಸ್ಕ್ ಇದ್ದು ಇವು ನಿಮಗೆ ಪುಸ್ತಕಗಳನ್ನು ಅವುಗಳ ಹೆಸರಿನಿಂದ ಅಥವಾ ಲೇಖಕರ ಹೆಸರಿಗೆ ಅನುಗುಣವಾಗಿ ಹುಡುಕಾಡಲು ಸಹಾಯ ಮಾಡುತ್ತದೆ. ಇಲ್ಲಿ ಸ್ವಲ್ಪ ದುಬಾರಿಯಾದರೂ ಈ ಅಂಗಡಿಯ ತನ್ನ 4 ಅಂತಸ್ತಿನ ಕಟ್ಟಡದ ಸೌಂದರ್ಯವು ಬೆಂಗಳೂರಿನಲ್ಲಿ ಓದುವ ಸಂಸ್ಕೃತಿಯು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಎಂಬುದನ್ನು ತೋರಿಸುತ್ತದೆ

ದ ಬುಕ್ ವರ್ಮ್ (ಚರ್ಚ್ ರಸ್ತೆ)

ದ ಬುಕ್ ವರ್ಮ್ (ಚರ್ಚ್ ರಸ್ತೆ)

ಇದನ್ನು 2002 ರಲ್ಲಿ ಕೃಷ್ಣ ಎಂಬವರು ಸ್ಥಾಪಿಸಿದರು, ಈ ಮಾರಾಟಗಾರನು ಪಾದಚಾರಿ ಮಾರ್ಗದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿ ಕೆಲವು ವರ್ಷ ಕಳೆದನು. ಹೌದು, ಈ ಪುಸ್ತಕದಂಗಡಿಯು ಇತರರಂತೆಯೇ ಹೆಚ್ಚುವರಿ ಹಿನ್ನೆಲೆ ಕಥೆಯೊಂದಿಗೆ ಬರುತ್ತದೆ. ನಿಧಾನವಾಗಿ ಮತ್ತು ಕ್ರಮೇಣ ಕೃಷ್ಣ ಈ ಸ್ಥಳವನ್ನು ಹೇಗೆ ನಿರ್ಮಿಸಿದ್ದಾನೆ ಎಂದು ನೋಡುವುದೇ ಒಂದು ಸೊಗಸು.

ಈ ಅಂಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಕೈಗೆಟುಕುವ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಅನೇಕ ಪುಸ್ತಕಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿವೆ. ಅಲ್ಲದೇ, ಇಲ್ಲಿ ಹಲವಾರು ಕಾದಂಬರಿಗಳ ಜಗತ್ತನ್ನು ಸಹ ಕಾಣಬಹುದು. ನಿಮ್ಮ ನೆಚ್ಚಿನ ಲೇಖಕರ ಕೆಲವು ಅಪರೂಪದ ಪುಸ್ತಕ ಸಂಗ್ರಹಣೆಗಳು ಮತ್ತು ಮೊದಲ ಆವೃತ್ತಿಯ ಪ್ರತಿಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X