Search
  • Follow NativePlanet
Share
» »ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ಕರಾವಳಿ ಭಾಗವಾಗಿರುವ ಮಂಗಳೂರು ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಮಂಗಳೂರು ಬೀಚ್‌ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಸೀ ಫುಡ್‌ ರುಚಿ ನಿಮ್ಮ ಬಾಯಲ್ಲಿ ಹಾಗೇ ಇದ್ದು ಬಿಡುತ್ತದೆ. ಇಲ್ಲಿ ಅನೇಕ ದೇವಸ್ಥಾನಗಳು, ಸೂರ್ಯೋದಯ, ಸೂರ್ಯಾಸ್ತ ಪಾಯಿಂಟ್‌ಗಳೂ ಇವೆ. ಮಂಗಳೂರಿನ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಮಂಗಳೂರಿನಿಂದ 100 ಕಿ.ಮೀ ಆಸುಪಾಸಿನಲ್ಲಿ ಬೇಕಾದಷ್ಟು ತಾಣಗಳು ಕಾಣಸಿಗುತ್ತವೆ.

ಬೇಕಲ್ ಫೋರ್ಟ್

ಬೇಕಲ್ ಫೋರ್ಟ್

PC: Vijayanrajapuram

ಕರ್ನಾಟಕದಲ್ಲಿ ನೆಲೆಗೊಂಡಿರುವ ಇತರ ಆಕರ್ಷಣೆಗಳಲ್ಲದೆ, ಬೇಕಲ್ ಕೋಟೆ ದಕ್ಷಿಣಕ್ಕೆ ನಿಮ್ಮನ್ನು ಕೇರಳಕ್ಕೆ ಕರೆದೊಯ್ಯುತ್ತದೆ. ಪಕ್ಕದ ಕಾಸರಗೋಡು ಜಿಲ್ಲೆಯ ಬೆಕಲ್ ಕೋಟೆಯು ಮಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಇದು ಸಿನಿಮಾ ಶೂಟಿಂಗ್‌ ಮಾಡುವವರ ಅಚ್ಚುಮೆಚ್ಚಿನ ತಾಣವಾಗಿದೆ. ಬೀಚ್‌ ಹಾಗೂ ಕೋಟೆ ಎರಡೂ ಇಲ್ಲಿ ಕಾಣಸಿಗುತ್ತದೆ. 1650ರಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ.

ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ

ಮರವಂತೆ

ಮರವಂತೆ

PC: Ashwin Kumar

ಒಂದು ಕಡೆಯಿಂದ ಸಾಗರವನ್ನು ಮತ್ತು ಇನ್ನೊಂದು ಕಡೆಯಿಂದ ನದಿಯನ್ನು ನೋಡಬಹುದಾದ ತಾಣವೆಂದರೆ ಅದು ಮರವಂತೆ. ಮರವಂತೆ ನಗರದಿಂದ ಸುಮಾರು 100 ಕಿ.ಮೀ ಮತ್ತು ಹತ್ತಿರದ ಕುಂದಾಪುರ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಒಂದು ಬದಿಯಲ್ಲಿ ಅರಬ್ಬಿ ಸಮುದ್ರವು ಪ್ರಬಲವಾಗಿದೆ.

ಕಾಪು ಲೈಟ್‌ ಹೌಸ್ ಬೀಚ್

ಕಾಪು ಲೈಟ್‌ ಹೌಸ್ ಬೀಚ್

PC: Arun Keerthi K. Barboza

ಕಾಪು ಎನ್ನುವುದು ಉಡುಪಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಮಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ಈ ಬೀಚ್‌ ತನ್ನಲ್ಲಿರುವ ಲೈಟ್‌ಹೌಸ್‌ನಿಂದಾಗಿ ಬಹಳ ಫೇಮಸ್ ಆಗಿದೆ. ಈ ಲೈಟ್‌ಹೌಸ್‌ ಮೇಲೆ ಹತ್ತಿ ದೂರದ ತೀರಗಳನ್ನು ನೋಡುವುದು ಖುಷಿ ನೀಡುತ್ತದೆ. ಇಡೀ ಬೀಚ್‌ನ ವಿಹಂಗಮ ನೋಟವನ್ನು ಇಲ್ಲಿ ಕಾಣಬಹುದು.

ಕೊಡಚಾದ್ರಿ

ಕೊಡಚಾದ್ರಿ

PC: Chetan Annaji Gowda

ಕರ್ನಾಟಕದ ಜನಪ್ರಿಯ ಟ್ರೆಕಿಂಗ್ ತಾಣಗಳಲ್ಲಿ ಕೊಡಚಾದ್ರಿಯೂ ಒಂದಾಗಿದೆ. ಮಂಗಳೂರಿನಿಂದ ಸುಮಾರು 160 ಕಿ.ಮೀ ದೂರದಲ್ಲಿದೆ ಮತ್ತು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹತ್ತಿರದಲ್ಲಿದೆ. ಕೊಡಚಾದ್ರಿ ಬೆಟ್ಟವೂ ಸಮುದ್ರಮಟ್ಟದಿಂದ 1300 ಫೀಟ್ ಎತ್ತರದಲ್ಲಿದೆ. ಚಾರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಚಾರಣ ಕೈಗೊಳ್ಳುತ್ತಾರೆ.

ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಸೇಂಟ್ ಮೇರಿಸ್ ಐಲ್ಯಾಂಡ್, ಮಲ್ಪೆ

ಸೇಂಟ್ ಮೇರಿಸ್ ಐಲ್ಯಾಂಡ್, ಮಲ್ಪೆ

PC: Harshitha Kay

ಮಲ್ಪೆ ಸೇಂಟ್ ಮೇರಿಸ್ ಐಲ್ಯಾಂಡ್, ಉಡುಪಿ ಮತ್ತು ಮಂಗಳೂರು ಮತ್ತೊಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಕರಾವಳಿಯಲ್ಲಿ ನೆಲೆಗೊಂಡಿರುವ, ಮಲ್ಪೆ ಬಂದರಿನಿಂದ ದೋಣಿ ಮುಖಾಂತರ ಸೇಂಟ್ ಮೇರಿ ದ್ವೀಪವನ್ನು ತಲುಪಬಹುದು. ದೋಣಿ ಸೇವೆಯು ಬೆಳಗ್ಗೆ ಸುಮಾರು 9 ಗಂಟೆಯಿಂದ ಸಂಜೆ 5 ಗಂಟೆಗೆ ವರೆಗೆ ಇರುತ್ತದೆ. ಪ್ರತಿ ವ್ಯಕ್ತಿಗೆ 100 ರೂ. ಶುಲ್ಕ ನೀಡಬೇಕಾಗುತ್ತದೆ.

ಆಗುಂಬೆ ಸೂರ್ಯಾಸ್ತದ ಸ್ಥಳ

ಆಗುಂಬೆ ಸೂರ್ಯಾಸ್ತದ ಸ್ಥಳ

PC: Shashidhara halady

ಪಶ್ಚಿಮ ಘಟ್ಟದ ಆಗುಂಬೆಯು ತನ್ನ ಜೈವಿಕ ವೈವಿಧ್ಯತೆ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಆಗುಂಬೆ ಪಟ್ಟಣದ ಸುತ್ತ ಹೆಚ್ಚಾಗಿ ಚಿತ್ರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆಯು ನಿಜಕ್ಕೂ ಒಂದು ಪ್ರಕೃತಿ ಸೌಂದರ್ಯದಿಂದ ಕೂಡಿದ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X