• Follow NativePlanet
Share
Menu
» »ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

Written By:

ಪ್ರಸ್ತುತ ಹೊಸವರ್ಷದ ಸಂಭ್ರಮಾಚರಣೆ ವಿಜೃಂವಣೆಯಿಂದ ಆಚರಿಸಲು ಯಾವುದಾದರೂ ಸ್ಥಳದ ಹುಡುಕಾಟದಲ್ಲಿದ್ದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗುವ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ ಬನ್ನಿ. ಯಾವುದಾದರೂ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸೂರ್ಯೋದಯ ಹಾಗು ಸೂರ್ಯಾಸ್ತವನ್ನು ಕಾಣಬೇಕು ಎಂಬ ಆಸೆ ಹುಟ್ಟುವುದು ಸಾಮಾನ್ಯವಾದುದೇ. ಅಸಲಿಗೆ ಸೂರ್ಯೋದಯ ಮತ್ತು ಸೂರ್ಯಸ್ತವನ್ನು ಕಾಣಬೇಕಾದರೆ ಯಾವ ಸ್ಥಳಗಳಿಗೆಲ್ಲಾ ತೆರಳಿದರೆ ಉತ್ತಮವಾದ ಅನುಭವವನ್ನು ಪಡೆಯಬಹುದು ಎಂಬ ಪ್ರೆಶ್ನೆ ನಿಮ್ಮಲ್ಲಿದ್ದರೆ ಲೇಖನದ ಮೂಲಕ ತಿಳಿಯಿರಿ.

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ತ್ರಿಯುಂದ್ ಗಿರಿಧಾಮ
ಹಿಮಾಚಲ ಪ್ರದೇಶದಲ್ಲಿರುವ ಈ ತ್ರಿಯುಂದ್ ಕಂಗ್ರಾ ಜಿಲ್ಲೆಯಲ್ಲಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವು ಅತ್ಯಂತ ರಮಣೀಯವಾಗಿರುತ್ತದೆ. ಧೌಲಾಧರ್ ಹಿಮ ಪರ್ವತಗಳ ಶ್ರೇಣಿಗಳ ಹಿಂದಿನಿಂದ ಉದಯಿಸುತ್ತಿರುವ ರವಿ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ಈ ಸುಂದರವಾದ ಪ್ರದೇಶದಲ್ಲಿ ಅನೇಕ ಪ್ರವಾಸಿ ತಾಣಗಳಿವೆ.

Kiran Jonnalagadda

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೈಸಲ್ಮೇರ್
ರಾಜಸ್ಥಾನ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣವಾಗಿದೆ ಜೈಸಲ್ಮೇರ್. ಜೈಸಲ್ಮೇರ್ ಪ್ರಮುಖವಾಗಿ ಕೋಟೆಗಳನ್ನು ಹೊಂದಿದೆ. ಇಲ್ಲಿ ಥಾರ್ ಮರುಭೂಮಿಗಳಿಂದಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಆದರೆ ಆ ಮರುಭೂಮಿಯಲ್ಲಿ ಉದಯಿಸುತ್ತಿರುವ ಸೂರ್ಯ ತನ್ನದೇ ಅದ ವೈವಿಧ್ಯಮಯವಾದ ವರ್ಣಚಿತ್ರವನ್ನು ಕಾಣಬಹುದು.

Dakshil Shah

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ದಾರ್ಜೀಲಿಂಗ್
ಪಶ್ಚಿಮ ಬಂಗಾಳ ರಾಜ್ಯದ ಏಕೈಕ ಗಿರಿಧಾಮ ಪ್ರದೇಶವೆಂದೇ ಹೇಳಲಾಗುವ ದಾರ್ಜೀಲಿಂಗ್ ಒಂದು ಅದ್ಭುತವಾದ ಪ್ರವಾಸಿ ತಾಣವಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಅಲ್ಲದೇ ದಾರ್ಜೀಲಿಂಗ್ ಚಹಾ ತೋಟಕ್ಕೆ ಹೆಸರುವಾಸಿಯಾಗಿದೆ. ಬೆಳ್ಳಂಬೆಳಗ್ಗೆ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಾಣುತ್ತಾ ಸೂರ್ಯನನ್ನು ಸ್ವಾಗತಿಸಬಹುದು.

Yoghya

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಕಂಚನ್ ಗಂಗಾ
ಗೋಯೆಚಾಲಾ ಟ್ರೆಕ್ಕಿಂಗ್‍ನ ಮೂಲಕ ತಲುಪಬಹುದಾದ ಸಿಕ್ಕಿಂ ರಾಜ್ಯದ ಒಂದು ಅದ್ಭುತವಾದ ತಾಣವಾಗಿದೆ. ಟ್ರೆಕ್ ಮಾಡುವ ಸಂದರ್ಭದಲ್ಲಿ ವೀಕ್ಷಣಾ ತಾಣವೊಂದು ಕಂಚನ್ ಗಂಗಾ ಜುಂಗಾ ಪರ್ವತದಲ್ಲಿ ಕಂಡುಬರುವ ಸುಂದರವಾದ ಸೂರ್ಯೋದಯಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ.

Ravi.sangeetha

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಗಡ್ಸಿಸಾರ್
ರಾಜಸ್ಥಾನದ ಜೈಸಲ್ಮೇರ್‍ನಲ್ಲಿರುವ ಗಡ್ಸಿಸಾರ್ ಕೆರೆ ಸಾಕಷ್ಟು ಐತಿಹಾಸಿಕ ಮಹತ್ವವನ್ನು ಪಡೆದಿರುವ ಹಾಗು ಧಾರ್ಮಿಕ ಮಹತ್ವ ಪಡೆದಿರುವ ಅದ್ಭುತವಾದ ಕರೆಯ ತಾಣವಾಗಿದೆ. ಇಲ್ಲಿನ ಸೂರ್ಯೋದಯವು ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಆ ಸಂದರ್ಭದಲ್ಲಿ ಸಾಕಷ್ಟು ಜನರು ಇಲ್ಲಿ ಕುಳಿತು ಧ್ಯಾನ ಮಾಡುತ್ತಿರುತ್ತಾರೆ.

Sanyamgoyal007

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಕಾವೇರಿ ನದಿ
ಸಾಮಾನ್ಯವಾಗಿ ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಪಥದಲ್ಲಿ ನೆಲೆಸಿರುವ ದಟ್ಟ ಹಸಿರಿನ ಕಾಡುಗಳಿಂದ ತುಂಬಿರುವ ಸಾಕಷ್ಟು ಸ್ಥಳಗಳು ಸೂರ್ಯೋದಯದ ನೋಟಗಳಿಗೆ ಹೆಸರುವಾಸಿಯಾಗಿರುತ್ತದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ.

Shoorveer5893

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ನಂದಿ ಬೆಟ್ಟ
ಬೆಂಗಳೂರಿನ ಬಳಿ ಇರುವ ನಂದಿ ಗಿರಿಧಾಮವು ಒಂದು ಜನಪ್ರಿಯ ಪ್ರವಾಸಿ ಸ್ಥಳವಾಗಿ ಹೆಸರುವಾಸಿಯಾಗಿದೆ. ನಂದಿ ಬೆಟ್ಟವು ಅದರದೇ ಆದ ಪ್ರಾಕೃತಿಕ ಸೊಬಗನ್ನು ಹೊಂದಿದ್ದು, ಅನೇಕ ರಾಜ್ಯಗಳಿಂದ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಬೆಟ್ಟದ ಮೇಲಿನಿಂದ ಕಂಡುಬರುವ ಅದ್ಭುತವಾದ ಸೂರ್ಯೋದಯದ ನೋಟ ಅತ್ಯದ್ಭುತವಾದುದು. ಇದಕ್ಕೆಂದೇ ಇಷ್ಟೋ ಪ್ರವಾಸಿಗರು ರಾತ್ರಿಯ ವೇಳೆ ತೆರಳಿ ಬೆಟ್ಟದ ಮೇಲೆ ಉಳಿದುಕೊಂಡು ಮರುದಿನ ಬೆಳಗ್ಗೆಯಂದು ಉದಯಿಸುತ್ತಿರುವ ಸೂರ್ಯನ ನೋಟವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಭೇಟಿ ನೀಡುತ್ತಾರೆ.

Sri chakra pranav

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ