Search
  • Follow NativePlanet
Share
» »10 ಲಕ್ಷ ವರ್ಷಗಳ ಹಿಂದಿನ ಪ್ರಾಚೀನ ಗುಹೆಗಳು ಇವು!

10 ಲಕ್ಷ ವರ್ಷಗಳ ಹಿಂದಿನ ಪ್ರಾಚೀನ ಗುಹೆಗಳು ಇವು!

ಸಾವಿರ ಅಡಿ ಎತ್ತರದಲ್ಲಿ ಕೆಲವು.... ಸಾವಿರ ಮೀಟರ್ ದೊಡ್ಡದಾದುದು ಕೆಲವು...ಭೂ ಅಂತರ್ ಗರ್ಭದಲ್ಲಿ ಕೆಲವು...ದೇವತೆಗಳ ಹೋಲಿಕೆಯಂತೆ ಕೆಲವು.. ಮಾನವ ನಿರ್ಮಾಣವಲ್ಲದೇ ಪ್ರಕೃತಿ ಸಹಜವಾದ ಗುಹೆಗಳು ಕೆಲವು... ಇನ್ನು ಹಲವಾರು ಬಗೆ ಬಗೆಯ ಪ್ರಾಚೀನವಾದ

ಸಾವಿರ ಅಡಿ ಎತ್ತರದಲ್ಲಿ ಕೆಲವು.... ಸಾವಿರ ಮೀಟರ್ ದೊಡ್ಡದಾದುದು ಕೆಲವು...ಭೂ ಅಂತರ್ ಗರ್ಭದಲ್ಲಿ ಕೆಲವು...ದೇವತೆಗಳ ಹೋಲಿಕೆಯಂತೆ ಕೆಲವು.. ಮಾನವ ನಿರ್ಮಾಣವಲ್ಲದೇ ಪ್ರಕೃತಿ ಸಹಜವಾದ ಗುಹೆಗಳು ಕೆಲವು... ಇನ್ನು ಹಲವಾರು ಬಗೆ ಬಗೆಯ ಪ್ರಾಚೀನವಾದ ಗುಹೆಗಳ ಸೌಂದರ್ಯವನ್ನು ಇಲ್ಲಿ ಕಾಣಬಹುದು.

ಗುಹೆಗಳು ಎಂದರೆ ಎಲ್ಲರಿಗೂ ಕುತೂಹಲ ಮೂಡಿಸುವಂತಹದು ಹಾಗಿದ್ದಲ್ಲಿ 10 ಲಕ್ಷ ಪುರಾತನವಾದ ಗುಹೆಗಳು ಎಂದರೆ ಮತ್ತಷ್ಟು ಕುತೂಹಲ ಕೆರಳಿಸದೇ ಇರದು. ಹಾಗಾದರೆ ಆ ಗುಹೆಗಳು ಯಾವುವು? ಅವುಗಳು ಎಲ್ಲಿವೆ? ಹೇಗೆ ಸಾಗಬೇಕು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಬೆಲೂಂ ಗುಹೆಗಳು

ಬೆಲೂಂ ಗುಹೆಗಳು

ಈ ಬೆಲೂಂ ಗುಹೆಗಳು ಕರ್ನೂಲ್ ಜಿಲ್ಲೆಯಲ್ಲಿನ ಕೊಲಿಮಿಗುಂಡ್ಲ ಮಂಡಲದ ಕೇಂದ್ರಕ್ಕೆ ಸುಮಾರು 4 ಕಿ. ಮೀ ದೂರದಲ್ಲಿದೆ. ಭಾರತದ ಉಪಖಂಡದಲ್ಲಿ ಮೇಘಾಲಯ ಗುಹೆಗಳ ನಂತರ ಇದೇ 2 ನೇಯ ಅತಿ ದೊಡ್ಡದಾದ ಗುಹೆಗಳು ಎಂದು ಭಾವಿಸುತ್ತಾರೆ. ಬೆಲೂಂ ಗುಹೆಗಳು ವಿಶಾಖಪಟ್ನಂ ಜಿಲ್ಲೆಯಲ್ಲಿನ ಬೊರ್ರಾ ಗುಹೆಗಳಿಗಿಂತ ಅತ್ಯಂತ ದೊಡ್ಡದಾದು.

Chittichanu

ವಿಶೇಷತೆ

ವಿಶೇಷತೆ

ದೇಶ, ವಿದೇಶಗಳಿಂದ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದೊಂದು ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆಯುತ್ತಿದೆ. ಇಲ್ಲಿ ಮುಖ್ಯವಾಗಿ ದೊಡ್ಡ ದೊಡ್ಡ ಸುರಂಗ ಮಾರ್ಗಗಳು, ಶಿಲಾಸ್ಪಟಿಕಗಳು, ವಿವಿಧ ಶಿಲಾಕೃತಿಗಳು, ಹೆಜ್ಜೆ ಹೆಜ್ಜೆಗೂ ವಿಸ್ಮಯವಾಗಿ ಕಾಣುವ ಅದ್ಭುತಗಳನ್ನು ಕಾಣಬಹುದು. ಬೆಲೂಂ ಗುಹೆಗಳು 10 ಲಕ್ಷ ವರ್ಷಗಳ ಹಿಂದಿನ ಪ್ರಾಚೀನವಾದುದು ಎಂದು ನಿಪುಣರ ಅಭಿಪ್ರಾಯಪಟ್ಟಿದ್ದಾರೆ.


Chittichanu

ಕ್ರಿ.ಪೂ. 4500 ವರ್ಷಗಳು

ಕ್ರಿ.ಪೂ. 4500 ವರ್ಷಗಳು

ಕ್ರಿ.ಪೂ 4500 ವರ್ಷಗಳ ಪ್ರದೇಶದಲ್ಲಿ ಅಲ್ಲಿ ಮಾನವರು ನಿವಾಸಿಸುತ್ತಿದ್ದರು ಎಂಬುದಕ್ಕೆ ಆಧಾರಗಳಿವೆ. 1884 ರಲ್ಲಿ ಮೊದಲಬಾರಿಗೆ ರಾಬಟ್ ಬ್ರೂಸ್ ಎಂಬ ವಿದೇಶಿಗನು ಬೆಲೂಂ ಗುಹೆಗಳ ಬಗ್ಗೆ ಪ್ರಸ್ತಾಪಿಸಿದನು. ಇಲ್ಲಿ ಪ್ರಮುಖವಾಗಿ ಮಣ್ಣಿನ ಪಾತ್ರೆಗಳನ್ನು ಕಾಣಬಹುದಾಗಿದೆ. 1982 ರಲ್ಲಿ ಡೆನಿಯಲ್ ಜಬೊರ್ ನಾಯಕತ್ವದಲ್ಲಿ ಗುಹೆಗಳಿಗೆ ಸಂಬಂಧಿಸಿದ ಜರ್ಮನ್ ನಿಪುಣರ ತಂಡವು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


Pravinjha

ನಿಮಗೆ ಗೊತ್ತ?

ನಿಮಗೆ ಗೊತ್ತ?

ಈ ಗುಹೆಗಳು ಭೂಗರ್ಭಗಳಲ್ಲಿ 10 ಕಿ.ಮೀ ವಿಸ್ತಾರಗೊಂಡಿದೆ. 2002 ಫೆಬ್ರವರಿಯಲ್ಲಿ ಬೆಲೂಂ ಗುಹೆಗಳನ್ನು ಪ್ರವೇಶಕ್ಕೆ ಅನುಮತಿಯನ್ನು ನೀಡಲಾಯಿತು. ಪ್ರಸ್ತುತ ಹೇಗೆ ಇದೆ? ಆಂಧ್ರ ಪ್ರದೇಶ ಪ್ರವಾಸ ಅಭಿವೃದ್ಧಿ ಸಂಸ್ಥೆಯು ಈ ಗುಹೆಗಳನ್ನು ಹಾಗು ಸುತ್ತ-ಮುತ್ತ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.

Mahesh Telkar

ರಾಷ್ಟ್ರ ಪ್ರವಾಸಿ ಅಭಿವೃದ್ಧಿ ಸಂಸ್ಥೆ

ರಾಷ್ಟ್ರ ಪ್ರವಾಸಿ ಅಭಿವೃದ್ಧಿ ಸಂಸ್ಥೆ

ರಾಷ್ಟ್ರ ಪ್ರವಾಸಿ ಅಭಿವೃದ್ಧಿ ಸಂಸ್ಥೆಯ ಅಧೀನದಲ್ಲಿ ಬಂದ ಈ ಗುಹೆಗಳು ಪ್ರವಾಸಿಗರಿಗಾಗಿ 1.5 ಕಿ.ಮೀ ದೂರದವೆಗೆ ಸಿಮೆಂಟ್, ಸ್ಲಾಬ್ ಹಾಗು ಕಲ್ಲುಗಳಿಂದ ನಡೆಯುವುದಕ್ಕೆ ಅನುಕೂಲಕ್ಕಾಗಿ ನಿರ್ಮಾಣ ಮಾಡಿದ್ದಾರೆ. ಈ ಅದ್ಭುತವಾದ ಗುಹೆಗಳಿಗೆ ಮತ್ತಷ್ಟು ಮೆರುಗು ತರುವ ನಿಟ್ಟಿನಲ್ಲಿ ವಿದ್ಯುತ್ ದೀಪವನ್ನು ಕೂಡ ಆಳವಡಿಸಿದ್ದಾರೆ.

Praveen

ಗುಹೆಯ ಒಳಭಾಗದಲ್ಲಿ

ಗುಹೆಯ ಒಳಭಾಗದಲ್ಲಿ

ಮೆಟ್ಟಿಲು ಬಾವಿಯ ಮಾದರಿಯಲ್ಲಿ ಇರುವ ಗುಹೆಯ ಪ್ರವೇಶ ದ್ವಾರವು ಪೂರ್ತಿಯಾಗಿ ರೂಪರೇಖೆಗಳನ್ನು ಮಾರ್ಪಾಟು ಮಾಡಿದ್ದಾರೆ. ಭೂಮಿಯಿಂದ ಸುಮಾರು 20 ಮೀಟರ್ ಅಡಿ ಇರುವ ಗುಹೆಗಳಲ್ಲಿ ತೆರಳಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಹೆಗಳ ಒಳಭಾಗದಲ್ಲಿ ಪ್ರವಾಸಿಗರು ಆಕ್ಸಿಜನ್‍ಗಾಗಿ ತೊಂದರೆಗೆ ಒಳಗಾಗಬಾರದು ಎಂದು ಆಕ್ಸಿಜನ್ ಬ್ಲೊಯೆರ್‍ಗಳನ್ನು ಏರ್ಪಾಟು ಮಾಡಿದ್ದಾರೆ.

Praveen

ಪ್ರವಾಸಿಗರು

ಪ್ರವಾಸಿಗರು

ಇಲ್ಲಿ ಹಲವಾರು ಆಕರ್ಷಣೆಗಳನ್ನು ಏರ್ಪಾಟು ಮಾಡುವುದರಿಂದ ಗುಹೆಗಳು ಮತ್ತಷ್ಟು ಅದ್ಭುತವಾಗಿ ಕಾಣುತ್ತದೆ. ಈ ಗುಹೆಗಳಿಗೆ ಮೆಟ್ಟಿಲು ಬಾವಿಗಳಂತೆ ಮೂರು ದ್ವಾರಗಳು ಇವೆ. ಮಧ್ಯದಲ್ಲಿರುವ ದಾರಿಯು ಗುಹೆಗಳಿಗೆ ಪ್ರವೇಶದ್ವಾರವಾಗಿ ಉಪಯೋಗಿಸಲಾಗುತ್ತಿದೆ ಎಂತೆ.

Mahesh Telkar

ಬಿಲಗಳ ಗುಹೆಗಳು

ಬಿಲಗಳ ಗುಹೆಗಳು

ಈ ಗುಹೆಗಳ ತೆರಳುವ ದಾರಿಯು ಬಿಲಗಳ ಹಾಗೆ ಅಂದರೆ ರಂಧ್ರಗಳ ಹಾಗೆ ಇರುತ್ತದೆ ಎಂತೆ. ಅದ್ದರಿಂದ ಅವುಗಳನ್ನು ಬಿಲಗಳ ಗುಹೆಗಳು ಎಂದು ಕರೆಯಲಾಗುತ್ತಿದೆ. ಅದೇ ಹೆಸರು ಕಾಲಕ್ರಮೇಣದಲ್ಲಿ ಬೆಲ್ಲಂ ಗುಹೆಗಳಾಗಿ ಮಾರ್ಪಾಟಾಯಿತು ಎಂದು ಹೇಳಲಾಗುತ್ತಿದೆ. ಬೆಲಾಂ ಗುಹೆಗಳನ್ನು ಕ್ರಿ.ಪೂ 4500 ವರ್ಷಗಳ ಅವಶೇಷಗಳನ್ನು ಕಂಡರೆ ಅವುಗಳ ಪುರಾತನತ್ವ ಅರ್ಥವಾಗುತ್ತದೆ.


Mahesh Telkar

ಸ್ಪಟಿಕಲೆ

ಸ್ಪಟಿಕಲೆ

ಗುಹೆಗಳ ಗೋಪುರದಿಂದ ಹಿಡಿದು ಕೆಳಗೆ ನೇತಾಡುವ ಸ್ಪಟಿಕ ಶಿಲಾಕೃತಿಗಳು ಮನೋಹರವಾಗಿವೆ. ಒಂದೊಂದು ಗುಹೆಗಳು ಒಂದೊಂದು ರೀತಿಯಲ್ಲಿರುವುದನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ. ಅವುಗಳ ಆಕಾರವನ್ನು ಕಂಡು ಕೋಟಿಲಿಂಗಗಳು, ಮಂಟಪಗಳು, ಸಿಂಹದ್ವಾರಗಳು, ಪಾತಾಳಗಂಗ ಎಂದು ಕೂಡ ಕರೆಯುತ್ತಾರೆ.


Chittichanu

ಶಿವಲಿಂಗ

ಶಿವಲಿಂಗ

ಸಹಜಸಿದ್ಧವಾಗಿ ಏರ್ಪಾಟಾದ ಶಿವಲಿಂಗವನ್ನು ಪ್ರವಾಸಿಗರು ಭಕ್ತಿಭಾವದಿಂದ ಆಕರ್ಷಿಸುತ್ತದೆ. ಪ್ರವೇಶ ಶುಲ್ಕವಾಗಿ ಬೆಲೂಂ ಗುಹೆಗೆ ದೊಡ್ಡವರಿಗೆ 50 ರೂಪಾಯಿಗಳು ಹಾಗು ವಿದೇಶಿಯರಿಗೆ 300 ರೂಗಳನ್ನು ತೆಗೆದುಕೊಳ್ಳಲಾಗುತ್ತದೆ.

Chittichanu

ಬೆಲೂಂ ಗುಹೆಗಳ ಪ್ರಧಾನವಾದ ದ್ವಾರ

ಬೆಲೂಂ ಗುಹೆಗಳ ಪ್ರಧಾನವಾದ ದ್ವಾರ

ಬೆಲೂಂ ಗುಹೆಗಳ ಪ್ರಧಾನವಾದ ದ್ವಾರ


Chittichanu

ಎ.ಪಿ.ಟಿ.ಡಿ.ಸಿ ಯವರ ಪುನ್ನಮಿ ಹೋಟೆಲ್

ಎ.ಪಿ.ಟಿ.ಡಿ.ಸಿ ಯವರ ಪುನ್ನಮಿ ಹೋಟೆಲ್

ಎ.ಪಿ.ಟಿ.ಡಿ.ಸಿ ಯವರ ಪುನ್ನಮಿ ಹೋಟೆಲ್

Chittichanu

ಬೆಲೂಂ ಗುಹೆಗಳ ಪ್ರವೇಶ ದ್ವಾರ

ಬೆಲೂಂ ಗುಹೆಗಳ ಪ್ರವೇಶ ದ್ವಾರ

ಬೆಲೂಂ ಗುಹೆಗಳ ಪ್ರವೇಶ ದ್ವಾರ

Pravinjha

ಬೆಲೂಂ ಗುಹೆಗಳ ಒಳಗಿನ ಭಾಗ

ಬೆಲೂಂ ಗುಹೆಗಳ ಒಳಗಿನ ಭಾಗ

ಬೆಲೂಂ ಗುಹೆಗಳ ಒಳಗಿನ ಭಾಗ

Mahesh Telkar

ಬೆಲೂಂ ಗುಹೆಗಳ ಒಳಗಿನ ಮಾರ್ಗ

ಬೆಲೂಂ ಗುಹೆಗಳ ಒಳಗಿನ ಮಾರ್ಗ

ಬೆಲೂಂ ಗುಹೆಗಳ ಒಳಗಿನ ಮಾರ್ಗ

Praveen

ಶಿಲಾಜಾಲದಿಂದ ಏರ್ಪಾಟಾದ ಒಳ ಶಿಖರ

ಶಿಲಾಜಾಲದಿಂದ ಏರ್ಪಾಟಾದ ಒಳ ಶಿಖರ

ಶಿಲಾಜಾಲದಿಂದ ಏರ್ಪಾಟಾದ ಒಳ ಶಿಖರ

Praveen

ರಸಾಯನ ಹಾಗು ಪಾದರಸಗಳಿಂದ ಏರ್ಪಟ್ಟ ಒಳ ಶಿಖರ

ರಸಾಯನ ಹಾಗು ಪಾದರಸಗಳಿಂದ ಏರ್ಪಟ್ಟ ಒಳ ಶಿಖರ

ರಸಾಯನ ಹಾಗು ಪಾದರಸಗಳಿಂದ ಏರ್ಪಟ್ಟ ಒಳ ಶಿಖರ

Mahesh Telkar

ಮಂಟಪಕ್ಕೆ ತೆರಳುವ ದಾರಿ

ಮಂಟಪಕ್ಕೆ ತೆರಳುವ ದಾರಿ

ಮಂಟಪಕ್ಕೆ ತೆರಳುವ ದಾರಿ

Mahesh Telkar

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಾಯು ಮಾರ್ಗವಾಗಿ
ಬೆಲೂಂ ಗುಹೆಗೆ ತೆರಳಬೇಕಾದರೆ ಹೈದ್ರಾಬಾದ್‍ನಲ್ಲಿನರುವ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್(ಅಂತರ್‍ಜಾತಿಯ) ವಿಮಾನ ನಿಲ್ದಾಣವಿದೆ. ಅಲ್ಲಿ ಇಳಿದು, ಅಲ್ಲಿಂದ ಕರ್ನೂಲ್, ಬನಗಾನಪಲ್ಲಿಯಿಂದ ರಸ್ತೆ ಸಂಪರ್ಕದಿಂದ ಸುಲಭವಾಗಿ ಸೇರಿಕೊಳ್ಳಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲು ಮಾರ್ಗ
ತಾಡಿಪತ್ರಿ ರೈಲ್ವೆ ನಿಲ್ದಾಣದಿಂದ ಅಲ್ಲಿಂದ ರಸ್ತೆ ಮಾರ್ಗವಾಗಿ ಸುಲಭವಾಗಿ ಈ ಬೆಲೂಂ ಗುಹೆಗಳಿಗೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X