Search
  • Follow NativePlanet
Share
» »ಬೆಂಗಳೂರಿನ ಸುತ್ತಲಿರುವ ಈ ಸುಂದರ ಹಳ್ಳಿಗಳಲ್ಲಿ ಹಳ್ಳಿ ಜೀವನದ ಅನುಭವ ಪಡೆಯಿರಿ!

ಬೆಂಗಳೂರಿನ ಸುತ್ತಲಿರುವ ಈ ಸುಂದರ ಹಳ್ಳಿಗಳಲ್ಲಿ ಹಳ್ಳಿ ಜೀವನದ ಅನುಭವ ಪಡೆಯಿರಿ!

ನೀವು ಅದೇ ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಮತ್ತೆ ಮತ್ತೆ ಅನ್ವೇಷಿಸಲು ಬೇಸರಗೊಂಡಿದ್ದರೆ ಮತ್ತು ನೀವು ಹಳ್ಳಿಗಾಡಿನ ಜೀವನ ಮತ್ತು ಪ್ರಕೃತಿಯ ಮಿಶ್ರಣವನ್ನು ಆನಂದಿಸಬಹುದಾದ ಸ್ಥಳಗಳನ್ನು ಹುಡುಕುತ್ತಿದ್ದರೆ, ನೀವು ಈ ಲೇಖನವನ್ನು ಓದಬೇಕು. ಇಲ್ಲಿ ನಾವು ನಿಮಗಾಗಿ ಬೆಂಗಳೂರಿನ ಸುತ್ತಲಿರುವ ಕೆಲವು ಸುಂದರವಾದ ಮತ್ತು ಮಾಲಿನ್ಯರಹಿತ ಹಳ್ಳಿಗಳ ಪಟ್ಟಿ ಮಾಡುತ್ತಿದ್ದೇವೆ. ತಮ್ಮ ಪ್ರಾಚೀನ ಸೌಂದರ್ಯ ಮತ್ತು ನಿಷ್ಕಳಂಕ ವಾತಾವರಣದ ಕಾರಣದಿಂದಾಗಿ ಬೆಂಗಳೂರು ಖಂಡಿತವಾಗಿಯೂ ಅನ್ವೇಷಿಸಲು ಅರ್ಹವಾಗಿದೆ. ಈ ರೋಮಾಂಚನಕಾರಿ ಹಳ್ಳಿಗಳ ಗಡಿಯೊಳಗೆ ಸ್ವರ್ಗ ಸದೃಶವಾದ ಪ್ರಕೃತಿಯ ಉಪಸ್ಥಿತಿಯನ್ನು ನೀವು ಅಕ್ಷರಶಃ ಅನುಭವಿಸಬಹುದು; ಅದು ಅದರ ಗಾಂಭೀರ್ಯ ಮತ್ತು ಭವ್ಯತೆ. ಹಾಗೂ ತಮ್ಮ ಹಳೆಯ ಸಂಪ್ರದಾಯಗಳು ಮತ್ತು ಸೊಂಪಾದ ಸಸ್ಯವರ್ಗದ ಶ್ರೀಮಂತಿಕೆಗಾಗಿ ಪ್ರಸಿದ್ದವಾಗಿದೆ.

ಇಂತಹ ಹಳ್ಳಿಗಳು ಅಸಾಂಪ್ರದಾಯಿಕ ಪ್ರಯಾಣಿಕರನ್ನು ಅನ್ವೇಷಿಸಲು ಆಕರ್ಷಿಸುವ ಸಾಮಾನ್ಯ ವಿಷಯವೆಂದರೆ ಈ ಹಳ್ಳಿಗಳಲ್ಲಿರುವ ಪ್ರತ್ಯೇಕವಾದ ಮತ್ತು ಕಲುಷಿತವಿಲ್ಲದ ವಾತಾವರಣ ಮತ್ತು ಶ್ರೀಮಂತವಾದ ಹಸಿರು. ಆದ್ದರಿಂದ, ಈ ಸುಂದರ ಹಳ್ಳಿಗಳು ಮತ್ತು ಬೆಂಗಳೂರಿನಿಂದ ಅವುಗಳ ದೂರದ ಬಗ್ಗೆ ವಿವರವಾಗಿ ತಿಳಿಯೋಣ.

anegundidf

ನೃತ್ಯಗ್ರಾಮ್

ಇದನ್ನು ನೃತ್ಯ ಹಳ್ಳಿ ಎಂದೂ ಕರೆಯಲಾಗುತ್ತದೆ. ನೃತ್ಯಾಗ್ರಮ್ ನೃತ್ಯಗ್ರಾಮವು ಭಾರತದಲ್ಲಿ ಶಾಸ್ತ್ರೀಯ ನೃತ್ಯಗಾರರಿಗಾಗಿ ಇರುವ ಮೊದಲ ವಸತಿ ಶಾಲೆಯಾಗಿದೆ. ಒಡಿಸ್ಸಿಯಿಂದ ಕಥಕ್ಕಳಿ ಮತ್ತು ಭರತನಾಟ್ಯದಿಂದ ಕಥಕ್‌ವರೆಗೆ ತಮ್ಮ ನೃತ್ಯ ಪ್ರಕಾರಗಳಲ್ಲಿ ಉತ್ತಮ ಪ್ರದರ್ಶನ ನೀಡುವ ದೇಶದಾದ್ಯಂತದ ಹಲವಾರು ನೃತ್ಯಗಾರರು ಇಲ್ಲಿ ನೆಲೆಸಿದ್ದಾರೆ.

ಈ ನೃತ್ಯಗಾರರು ಪ್ರಪಂಚದಾದ್ಯಂತ ಪ್ರದರ್ಶನ ನೀಡಲು ಹೆಸರುವಾಸಿಯಾಗಿದ್ದಾರೆ. 1990 ನೇ ಇಸವಿಯಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯಾದ ಪ್ರೋತಿಮಾ ಗೌರಿ ಅವರಿಂದ ಸ್ಥಾಪಿತವಾದ ನೃತ್ಯಗ್ರಾಮ್ ಇಂದು ದೇಶದ ಶಾಸ್ತ್ರೀಯ ನೃತ್ಯಗಾರರಿಗೆ ನೃತ್ಯ ಹೇಳಿಕೊಡುವ ಅತ್ಯಂತ ಪ್ರಸಿದ್ಧವಾದ ಶಾಲೆಗಳಲ್ಲಿ ಒಂದಾಗಿದೆ. ಈ ಶಾಲೆಯು ಹಳ್ಳಿಯ ರೂಪದಲ್ಲಿ ಸ್ಥಾಪಿಸಲ್ಪಟ್ಟಿರುವುದರಿಂದ, ಇದು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ, ಈ ಸುಂದರವಾದ ಹಳ್ಳಿಯ ಸೌಂದರ್ಯವನ್ನು ವೀಕ್ಷಿಸಲು ಮತ್ತು ಸ್ವಲ್ಪ ನೃತ್ಯವನ್ನು ಕಲಿಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

ಬೆಂಗಳೂರಿನಿಂದ ಕೇವಲ ಒಂದು ಗಂಟೆಗಳ ಕಾಲ ಪ್ರಯಾಣ ಮಾಡಿದರೆ ಸಿಗುವಂತಹ ಈ ಅದ್ಬುತ ಸ್ಥಳದಲ್ಲಿ ನೀವು ಇರಲು ಬಯಸುವುದಿಲ್ಲವೆ? ಈ ಸ್ಥಳವು ದಟ್ಟವಾದ ಹಸಿರಿನಿಂದ ಕೂಡಿದ್ದು ವಿಸ್ತಾರವಾದ ಸುಂದರವಾದ ಮರಗಳಿಂದ ಆವರಿಸಿದೆ ಇದು ಹಲವಾರು ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರನ್ನು ಪ್ರತೀವರ್ಷ ತನ್ನಡೆಗೆ ಆಕರ್ಷಿಸುತ್ತದೆ.

ಆನೆಗುಂಡಿ

ಬೆಂಗಳೂರಿನಿಂದ 360 ಕಿ.ಮೀ ಅಂತರ

ಕೊಪ್ಪಳ ಜಿಲ್ಲೆಯಲ್ಲಿರುವ ಆನೆಗುಂಡಿಯು ಭಾರತದ ಅತ್ಯಂತ ಹಳೆಯ ಸ್ಥಳಗಳಲ್ಲಿ ಒಂದಾಗಿದ್ದು ಇದನ್ನು ರಾಮಾಯಣ ಮಹಾಕಾವ್ಯದಲ್ಲಿ ಬರುವ ಪಾತ್ರವಾದ ವಾನರ ರಾಜ ಸುಗ್ರೀವನಿಂದ ಆಳಲ್ಪಡುತ್ತಿತ್ತು ಎನ್ನಲಾಗುತ್ತದೆ ಆದುದರಿಂದ ಇಂದು ಈ ಸ್ಥಳವು ಹಲವಾರು ಧಾರ್ಮಿಕ ತಾಣಗಳು ಮತ್ತು ಪ್ರಾಚೀನ ದೇವಾಲಯಗಳ ನೆಲೆಯಾಗಿದೆ. ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಆನೆಗುಂಡಿಯು ಭಗವಾನ್ ಹನುಮಂತನ ಜನ್ಮಸ್ಥಳವೆಂದೂ ಹೇಳಲಾಗುತ್ತದೆ.

ಇಲ್ಲಿರುವ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳ ಸುತ್ತಲೂ ದಟ್ಟವಾದ ಹಸಿರಿನಿಂದ ಆವೃತ್ತವಾಗಿರುವ ಕಾರಣದಿಂದಾಗಿ ಈ ತಾಣಗಳು ವಾರಾಂತ್ಯಗಳಲ್ಲಿ ಭೇಟಿ ಕೊಡಲು ಉತ್ತಮವಾದುದಾಗಿದೆ ಮತ್ತು ಇಲ್ಲಿಯ ಪ್ರಶಾಂತತೆಯನ್ನು ಅನ್ವೇಷಣೆ ಮಾಡುತ್ತಾ ವಿಶ್ರಾಂತಿ ಮಾಡಬಹುದಾಗಿದೆ.

ಒಂದೆಡೆ, ನೀವು ಅದರ ಬೆಟ್ಟಗಳು, ಕಾಡುಗಳು ಮತ್ತು ಬಹುಕಾಂತೀಯ ಬಯಲುಗಳ ಸೌಂದರ್ಯವನ್ನು ಆನಂದಿಸಬಹುದು ಮತ್ತು ಮತ್ತೊಂದೆಡೆ, ನೀವು ಅದರ ಪ್ರಾಚೀನ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಬಹುದು. ಇಲ್ಲಿನ ಪ್ರಮುಖ ಸ್ಥಳಗಳೆಂದರೆ ಆಂಜನೇಯ ಪರ್ವತ, ಪಂಪಾ ಸರೋವರ, ಕಮಲ ಮಹಲ್ ಮತ್ತು ಹುಚ್ಚಪ್ಪಯ್ಯನ ಮಠ ದೇವಾಲಯ. ಇಲ್ಲಿ, ನೀವು ಹಳ್ಳಿಗಾಡಿನ ಜೀವನದ ಸೌಂದರ್ಯವನ್ನು ಅನುಭವಿಸುವಾಗ ಭಾರತೀಯ ಸಂಸ್ಕೃತಿಯ ಇತಿಹಾಸದ ಬಗ್ಗೆ ಬಹಳಷ್ಟು ಕಲಿಯಬಹುದು.

kigga

ಕಿಗ್ಗಾ

ಬೆಂಗಳೂರಿನಿಂದ 335 ಕಿಮೀ ಅಂತರ

ಚಿಕ್ಕಮಗಳೂರಿನ ಪ್ರಶಾಂತ ಪರಿಸರದಲ್ಲಿ ನೆಲೆಸಿರುವ ಕಿಗ್ಗಾವು ಒಂದು ಅತ್ಯಂತ ಸುಂದರವಾಗಿದ್ದು, ಇಲ್ಲಿಗೆ ಪ್ರತಿಯೊಬ್ಬ ಪ್ರವಾಸಿಗನೂ ಹೋಗಲು ಇಷ್ಟ ಪಡುತ್ತಾರೆ. ದಟ್ಟವಾದ ಹಸಿರು ಪರಿಸರ ಮತ್ತು ಹಳ್ಳಿ ಜೀವನ ಶೈಲಿಯ ಹೊರತಾಗಿಯೂ ಈ ಸ್ಥಳವು ಜಲಪಾತಗಳು, ಟ್ರೆಕ್ಕಿಂಗ್ ಮಾರ್ಗಗಳು, ಬೆಟ್ಟಗಳು ಮತ್ತು ಸುಂದರವಾದ ತೊರೆಗಳಿಗೆ ನೆಲೆಯಾಗಿದೆ. ಪ್ರಶಾಂತತೆಯ ಜಗತ್ತಿನಲ್ಲಿ ಕಳೆದುಹೋಗಲು ಬೆಂಗಳೂರಿನ ಸುತ್ತಲೂ ಇರುವ ತಾಣಗಳಲ್ಲಿ ಇದು ಪರಿಪೂರ್ಣ ತಾಣವಾಗಿದೆ ಎಂದು ನೀವು ಭಾವಿಸುವುದಿಲ್ಲವೇ?

ಇಲ್ಲಿ ನೀವು ಹಲವಾರು ಐತಿಹಾಸಿಕ ತಾಣಗಳನ್ನು ಗುರುತಿಸಬಹುದಾಗಿದೆ ಮತ್ತು ಇದರ ಗಡಿಯೊಳಗೆ ಹಲವಾರು ಪ್ರಾಚೀನ ದೇವಾಲಯಗಳನ್ನು ನೋಡಬಹುದಾಗಿದೆ. ಒಂದು ಸಣ್ಣ ಹಳ್ಳಿಯ ಪ್ರವಾಸದಲ್ಲಿ ನೀವು ಇದಕ್ಕಿಂತ ಹೆಚ್ಚಾಗಿ ಇನ್ನೇನು ಹಂಬಲಿಸಬಹುದು? ಆದ್ದರಿಂದ, ಕರ್ನಾಟಕದ ಹಚ್ಚ ಹಸಿರಿನಿಂದ ಕೂಡಿರುವ ಈ ಉತ್ತಮವಾದ ಕುಗ್ರಾಮಕ್ಕೆ ಭೇಟಿ ನೀಡುವುದನ್ನು ನೀವು ತಪ್ಪಿಸಿಕೊಳ್ಳಬಾರದು. ಸಿರಿಮನೆ ಜಲಪಾತ, ನರಸಿಂಹ ಪರ್ವತ ಮತ್ತು ಶ್ರೀ ಋಷ್ಯ ಶೃಂಗೇಶ್ವರ ದೇವಸ್ಥಾನ. ಇಲ್ಲಿನ ಪ್ರಮುಖ ಸ್ಥಳಗಳು.

kokrebellur

ಕೊಕ್ರೆಬೆಳ್ಳೂರ್

ಬೆಂಗಳೂರಿನಿಂದ 90 ಕಿ.ಮೀ ಅಂತರ

ಕೊಕ್ರೆಬೆಳ್ಳೂರ್ ಪಕ್ಷಿಧಾಮಕ್ಕೆ ನೆಲೆಯಾಗಿರುವ ಈ ಸುಂದರ ಹಳ್ಳಿಯು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಹುಲ್ಲುಗಾವಲಿನಿಂದ ಹಿಡಿದು ಅರಣ್ಯಗಳವರೆಗೆ, ತೊರೆಗಳಿಂದ ಹಿಡಿದು ವೈವಿಧ್ಯಮಯ ವನ್ಯಜೀವಿಗಳವರೆಗೆ ಇಲ್ಲಿ ವೀಕ್ಷಿಸಬಹುದಾದಂತಹುದು ಹಲವಿದೆ. ಆದರೂ ಇದು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳನ್ನು ಹೊಂದಿರುವುದಕ್ಕಾಗಿ ಜನಪ್ರಿಯವಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಹೆಚ್ಚಾಗಿ ಪಕ್ಷಿ - ವೀಕ್ಷಣೆ ಮಾಡುವವರು ಮತ್ತು ವನ್ಯಜೀವಿ ಛಾಯಾಗ್ರಾಹಕರು ಭೇಟಿ ನೀಡುತ್ತಾರೆ.

ಇಲ್ಲಿರುವ ಪ್ರಮುಖ ಜಾತಿಯ ಪಕ್ಷಿಗಳು ಬಣ್ಣಬಣ್ಣದ ಕೊಕ್ಕರೆಗಳು ಮತ್ತು ಪೆಲಿಕಾನ್ಗಳನ್ನು ಒಳಗೊಂಡಿವೆ. ನೀವು ಹುಲ್ಲುಗಾವಲು ಹಾದಿಗಳಲ್ಲಿ ಅಡ್ಡಾಡುವಾಗ ಪಕ್ಷಿಗಳ ಮಧುರ ಧ್ವನಿಯನ್ನು ಕೇಳಲು ಇಷ್ಟಪಡುವುದಿಲ್ಲವೇ? ಹೌದು ಎಂದಾದರೆ, ಸ್ವತಃ ಪಕ್ಷಿಧಾಮವಾಗಿರುವ ಈ ಸುಂದರ ಗ್ರಾಮಕ್ಕೆ ಭೇಟಿ ನೀಡಲು ಯೋಜಿಸಿ.

kuttavanchi

ಕುಟ್ಟಾ

ಬೆಂಗಳೂರಿನಿಂದ 235 ಕಿ,ಮೀ ಅಂತರ

ಕಿಗ್ಗಾದಂತೆಯೇ ಇರುವ ಇನ್ನೊಂದು ಸುಂದರ ಸ್ಥಳವೆಂದರೆ ಅದು ಕುಟ್ಟಾ ಎನ್ನುವ ಸಣ್ಣ ಹಳ್ಳಿ ಈ ಹಳ್ಳಿಯು ಕೊಡಗು ಜಿಲ್ಲೆಯಲ್ಲಿದ್ದು, ಕಾವೇರಿ ನದಿಯ ತಟದ ವಿಹಾರಕ್ಕಾಗಿ ಜನಪ್ರಿಯವಾಗಿದೆ. ಸುಂದರವಾದ ಕಾಡುಗಳಿಂದ ಸುತ್ತುವರೆದಿರುವ ಈ ಮನಮೋಹಕ ಸೌಂದರ್ಯತೆಯು ತನ್ನಲ್ಲಿಗೆ ಭೇಟಿ ಕೊಡುವವರನ್ನು ಮಂತ್ರಮುಗ್ದಗೊಳಿಸುತ್ತದೆ.

ಕುಟ್ಟದ ಗಡಿಯೊಳಗೆ ಅನ್ವೇಷಿಸಲು ಹೆಚ್ಚಿನ ಸ್ಥಳಗಳಿಲ್ಲದಿದ್ದರೂ ಸಹ, ಅದರ ವಸಾಹತು ಸಮೀಪದಲ್ಲಿ ಖಂಡಿತವಾಗಿಯೂ ನೂರಾರು ಸೈಟ್‌ಗಳಿವೆ, ಅದು ನಿಮ್ಮನ್ನು ಮತ್ತೆ ಮತ್ತೆ ಭೇಟಿ ಮಾಡಲು ಒತ್ತಾಯಿಸುತ್ತದೆ. ಈ ತಾಣಗಳಲ್ಲಿ ಬೆಟ್ಟಗಳು, ದೇವಾಲಯಗಳು, ಟ್ರೆಕ್ಕಿಂಗ್ ಮಾರ್ಗಗಳು, ಪಾದಯಾತ್ರೆಯ ತಾಣಗಳು, ಬೆಟ್ಟಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು ಸೇರಿವೆ ಆದ್ದರಿಂದ ಈ ಶಾಂತತೆಯ ನಡುವೆ ವಿಶ್ರಾಂತಿ ಪಡೆಯಲು ಇದು ಸೂಕ್ತ ತಾಣವಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X