Search
  • Follow NativePlanet
Share
» »ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದರೆ ಚರ್ಮವ್ಯಾದಿ ಗುಣವಾಗುತ್ತದಂತೆ!

ಜನರು ಪವಿತ್ರ ಸ್ನಾನ ಮಾಡಲುಈ ಬಿಸಿ ನೀರಿನ ಬುಗ್ಗೆಗೆ ಬರುತ್ತಾರೆ.

ಕರ್ನಾಟಕದಲ್ಲಿನ ಅನೇಕ ಆಶ್ಚರ್ಯಗಳಲ್ಲಿ ಬಿಸಿ ನೀರಿನ ಬುಗ್ಗೆಯೂ ಒಂದು . ಬಹಳಷ್ಟು ಜನರಿಗೆ ಈ ಬಿಸಿನೀರಿನ ಬುಗ್ಗೆಯ ಬಗ್ಗೆ ತಿಳಿದಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅದುವೇ ಬೆಂದ್ರು ತೀರ್ಥ. ಜನರು ಪವಿತ್ರ ಸ್ನಾನ ಮಾಡಲುಈ ಬಿಸಿ ನೀರಿನ ಬುಗ್ಗೆಗೆ ಬರುತ್ತಾರೆ.

ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ

ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ

PC:BHARATHESHA ALASANDEMAJALU
ಬೆಂದ್ರು ತೀರ್ಥ ಎನ್ನುವುವು ದಕ್ಷಿಣ ಭಾರತದಲ್ಲಿರುವ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಕನ್ನಡದ ಪುತ್ತೂರಿನಿಂದ ೧೫ ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಆಶ್ಚರ್ಯಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಭಾರತದಲ್ಲಿರುವ ಏಕೈಕ ಬಿಸಿ ಬೀರಿನ ಬುಗ್ಗೆ ಎನ್ನುವುದನ್ನು ಭಾರತದ ಪುರಾತತ್ವ ಶಾಸ್ತ್ರದ ಸರ್ವೇ ತಿಳಿಸಿದೆ. ಈ ಬಿಸಿನೀರಿನ ಬುಗ್ಗೆಯ ಉಷ್ಣಾಂಶ 99 - 106 ಡಿಗ್ರಿ ಫಾರನ್ ಹೀಟ್ ಇರುತ್ತದೆ.

ಪ್ರಾಮುಖ್ಯತೆ ಏನು ?

ಪ್ರಾಮುಖ್ಯತೆ ಏನು ?

PC:BHARATHESHA ALASANDEMAJALU

ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ಕುದಿಯುವ ಬಿಸಿ ಸಲ್ಫರ್ ನೀರಿನ ಬುಗ್ಗೆಗಳಂತೆ ಈ ಬೆಂದ್ರು ತೀರ್ಥವು ಉಗುರು ಬೆಚ್ಚಗಿನ ನೀರಿನ ಬುಗ್ಗೆಯನ್ನು ಹೊಂದಿದೆ. ಚರ್ಮ ಸುಟ್ಟುಹೋಗುತ್ತದೆ ಎನ್ನುವ ಭಯವಿಲ್ಲದೆ ಜನರು ಈ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗಿ ಏಳುತ್ತಾರೆ. ಹೆಚ್ಚು ಖನಿಜಗಳನ್ನು ಹೊಂದಿರುವುದರಿಂದ ಅನೇಕ ಚರ್ಮ ಸಂಬಂಧಿ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನೂ ಹೊಂದಿದೆ ಎನ್ನಲಾಗುತ್ತದೆ.

ಜ್ವಾಲಾಮುಖಿ ಇಲ್ಲದ ಪ್ರದೇಶದಲ್ಲಿದೆ

ಜ್ವಾಲಾಮುಖಿ ಇಲ್ಲದ ಪ್ರದೇಶದಲ್ಲಿದೆ

PC:BHARATHESHA ALASANDEMAJALU
ಈ ಬೆಂದ್ರು ತೀರ್ಥದ ಇನ್ನೊಂದು ವಿಶೇಷತೆ ಎಂದರೆ , ಇದು ಜ್ವಾಲಾಮುಖಿ ಪ್ರದೇಶದಲ್ಲಿಲ್ಲ. ಹಾಗಾಗಿ ಬಿಸಿನೀರಿನ ಬುಗ್ಗೆಯನ್ನು ಅಲ್ಲಿ ಪಡೆಯುವುದು ಕಷ್ಟಸಾಧ್ಯ. ಬಿಸಿ ಬಂಡೆಗಳ ಭೂಶಾಖದ ಶಕ್ತಿಯು ಭೂಗತ ಭೂಮಿ ನೀರಿನ ಟೇಬಲ್ ಅನ್ನು ಬಿಸಿಮಾಡುತ್ತದೆ . ಬಿಸಿ ನೀರಿನ ಸಾಂದ್ರತೆಯು ಸಾಮಾನ್ಯ ನೀರಿಗಿಂತ ಕಡಿಮೆಯಾಗಿರುವುದರಿಂದ, ಇದು ನೀರಿನ ಬುಗ್ಗೆಯ ರೂಪದಲ್ಲಿ ಹೊರಬರುತ್ತದೆ ಎನ್ನಲಾಗುತ್ತದೆ.

ಬೆಂದ್ರು ತೀರ್ಥದ ಕಥೆ

ಬೆಂದ್ರು ತೀರ್ಥದ ಕಥೆ

PC:BHARATHESHA ALASANDEMAJALU
ಈ ಬಿಸಿ ನೀರಿನ ಬುಗ್ಗೆ ಇರುವ ಜಾಗವು ಒಂದು ಕಾಲದಲ್ಲಿ ಕಾಡಾಗಿತ್ತು. ಇಲ್ಲಿ ಕಾಡು ಪ್ರಾಣಿಗಳು ಓಡಾಡುತ್ತಿದ್ದವು. ಒಂದು ದಿನ ಕಣ್ವ ಖುಷಿಯ ಶಿಷ್ಯರು ಅಡ್ಡಾಡುತ್ತಾ ಈ ಕಾಡಿಗೆ ಬಂದರು. ಆಗ ಕಾಡುಪ್ರಾಣಿಗಳು, ಜಾನುವಾರುಗಳ ಜೊತೆ ಆರಾಮವಾಗಿ ವಾಸಿಸುವುದನ್ನು ಕಂಡು ಆಶ್ಚರ್ಯಪಟ್ಟರು. ಶಿಷ್ಯರು ಅಲ್ಲಿ ಬಿಸಿನೀರಿನ ಬುಗ್ಗೆ ಇರುವುದನ್ನು ಪತ್ತೆ ಹಚ್ಚಿದರು. ಅಲ್ಲಿ ಹೆಚ್ಚಿನ ಸಂಖ್ಯೆಯ ದನಗಳು ಇದ್ದವು ಹಾಗಾಗಿ ಆ ಪ್ರದೇಶಕ್ಕೆ ಗೋಪಾಲಕ್ಷೇತ್ರ ಎನ್ನುವ ಹೆಸರಿಡುತ್ತಾರೆ. ಅವರು ಆ ಸ್ಥಳದಲ್ಲೇ ನೆಲೆಸಿ ಅಲ್ಲಿ ವಿಷ್ಣುಮೂರ್ತಿಯ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಕ್ರಮೇಣ ಗೋಪಾಲಕ್ಷೇತ್ರ ಹೋಗಿ ಬೆಂದ್ರು ತೀರ್ಥ ಎನ್ನುವ ಹೆಸರು ಬಂತು.

ತೀರ್ಥ ಅಮವಾಸ್ಯೆಯಂದು ಪವಿತ್ರ ಸ್ನಾನ

ತೀರ್ಥ ಅಮವಾಸ್ಯೆಯಂದು ಪವಿತ್ರ ಸ್ನಾನ

ಇಲ್ಲಿನ ಸ್ಥಳೀಯ ಜನರು ಪ್ರತಿವರ್ಷ ತೀರ್ಥ ಅಮವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಈಗ ಬಹಳಷ್ಟು ಬದಲಾವಣೆಗಳಾಗಿವೆ. ಕಾಡುಗಳು ಹೋಗಿ ಅಡಕೆ ಗಿಡಗಳು ಕಾಣಸಿಗುತ್ತವೆ. ಇಲ್ಲಿಗೆ ಎಲ್ಲಾ ದಿನಗಳಲ್ಲು ಬೇಟಿಗೆ ಅವಕಾಶ ನೀಡುತ್ತಾರೆ. ಯಾವುದೇ ಎಂಟ್ರಿ ಶುಲ್ಕ ಇಲ್ಲ. 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X