Search
  • Follow NativePlanet
Share
» »ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳು

ಭಾರತದಲ್ಲಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳು

ಇಂದಿನ ಆಧುನಿಕ ಯುಗದಲ್ಲಿ ಮನಸ್ಸಿನ ಶಾಂತಿಯು ಅತ್ಯಂತ ದೊಡ್ಡ ಸ್ವತ್ತು ಎನ್ನುವುದು ನಮಗೆ ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿರುವ ಸ್ಥಳಗಳನ್ನು ಹಾಟ್ ಸ್ಪಾಟ್ ಗಳು ಎಂದು ಕರೆಯಲಾಗುತ್ತದೆ. ನೇಟಿವ್ ಪ್ಲಾನೇಟ್ ಈ ಋತುವಿನಲ್ಲಿ ಸ್ನೇಹಶೀಲ ಮಳೆಯ ಅನುಭವಕ್ಕಾಗಿ ಭಾರತದಲ್ಲಿನ ಅತ್ಯಂತ ಸುಂದರವಾದ ಮಾನ್ಸೂನ್ ಸ್ಥಳಗಳನ್ನು ಹುಡುಕಿ ನಿಮಗಾಗಿ ಅದರ ವಿವರಣೆಗಳನ್ನು ತಂದಿದೆ.
ಅನೇಕ ಸ್ಥಳಗಳು ಕಲಾತ್ಮಕವಾಗಿದ್ದು ನಿಮ್ಮ ಮನಸ್ಸನ್ನು ತಣಿಸುವಲ್ಲಿ ಸಫಲವಾಗುತ್ತದೆ. ಭಾರತದಲ್ಲಿಯ ಮಾನ್ಸೂನ್ ತಾಣಗಳು ಪ್ರವಾಸಿಗರಿಂದ ಹೆಚ್ಚಾಗಿ ಭೇಟಿಕೊಡಲ್ಪಡುತ್ತದೆ. ಈ ಕೆಳಗೆ ಕೆಳಗೆ ತಿಳಿಸಲಾದ ಎಲ್ಲಾ ಮಾನ್ಸೂನ್ ರಜೆಯ ತಾಣಗಳು ನಿಮಗೆ ಅನುಕೂಲಕರವಾದ ಬಜೆಟ್ ಅಡಿಯಲ್ಲಿ ರೆಸಾರ್ಟ್ ಗಳನ್ನು ಬುಕ್ ಮಾಡಬಹುದಾಗಿದೆ.
ಭಾರತದ ಮಾನ್ಸುನ್ ಮಳೆಗಾಲದ ಹವಾಮಾನ ಹೇಗಿರುತ್ತದೆ? ಮಳೆ ಮತ್ತು ಆರ್ದ್ರತೆಯು ಸುತ್ತಮುತ್ತಲಿನ ಪ್ರದೇಶಗಳನ್ನು ಸಮೃದ್ಧಗೊಳಿಸಲು ಮಳೆಗಾಲವು ಸೂಕ್ತವಾಗಿರುತ್ತದೆ ಆದ್ದರಿಂದ ಪ್ರವಾಸಿ ಸ್ಥಳಗಳು ಮತ್ತು ಆಫ್-ಗ್ರಿಡ್ ಸ್ಥಳಗಳು ಅತ್ಯುತ್ತಮವಾಗಿವೆ. ಒಮ್ಮೆ ಇವುಗಳ ಕಡೆ ನೋಡಿ!

ಕೂನೂರು

ಕೂನೂರು

ನಗರದ ಸದ್ದುಗದ್ದಲಗಳಿಂದ ತಪ್ಪಿಸಿಕೊಳ್ಳಲು ಕೂನೂರು ಪರಿಪೂರ್ಣವಾಗಿ ಮಳೆಗಾಲದಲ್ಲಿ ಭೇಟಿ ಕೊಡಬಹುದಾದ ತಾಣವಾಗಿದೆ. ಇದು ಅಪರೂಪದ ಭೂದೃಶ್ಯಗಳು, ಸುಂದರವಾದ ಬೆಟ್ಟಗಳು, ಭವ್ಯವಾದ ಕಟ್ಟಡಗಳು, ಮತ್ತು ಕಾಟೇಜ್ ಗಳಂತಹ ಸೌಂದರ್ಯತೆಗಳ ನೆಲೆಯಾಗಿದೆ. ಮೇಲೆ ಹೇಳಿದ ಈ ಎಲ್ಲಾ ಕಾರಣದಿಂದಾಗಿ ಕೂನೂರು ಇಲ್ಲಿಗೆ ಭೇಟಿ ಕೊಡುವವರಿಗೆ ಒಂದು ಉತ್ತಮವಾದ ಅನುಭವವನ್ನು ನೀಡುತ್ತದೆ ಮತ್ತ್ ಇದು ಭಾರತದ ಅತ್ಯಂತವಾದ ಸುಂದರವಾದ ಮಾನ್ಸೂನ್ ಸ್ಥಳಗಳಲ್ಲಿ ಒಂದಾಗಿದೆ.

ಪ್ರಮುಖ ಪ್ರವಾಸಿ ಆಕರ್ಷಣೆಗಳು: ಸೈಂಟ್ ಕ್ಯಾಥ್ರಿನ್ ಜಲಪಾತಗಳು, ಡಾಲ್ಫಿನ್ ನೋಸ್, ಡ್ರೋಗ್ ಫ಼ೋರ್ಟ್, ವೆಲ್ಲಿಂಗ್ಟನ್ ಗಾಲ್ಫ್ ಕೋರ್ಸ್

ಮಾಡಬೇಕಾದ ಚಟುವಟಿಕೆಗಳು: ಟ್ರೆಕ್ಕಿಂಗ್, ಗಾಲ್ಫ್, ಸೂರ್ಯಾಸ್ತವಾಗುವ ಸ್ಥಳ, ಅಥವಾ ಬೆಟ್ಟದ ಸುತ್ತ ಸವಾರಿ ಇತ್ಯಾದಿಗಳು.

ಶಾಪಿಂಗ್ ಸ್ಥಳಗಳು: ಗ್ರೀನ್ ಶಾಪ್, ಸಿಟಿ ಮಾಲ್

ಗೋಕರ್ಣ

ಗೋಕರ್ಣ

ಅಪರೂಪದ ಕಡಲತೀರಗಳು, ತಾಜಾ ಪರಿಸರಗಳು ಮತ್ತು ರೋಮಾಂಚನಕಾರಿ ಭೂದೃಶ್ಯಗಳಿಗೆ ಹೆಸರುವಾಸಿಯಾದ ಗೋಕರ್ಣಕ್ಕೆ ಪ್ರಪಂಚದಾದ್ಯಂತದ ಪ್ರವಾಸಿಗರು ವಿಶ್ರಾಂತಿ ಪಡೆಯಲು ಭೇಟಿ ನೀಡುತ್ತಾರೆ. ಗೋವಾದಷ್ಟು ಗೋಕರ್ಣಕ್ಕೆ ಭೇಟಿ ಕೊಡುವುದು ಕಡಿಮೆಯಾಗಿದ್ದರೂ ಗೋಕರ್ಣವು ಭಾರತದಲ್ಲಿ ಭೇಟಿ ನೀಡಲು ತಂಪಾದ ಮತ್ತು ಹೆಚ್ಚು ಬೇಡಿಕೆಯಿರುವ ಮಾನ್ಸೂನ್ ಸ್ಥಳಗಳಲ್ಲಿ ಒಂದಾಗಿದೆ.

ಪ್ರಮುಖ ಆಕರ್ಷಣೆಗಳು:. ಮಹಾಬಲೇಶ್ವರ ದೇವಾಲಯ, ಓಂ ಬೀಚ್, ಕುಡ್ಲೆ ಬೀಚ್ , ಗೊಕರ್ಣ ಬೀಚ್, ಪ್ಯಾರಡೈಸ್ ಬೀಚ್, ಹಾಫ್ ಮೂನ್ ಬೀಚ್ ಇತ್ಯಾದಿಗಳು

ಇಲ್ಲಿ ಮಾಡಬಹುದಾದ ವಿಷಯಗಳು: ಕುಡ್ಲೆ ಬೀಚ್, ಹೈಕಿಂಗ್ ಇಲ್ಲಿರುವ ರಾಕ್ ನಮಸ್ತೆ ಕೆಫೆಯಲ್ಲಿ ಸ್ಥಳೀಯ ತಿನಿಸುಗಳನ್ನು ಸವಿಯಿರಿ.ಶಾಪಿಂಗ್ ಸ್ಪಾಟ್‌ಗಳು: ಫ್ಲಿಯಾ ಮಾರ್ಕೆಟ್‌ಗಳು ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಟೆಂಪಲ್ ಕಾಂಪ್ಲೆಕ್ಸ್

ಹಂಪೆ

ಹಂಪೆ

ಪ್ರಾಚೀನ ನಗರವಾದ ವಿಜಯನಗರದ ಅವಶೇಷಗಳಲ್ಲಿ ನೆಲೆಸಿರುವ ಹಂಪೆಯಲ್ಲಿಯ ಸ್ಥಳಗಳು ಅವಶೇಶಗಳ ರೂಪದಲ್ಲಿದ್ದರೂ ಕೂಡಾ ಇಲ್ಲಿರುವ ವೈಭವೋಪೇತ ಕೇಂದ್ರಗಳು, ಮನಸೂರೆಗೊಳಿಸುವ ಏಕಶಿಲೆಗಳು ಮತ್ತು ವಾಸ್ತುಶಿಲ್ಪಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಇದು ಇತಿಹಾಸಕಾರರು, ಪಂಡಿತರು, ಪ್ರವಾಸಿಗರು ಮತ್ತು ಯಾತ್ರಿಗಳಿಂದ ನಿರಂತರವಾಗಿ ಭೇಟಿ ಕೊಡಲ್ಪಟ್ಟು ಹೆಸರುವಾಸಿಯಾಗಿದೆ. ಈ ಪ್ರಾಚೀನ ನಗರವು ನಿಸ್ಸಂದೇಹವಾಗಿಯೂ ಸುಂದರವಾದ ಮಾನ್ಸೂನ್ ಮಳೆಗಾಲದಲ್ಲಿ ಭಾರತದಲ್ಲಿ ಭೇಟಿ ಕೊಡಬಹುದಾದ ಸ್ಥಳಗಳಲ್ಲಿ ಒಂದೆನಿಸಿದೆ.

ಇಲ್ಲಿಯ ಪ್ರಮುಖ ಆಕರ್ಷಣೆಗಳು: ರಾಯಲ್ ಸೆಂಟರ್, ಹಲವಾರು ದೇವಾಲಯಗಳು, ತುಂಗಭದ್ರಾ ನದಿ, ಪವಿತ್ರ ಕೇಂದ್ರ, ಇಸ್ಲಾಮಿಕ್ ಕ್ವಾರ್ಟರ್ ಇತ್ಯಾದಿಗಳು.

ಇಲ್ಲಿ ಮಾಡಬಹುದಾದ ಚಟುವಟಿಕೆಗಳು: ಮೆಟ್ಟಿಲುಗಳಿರುವ ಟ್ಯಾಂಕ್ ಗಳ ಅನ್ವೇಶಣೆ, ಹಂಪಿ ಬಜಾರ್ ನ ಅಂಗಡಿಗಳು, ಎಲಿಫೆಂಟ್ ಸ್ಟೇಬಲ್ಸ್ ಗಳಿಗೆ ಪ್ರವಾಸ ಮಾಡಿ

ಶಾಪಿಂಗ್ ಕೇಂದ್ರಗಳು: ವಿಟ್ಟಲ್ ಬಜಾರ್, ಹಂಪಿ ಬಜಾರ್

ಕಚ್ ಮರುಭೂಮಿಯ ವನ್ಯಜೀವಿ ಅಭಯಾರಣ್ಯ

ಕಚ್ ಮರುಭೂಮಿಯ ವನ್ಯಜೀವಿ ಅಭಯಾರಣ್ಯ

ಕಚ್ ತನ್ನ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ, ಆದರೆ ಇದು ಸಾಂಪ್ರದಾಯಿಕ ವನ್ಯಜೀವಿ ಅಭಯಾರಣ್ಯದಂತಿಲ್ಲ. ಭುಜ್ ನಗರದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕಚ್ ಮರುಭೂಮಿ ವನ್ಯಜೀವಿ ಅಭಯಾರಣ್ಯವು 7505.22 ಚದರ ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದು ವಿಶಾಲವಾದ ಬಿಳಿ ಮರುಭೂಮಿಯಾಗಿದ್ದು, ಇದು ಅತಿದೊಡ್ಡ ಕಾಲೋಚಿತವಾದ ಲವಣಯುಕ್ತ ತೇವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪರಿಣಾಮವಾಗಿ, ಲಕ್ಷಾಂತರ ಪಿಂಕ್ ಫ್ಲೆಮಿಂಗೊಗಳು ಈ ತೇವವಿರುವ ಪ್ರದೇಶಗಳಿಗೆ ತೆರಳುತ್ತವೆ ಇದು ಕಚ್ ಮರುಭೂಮಿ ವನ್ಯಜೀವಿ ಅಭಯಾರಣ್ಯವನ್ನು ಕ್ಯಾನ್ವಾಸ್ ಗುಲಾಬಿ ಬಣ್ಣದಲ್ಲಿ ಚಿತ್ರಿಸಿದಂತೆ ಕಾಣುತ್ತದೆ.

ಪ್ರಮುಖ ಪ್ರವಾಸಿ ಆಕರ್ಷಣೆಗಳು: ಮಾಂಡವಿ ಬೀಚ್, ಸಾಂಸ್ಕೃತಿಕ ಕಾರ್ಯಕ್ರಮಗಖು, ಪರಂಪರೆಯತ್ತ ಪ್ರವಾಸಗಳು, ಫ್ಲೆಮಿಂಗೊಗಳು ಇತ್ಯಾದಿ ಇಲ್ಲಿಯ ಆಕರ್ಷಣೆಗಳಾಗಿವೆ.

ಮಾಡಬೇಕಾದ ಚಟುವಟಿಕೆಗಳು: ಸಫಾರಿ, ಪಕ್ಷಿ ವೀಕ್ಷಣೆ, ಸಾಕ್ಷ್ಯಚಿತ್ರಗಳು, ಛಾಯಾಗ್ರಹಣ.

ಶಾಪಿಂಗ್ ತಾಣಗಳು: ಭುಜ್ ಮುಖ್ಯ ಮಾರುಕಟ್ಟೆ, ಭುಜೋಡಿ, ಧಮಕಡಾ, ನಿರೋನಾ ಮತ್ತು ಭಚೌ ಇತ್ಯಾದಿ ಇಲ್ಲಿ ಮಾಡಬಹುದಾದಂತಹ ಚಟುವಟಿಕೆಗಳು.

ಲೋನಾವಾಲ

ಲೋನಾವಾಲ

ಲೋನಾವಾಲ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಭೇಟಿ ನೀಡಲೇಬೇಕಾದಂತಹ ಭಾರತದ ಸ್ಥಳವಾಗಿದ್ದು ಇಲ್ಲಿಗೆ ಮುಂಬೈ ಮತ್ತು ಮಹಾರಾಷ್ಟ್ರದ ಇನ್ನಿತರ ಭಾಗಗಳ ಜನರು ಭೇಟಿ ನೀಡುತ್ತಾರೆ. ಲೋನಾವಾಲವು ಮುಂಬೈ ನಗರದಿಂದ ಕೆಲವೇ ಕೆಲವು ಗಂಟೆಗಳ ಪ್ರಯಾಣವಾಗಿದ್ದು ಹಲವಾರು ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಗುಹೆಗಳು, ದಟ್ಟವಾದ ಹಸಿರಿನ ಭೂದೃಶ್ಯದ ನಯನ ಮನೋಹರವಾದ ನೋಟ, ಮತ್ತು ಬೆಟ್ಟಗಳು ಇವೆಲ್ಲ ಸೇರಿ ಪ್ರವಾಸಿಗರು ತಮ್ಮನ್ನು ತಾವು ಇಲ್ಲಿ ತೊಡಗಿಸಿಕೊಂಡು ವಿಶ್ರಾಂತಿ ಪಡೆದುಕೊಳ್ಳುವಂತೆ ಮಾಡುತ್ತದೆ ಇದು ಭಾರತದ ಮಳೆಗಾಲದಲ್ಲಿ ಭೇಟಿ ನೀಡಬಹುದಾದಂತಹ ಸುಂದರವಾದ ಸ್ಥಳವಾಗಿದೆ.

ಪ್ರಮುಖ ಪ್ರವಾಸಿ ಆಕರ್ಷಣೆಗಳು: ಕೋರಿಗಡ್ ಕೋಟೆ, ಕಾರ್ಲಾ ಗುಹೆಗಳು, ಭಾಜಾ ಗುಹೆಗಳು, ರಾಜಮಾಚಿ ವನ್ಯಜೀವಿ ಅಭಯಾರಣ್ಯ ಇತ್ಯಾದಿಗಳು

ಮಾಡಬಹುದಾದ ಚಟುವಟಿಕೆಗಳು: ಗುಹೆಗಳನ್ನು ಅನ್ವೇಷಿಸಿ, ಕ್ಯಾಂಪಿಂಗ್ ಮಾಡಿ ಮತ್ತು ವನ್ಯಜೀವಿಗಳನ್ನು ವೀಕ್ಷಿಸಿ ಆನಂದಿಸಿ.

ಶಾಪಿಂಗ್ ತಾಣಗಳು: ಲೋನಾವಲಾ ಬಜಾರ್

ಮೌಂಟ್ ಅಬು

ಮೌಂಟ್ ಅಬು

ರಾಜಸ್ಥಾನವು ಒಣಭೂಮಿಗಳು, ವರ್ಣರಂಜಿತ ನಗರಗಳು ಮತ್ತು ಭವ್ಯವಾದ ಮತ್ತು ಐತಿಹಾಸಿಕ ಅರಮನೆಗಳಿಗೆ ಹೆಸರುವಾಸಿಯಾಗಿದೆ, ಆದರೆ ರಾಜಸ್ಥಾನವು ಗಿರಿಧಾಮಕ್ಕೆ ನೆಲೆಯಾಗಿದೆ ಎಂದು ಕೆಲವರಿಗೆ ಇನ್ನೂ ತಿಳಿದಿಲ್ಲ. ಹೌದು! ಮೌಂಟ್ ಅಬು ರಾಜಸ್ಥಾನದಲ್ಲಿರುವ ಏಕೈಕ ಗಿರಿಧಾಮವಾಗಿದೆ ಮತ್ತು ಇದು ನಗರದ ಆವರಣದಲ್ಲಿರುವ ಕೋಕೋಫೋನಿ ಮತ್ತು ಏರುತ್ತಿರುವ ತಾಪಮಾನದಿಂದ ಸಾಂತ್ವನ ಮತ್ತು ವಿರಾಮವನ್ನು ನೀಡುತ್ತದೆ. ಇದು ಭಾರತದ ಅತ್ಯಂತ ಸುಂದರವಾದ ಮಾನ್ಸೂನ್ ಸ್ಥಳಗಳಲ್ಲಿ ಒಂದಾಗಿ ನಿಮ್ಮ ಪ್ರಯಾಣದ ಪಟ್ಟಿಯಲ್ಲಿರಬೇಕಾದುದಾಗಿದೆ.

ಪ್ರಮುಖ ಪ್ರವಾಸಿ ಆಕರ್ಷಣೆಗಳು: ನಕ್ಕಿ ಸರೋವರ, ಜೈನ ದೇವಾಲಯಗಳು, ದೇಲ್ವಾರಾ ದೇವಾಲಯ, ವನ್ಯಜೀವಿ ಅಭಯಾರಣ್ಯ

ಮಾಡಬಹುದಾದಂತಹ ಚಟುವಟಿಕೆಗಳು: ಬೋಟ್ ವಿಹಾರವನ್ನು ಆನಂದಿಸಿ, ಸೂರ್ಯಾಸ್ತಮಾನವಾಗುವ ಸ್ಥಳಕ್ಕೆ ಭೇಟಿ ನೀಡಿ, ವನ್ಯಜೀವಿಗಳನ್ನು ವಿಕ್ಷಿಸಿ

ಶಾಪಿಂಗ್ ತಾಣಗಳು: ಪಿಕ್ಕಾಡಿಲಿ ಪ್ಲಾಜಾ, ಬನ್ಸಿಲಾಲ್ ಭುರ್ಮಲ್, ನಕ್ಕಿ ಲೇಕ್ ಮಾರ್ಕೆಟ್ ಇತ್ಯಾದಿಗಳಲ್ಲಿ ಖರೀದಿ ಮಾಡಬಹುದಾಗಿದೆ.

 ಮೈಸೂರು

ಮೈಸೂರು

ಭಾರತದ ಎಲ್ಲಾ ಸ್ಥಳಗಳಿಗಿಂತಲೂ ನಿಸ್ಸಂದೇಹವಾಗಿ ಮೈಸೂರು ಮಳೆಗಾಲದ ಸಮಯದಲ್ಲಿ ಕುಟುಂಬದವರೊಂದಿಗೆ ಭೇಟಿ ನೀಡಲು ಸೂಕ್ತವಾದ ಸ್ಥಳವಾಗಿದೆ.ಇದರ ಸ್ನೇಹಶೀಲ ಹವಾಮಾನ ಮತ್ತು ಪ್ರಸ್ತುತ ಮೋಡಿ ಮಾಡುವ ಸ್ಥಳಗಳು ಪ್ರವಾಸಿಗರನ್ನು ಹಲವಾರು ದಶಕಗಳಿಂದಲೂ ಬೆರಗುಗೊಳಿಸುತ್ತಾ ಬಂಡಿದೆ. ಮೈಸೂರಿನಲ್ಲಿ ಭವ್ಯವಾದ ದಸರಾ ಆಚರಣೆಗಳು ಪ್ರಮುಖ ಆಕರ್ಷಣೆ ಆಗಿದ್ದು, ಇಡೀ ರಾಜ್ಯವು ಈ ಸಂದರ್ಭದಲ್ಲಿ ಬೆಳಕಿನಿಂದ ಕೂಡಿದಂತೆ ಕಾಣುತ್ತದೆ. ಮೈಸೂರು ಅರಮನೆ, ಕೃಷ್ಣರಾಜ ಸಾಗರ್ ಅಣೆಕಟ್ಟು, ಚಾಮುಂಡಿ ಬೆಟ್ಟಗಳು ಮತ್ತು ಭವ್ಯವಾದ ಬೃಂದಾವನ ಬೆಟ್ಟಗಳು ಇತರ ಪ್ರವಾಸಿ ಆಕರ್ಷಣೆಗಳಾಗಿವೆ, ಇನ್ನೂ ಕೆಲವು ತಾಣಗಳನ್ನು ಮೈಸೂರಿನ ಆಕರ್ಷಣೆಯ ಪಟ್ಟಿಯಲ್ಲಿ ಸೇರಿಸುವ ಮೂಲಕ ಭಾರತದಲ್ಲಿ ಇದು ಸೂಕ್ತವಾದ ಮಾನ್ಸೂನ್ ಗೆಟ್‌ವೇ ಆಗಿರುತ್ತದೆ.

ಪ್ರಮುಖ ಪ್ರವಾಸಿ ಆಕರ್ಷಣೆಗಳು: ಮಹಾರಾಜರ ಅರಮನೆ, ಮೈಸೂರು ಮೃಗಾಲಯ, ಶ್ರೀರಂಗಪಟ್ಟಣ, ರೈಲ್ವೆ ಮ್ಯೂಸಿಯಂ, ಮೈಸೂರು ಅರಮನೆ ಇತ್ಯಾದಿಗಳು ಇಲ್ಲಿಯ ಆಕರ್ಷಣೆಗಳಾಗಿವೆ.

ಮಾಡಬೇಕಾದ ಕೆಲಸಗಳು: ಸಿಲ್ಕ್ ಕಾರ್ಖಾನೆಗೆ ಭೇಟಿ ಮಾಡಿ, ಶ್ರೀಗಂಧದ ಎಣ್ಣೆ ಕಾರ್ಖಾನೆಗೆ ಭೇಟಿ ನೀಡಿ, ಮೈಸೂರು ಕಾರಂಜಿಗೆ ಭೇಟಿ ನೀಡಿ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ

ಶಾಪಿಂಗ್ ತಾಣಗಳು: ದೇವರಾಜ ಮಾರುಕಟ್ಟೆ, ಸಯ್ಯಾಜಿ ರಾವ್ ರಸ್ತೆಯಲ್ಲಿ ಕಾವೇರಿ ಆರ್ಟ್ಸ್ & ಕ್ರಾಫ್ಟ್ಸ್ ಎಂಪೋರಿಯಮ್, ಎಂಜಿ ರಸ್ತೆಯಲ್ಲಿರುವ ಮಾಲ್ ಆಫ್ ಮೈಸೂರು, ಅಶೋಕ ರಸ್ತೆ ಇತ್ಯಾದಿಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X