Search
  • Follow NativePlanet
Share
» »ಪನ್ವೇಲ್ ನಿಂದ ಕೊಚ್ಚಿ = 36 ಮನೋಹರ ಸ್ಥಳಗಳು

ಪನ್ವೇಲ್ ನಿಂದ ಕೊಚ್ಚಿ = 36 ಮನೋಹರ ಸ್ಥಳಗಳು

By Vijay

ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ಹೆದ್ದಾರಿಗಳಿವೆ. ಅವುಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ಮಹಾರಾಷ್ಟ್ರದ ಪನ್ವೇಲ್ ನಿಂದ ಆರಂಭಗೊಂಡು ಪಶ್ಚಿಮ ಘಟ್ಟಗಳ ಗುಂಟ ಸಾಗುತ್ತ ಕೇರಳದ ಕೊಚ್ಚಿಯಲ್ಲಿ ಕೊನೆಗೊಳ್ಳುತ್ತದೆ. ಈ ಹೆದ್ದಾರಿಯ ಒಟ್ಟಾರೆ ಉದ್ದ 1269 ಕಿ.ಮೀಗಳು. ಅಲ್ಲದೆ ಈ ರಸ್ತೆಯು ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಬೆಸೆಯುತ್ತದೆ. ಮತ್ತೊಂದು ವಿಶೇಷವಾದ ಸಂಗತಿಯೆಂದರೆ ಈ ರಸ್ತೆಯು, ಹತ್ತಿರವಿರುವ ಹಾಗೂ ರಸ್ತೆಯ ಸಂಪರ್ಕವಿರುವ ಹಲವಾರು ಅದ್ಭುತ ಪ್ರವಾಸಿ ತಾಣಗಳ ಮೇಲೆ ಹಾದು ಹೋಗುತ್ತದೆ.

ನೀವು ಸಾಹಸಪ್ರಿಯ ಪ್ರವಾಸಿಗರಾಗಿದ್ದರೆ ಒಂದೊಮ್ಮೆ ಸಮಯಾವಕಾಶ ದೊರೆತಾಗ ನಿಮ್ಮ ಸ್ವಂತ ವಾಹನ ಇಲ್ಲವೆ ಬಾಡಿಗೆಯ ವಾಹನದ ಮೂಲಕ ಈ ರಸ್ತೆಯಲ್ಲಿ ಪಯಣಿಸಿ. ಆ ಪ್ರಯಾಣ ನೀವೆಂದೂ ಮರೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೀವು ರಸ್ತೆಯಗುಂಟ ಹಲವಾರು ಕೆರೆಗಳು, ನದಿಗಳು, ತೊರೆಗಳು, ದಟ್ಟವಾದ ಅರಣ್ಯ, ಕಣಿವೆ ಪ್ರದೇಶಗಳು, ಗಗನಚುಂಬಿ ಬೆಟ್ಟ ಗುಡ್ಡಗಳು ಹೀಗೆ ಪ್ರಕೃತಿಯ ಅಸಾಧಾರಣ ಸೌಂದರ್ಯವನ್ನು ಸವಿಯುತ್ತ ಹಲವು ಗುರುತರವಾದ ಸ್ಥಳಗಳ ಮೇಲಿಂದ ಸಾಗುವಿರಿ. ಅಲ್ಲದೆ ಮೂರು ರಾಜ್ಯಗಳ ವಿಶಿಷ್ಟ ತಿಂಡಿ ತಿನಿಸುಗಳು, ಸಂಸ್ಕೃತಿ, ಸಂಪ್ರದಾಯಗಳನ್ನು ಹತ್ತಿರದಿಂದ ನೋಡುವ ಅವಕಾಶ ನಿಮ್ಮದಾಗಿರುತ್ತದೆ.

ಪ್ರಸ್ತುತ ಲೇಖನದ ಮೂಲಕ ಈ ರಸ್ತೆಯ ಮೇಲೆ ಸಾಗುವಾಗ ಯಾವೆಲ್ಲ ಪ್ರವಾಸಿ ಸ್ಥಳಗಳು ನಿಮ್ಮನ್ನು ಸ್ವಾಗತಿಸುತ್ತವೆ ಎಂಬುದನ್ನು ತಿಳಿಯೋಣ. ಗಮನದಲ್ಲಿಡಬೇಕಾದ ಮತ್ತೊಂದು ಸಂಗತಿಯೆಂದರೆ ಇದರಲ್ಲಿನ ಕೆಲ ಸ್ಥಳಗಳು ಈ ರಸ್ತೆಯ ನೇರ ಸಂಪರ್ಕದಲ್ಲಿರದಿದ್ದರೂ ಇದಕ್ಕೆ ಹೊಂದಿಕೊಂಡಿರುವ ಇತರೆ ರಸ್ತೆಗಳ ಮುಖಾಂತರ ಪಯಣಿಸಿ ಸುಲಭವಾಗಿ ಹಾಗೂ ಶೀಘ್ರವಾಗಿ ತಲುಪಬಹುದಾಗಿದೆ.

ಪನ್ವೇಲ್:

ಪನ್ವೇಲ್:

ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ಅತಿ ಜನವಸತಿಯಿರುವ ನಗರವಾಗಿದೆ ಪನ್ವೇಲ್. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ಪ್ರಾರಂಭಗೊಳ್ಳುವುದೆ ಇಲ್ಲಿಂದ. ಕರ್ನಾಲಾ ಕೋಟೆ, ಗಾಡೇಶ್ವರ ಜಲಾಶಯ, ಕರ್ನಾಲಾ ಪಕ್ಷಿಧಾಮ, ಮಾಥೇರಾನ್, ಬಲ್ಲಾಳೇಶ್ವರ ಪಾಲಿ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳನ್ನು ಈ ಸ್ಥಳದ ಆಸು ಪಾಸಿನಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Pradeep717

ಅಲಿಬಾಗ್:

ಅಲಿಬಾಗ್:

ಪನ್ವೇಲ್ ನಿಂದ ರಸ್ತೆಯು ಪೆನ್ ಗೆ ಸಂಪರ್ಕ ಬೆಸೆಯುತ್ತದೆ. ಪೆನ್ ನಿಂದ ವಡ್ಕಲ್ ಮೂಲಕ ಬೇರೆ ರಸ್ತೆಯಿಂದ ಸಂಚರಿಸಿದಾಗ ಸಿಗುವ ತಾಣವೆ ಅಲಿಬಾಗ್. ಇದು ಪೆನ್ ನಿಂದ ಕೇವಲ 30 ಕಿ.ಮೀ ದೂರದಲ್ಲಿದೆ. ಸಮುದ್ರ ತೀರದ ಅಲಿಬಾಗ್ ಒಂದು ಪ್ರಬುದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Rakesh Ayilliath

ಬಲ್ಲಾಳೇಶ್ವರ ಪಾಲಿ:

ಬಲ್ಲಾಳೇಶ್ವರ ಪಾಲಿ:

ಅಷ್ಟ ವಿನಾಯಕರ ಪೈಕಿ ಒಂದಾದ ಬಲ್ಲಾಳೇಶ್ವರ ಅಷ್ಟವಿನಾಯಕ ಮಂದಿರ ಪಾಲಿಯು ಮತ್ತೊಂದು ಗುರುತರವಾದ ಧಾರ್ಮಿಕ ಕ್ಷೇತ್ರವಾಗಿದ್ದು ಈ ರಸ್ತೆಯ ಮೂಲಕ ಸಾಗುವಾಗ ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Borayin Maitreya Larios

ಹರಿಹರೇಶ್ವರ:

ಹರಿಹರೇಶ್ವರ:

ಪೆನ್ ನಿಂದ ಮಂಗಾಂವ್ ಗೆ ತಲುಪುವ ಈ ರಸ್ತೆಯು ಇಲ್ಲಿಂದ ಮತ್ತೊಂದು ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಹರಿಹರೇಶ್ವರಕ್ಕೆ ತಲುಪಲು ಅನುವು ಮಾಡಿಕೊಡುತ್ತದೆ. ಇಲ್ಲಿ ಸಾವಿತ್ರಿ ನದಿಯು ಅರೇಬಿಯನ್ ಸಮುದ್ರದೊಳಗೆ ಸಮಾಗಮವಾಗುವುದನ್ನು ಕಾಣಬಹುದು.

ಚಿತ್ರಕೃಪೆ: Ankur P

ಪುಣೆ:

ಪುಣೆ:

ಈ ರಸ್ತೆಯ ಮೇಲಿಂದ ಕೋಲಾಡ್ ಅಥವಾ ಮಂಗಾಂವ್ ಮುಖಾಂತರ ಪುಣೆ ನಗರವನ್ನು ತಲುಪಬಹುದಾಗಿದೆ. ಮಹಾರಾಷ್ಟ್ರದ ಐತಿ ನಗರಿಯಾದ ಪುಣೆಯಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

ಚಿತ್ರಕೃಪೆ: Tushar

ರಾಯಗಡ್ ಕೋಟೆ:

ರಾಯಗಡ್ ಕೋಟೆ:

ಈ ರಸ್ತೆಯ ಮೇಲೆ ಸಂಚರಿಸುತ್ತ ಮಹಾಡ್ ಗೆ ತಲುಪಿ ಅಲ್ಲಿಂದ ರಾಯಗಡ್ ಕೋಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಸಮುದ್ರ ಮಟ್ಟದಿಂದ 2700 ಅಡಿಗಳಷ್ಟು ಎತ್ತರದಲ್ಲಿರುವ ಈ ಕೋಟೆಯು ಒಂದೊಮ್ಮೆ ಶಿವಾಜಿಯ ಹೆಮ್ಮೆಯ ಕೋಟೆಯಾಗಿತ್ತು.

ಚಿತ್ರಕೃಪೆ: Swapnaannjames

ಮಹಾಬಲೇಶ್ವರ:

ಮಹಾಬಲೇಶ್ವರ:

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಪೋಲಾದ್ಪುರಿಗೆ ತಲುಪಿ ಅಲ್ಲಿಂದ ಮಹಾಬಲೇಶ್ವರ ಹಾಗು ಪಂಚಗಣಿಯಂತಹ ಮನೋಹರವಾದ ಗಿರಿಧಾಮಗಳಿಗೆ ಭೇಟಿ ನೀಡಬಹುದು.

ಚಿತ್ರಕೃಪೆ: Abhishekjoshi

ದಾಪೋಲಿ:

ದಾಪೋಲಿ:

ಭರ್ನೆ ನಾಕಾದ ಮೂಲಕ ದಾಪೋಲಿ ಎಂಬ ವಿಶಿಷ್ಟ ಪ್ರವಾಸಿ ತಾಣವನ್ನು ಈ ರಸ್ತೆಯ ಮೂಲಕ ತಲುಪಬಹುದಾಗಿದೆ. ಹಲವು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಈ ಪಟ್ಟಣವು ರತ್ನಾಗಿರಿ ಜಿಲ್ಲೆಯಲ್ಲಿದೆ.

ಗುಹಾಗರ್:

ಗುಹಾಗರ್:

ರತ್ನಾಗಿರಿ ಜಿಲ್ಲೆಯ ಇನ್ನೊಂದು ಕಡಲ ತಡಿಯ ಪ್ರವಾಸಿ ತಾಣ ಗುಹಾಗರ್. ರಾಷ್ಟ್ರೀಯ ಹೆದ್ದಾರಿ ಮೂಲಕ ಚಿಪ್ಲುನ್ ತಲುಪಿ ಅಲ್ಲಿಂದ ಈ ತಾಣವನ್ನು ಸುಲಭವಾಗಿ ಮುಟ್ಟಬಹುದು.

ಚಿತ್ರಕೃಪೆ: Joshi detroit

ಕರಾಡ್:

ಕರಾಡ್:

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕರಾಡ್ ಕೊಯ್ನಾ ಹಾಗೂ ಕೃಷ್ಣಾ ನದಿಗಳ ಸಂಗಮದ ತಾಣವಾಗಿದೆ. ಚಿಪ್ಲುನಿನ ಬಹದ್ದುರಶೇಕ್ ನಾಕಾದ ಮೂಲಕ ಈ ಸ್ಥಳವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Nilrocks

ಮಾರ್ಲೇಶ್ವರ್:

ಮಾರ್ಲೇಶ್ವರ್:

ರತ್ನಾಗಿರಿ ಜಿಲ್ಲೆಯ ಸಂಗಮೇಶ್ವರ ವಿಭಾಗದಲ್ಲಿ ಬರುವ ಮಾರ್ಲೇಶ್ವರವು ಶಿವನ ಗುಹಾ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಸಂಗಮೇಶ್ವರ ಅಥವಾ ಪಾಲಿಗೆ ತಲುಪಿ ಅಲ್ಲಿಂದ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Pranav

ಗಣಪತಿಪುಳೆ:

ಗಣಪತಿಪುಳೆ:

ರತ್ನಾಗಿರಿ ಜಿಲ್ಲೆಯ ಕೊಂಕಣ ಕರಾವಳಿ ತೀರದ ಒಂದು ಪುಟ್ಟ ಪ್ರವಾಸಿ ಪಟ್ಟಣ ಗಣಪತಿಪುಳೆ. ಇಲಿರುವ 400 ವರ್ಷಗಳಷ್ಟು ಪುರಾತನವಾದ ಗಣಪತಿಯ ವಿಗ್ರಹವು ಮಣ್ಣಿನಿಂದ ಸ್ವಯಂಭೂ ಆಗಿದೆ ಎಂದು ಹೇಳಲಾಗಿದೆ. ಇಲ್ಲಿನ ಕಡಲ ತೀರದಲ್ಲೆ ಗಣೇಶನ ದೇವಾಲಯವನ್ನು ಕಾಣಬಹುದು.

ರತ್ನಾಗಿರಿ:

ರತ್ನಾಗಿರಿ:

ಅರೇಬಿಯನ್ ಕಡಲ ತಡಿಯ ಬಂದರು ನಗರಿ ರತ್ನಾಗಿರಿಯು ಮಹಾರಾಷ್ಟ್ರದ ನೈಋತ್ಯ ಭಾಗದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಹದಿನೇಳರ ಮೇಲೆ ನೆಲೆಸಿರುವ ಈ ನಗರವು ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದಿದೆ.

ಕೋಲ್ಹಾಪುರ:

ಕೋಲ್ಹಾಪುರ:

ರಾಷ್ಟ್ರೀಯ ಹೆದ್ದಾರಿ ಹದಿನೇಳರ ಮೂಲಕ ಪಾಲಿಗೆ ತಲುಪಿ ಅಲ್ಲಿಂದ ಕೋಲ್ಹಾಪುರವನ್ನು ತಲುಪಬಹುದಾಗಿದೆ. ಇದು 83 ಕಿ.ಮೀ ದೂರವಿದ್ದರೂ ಸಹ ಇಲ್ಲಿಗೆ ಭೇಟಿ ನೀಡುವುದು ಅರ್ಹ ಪ್ರಯಾಣವೆನಿಸುತ್ತದೆ. ಕೋಲ್ಹಾಪುರ ಮಹಾಲಕ್ಷ್ಮಿಯು ಸುಪ್ರಸಿದ್ಧ ಶಕ್ತಿ ಪೀಠಗಳ ಪೈಕಿ ಒಂದಾಗಿದ್ದಾಳೆ.

ಚಿತ್ರಕೃಪೆ: Shashank.shirodkar

ವಿಜಯದುರ್ಗ್:

ವಿಜಯದುರ್ಗ್:

ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸಂಪರ್ಕ ಹೊಂದುವ ಬಂದರು ನಗರ ವಿಜಯದುರ್ಗ್ ತನ್ನ ಕೋಟೆಯಿಂದಾಗಿ ಹೆಸರುವಾಸಿಯಾಗಿದೆ. ಇದೆ ರಸ್ತೆಯ ಮೇಲೆ 200 ಕಿ.ಮೀ ಚಲಿಸುವುದರ ಮೂಲಕ ಪ್ರಖ್ಯಾತ ಪ್ರವಾಸಿ ಸ್ಥಳ ಗೋವಾವನ್ನೂ ಸಹ ತಲುಪಬಹುದು.

ಚಿತ್ರಕೃಪೆ: aniruddha.arondekar

ದೇವ್ಗಡ್:

ದೇವ್ಗಡ್:

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ದೇವ್ಗಡ್ ತನ್ನ ಆಪೂಸು ಮಾವಿನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದೆ. ಇದೊಂದು ಪುಟ್ಟ ಕರಾವಳಿ ಪಟ್ಟಣವಾಗಿದ್ದು ಸುತ್ತ ಮುತ್ತಲು ಅನೇಕ ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ಚಿತ್ರಕೃಪೆ: OmkarSapre

ಮಾಲ್ವಣ್:

ಮಾಲ್ವಣ್:

ರಾಷ್ಟ್ರೀಯ ಹೆದ್ದಾರಿಯಿಂದ ಕಸಾಲ್ ಅಥವಾ ಕುಡಾಲ್ ತಲುಪಿ ಅಲ್ಲಿಂದ ಈ ತಾಣಕ್ಕೆ ಭೇಟಿ ನೀಡಬಹುದು. ನಮ್ಮ ದೇಶದಲ್ಲಿ ಸ್ಕೂಬಾ ಡೈವಿಂಗ್ ಒದಗಿಸುವ ಸ್ಥಳಗಳು ಇರುವುದು ಕೇವಲ ಬೆರಳಣಿಕೆಯಷ್ಟು ಮಾತ್ರ. ಇವುಗಳಲ್ಲಿ ಮಾಲ್ವಣ್ ಕೂಡ ಒಂದು ಎಂಬುದು ವಿಶೇಷ.

ಚಿತ್ರಕೃಪೆ: Sballal

ವೆಂಗುರ್ಲಾ:

ವೆಂಗುರ್ಲಾ:

ಕೂಡಾಲ್ ಅಥವಾ ಸಾವಂತವಾಡಿ ತಲುಪಿ ಈ ಪ್ರಸಿದ್ಧ ದ್ರಾಕ್ಷಿ ನಗರ ವೆಂಗುರ್ಲಾ ತಲುಪಬಹುದು. ಕಡಲ ಕಿನಾರೆಯ ಈ ಪಟ್ಟಣವೂ ಸಹ ನೋಡಲು ಮನಮೋಹಕವಾಗಿದೆ.

ಬೆಳಗಾವಿ:

ಬೆಳಗಾವಿ:

ರಾಷ್ಟ್ರೀಯ ಹೆದ್ದಾರಿಯಿಂದ ಸಾವಂತವಾಡಿ ಅಥವಾ ಅಂಬೋಲಿ ತಲುಪಿ ಕರ್ನಾಟಕದ ಗುರುತರ ಪಟ್ಟಣವಾದ ಬೆಳಗಾವಿಯನ್ನು ತಲುಪಬಹುದು. ಬೆಳಗಾವಿ ಜಿಲ್ಲೆಯು ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಬೆಳಗಾವಿ ಗೋವಾ ಬಳಿಯಿರುವ ಮನಮೋಹಕ ದೂಧ್ ಸಾಗರ್ ಜಲಪಾತ.

ಗೋಕರ್ಣ:

ಗೋಕರ್ಣ:

ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸಾಗುತ್ತ ಕುಮಟಾ ತಲುಪಿ ಅಲ್ಲಿಂದ ಗೋಕರ್ಣವನ್ನೂ ಸಹ ತಲುಪಬಹುದಾಗಿದೆ. ಗೋಕರ್ಣವು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Infoayan

ಕೊಲ್ಲೂರು:

ಕೊಲ್ಲೂರು:

ನಂತರ ಕುಮಟಾದಿಂದ ಬೈಂದೂರಿಗೆ ತಲುಪಿ ಮತ್ತೆ ಅಲ್ಲಿಂದ ಮತ್ತೊಂದು ಗುರುತರ ಕ್ಷೇತ್ರವಾದ ಕೊಲ್ಲೂರಿಗೆ ಭೇಟಿ ನೀಡಬಹುದು. ಕೊಲ್ಲೂರು ಕ್ಷೇತ್ರವು ಮೂಕಾಂಬಿಕೆಯ ಸನ್ನಿಧಿಯಿಂದಾಗಿ ಪ್ರಖ್ಯಾತವಾಗಿದೆ.

ಚಿತ್ರಕೃಪೆ: Vaikoovery

ಮರವಂತೆ:

ಮರವಂತೆ:

ರಾಷ್ಟ್ರೀಯ ಹೆದ್ದಾರಿ 17, ಭಾರತದಲ್ಲೆ ಒಂದು ಅನನ್ಯ ರಸ್ತೆಯಾಗಿದ್ದು ಮರವಂತೆಯ ಹತ್ತಿರ ಇದು ಒಂದು ಬದಿಯಲ್ಲಿ ಸಮುದ್ರ ಹಾಗೂ ಇನ್ನೊಂದು ಬದಿಯಲ್ಲಿ ನದಿ ಇವುಗಳ ಮಧ್ಯೆ ಹಾದು ಹೋಗುತ್ತದೆ.

ಚಿತ್ರಕೃಪೆ: Nkodikal

ಆನೆಗುದ್ದೆ:

ಆನೆಗುದ್ದೆ:

ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸಿಗುವ ಆನೆಗುದ್ದೆಯು ವಿನಾಯಕನ ದೇವಸ್ಥಾನದಿಂದಾಗಿ ಹೆಸರುವಾಸಿಯ್ಯಗಿದೆ.

ಚಿತ್ರಕೃಪೆ: Raghavendra Nayak Muddur

ಉಡುಪಿ:

ಉಡುಪಿ:

ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸಾಗುವಾಗ ದೊರಕುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಕ್ಷೇತ್ರ ಉಡುಪಿ. ಶ್ರೀ ಕೃಷ್ಣ ಮಠದಿಂದ ಹೆಸರುವಾಸಿಯಾಗಿರುವ ಉಡುಪಿಯಲ್ಲಿ ಅನೇಕ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Rajaramraok

ಮಲ್ಪೆ ತೀರ:

ಮಲ್ಪೆ ತೀರ:

ಉಡುಪಿಯಿಂದ ಇಷ್ಟವಿದ್ದರೆ ಕೇವಲ ಕೆಲವೆ ನಿಮಿಷಗಳಷ್ಟು ದೂರವಿರುವ ಪ್ರಸಿದ್ಧ ಮಲ್ಪೆ ಕಡಲ ತೀರಕ್ಕೆ ಭೇಟಿ ನೀಡಬಹುದು. ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರನ್ನು ಈ ಕಡಲ ತೀರವು ಆಕರ್ಷಿಸುತ್ತದೆ.

ಚಿತ್ರಕೃಪೆ: Neinsun

ಮಂಗಳೂರು:

ಮಂಗಳೂರು:

ಕರ್ನಾಟಕದ ಪ್ರಖ್ಯಾತ ಬಂದರು ನಗರ ಮಂಗಳೂರು. ಕಡಲ ತೀರ ಹಾಗೂ ಸಾಕಷ್ಟು ಇತರೆ ಆಕರ್ಷಣೆಗಳನ್ನು ಹೊಂದಿರುವ ಮಂಗಳೂರು ನಗರವು ರಾಷ್ಟ್ರೀಯ ಹೆದ್ದಾರಿ 17 ರಿಂದ ಉಡುಪಿಯಿಂದ ಸಂಪರ್ಕಗೊಳ್ಳುತ್ತದೆ.

ಕಾಸರಗೋಡು:

ಕಾಸರಗೋಡು:

ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಪ್ರಯಾಣಿಸುತ್ತ ಕಾಸರಗೋಡನ್ನು ತಲುಪಬಹುದು. ಚಂದ್ರಗಿರಿ ಕೋಟೆ, ಅನಂತಪುರ ಪದ್ಮನಾಭಸ್ವಾಮಿ ದೇವಾಲಯ ಮುಂತಾದ ಹಲವು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Archana Sabunkar

ಬೇಕಲ್ ಕೋಟೆ:

ಬೇಕಲ್ ಕೋಟೆ:

ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರಿನಿಂದ ಕಾಸರಗೋಡಿಗೆ ತಲುಪಿ ಅಲ್ಲಿಂದ ಬೇಕಲ್ ಕೋಟೆಗೆ ಭೇಟಿ ನೀಡಬಹುದು.

ಚಿತ್ರಕೃಪೆ: Renjithks

ಮುಳಪ್ಪಿಳಂಗಡ್ ಕಡಲ ತೀರ:

ಮುಳಪ್ಪಿಳಂಗಡ್ ಕಡಲ ತೀರ:

ಕೇರಳದ ಕಣ್ಣೂರು ಮತ್ತು ತಲಚೇರಿ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರಲ್ಲಿ ಸಾಗುವಾಗ ಈ ಸುಂದರ ಕಡಲ ಕಿನಾರೆಯು ದೊರಕುತ್ತದೆ.

ಚಿತ್ರಕೃಪೆ: Goutham Mohandas

ಕಾಪ್ಪಾಡ್ ಕಡಲ ತೀರ:

ಕಾಪ್ಪಾಡ್ ಕಡಲ ತೀರ:

ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬೆಸೆಯುವ ಮತ್ತೊಂದು ತಾಣ ಕೋಳಿಕೋಡ್ ಬಳಿಯಿರುವ ಕಾಪ್ಪಾಡ್ ಕಡಲ ತೀರ. ಮನಮೋಹಕವಾದ ಈ ಕಡಲ ತೀರವು ಸುಂದರವಾದ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: Sarah and Iain

ಕೋಳಿಕೋಡ್:

ಕೋಳಿಕೋಡ್:

ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬೆಸೆಯುವ ಮತ್ತೊಂದು ಪ್ರಸಿದ್ಧ ನಗರ ಕೋಳಿಕೋಡ್ (Kozikode). ಹಿಂದೆ ಕ್ಯಾಲಿಕಟ್ ಅಥವಾ ಕಲ್ಲಿಕೋಟೆ ಎಂದು ಕರೆಯಲ್ಪಡುತ್ತಿದ್ದ ಈ ನಗರದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಗುರುವಾಯೂರು:

ಗುರುವಾಯೂರು:

ಕೋಳಿಕೋಡ್ ನಿಂದ ಮುಂದೆ ಸಾಗುತ್ತ ಬಂದರೆ ಸಿಗುವ ಧಾರ್ಮಿಕ ಶ್ರೀ ಕ್ಷೇತ್ರವೆ ಗುರುವಾಯೂರು. ಶ್ರೀ ಕೃಷ್ಣನ ದೇಗುಲದಿಂದಾಗಿ ಇದು ಕೇರಳ ರಾಜ್ಯದ ಪ್ರಮುಖ ಪ್ರಮುಖ ಧಾಅರ್ಮಿಕ ಕ್ಷೇತ್ರಗಳಲ್ಲೊಂದಾಗಿದೆ. ಸಾಕಷ್ಟು ಜನ ಭಕ್ತಾದಿಗಳು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Pyngodan

ಕೊಡುಂಗಲ್ಲೂರು ಭಗವತಿ ದೇವಾಲಯ:

ಕೊಡುಂಗಲ್ಲೂರು ಭಗವತಿ ದೇವಾಲಯ:

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾಯೂರು ನಂತರ ಸಿಗುವ ಮತ್ತೊಂದು ಶ್ರೀ ಕ್ಷೇತ್ರ ಕೊಡುಂಗಲ್ಲೂರು ಭಗವತಿ ದೇವಾಲಯ. ತ್ರಿಶ್ಶೂರ್ ಜಿಲ್ಲೆಯ ಕೊಡಂಗಲ್ಲೂರಿನಲ್ಲಿರುವ ಈ ದೇವಾಲಯವು ಭದ್ರಕಾಳಿಗೆ ಮುಡಿಪಾಗಿದೆ ಹಾಗೂ ಸಾಕಷ್ಟು ಜನಪ್ರಿಯ ದೇವಾಲಯವಾಗಿದೆ.

ಚಿತ್ರಕೃಪೆ: Aruna Radhakrishnan

ಮುನ್ನಾರ್:

ಮುನ್ನಾರ್:

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರೆಸುತ್ತ ಕೇರಳದ ಉತ್ತರ ಪರವೂರ್ ಅನ್ನು ತಲುಪಬಹುದು. ಅಲ್ಲಿಂದ ಅಲುವಾ ಇಲ್ಲವೆ ಪೆರುಂಬವೂರ್ ಮೂಲಕ ಸುಪ್ರಸಿದ್ಧ ಪ್ರವಾಸಿ ತಾಣವಾದ ಮುನ್ನಾರ್ ಗೆ ತಲುಪಬಹುದು. ಪಸ್ಚಿಮ ಘಟ್ಟಗಳ ಅನನ್ಯ ಪ್ರಕೃತಿ ಸೌಂದರ್ಯವನ್ನು ಇಲ್ಲಿ ಸವಿಯಬಹುದು.

ಚಿತ್ರಕೃಪೆ: Bimal K C

ತೆಕಡಿ:

ತೆಕಡಿ:

ಮುನ್ನಾರ್ ಗೆ ಹೋಗುವ ರೀತಿಯಲ್ಲೆ ಅಲುವಾ ಅಥವಾ ಪೆರುಂಬವೂರ್ ಮೂಲಕ ತೆಕಡಿ ಪ್ರವಾಸಿ ಆಕರ್ಷಣಾ ತಾಣವನ್ನೂ ಸಹ ತಲುಪಬಹುದಾಗಿದೆ.

ಕೊಚ್ಚಿ:

ಕೊಚ್ಚಿ:

ಮಹಾರಾಷ್ಟ್ರದಿಂದ ಪ್ರಾರಂಭಿಸಿದಾಗ ರಾಷ್ಟ್ರೀಯ ಹೆದ್ದಾರಿ 17 ರ ಕೊನೆಯ ತಾಣವಾಗಿ ಕೊಚ್ಚಿಯು ನಿಮ್ಮನ್ನು ಸ್ವಾಗತಿಸುತ್ತದೆ. ಕೊಚ್ಚಿಯು ಕೇರಳದ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ.

ಚಿತ್ರಕೃಪೆ: Jorge Royan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X