Search
  • Follow NativePlanet
Share
» »ಬೆಂಗಳೂರು ಏರ್‌ಪೋರ್ಟ್ ರನ್‌ವೇಯಲ್ಲಿ ಓಡುವ ಸುವರ್ಣಾವಕಾಶ

ಬೆಂಗಳೂರು ಏರ್‌ಪೋರ್ಟ್ ರನ್‌ವೇಯಲ್ಲಿ ಓಡುವ ಸುವರ್ಣಾವಕಾಶ

ವಿಮಾನ ನಿಲ್ದಾಣದಲ್ಲಿ ರನ್‌ವೇಯನ್ನು ನೋಡುವಾಗ, ವಿಮಾನ ಹಾರಾಟವನ್ನು ನೋಡುವಾಗ ನಾವು ಅಲ್ಲಿ ನಡೆದಾದಡಬೇಕು ಎನ್ನುವ ಆಸೆಯಾಗೋದು ಸಹಜ. ಬರೀ ವಿಮಾನ ಏರುವಾಗಷ್ಟೇ ನಾವು ರನ್‌ವೇಯಲ್ಲಿ ನಿಂತಿರುತ್ತೇವೆ. ಅದನ್ನು ಹೊರತುಪಡಿಸಿ ರನ್‌ವೇಯಲ್ಲಿ ಓಡಾಡುವ ಅವಕಾಶ ಯಾವತ್ತೂ ಸಿಕ್ಕಿಲ್ಲ. ಆದರೆ ಈ ಬಾರಿ ಅಂತಹದ್ದೊಂದು ಅವಕಾಶವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿಕೊಟ್ಟಿದೆ.

ರನ್‌ವೇಯಲ್ಲಿ ಓಟ

ರನ್‌ವೇಯಲ್ಲಿ ಓಟ

PC:Prateek Karandikar

ಸ್ಫೋರ್ಟ್ ವ್ಯಕ್ತಿಗಳಿಗೆ ಹಾಗೂ ಮ್ಯಾರಥಾನ್ ಓಟಗಾರರಿಗೆ ಒಂದು ಸುವರ್ಣ ಅವಕಾಶವನ್ನು ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒದಗಿಸಿಕೊಟ್ಟಿದೆ. ಅದೇನೆಂದರೆ ಏರ್‌ಪೋರ್ಟ್‌ನ ರನ್‌ವೇ ಮೇಲೆ ಓಡಲು ಸ್ಪರ್ಧಾಳುಗಳಿಗೆ ಅವಕಾಶ ನೀಡಿದೆ.

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

10ನೇ ವಾರ್ಷಿಕೋತ್ಸವ

10ನೇ ವಾರ್ಷಿಕೋತ್ಸವ

PC: sarang

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಇಂತಹದ್ದೊಂದು ಮ್ಯಾರಥಾನ್‌ನಂತಹ ಓಟದ ಆಯೋಜನೆ ಮಾಡಿದೆ. ಹಾಗಾಗಿ ಮೇ 8ರಂದು ಮಧ್ಯಾಹ್ನ ಈ ಓಟ ಪ್ರಾರಂಭವಾಗಲಿದೆ. ಈ ವೇಳೆ ಬೆಂಗಳೂರು ಏರ್‌ಪೋರ್ಟ್ ರನ್‌ವೇ ಮುಚ್ಚಲಾಗುತ್ತದೆ.

ಓಟದ ನಿಯಮಗಳು

ಓಟದ ನಿಯಮಗಳು

PC: Rsrikanth05

ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ರನ್‌ವೇ ಮೇಲೆ ಇಂತಹ ಓಟ ನಡೆಯುತ್ತಿದೆ . ವಿಶ್ವದ ಇತರ ಏರ್‌ಪೋರ್ಟ್‌ಗಳಲ್ಲಿ ಇಂತಹ ಕಾರ್ಯಕ್ರಮದ ಆಯೋಜನೆಯಾಗುವುದು ಸಾಮಾನ್ಯ. ಈ ಓಟದಲ್ಲಿ ಭಾಗವಹಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ.

ಎಪ್ರಿಲ್ 30ಕ್ಕೆ ರಿಜಿಸ್ಟ್ರೇಶನ್ ಮುಕ್ತಾಯ

ಎಪ್ರಿಲ್ 30ಕ್ಕೆ ರಿಜಿಸ್ಟ್ರೇಶನ್ ಮುಕ್ತಾಯ

PC: খাঁ শুভেন্দু

ಓಟದಲ್ಲಿ ಪಾಲ್ಗೊಳ್ಳಲು ರಿಜಿಸ್ಟ್ರೇಶನ್ ವ್ಯವಸ್ಥೆ ಇದ್ದು, ಎಪ್ರಿಲ್ 30ಕ್ಕೆ ರಿಜಿಸ್ಟ್ರೇಶನ್ ಮುಗಿದಿದೆ. ಇದರಲ್ಲಿ ಪಾಲ್ಗೊಳ್ಳುವವರು ತಾವು ಈ ಹಿಂದೆ ಯಾವ್ಯಾವ ಓಟದಲ್ಲಿ ಪಾಲ್ಗೊಂಡಿದ್ದೀರಿ ಎನ್ನುವ ವಿವರವನ್ನು ನೀಡಬೇಕಾಗಿದೆ. ಕೇವಲ 100ಮಂದಿ ಸ್ಫರ್ಧಿಗಳಿಗೆ ಮಾತ್ರ ಓಟಕ್ಕೆ ಅವಕಾಶ.

18 ವರ್ಷ ತುಂಬಿರಬೇಕು

18 ವರ್ಷ ತುಂಬಿರಬೇಕು

PC: Kannanokannan

ಸ್ಪರ್ಧಿಗೆ ಹದಿನೆಂಟು ವರ್ಷ ತುಂಬಿರಬೇಕು. ಓಟವು ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಿ 2:15ಕ್ಕೆ ಮುಗಿಯಲಿದೆ.
ಸ್ಪರ್ಧಿಗಳು ಓಟದ ಸಂದರ್ಭ ಏರ್‌ಪೋರ್ಟ್ ನೀಡುವ ವಸ್ತ್ರವನ್ನೇ ಧರಿಸಬೇಕು. ಈ ಸ್ಪರ್ಧೇ ಸಂದರ್ಭ ನಿಮಗೆ ಗಾಯವಾದಲ್ಲಿ ಅಥವಾ ನಿಮ್ಮ ವಸ್ತುಗಳು ಕಳೆದುಹೋದಲ್ಲಿ ಏರ್‌ಪೋರ್ಟ್ ಜವಾಬ್ದಾರಿಯಲ್ಲ.

ಓಟಕ್ಕೆ ಸಿದ್ಧರಾಗಿ

ಓಟಕ್ಕೆ ಸಿದ್ಧರಾಗಿ

PC: Thomassk

ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಬೆಂಗಳೂರು ಏರ್‌ಪೋರ್ಟ್ ಅಥೋರಿಟಿ ನಿರ್ಧಾರವೇ ಅಂತಿಮ.
ನೀವು ಈಗಾಗಲೇ ಈ ಸ್ಪರ್ಧೇಯಲ್ಲಿ ಭಾಗವಹಿಸಲು ರಿಜಿಸ್ಟ್ರೇಶನ್ ಮಾಡಿಸಿದ್ದೀರಿ ಎಂದಾದಲ್ಲಿ ಓಟಕ್ಕೆ ತಯಾರಾಗಿರಿ.

Read more about: india bengaluru travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X