Search
  • Follow NativePlanet
Share
» »ಈ ಪ್ರವಾಸಿ ನಗರಗಳಲ್ಲಿ ಬಿರಿಯಾನಿ ರುಚಿ ಮಾಡಿದ್ದೀರಾ?

ಈ ಪ್ರವಾಸಿ ನಗರಗಳಲ್ಲಿ ಬಿರಿಯಾನಿ ರುಚಿ ಮಾಡಿದ್ದೀರಾ?

ಬಿರಿಯಾನಿ ಎಂದ ತಕ್ಷಣ ತಕ್ಷಣ ನೆನಪಿಗೆ ಬರುವುದು ಹೈದ್ರಾಬಾದ್ ಬಿರಿಯಾನಿ. ಏಕೆಂದರೆ ಬಿರಿಯಾನಿಗೆ ಹೈದ್ರಾಬಾದ್‍ಗೆ ಅತ್ಯಂತ ಅವಿನಾಭಾವ ಸಂಬಂಧವಿದೆ. ಅನೇಕ ರಾಜ್ಯಗಳಲ್ಲಿ ಪ್ರಾಂತ್ಯಕ್ಕೆ ಅನುಗುಣವಾಗಿ ಬಿರಿಯಾನಿ ಪ್ರಸಿದ್ಧತೆಯನ್ನು ಪಡೆದಿದೆ. ಬಿರ

ಬಿರಿಯಾನಿ ಎಂದ ತಕ್ಷಣ ತಕ್ಷಣ ನೆನಪಿಗೆ ಬರುವುದು ಹೈದ್ರಾಬಾದ್ ಬಿರಿಯಾನಿ. ಏಕೆಂದರೆ ಬಿರಿಯಾನಿಗೆ ಹೈದ್ರಾಬಾದ್‍ಗೆ ಅತ್ಯಂತ ಅವಿನಾಭಾವ ಸಂಬಂಧವಿದೆ. ಅನೇಕ ರಾಜ್ಯಗಳಲ್ಲಿ ಪ್ರಾಂತ್ಯಕ್ಕೆ ಅನುಗುಣವಾಗಿ ಬಿರಿಯಾನಿ ಪ್ರಸಿದ್ಧತೆಯನ್ನು ಪಡೆದಿದೆ. ಬಿರಿಯಾನಿಯಲ್ಲಿ ಹಲವು ಬಗೆಯ ರುಚಿಗಳಿದ್ದು, ಪ್ರತಿಯೊಬ್ಬರಿಗೆ ಆ ಸ್ವಾಧಿಷ್ಟವಾದ ಆಹಾರವನ್ನು ಒಮ್ಮೆ ರುಚಿ ನೋಡಿಬಿಡಬೇಕು ಎಂದರೆ ಅನ್ನಿಸದೇ ಇರದು. ಘಮ-ಘಮ ಬಿರಿಯಾನಿ ಪ್ರಿಯರಿಗೆ ಆಹ್ವಾನಿಸುವ ಅನೇಕ ಸುಂದರವಾದ ಹೋಟೆಲ್‍ಗಳು ಕೂಡ ಇವೆ. ಆದರೆ ಎಲ್ಲಿ ತಿನ್ನಬೇಕು ಎಂಬುದು ಮಾತ್ರ ಕೆಲವರಿಗೆ ಗೊಂದಲವಾದ ವಿಷಯವೆಂದೇ ಹೇಳಬಹುದು. ಹಾಗಾದರೆ ಬನ್ನಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗ ಒಮ್ಮೆ ಬಿರಿಯಾನಿಯ ರುಚಿಯನ್ನು ಕೈಗೊಳ್ಳಿ.

ಅಂಬೂರು ಸ್ಟಾರ್ ಬಿರಿಯಾನಿ, ಚೆನ್ನೈ

ಅಂಬೂರು ಸ್ಟಾರ್ ಬಿರಿಯಾನಿ, ಚೆನ್ನೈ

ಚೆನ್ನೈನಲ್ಲಿನ ವೆಲಾಚೆರ್ನಿಲ್‍ನಲ್ಲಿ ದೊರೆಯುವ ಅಂಬೂರು ಸ್ಟಾರ್ ಬಿರಿಯಾನಿಗಾಗಿ ನಗರದಲ್ಲಿ ಅನೇಕ ಪ್ರದೇಶಗಳಿಂದ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಸಾಂಬಾರ್ ರೈಸ್ ಚಿಕನ್, ಮಟನ್ ಬಿರಿಯಾನಿ ಇಲ್ಲಿ ಅತ್ಯಂತ ರುಚಿಕರವಾದ ಆಹಾರವಾಗಿದೆ. ಇಬ್ಬರಿಗೆ ರೂ 450 ವೆಚ್ಚವಾಗುತ್ತದೆ.

PC:YOUTUBE

ಯಾ ಮೋಯನುದ್ದಿನ್ ಬಿರಿಯಾನಿ ಸೆಂಟರ್

ಯಾ ಮೋಯನುದ್ದಿನ್ ಬಿರಿಯಾನಿ ಸೆಂಟರ್

ಚೆನ್ನೈನಲ್ಲಿನ ಆರ್, ಸಿ ಚರ್ಚ್ ಸ್ರ್ಟೀಟ್‍ನಲ್ಲಿನ ಮೊಯನುದ್ದೀನ್ ಬಿರಿಯಾನಿಗಾಗಿ ದೊಡ್ಡದಾದ ಕ್ಯೂ ಇರುತ್ತದೆ. ಅರ್ಧ ತಾಸು ಕಾದರೆ ಮಾತ್ರ ನಮಗೆ ಟೇಸ್ಟಿ-ಟೇಸ್ಟಿ ಬಿರಿಯಾನಿ ದೊರೆಯುತ್ತದೆ. ಇಲ್ಲಿ ಚಿಕನ್ ಮಟನ್ ಬಿರಿಯಾನಿಗೆ ಬದನೆಕಾಯಿ ಚಟ್ನಿಯನ್ನು ನೀಡುವುದು ವಿಶೇಷ.

PC:YOUTUBE

ತುಂಡೆ ಕಾಬಾಬಿ, ಲಕ್ನೋ

ತುಂಡೆ ಕಾಬಾಬಿ, ಲಕ್ನೋ

ಲಕ್ನೋದಲ್ಲಿನ ತುಂಡೆ ಕಾಬಾಬಿಯಲ್ಲಿ ದೊರೆಯುವ ಆಹಾರಗಳು ಅತ್ಯಂತ ಪ್ರಸಿದ್ಧವಾದುದು. ಅಸಲಿಗೆ ಇಲ್ಲಿ ದೊರೆಯುವ ಬಿರಿಯಾನಿಗಾಗಿಯೇ ಅನೇಕ ಮಂದಿ ಭೇಟಿ ನೀಡುತ್ತಿರುತ್ತಾರೆ. ರಾಯಿತದ ಜೊತೆ-ಜೊತೆಗೆ ಬಿರಿಯಾನಿ ತಿನ್ನುತ್ತಿದ್ದರೆ ಜೀವನದಲ್ಲಿ ಎಂದಿಗೂ ಮರೆಯಲಾಗದ ರುಚಿಯನ್ನು ಪಡೆಯಬಹುದು. ಇಬ್ಬರಿಗೆ ರೂ.300 ವೆಚ್ಚವಾಗುತ್ತದೆ.

PC:YOUTUBE

ಕರಿಮ್ಸ್, ನ್ಯೂ ಡೆಲ್ಲಿ

ಕರಿಮ್ಸ್, ನ್ಯೂ ಡೆಲ್ಲಿ

ನ್ಯೂ ಡೆಲ್ಲಿ ಕರಿಮ್ಸ್ ರೆಸ್ಟೋರೆಂಟ್‍ನಲ್ಲಿ ದೊರೆಯುವ ಬಿರಿಯಾನಿ ಘಮ-ಘಮವು ಬೇರೆ ಎಲ್ಲೂ ಕೂಡ ದೊರೆಯುವುದಿಲ್ಲ ಎಂದೇ ಹೇಳಬಹುದು. ಅದ್ದರಿಂದಲೇ ನಿಜಾಮುದ್ದಿನ್‍ನಲ್ಲಿನ ಈ ರೆಸ್ಟೋರೆಂಟ್‍ಗೆ ಬಿರಿಯಾನಿ ಲವರ್ಸ್‍ಗೆ ಕ್ಯೂ ನಿಲ್ಲುತ್ತಾರೆ. ಇಬ್ಬರಿಗೆ ರೂ.800 ವೆಚ್ಚವಾಗುತ್ತದೆ.

PC:YOUTUBE

ಬವಾಚಿ, ಹೈದ್ರಾಬಾದ್

ಬವಾಚಿ, ಹೈದ್ರಾಬಾದ್

ಬಿರಿಯಾನಿ ಎಂದ ತಕ್ಷಣ ನಮಗೆ ಮೊದಲು ಗುರುತಿಗೆ ಬರುವುದೇ ಬವಾಚಿ. ಆದರೆ ಹೈದ್ರಾಬಾದ್‍ನಲ್ಲಿ ಬಿರಿಯಾನಿ ಎಂದರೆ ಅನೇಕ ಮಂದಿಗೆ ಮೊದಲು ಗುರುತಿಗೆ ಬರುವುದೇ ಬವಾಚಿ. ಇಲ್ಲಿನ ಬಿರಿಯಾನಿಗಾಗಿ ಕ್ಯೂನಲ್ಲಿ ನಿಂತಿರುತ್ತಾರೆ. ಇಬ್ಬರಿಗೆ ಬಿರಿಯಾನಿಗೆ ರೂ.750 ನೀಡಬೇಕು.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X