Search
  • Follow NativePlanet
Share
» »ಬೆಳಗಾವಿಯ ಭವ್ಯ ಕೋಟೆ

ಬೆಳಗಾವಿಯ ಭವ್ಯ ಕೋಟೆ

By Souparnika

ಬೆಳಗಾವಿ ಉತ್ತರ ಕರ್ನಾಟಕದಲ್ಲಿರುವ ನಗರ ಜಿಲ್ಲೆ. ಬೆಂಗಳೂರಿನಿಂದ 501 ಕಿ,ಮೀಯಷ್ಟು ಅಂತರದಲ್ಲಿದೆ. ಬೆಳಗಾಂ ಸಂಸ್ಕøತಿಯಲ್ಲಿ ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಬೀಡು. ಈ ಬೆಳಗಾವಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ, ಅವುಗಳಲ್ಲಿ ಮುಖ್ಯವಾದುವು ಎಂದರೆ ಬೆಳಗಾಂ ಕೋಟೆ, ವೀರ ಸೌಧ, ಕಮಲ ಬಸದಿ, ಸ್ವಾಮಿ ವಿವೇಕಾನಂದ ಆಶ್ರಮ, ಕಪಿಲೇಶ್ವರ ದೇವಾಲಯ ಹೀಗೆ ಇನ್ನೂ ಹತ್ತರೂ ದೇವಾಲಯಗಳನ್ನು ಇರುವ ಪ್ರವಾಸಿತಾಣವಾಗಿದೆ. ಪ್ರಸ್ತುತ ಲೇಖನದಲ್ಲಿ ಬೆಳಗಾಂ ಕೋಟೆಯ ಬಗ್ಗೆ ತಿಳಿಯಿರಿ ಒಮ್ಮೆ ಭೇಟಿ ಕೊಡಿ.

1.ಬೆಳಗಾವಿ ಕೋಟೆ

1.ಬೆಳಗಾವಿ ಕೋಟೆ

ಈ ಬೆಳಗಾವಿ ಕೋಟೆಯನ್ನು ಬೆಳಗಾಂ ಕೋಟೆಯೆಂದು ಸಹ ಕರೆಯುತ್ತಾರೆ. ಸಹ್ಯಾದ್ರಿ ಪರ್ವತದ ಮೇಲೆ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ರಟ್ಟಾ ಸಾಮ್ರಾಜ್ಯದ ಅಧಿಕಾರಿ ಬೀಚಿರಾಜ 1204 ರಲ್ಲಿ ಈ ಕೋಟೆಯನ್ನು ಕಟ್ಟಿಸಿದ ಎನ್ನಲಾಗಿದೆ.
PC: Manjunath nikt

2.ಕೋಟೆಯ ವಶಪಡಿಕೆ

2.ಕೋಟೆಯ ವಶಪಡಿಕೆ

ಈ ಕೋಟೆಯನ್ನು ರಟ್ಟಾ ಸಾಮ್ರಾಜ್ಯ ನಿರ್ಮಾಣ ಮಾಡಿದ್ದರು ಕೂಡ ಭಾರತದಲ್ಲಿನ ರಾಜವಂಶದಿಂದ ಹಿಡಿದು ಬ್ರಿಟೀಷರವರೆಗೂ ಈ ಕೋಟೆಯನ್ನು ವಶಪಡಿಸಿಕೊಂಡಿರುವುದನ್ನು ಕಾಣಬಹುದು. ಹಲವು ರಾಜವಂಶಗಳು ಈ ಕೋಟೆಯಲ್ಲಿ ಆಳಿದ್ದಾರೆ. ಮುಖ್ಯವಾಗಿ ರಾಷ್ಟ್ರ ಕೂಟರು, ವಿಜಯ ನಗರ ಸಾಮ್ರಾಜ್ಯ, ಬಿಜಾಪುರ್ ಸುಲ್ತಾನ್, ಮರಾಠರು ಇನ್ನೂ ಹಲವಾರು.
PC: Manjunath Doddamani Gajendragad

3.ಕೋಟೆಯ ಕಟ್ಟಡ

3.ಕೋಟೆಯ ಕಟ್ಟಡ

ಬೆಳಗಾಂ ಕೋಟೆಯು ಅತ್ಯಂತ ಪುರಾತನವಾದ ಕೋಟೆಯಾಗಿದೆ. ಇದನ್ನು ಬೀಚಿರಾಜ ನಿರ್ಮಾಣ ಮಾಡಿರುವುದಾಗಿದೆ. ಈ ಕೋಟೆಯು ಭವ್ಯವಾಗಿದ್ದು ಅಂಡಾಕಾರವಾಗಿದೆ. ಕೆಂಪು ಕಲ್ಲಿನಿಂದ ಈ ಕೋಟೆಯ ನಿರ್ಮಾಣ ಮಾಡಲಾಗಿದ್ದು, ಕಂದಕದ ಕೆಳಭಾಗದಿಂದ ಸುಮಾರು 32 ಅಡಿ ಎತ್ತರದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ.
PC:Burgess, James

4. ಕೋಟೆಯ ಒಳಭಾಗದಲ್ಲಿ

4. ಕೋಟೆಯ ಒಳಭಾಗದಲ್ಲಿ

ಬೆಳಗಾಂ ಕೋಟೆಯ ಒಳಭಾಗದ ಆಯಾಮಗಳು 910 ಮೀಟರ್‍ನಷ್ಟು ಉದ್ದವಿದ್ದು, 800 ಮೀಟರ್ ಅಗಲವಿದೆ. ಕೋಟೆಯ ಬೃಹತ್ ದ್ವಾರದಲ್ಲಿ ಎರಡು ದೊಡ್ಡ ಕೊತ್ತಲಗಳಿಂದ ಸುತ್ತುವರೆಯಲ್ಪಟ್ಟಿದೆ. ಕೋಟೆಯ ಬಾಹ್ಯ ದ್ವಾರಕ್ಕೆ ಪ್ರಾಣಿಗಳ, ಪಕ್ಷಿಗಳ ಹಲವಾರು ಚಿತ್ರಗಳನ್ನು ಕೆತ್ತಲಾಗಿದೆ.
PC:Manjunath Doddamani Gajendragad

5.ಭಧ್ರತೆ

5.ಭಧ್ರತೆ

ಈ ಕೋಟೆಯನ್ನು ಶತ್ರುಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಅತ್ಯಂತ ದೊಡ್ಡ ದೊಡ್ಡದಾದ ಕಬ್ಬಿಣ ದ್ವಾರಗಳಿಂದ ಭದ್ರವಾಗಿ ನಿರ್ಮಿಸಲಾಗಿದೆ. ಕೋಟೆಯ ಪ್ರವೇಶ ದ್ವಾರವನ್ನು 1631ರಲ್ಲಿ ನಿರ್ಮಾಣಮಾಡಲಾಯಿತು. ಕಾಮಾನುಗಳನ್ನು ಒಳಗೊಂಡ ಈ ಕೋಟೆ ಅತ್ಯಂತ ಸುಂದರವಾಗಿ ಕಾಣುತ್ತದೆ.
PC:Shreyas m balappanavar

6.ಕೋಟೆಯ ವಾಸ್ತು ಶಿಲ್ಪ

6.ಕೋಟೆಯ ವಾಸ್ತು ಶಿಲ್ಪ

ಈ ಐತಿಹಾಸಿಕ ಕೋಟೆಯು ಹಿಂದೂ, ಜೈನ್, ಇಸ್ಲಾಮಿಕ್ ವಾಸುಶಿಲ್ಪದಿಂದ ಕೂಡಿದೆ. ಕೋಟೆಯನ್ನು ದೇವಾಲಯ, ಮುಸ್ಲಿಮರ ಮಸೀದಿ ಮತ್ತು ಸಂಸ್ಕøತಿಯ ಪ್ರಭಾವದಿಂದ ನಿರ್ಮಿಸಲಾಗಿದೆ ಎನ್ನಲಾಗಿದೆ. ಕೋಟೆಯನ್ನು ಕಲ್ಲು ಹಾಗೂ ಮಣ್ಣಿನಿಂದ ಕಟ್ಟಲಾಗಿದೆ.
PC:Mallikarjunasj

7ಕೋಟೆಯ ಒಳಭಾಗದಲ್ಲಿರುವ ದೇವಾಲಯಗಳು

7ಕೋಟೆಯ ಒಳಭಾಗದಲ್ಲಿರುವ ದೇವಾಲಯಗಳು

ಬೆಳಗಾಂ ಕೋಟೆಯು ಸರ್ವಧರ್ಮ ಸಮಾಗಮ ಎಂದೇ ಹೇಳಬಹುದು. ಹಿಂದೂ, ಜೈನ್, ಇಸ್ಲಾಮಿಕ್ ಶೈಲಿಯಲ್ಲಿ ವಾಸ್ತು ಶಿಲ್ಪವನ್ನು ನಿರ್ಮಿಸಿದ್ದೆ ಅಲ್ಲದೆ ಕೋಟೆಯ ಒಳಭಾಗದಲ್ಲಿಯೂ ಕೂಡ ಜೈನ ಹಾಗೂ ಹಿಂದೂ ದೇವಾಲಯವನ್ನು ಕಾಣಬಹುದಾಗಿದೆ.
PC:BRAIAN

8.ಜೈನ ದೇವಾಲಯ

8.ಜೈನ ದೇವಾಲಯ

ಈ ಕೋಟೆಯಲ್ಲಿ 2 ಜೈನ ದೇವಾಲಯವನ್ನು ಕಾಣಬಹುದಾಗಿದೆ. ಒಂದು ಕಮಲ ಬಸದಿ ಹಾಗೂ ಚಿಕ್ಕ ಬಸದಿ.
PC:Manjunath Doddamani Gajendragad

9.ಕಮಲ ಬಸದಿ

9.ಕಮಲ ಬಸದಿ

ಈ ಕಮಲ ಬಸದಿಯಲ್ಲಿ ನೇಮಿನಾಥನ ಮೂರ್ತಿಯನ್ನು ಕಾಣಬಹುದು. ಈ ಮೂರ್ತಿಯು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಿತವಾಗಿದೆ. ವಿಶೇಷವೆನೆಂದರೆ ಈ ನೇಮಿನಾಥನ ಮೂರ್ತಿಯು ಅರಣ್ಯದಲ್ಲಿ ದೊರೆತಿರುವುದಾಗಿದೆ. ಈ ಮೂರ್ತಿ ಅತ್ಯಂತ ಪ್ರಸಿದ್ದವಾದ ಕೆತ್ತನೆಯಿಂದ ಕಂಗೊಳಿಸುತ್ತಿದೆ. ಕಮಲ ಬಸದಿ ದೇವಾಲಯವನ್ನು ಚಾಲುಕ್ಯರ ಶೈಲಿಯಲ್ಲಿ 1204ರಲ್ಲಿ ಸ್ಥಾಪನೆ ಮಾಡಲಾಯಿತು.
PC:SMITHA MAIR JAIN

10ಚಿಕ್ಕ ಬಸದಿ

10ಚಿಕ್ಕ ಬಸದಿ

ಚಿಕ್ಕ ಬಸದಿ ಕೂಡ ಜೈನ ದೇವಾಲಯವಾಗಿದೆ. ಈ ದೇವಾಲಯವನ್ನು ಕೂಡ ಚಾಲುಕ್ಯರ ಶೈಲಿಯಲ್ಲಿಯೇ ನಿರ್ಮಿಸಲಾಗಿದೆ.
PC:Manjunath Doddamani Gajendragad

11ಜೈನ ದೇವಾಲಯದ ಸೌಂರ್ದಯ

11ಜೈನ ದೇವಾಲಯದ ಸೌಂರ್ದಯ

ಜೈನ ದೇವಾಲಯವು ಸುಂದರವಾದ ಮುಖಮಂಟಪವನ್ನು ಹೊಂದಿದೆ. ಈ ಮುಖಮಂಟಪವು ಜೈನ ದೇವಾಲಯದ ಆಕರ್ಷಣೆಯಾಗಿದೆ. ಚಾವಣಿಯ ಮೇಲ್ಭಾದಲ್ಲಿ ಸೂಕ್ಷ್ಮವಾಗಿ ಕೆತ್ತನೆ ಮಾಡಿರುವ ಕಮಲದ ಕೈಚಳಕವಿದೆ. ಇಲ್ಲಿನ ಸ್ತಂಭಗಳು ಮನಮೋಹಕವಾದ ಚೆಲುವನ್ನು ಹೊಂದಿವೆ.
PC:KALLASH GIRI

12.ಹಿಂದೂ ದೇವಾಲಯ

12.ಹಿಂದೂ ದೇವಾಲಯ

ಕೋಟೆಯ ಒಳಭಾಗದಲ್ಲಿ 2 ಹಿಂದೂ ದೇವಾಲಯಗಳನ್ನು ಕಾಣಬಹುದಾಗಿದೆ. ಒಂದು ಆಲಯದಲ್ಲಿ ದುರ್ಗ ಮಾತಾ ನೆಲೆಸಿದ್ದರೆ, ಇನ್ನೊಂದು ದೇವಾಲಯದಲ್ಲಿ ವಿಘ್ನವಿನಾಶಕ ಗಣಪತಿಯು ನೆಲೆಸಿದ್ದಾನೆ. ದುರ್ಗಿಯು ತನ್ನ ಹಲವಾರು ಕೈಗಳನ್ನು ಹೊಂದಿರುವ ರೌದ್ರ ರೂಪ ತಾಳಿರುವ ಮೂರ್ತಿ ಇಲ್ಲಿದೆ.
PC:Manjunath Doddamani Gajendragad

13.ಮಸೀದಿ

13.ಮಸೀದಿ

ಕೋಟೆಯ ಒಳಭಾಗದಲ್ಲಿ 2 ಮಸೀದಿಗಳನ್ನು ಕಾಣಬಹುದಾಗಿದೆ. ಅವುಗಳ ಹೆಸರು ಒಂದು ಸಾಫ ಮಸೀದಿ ಮತ್ತೊಂದು ಜಮೀಯಾ ಮಸೀದಿ. ಸಫ ಮಸೀದಿಯನ್ನು 1519 ರಲ್ಲಿ ಅಜಾದ್ ಖಾನ್ ಲಾರಿನಿಂದ ನಿರ್ಮಿಸಲಾಗಿದೆ. ಇಲ್ಲಿನ ಸ್ತಂಭಗಳನ್ನು ನಗರಿ ಹಾಗೂ ಪರ್ಶಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
PC:BRADY MONTZ

14.ಮಹಾತ್ಮಗಾಂಧಿ

14.ಮಹಾತ್ಮಗಾಂಧಿ

ಬ್ರಿಟೀಷರು ಮಹಾತ್ಮಗಾಂಧಿಯನ್ನು ಈ ಕೋಟೆಯಲ್ಲಿ ಸೆರೆವಾಸದಲ್ಲಿ ಇಟ್ಟಿದ್ದರು ಎಂದು ಇತಿಹಾಸ ತಿಳಿಸುತ್ತದೆ.
PC: Clara Jordan

15.ಪ್ರವೇಶ ಸಮಯ

15.ಪ್ರವೇಶ ಸಮಯ

ಪ್ರಸಿದ್ದವಾದ ಬೆಳಗಾಂ ಕೋಟೆಗೆ ಭೇಟಿ ನೀಡಲು ಪ್ರವೇಶ ಸಮಯ ಬೆಳಗ್ಗೆ 8 ರಿಂದ ಸಂಜೆ 6:30ರವರೆಗೆ.
PC:SanaShaikh88

16.ಸಮೀಪದಲ್ಲಿರುವ ತಾಣಗಳು

16.ಸಮೀಪದಲ್ಲಿರುವ ತಾಣಗಳು

ವೀರ ಸೌಧ, ಕಮಲ ಬಸದಿ, ಸ್ವಾಮಿ ವಿವೇಕಾನಂದ ಆಶ್ರಮ, ಕಪಿಲೇಶ್ವರ ದೇವಾಲಯ ಬೆಳಗಾವಿಯಲ್ಲಿ ನೋಡಬೇಕಾದ ಪ್ರಸಿದ್ದವಾದ ಸ್ಥಳಗಳು.
PC:Anilsawant

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X