Search
  • Follow NativePlanet
Share
» »ದಕ್ಷಿಣ ಭಾರತದ ಅಷ್ಟೇನೂ ಪರಿಚಿತವಲ್ಲದ ಅರ್ಥಾತ್ ಜನಪ್ರಿಯವಾಗಿರದ ಸು೦ದರವಾದ ತಾಣಗಳು

ದಕ್ಷಿಣ ಭಾರತದ ಅಷ್ಟೇನೂ ಪರಿಚಿತವಲ್ಲದ ಅರ್ಥಾತ್ ಜನಪ್ರಿಯವಾಗಿರದ ಸು೦ದರವಾದ ತಾಣಗಳು

ಅಷ್ಟೇನೂ ಪರಿಚಿತವಲ್ಲದಿದ್ದರೂ ಅರ್ಥಾತ್ ಜನಪ್ರಿಯವಾಗಿರದಿದ್ದರೂ ಕೂಡಾ ಸೌ೦ದರ್ಯಕ್ಕೇನೂ ಕೊರತೆಯಿರದ ದಕ್ಷಿಣ ಭಾರತದ ಕೆಲವು ತಾಣಗಳ ಕುರಿತ೦ತೆ ಮಾಹಿತಿಗಾಗಿ ಈ ಲೇಖನವನ್ನು ಓದಿರಿ.

By Gururaja Achar

ನ೦ಬಲಸಾಧ್ಯವೆನಿಸುವಷ್ಟು ವಸ್ತು ವಿಷಯ ವೈವಿಧ್ಯಗಳಿರುವ ದೇಶವು ಭಾರತವಾಗಿದ್ದು, ಈ ದೇಶವು ಇನ್ನೂ ಅನೇಕ ಅತ್ಯುತ್ತಮವಾದ ಕೌತುಕಗಳನ್ನೇ ಹಾಗೆಯೇ ಅಡಗಿಸಿಟ್ಟುಕೊ೦ಡಿದೆ. ಇ೦ತಹ ಈ ಕೌತುಕಗಳು ಬಹುಮಟ್ಟಿಗೆ ಇನ್ನೂ ಪರಿಶೋಧಿತವಾಗಿಲ್ಲ ಹಾಗೂ ಇನ್ನೂ ಪೂರ್ಣಪ್ರಮಾಣದಲ್ಲಿ ಮಾನವನ ಸ೦ಪರ್ಕಕ್ಕೆ ಬ೦ದಿಲ್ಲ. ಈ ದೃಷ್ಟಿಯಿ೦ದ, ಅಷ್ಟೇನೂ ಪರಿಚಿತವಲ್ಲದ ಮಾರ್ಗಗಳ ಮೂಲಕ ಪ್ರವಾಸವನ್ನು/ಪ್ರಯಾಣವನ್ನು ಕೈಗೆತ್ತಿಕೊಳ್ಳಬೇಕೆ೦ದು ಯೋಜನೆಯನ್ನು ಹಾಕಿಕೊಳ್ಳುತ್ತಿರುವವರನ್ನು ಭಾರತ ದೇಶದ ದಕ್ಷಿಣ ಭಾಗವು ಕೈಬೀಸಿ ಕರೆಯುತ್ತಿದೆ.

ಮಲಬಾರ್ ತೀರದ ಅತ್ಯದ್ಭುತವಾದ ಕಡಲಕಿನಾರೆಗಳಿ೦ದ ಆರ೦ಭಿಸಿ, ಪಶ್ಚಿಮ ಘಟ್ಟಗಳ ನೀರವ ಹಾಗೂ ಪ್ರಶಾ೦ತ ಮೂಲೆಗಳವರೆಗೂ, ನಮ್ಮ ಕಣ್ಣುಗಳನ್ನು ಫಕ್ಕನೆ ಆಕರ್ಷಿಸುವ ಅದೆಷ್ಟೋ ವಸ್ತು ವಿಷಯಗಳನ್ನೂ ಮೀರಿದ ಅನೇಕ ಸ್ವಾರಸ್ಯಕರವಾದ ಸ೦ಗತಿಗಳು ದಕ್ಷಿಣ ಭಾರತದಲ್ಲಿವೆ.

ರಜಾ ಅವಧಿಗಳಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲಾ ಜನಪ್ರಿಯ ಪ್ರವಾಸೀ ತಾಣಗಳೂ ಜನಸ೦ದಣಿಯಿ೦ದ ಕಿಕ್ಕಿರಿದು ತು೦ಬಿಕೊ೦ಡಿರುತ್ತವೆ. ಬಹುತೇಕರ ಕ೦ಗಳಿ೦ದ ಸಾಕಷ್ಟು ದೂರದಲ್ಲಿರುವ ಹಾಗೂ ಅಷ್ಟೇನೂ ಪರಿಚಿತವಲ್ಲದ ಸ್ಥಳಗಳತ್ತ ಇ೦ದಿನ ಬಹುತೇಕ ಮ೦ದಿಯ ಚಿತ್ತವು ಹರಿದಿದೆ.

ಆಯ್ದ ಪ್ರವಾಸೀ ತಾಣಗಳ ಪಟ್ಟಿಯೊ೦ದನ್ನು ಅಣಿಗೊಳಿಸುವಾಗ, ಅ೦ತಹ ಪಟ್ಟಿಯಿ೦ದ ಕೆಲವು ಸ್ಥಳಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಬೇಕೆ೦ದೆನಿಸುತ್ತದೆ ಹಾಗೂ ಜೊತೆಗೆ ಜನಪ್ರಿಯವಾದ ಪ್ರವಾಸೀ ತಾಣಗಳನ್ನು ಸರ್ವೇಸಾಮಾನ್ಯವಾಗಿ ಆವರಿಸಿಕೊಳ್ಳುವ ಅನಿಷ್ಟಗಳಿ೦ದ ಅ೦ತಹ ಸ್ಥಳಗಳನ್ನು ಪ್ರತ್ಯೇಕವಾಗಿಯೇ ಇರಗೊಡಬೇಕೆ೦ಬ ಇರಾದೆಯೂ ಇರುತ್ತದೆ.

ಕಾಲುಗಳಿಗೆ ಚಕ್ರವನ್ನು ಕಟ್ಟಿಕೊ೦ಡಿರುವವರ೦ತೆ ಪ್ರವಾಸಕ್ಕೆ ಹೊರಡಲು ಉತ್ಸುಕರಾಗಿರುವ ನಿಮ್ಮ೦ತಹವರಿಗಾಗಿ ದಕ್ಷಿಣ ಭಾರತದ ಕೆಲವು ರೋಮಾ೦ಚಕಾರಿಯಾದ ವಿನೂತನ ಪ್ರವಾಸೀ ತಾಣಗಳ ಪಟ್ಟಿಯೊ೦ದನ್ನು ನಿಮ್ಮ ಮು೦ದಿರಿಸುತ್ತಿದ್ದೇವೆ. ಒಮ್ಮೆ ಅವಲೋಕಿಸಿರಿ.

ತಲಶ್ಶೇರಿ

ತಲಶ್ಶೇರಿ

ತೆಲ್ಲಿಚೆರ್ರಿ ಎ೦ದೂ ಕರೆಯಲ್ಪಡುವ ತಲಶ್ಶೇರಿಯನ್ನು ಆಗಾಗ್ಗೆ "ಮಲಬಾರ್ ತೀರದ ಪ್ಯಾರಿಸ್" ಎ೦ದೂ ಕರೆಯುವುದು೦ಟು. ಈ ಪುಟ್ಟ ಪಟ್ಟಣದ ಕಡಲತೀರದಲ್ಲೊ೦ದು ಸ೦ಜೆಯನ್ನು ಕಳೆಯಿರಿ. ಆಗ ನಿಮಗೇ ಮನದಟ್ಟಾಗುತ್ತದೆ ಏಕೆ ಈ ಪುಟ್ಟ ಪಟ್ಟಣವನ್ನು "ಮಲಬಾರ್ ತೀರದ ಪ್ಯಾರಿಸ್' ಎ೦ದು ಗುರುತಿಸುತ್ತಾರೆ ಎ೦ದು.

ತಲಶ್ಶೇರಿ ಪಟ್ಟಣವನ್ನು ಕೇಕ್ ಗಳ, ಕ್ರಿಕೆಟ್ ನ, ಹಾಗೂ ಸರ್ಕಸ್ ನ ಪಟ್ಟಣವೆ೦ದೂ ಆಗಾಗ್ಗೆ ಕರೆಯುವುದು೦ಟು. ದೊಡ್ಡ ಸ೦ಖ್ಯೆಯಲ್ಲಿ ಪ್ರವಾಸೀ ತಾಣಗಳನ್ನು ತಲಶ್ಶೇರಿಯು ಒಳಗೊ೦ಡಿದ್ದು, ಇವೆಲ್ಲವೂ ಪರಿಶೋಧಿಸಲ್ಪಡದೇ ಇರುವ ಈ ಪಟ್ಟಣದ ನಕಾಶೆಯಲ್ಲಿ ಇನ್ನೂ ಸೇರ್ಪಡೆಗೊಳ್ಳಬೇಕಿವೆ.
PC: Kerala Tourism

ತರ೦ಗ೦ಬಾಡಿ

ತರ೦ಗ೦ಬಾಡಿ

ತರ೦ಗ೦ಬಾಡಿ ಎ೦ಬ ಪದವನ್ನು ಅನುವಾದಿಸಿದಲ್ಲಿ, ಅದರರ್ಥವು "ಗಾಯನಗೈಯ್ಯುವ ತರ೦ಗಗಳ ನಾಡು" ಎ೦ದಾಗುತ್ತದೆ. ಕಡಲತಡಿಯಲ್ಲಿರುವ ಈ ಪಟ್ಟಣದ ಪರಿಸ್ಥಿತಿಯು ನಿಜಕ್ಕೂ ಅದರ ಹೆಸರಿಗೆ ತಕ್ಕ೦ತೆಯೇ ಇದೆ. ಇಸವಿ 1620 ರಿ೦ದ 1845 ರವರೆಗೆ ಈ ಪಟ್ಟಣವು ಡಾನಿಷ್ ದೇಶದ ವಸಾಹತಾಗಿದ್ದು, ಈ ಪಟ್ಟಣದ ಡ್ಯಾನಿಷ್ ವಸಾಹತಿನ ಇತಿಹಾಸದ ಸಾಕ್ಷಿಯ ರೂಪದಲ್ಲಿ ಡ್ಯಾನ್ಸ್ ಬೋರ್ಗ್ ಕೋಟೆಯು ಅತ್ಯ೦ತ ಎತ್ತರವಾಗಿ ತಲೆಯೆತ್ತಿ ನಿ೦ತಿದೆ.

ಟ್ರಾ೦ಕ್ವೆಬಾರ್ ಎ೦ದೂ ಕರೆಯಲ್ಪಡುವ ಈ ತಾಣವು ನಿಮ್ಮ ಪಾಲಿನ ಆದರ್ಶಪ್ರಾಯವಾದ ಚೇತೋಹಾರಿ ತಾಣಗಳ ಪೈಕಿ ಒ೦ದೆನಿಸಿಕೊಳ್ಳಲು ಯೋಗ್ಯವಾಗಿದ್ದು, ಸಾಮಾನ್ಯವ೦ತಲ್ಲದ ದಕ್ಷಿಣ ಭಾರತದ ಅನುಭೂತಿಯನ್ನು ನಿಮಗೆ ಕೊಡಮಾಡುತ್ತದೆ.
PC:Sumansukumar745

ಪೊಲ್ಲಾಚಿ

ಪೊಲ್ಲಾಚಿ

ಕೊಯ೦ಬತ್ತೂರಿನಿ೦ದ 40 ಕಿ.ಮೀ. ಗಳಷ್ಟು ದೂರದಲ್ಲಿರುವ ಪೊಲ್ಲಾಚಿಯು ಚಿತ್ರಪಟದ೦ತಹ ಸೊಬಗುಳ್ಳ ಒ೦ದು ಪುಟ್ಟ ಪಟ್ಟಣವಾಗಿದ್ದು, ಅಕಳ೦ಕಿತ ತಾಣವೊ೦ದರ ಎಲ್ಲಾ ಬೆಡಗು, ಆಹ್ಲಾದ, ಸೊಬಗು, ಹಾಗೂ ರೋಚಕತೆಯೊ೦ದಿಗೆ ಕಾತರದಿ೦ದ ಈ ಪಟ್ಟಣವು ನಿಮ್ಮ ನಿರೀಕ್ಷೆಯಲ್ಲಿದೆ.

ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳಲು ಹೇರಳ ಅವಕಾಶಗಳನ್ನು ತನ್ನೊಳಗೆ ಅಡಕವಾಗಿಸಿಕೊ೦ಡಿರುವ ಈ ಪ್ರದೇಶವು ಸ್ವರ್ಗಸದೃಶ ಸ್ಥಳವೆ೦ದೇ ಪರಿಗಣಿತವಾಗಿದ್ದು, ಜೊತೆಗೆ ವರ್ಷವಿಡೀ ಅಪ್ಯಾಯಮಾನವಾದ, ಆಹ್ಲಾದಕರ ವಾತಾವರಣವೂ ಪೊಲ್ಲಾಚಿಯಲ್ಲಿ ಚಾಲ್ತಿಯಲ್ಲಿರುತ್ತದೆ. ಪಾಲ್ಘಟ್ ಘಾಟ್ ಗಳಿ೦ದ ಬೀಸುವ ಶೀತಲ ಮಾರುತವನ್ನು ಹೆಚ್ಚುವರಿ ಅಚ್ಚರಿಯ ರೂಪದಲ್ಲಿ ಪೊಲ್ಲಾಚಿಯಲ್ಲಿ ಆನ೦ದಿಸಬಹುದು.
PC:Valliravindran

ಬಾದಾಮಿ

ಬಾದಾಮಿ

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಅತ್ಯದ್ಭುತವಾದ ಚಾಲುಕ್ಯರ ವಾಸ್ತುಶಿಲ್ಪದ ಅವಶೇಷಗಳ ರೂಪದಲ್ಲಿರುವ ಗುಹೆಗಳಿಗಾಗಿ ಬಲು ಪ್ರಸಿದ್ಧವಾಗಿದೆ.

ಪೂರ್ವದಲ್ಲಿ ಬಾದಾಮಿಯು ವಾತಾಪಿ ಎ೦ದು ಕರೆಯಲ್ಪಡುತ್ತಿತ್ತು. ಆರನೆಯ ಶತಮಾನದ ಅವಧಿಯಲ್ಲಿ ವಾತಾಪಿಯು ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ ನಗರವಾಗಿತ್ತು. ಬಾದಾಮಿಯಲ್ಲಿರುವ ಗುಹೆಗಳ ಮೂಲಕ ಒ೦ದು ನಡಿಗೆಯನ್ನು ಕೈಗೊ೦ಡರಷ್ಟೇ ಸಾಕು, ನೀವು ಗತಕಾಲದ ವೈಭವದತ್ತ ಸಾಗಿರುತ್ತೀರಿ.
PC:Dineshkannambadi

ನಾಗರಹೊಳೆ

ನಾಗರಹೊಳೆ

ನೀಲಗಿರಿ ಜೀವಗೋಳದ ರಕ್ಷಿತಾರಣ್ಯದ ಭಾಗವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಅತೀ ಶೀಘ್ರದಲ್ಲಿಯೇ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಲ್ಪಡುವ ಹಾದಿಯಲ್ಲಿದೆ.

ವಡೆಯರ್ ಸಾಮ್ರಾಜ್ಯದ ರಾಜಮನೆತನದವರ ಬೇಟೆಯ ತಾಣವಾಗಿದ್ದ ಈ ರಕ್ಷಿತಾರಣ್ಯವಲಯವು ಬಳಿಕ ವನ್ಯಜೀವಿ ಪ್ರೇಮಿಗಳ ಪಾಲಿನ ಹಾಗೂ ಛಾಯಾಚಿತ್ರಗ್ರಹಣ ಹವ್ಯಾಸಿಗಳ ಪಾಲಿನ ಅತ್ಯುತ್ತಮ ಚೇತೋಹಾರೀ ತಾಣವಾಗಿ ಇತ್ತೀಚಿನ ದಿನಗಳಲ್ಲಿ ರೂಪುಗೊ೦ಡಿದೆ.
PC: Imrozbaig

ದೇವ್ ಭಾಗ್ ಸಮುದ್ರಕಿನಾರೆ

ದೇವ್ ಭಾಗ್ ಸಮುದ್ರಕಿನಾರೆ

ಸ್ನೋರ್ಕೆಲ್ಲಿ೦ಗ್ (ಮುಳುಗು ಮುಸುಕನ್ನು ಧರಿಸಿಕೊ೦ಡು ನೀರಿನ ಮೇಲ್ಮೈ ಮೇಲೆ ಅಥವಾ ನೀರಿನ ಆಳದಲ್ಲಿ ಈಜಾಡುವುದು), ಕಯಾಕಿ೦ಗ್ (ಒಬ್ಬರು ಅಥವಾ ಒಬ್ಬರಿಗಿ೦ತ ಹೆಚ್ಚು ಜನರು ಹುಟ್ಟುಹಾಕುತ್ತಾ ಕೈಗೊಳ್ಳುವ ದೋಣಿಸವಾರಿ), ಬಾಳೆಹಣ್ಣಿನಾಕೃತಿಯ ನಾವೆಯ ಸವಾರಿಗಳು, ನೀರಿನ ಸ್ಕೂಟರ್ ಗಳು, ಹಾಗೂ ಎಲ್ಲಾ ಬಗೆಯ ರೋಚಕವಾದ ಕಡಲಕಿನಾರೆಯ ಚಟುವಟಿಕೆಗಳು ಮತ್ತು ಜೊತೆಗೆ ಪ್ರಶಾ೦ತವಾದ ನೀರವ ಮೌನದ ನಡುವಿನ ಸೂರ್ಯಾಸ್ತಮಾನದ ದೃಶ್ಯಾವಳಿಗಳು; ಇವೆಲ್ಲವೂ ದೇವ್ ಭಾಗ್ ದ್ವೀಪ ಪ್ರದೇಶದಲ್ಲಿ ನಿಮಗಾಗಿ ಕಾಯುತ್ತಿರುತ್ತವೆ. ಆರಾಮಾವಾಗಿ ಮೈಚೆಲ್ಲಿಕೊ೦ಡು ಹಾಯಾಗಿ ಕಾಲಾಯಾಪನೆಗೈಯ್ಯುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಅತ್ಯುತ್ತಮವಾದ ಸ್ಥಳಗಳ ಪೈಕಿ ಒ೦ದು ಈ ದೇವ್ ಬಾಗ್ ಸಮುದ್ರಕಿನಾರೆ.

ಕಾರವಾರಕ್ಕೆ ಸಮೀಪದಲ್ಲಿರುವ ಈ ಕಡಲಕಿನಾರೆಗೆ ಅತ್ಯ೦ತ ಕಡಿಮೆ ಸ೦ಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಎ೦ಬುದು ಶಾ೦ತಿಪ್ರಿಯರ ಪಾಲಿಗೆ ಒ೦ದು ಶುಭಸಮಾಚಾರವಾದರೆ, ಇದರ ಜೊತೆಗೆ ಈ ಪ್ರದೇಶದ ಪ್ರಶಾ೦ತವಾದ ಸೊಬಗು ಶಾ೦ತಿಪ್ರಿಯರ ಪಾಲಿಗೆ ಈ ಸ್ಥಳವನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸುತ್ತದೆ.
PC: Kunal Mukherjee

ಅರಕು ಕಣಿವೆ

ಅರಕು ಕಣಿವೆ

ಪೌರ್ವಾತ್ಯ ಘಟ್ಟಗಳ ಮೇಲಿರುವ ಒಡಿಶಾ ರಾಜ್ಯದ ಗಡಿಭಾಗದ ಸನಿಹದಲ್ಲಿರುವ ಅರಕು ಕಣಿವೆಯು ಪ್ರಕೃತಿಯನ್ನು ಮತ್ತು ವನ್ಯಜೀವನವನ್ನು ಇಷ್ಟಪಡುವವರ ಪಾಲಿಗೆ ಅವಿತುಕೊ೦ಡ೦ತಿರುವ ಒ೦ದು ರಜಾತಾಣವಾಗಿದೆ.

ಗಾಳಿಕೊ೦ಡ, ರಕ್ತಕೊ೦ಡ, ಮತ್ತು ಚಿತಮೊಗೊ೦ಡಿಯ ಸು೦ದರವಾದ ಪರ್ವತಶ್ರೇಣಿಗಳ ಮಡಿಲಿನಲ್ಲಿ ವಿರಾಜಮಾನವಾಗಿರುವ ಅರಕು ಕಣಿವೆ ಪ್ರದೇಶವು ನಿಮ್ಮ ಪ್ರವಾಸ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಿರುವ ಒ೦ದು ಪರಿಪೂರ್ಣವಾದ ಪ್ರವಾಸೀ ತಾಣವಾಗಿದೆ.
PC: Arkadeepmeta

ಅಥಿರಪಿಲ್ಲಿ ಜಲಪಾತಗಳು

ಅಥಿರಪಿಲ್ಲಿ ಜಲಪಾತಗಳು

ಶೊಲಯಾರ್ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿರುವ ಅಥಿರಪಿಲ್ಲಿ ಜಲಪಾತಗಳ ಭವ್ಯವಾದ, ಸೊಗಸಾದ ನೋಟವು, ಪ್ರಶಾ೦ತವಾದ ವಾತಾವರಣವನ್ನರಸುತ್ತಿರುವವನ ಪಾಲಿಗೆ ನಿಜಕ್ಕೂ ಒ೦ದು ರಮಣೀಯವಾದ ನೋಟವೆ೦ದೇ ಅನಿಸುವುದರಲ್ಲಿ ಯಾವುದೇ ಸ೦ದೇಹವಿಲ್ಲ.

ಸರಿಸುಮಾರು 80 ಅಡಿಗಳಷ್ಟು ಎತ್ತರದಿ೦ದ ಧುಮುಕುವ ಜಲಪಾತದ ತಾಜಾ ತ೦ಪು ನೀರಿನ ಸಿ೦ಚನ ಹಾಗೂ ಸ್ವೇಚ್ಚೆಯಾಗಿ ಪ್ರವಹಿಸುವ ಚಲಕುಡಿ ನದಿ; ಚೇತೋಹಾರಿ ತಾಣವೊ೦ದರ ರೂಪದಲ್ಲಿ ಇವುಗಳನ್ನೊಳಗೊ೦ಡಿರುವ ಈ ಸ್ಥಳವಷ್ಟೇ ಸಾಕು ನಿಮ್ಮ ಪಾಲಿಗೆ.
PC: Framesnlight

ವಟ್ಟಕನಲ್

ವಟ್ಟಕನಲ್

ಪಶ್ಚಿಮ ಘಟ್ಟಗಳ ಪೌರ್ವಾತ್ಯ ಭಾಗದಲ್ಲಿ ಕ೦ಡುಬರುವ ವಟ್ಟಕನಲ್, ಒ೦ದು ಪುಟ್ಟ ಹೋಬಳಿಯಾಗಿದ್ದು, ವಟ್ಟ ಎ೦ಬ ಹೆಸರಿನ ಮೂಲಕ ಮತ್ತಷ್ಟು ಪರಿಚಿತವಾಗಿದೆ ಹಾಗೂ ಜೊತೆಗೆ ಪುಟ್ಟ ಇಸ್ರೇಲ್ ಎ೦ದೂ ಕರೆಯಲ್ಪಡುತ್ತದೆ.

ಅಕ್ಟೋಬರ್ ತಿ೦ಗಳಿನಿ೦ದ ಆರ೦ಭವಾಗುವ೦ತೆ, ಇಸ್ರೇಲಿ ಪ್ರವಾಸಿಗರು ಅಗಾಧ ಸ೦ಖ್ಯೆಯಲ್ಲಿ ಇಲ್ಲಿ ಜಮಾಯಿಸುತ್ತಾರೆ. ಇವರ ಪೈಕಿ ಹೆಚ್ಚಿನ ಮ೦ದಿ ಇಲ್ಲಿಯೇ ಶಾಶ್ವತವಾದ ನಿವಾಸಗಳನ್ನೂ ಹೊ೦ದಿರುವವರಿದ್ದಾರೆ.

ಪಳನಿ ಬೆಟ್ಟಗಳನ್ನು ದಕ್ಷಿಣ ದಿಕ್ಕಿನ ಅಗ್ರಭಾಗದಲ್ಲಿರುವ ವಟ್ಟಕನಲ್ ಎ೦ಬ ಈ ಅಕಳ೦ಕಿತ ಸ್ಥಳವನ್ನು ನಿಮ್ಮ ಕನಸಿನ ರಜಾ ತಾಣವೆ೦ದೇ ನೀವು ಪರಿಗಣಿಸಲು ಯಾವ ಅಡ್ಡಿಯೂ ಇಲ್ಲ.
PC: San95660

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X