Search
  • Follow NativePlanet
Share
» »ಇದು ಭಾರತದಲ್ಲಿಯೇ ಅತಿ ದೊಡ್ಡ ಮಾನವ ನಿರ್ಮಿತ ಸರೋವರ!!

ಇದು ಭಾರತದಲ್ಲಿಯೇ ಅತಿ ದೊಡ್ಡ ಮಾನವ ನಿರ್ಮಿತ ಸರೋವರ!!

ಭಾರತ ದೇಶದಲ್ಲಿಯೇ ಅತಿ ದೊಡ್ಡ ಮಾನವನಿಂದ ನಿರ್ಮಿತವಾದ ಸರೋವರದಲ್ಲಿ ಸ್ನಾನ ಮಾಡಬೇಕು ಎಂದಿದೆಯೇ? ಇಷ್ಟೇ ಅಲ್ಲ ಇಲ್ಲಿನ ಅದ್ಭುತವಾದ ಶಿಖರಗಳ ಮೇಲೆ ಟ್ರೆಕ್ಕಿಂಗ್ ಕೂಡ ಮಾಡಬಹುದು. ಇಲ್ಲಿ ಸುಂದರವಾದ ಜೈನ ದೇವಾಲಯ ಹಾಗು ಅದರಲ್ಲಿನ ತೀರ್ಥಂಕರರ ವಿಗ

ಭಾರತ ದೇಶದಲ್ಲಿಯೇ ಅತಿ ದೊಡ್ಡ ಮಾನವನಿಂದ ನಿರ್ಮಿತವಾದ ಸರೋವರದಲ್ಲಿ ಸ್ನಾನ ಮಾಡಬೇಕು ಎಂದಿದೆಯೇ? ಇಷ್ಟೇ ಅಲ್ಲ ಇಲ್ಲಿನ ಅದ್ಭುತವಾದ ಶಿಖರಗಳ ಮೇಲೆ ಟ್ರೆಕ್ಕಿಂಗ್ ಕೂಡ ಮಾಡಬಹುದು. ಇಲ್ಲಿ ಸುಂದರವಾದ ಜೈನ ದೇವಾಲಯ ಹಾಗು ಅದರಲ್ಲಿನ ತೀರ್ಥಂಕರರ ವಿಗ್ರಹಗಳು ಮತ್ತಷ್ಟು ಆನಂದದಾಯಕವನ್ನು ಉಂಟು ಮಾಡುತ್ತವೆ. ಮೌಂಟ್ ಅಬು ವೈಲ್ಡ್ ಲೈಫ್(ಅಭಯಾರಣ್ಯ)ದಲ್ಲಿ ಹಲವಾರು ಪ್ರಾಣಿಯ ಪ್ರಪಂಚವನ್ನು ಕೂಡ ಅಸ್ವಾಧಿಸಬಹುದು.

ಮೌಂಟ್ ಅಬೂ ರಾಜಸ್ಥಾನ ಜಿಲ್ಲೆಯ ಸಿರೋಹಿ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕೆ ಸುಮಾರು 1220 ಮೀ ಎತ್ತರದಲ್ಲಿನ ಕರಾವಳಿ ಪರ್ವತ ಶ್ರೇಣಿಯಲ್ಲಿದೆ. ಈ ಹಿಲ್ ಸ್ಟೇಷನ್ ಅಥವಾ ಗಿರಿಧಾಮಗಳು ರಾಜಸ್ಥಾನದಲ್ಲಿನ ಒಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.

ನಕ್ಕಿ ಸರೋವರ

ನಕ್ಕಿ ಸರೋವರ

ಮೌಂಟ್ ಅಬೂದಲ್ಲಿ ಈ ನಕ್ಕಿ ಸರೋವರ ಮುಖ್ಯವಾದ ಆಕರ್ಷಣೆಯಾಗಿದೆ. ಇದು ಸಮುದ್ರ ಮಟ್ಟಕ್ಕೆ ಸುಮಾರು 1200 ಮೀ ಎತ್ತರದಲ್ಲಿ ಈ ಸರೋವರವಿದೆ. ದೇಶದಲ್ಲಿಯೇ ಇದು ಒಂದು ದೊಡ್ಡ ಮಾನವ ನಿರ್ಮಿತವಾದ ಸರೋವರವಾಗಿದೆ. ಈ ಸರೋವರದ ಹಿಂದೆ ಒಂದು ಅದ್ಭುತವಾದ ಪರ್ವತ ಶ್ರೇಣಿಗಳಿವೆ. ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಗಾಂಧಿ ಘಾಟ್. ಇದನ್ನು ಮಹಾತ್ಮ ಗಾಂಧಿಯವರ ನೆನಪಿಗಾಗಿ ನಿರ್ಮಾಣ ಮಾಡಿದ್ದಾರೆ. ಗಾಂಧಿಯ ಬೂದಿಯನ್ನು ಇಲ್ಲಿ ಲೀನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


Koshy Koshy

ಸೂರ್ಯಸ್ತಮ ಪ್ರದೇಶ

ಸೂರ್ಯಸ್ತಮ ಪ್ರದೇಶ

ಈ ಪ್ರದೇಶವು ಹೆಸರಿಗೆ ತಕ್ಕಂತೆ ಸಾಯಂಕಾಲದಲ್ಲಿ ಅದ್ಭುತವಾದ ಅನುಭವವನ್ನು ಪಡೆಯಬಹುದಾಗಿದೆ. ಪ್ರವಾಸಿಗರು, ಸ್ಥಳೀಯರು ಸಂಜೆಯ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಆನಂದಿಸುತ್ತಾರೆ. ಹನಿಮೂನ್ ಜೋಡಿಗಳಿಗೆ ಈ ಸ್ಥಳವು ಸ್ವರ್ಗದಂತೆ ಅನುಭವವಾಗುತ್ತದೆ. ಈ ಪ್ರದೇಶವು ಷಾಪಿಂಗ್‍ಗೆ ಕೂಡ ಪ್ರಸಿದ್ಧಿಯನ್ನು ಪಡೆದಿದೆ.


ashish v

ಅಚಲ್ ಘರ್ ಪೋರ್ಟ್

ಅಚಲ್ ಘರ್ ಪೋರ್ಟ್

ಅಚಲ್ ಘರ್ ಕೋಟೆಯು ಅಬೂಯಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಕೋಟೆಗೆ ಚಾರಿತ್ರಿಕವಾದ ಹಾಗು ಆಧ್ಯಾತ್ಮಿಕವಾದ ಪ್ರಧಾನ್ಯತೆಯನ್ನು ಹೊಂದಿದೆ. ಕೋಟೆಯ ಒಳಗೆ ಒಂದು ಶಿವಾಲಯ ಕೂಡ ಇದೆ. ಇಲ್ಲಿನ ಒಂದು ಕಲ್ಲಿನ ಮೇಲೆ ಶಿವನ ಮುದ್ರೆಗಳನ್ನು ಕೂಡ ಕಾಣಬಹುದಾಗಿದೆ. ಶಿವನ ವಾಹಾನವಾದ ನಂದಿ ಈ ದೇವಾಲಯವನ್ನು ಕಾವಲು ಕಾಯುತ್ತಿದೆ ಎಂತೆ. ಹಾಗಾಗಿಯೇ ಇಲ್ಲಿಗೆ ಆನೇಕ ಭಕ್ತರು ಪೂಜೆಗಳನ್ನು ನಿರ್ವಹಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಕೋಟೆಯಲ್ಲಿ ಕೆಲವು ಜೈನ ದೇವಾಲಯಗಳು ಕೂಡ ಇವೆ.

Wikki Commons

ಬ್ರಹ್ಮ ಕುಮಾರಿಸ್ ಆಧ್ಯಾತ್ಮಿಕ ವಿಶ್ವವಿದ್ಯಾಲಯ

ಬ್ರಹ್ಮ ಕುಮಾರಿಸ್ ಆಧ್ಯಾತ್ಮಿಕ ವಿಶ್ವವಿದ್ಯಾಲಯ

ಮೌಂಟ್ ಅಬುಗೆ ಆಧ್ಯಾತ್ಮಿಕ ಸಾಧನೆಯಿಂದ ಬಂದಿರುವವರು ಈ ವಿಶ್ವ ವಿದ್ಯಾಲಯದಲ್ಲಿ ತಪ್ಪದೇ ನಮೂದು ಮಾಡಿಕೊಳ್ಳಬಹುದು. ಇಲ್ಲಿ ಬ್ರಹ್ಮ ಕೂಮಾರಿಗಳು ಪ್ರಪಂಚ ಸ್ಥಾಯಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಸ್ಥೆ, ಧ್ಯಾನ, ಯೋಗ, ಆಧ್ಯಾತ್ಮಿಕ ಕೂರ್ಸ್‍ಗಳು ನಿರ್ವಹಿಸುತ್ತಾರೆ.

Wikki Commons

ದಿಲ್ವಾರಾ ಜೈನ ದೇವಾಲಯ

ದಿಲ್ವಾರಾ ಜೈನ ದೇವಾಲಯ

ತಪ್ಪದೇ ನೋಡಲೇಬೇಕಾದ ಪ್ರವಾಸಿ ಆಕರ್ಷಣೆ ಎಂದರೆ ಅದು ದಿಲ್ವಾರಾ ಜೈನ ದೇವಾಲಯ. ಈ ದೇವಾಲಯವು ಅತ್ಯಂತ ಸುಂದರವಾದ ಬಿಳಿ ಬಣ್ಣದ ಮಾರ್ಬಲ್‍ನಿಂದ ನಿರ್ಮಾಣ ಮಾಡಲಾಗಿದೆ. ಇದರ ಹೆಸರು ವಿಮಲ್ ವನಾಹಿ, ಲೂನಾ ವಾನಾಹಿ, ಪಿತಾಲ್ ಹಾರ್, ಖರ್ತಾರ್ ವಾಸಾಹಿ, ಶ್ರೀ ಮಹಾವೀರ್ ವಾಮಿ ದೇವಾಲಯ ಎಂದು ಹೇಳುತ್ತಾರೆ. ಜೈನ ಧರ್ಮಿಯರು ಇಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

Nathan Hughes Hamilton

ಟೊಡ್ ರಾಕ್

ಟೊಡ್ ರಾಕ್

ಮೌಂಟ್ ಅಬೂದಲ್ಲಿ ಇದು ಒಂದು ದೊಡ್ಡದಾದ ಕಲ್ಲು. ಒಂದು ರೀತಿಯ ವಿಭಿನ್ನವಾದ ಆಕಾರವನ್ನು ಹೊಂದಿರುವ ಇದನ್ನು ಟೊಡ್ ರಾಕ್ ಎಂದು ಕರೆಯುತ್ತಾರೆ. ಈ ಕಲ್ಲು ನಕ್ಕಿ ಸರೋವರದ ಸಮೀಪದಲ್ಲಿ ಟ್ರೆಕ್ಕಿಂಗ್ ಮಾರ್ಗದಲ್ಲಿಯೇ ಇದೆ. ಈ ಪ್ರದೇಶದಲ್ಲಿ ಈ ಕಲ್ಲು ಪ್ರವಾಸಿಗರನ್ನು ಆಕರ್ಷಿಸದೇ ಇರದು.


Wikki Commons

ಮೌಂಟ್ ಅಬೂ ಅಭಯಾರಣ್ಯ

ಮೌಂಟ್ ಅಬೂ ಅಭಯಾರಣ್ಯ

ಈ ಅಭಯಾರಣ್ಯದಲ್ಲಿ ವಿವಿಧ ಜಾತಿಯ ಪ್ರಾಣಿ ಸಂಕುಲವನ್ನು ಕಂಡು ಆನಂದಿಸಬಹುದು. ಅವುಗಳೆಂದರೆ ಚಿರತೆಗಳು, ಆನೆಗಳು, ನರಿಗಳು ಇನ್ನು ಆನೇಕ ಜಂತುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಪ್ರಾಣಿಗಳಿಗೆ ಅಲ್ಲದೇ 820 ಜಾತಿಯ ಸಸ್ಯಗಳಿಗೂ ಕೂಡ ನಿಲಯವಾಗಿದೆ. ಪ್ರಕೃತಿ ಪ್ರಿಯರಿಗೆ, ಜಂತು ಪ್ರಿಯರು ತಪ್ಪದೇ ನೋಡಲೇಬೇಕಾದ ಪ್ರದೇಶ ಇದಾಗಿದೆ.

Wikki Commons

ಆಹಾರ

ಆಹಾರ

ಮೌಂಟ್ ಅಬೂ ಪ್ರವಾಸಿಗರು ವಿವಿಧ ಬಗೆ ಬಗೆಯ ಆಹಾರಗಳನ್ನು ಇಲ್ಲಿ ಅಸ್ವಾಧಿಸಬಹುದಾಗಿದೆ. ರುಚಿಕರವಾದ ರಾಜಸ್ಥಾನದ ಆಹಾರಗಳು ಇಲ್ಲಿ ಅತ್ಯಂತ ವಿಶೇಷವಾದುದು.

shankar s.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X