Search
  • Follow NativePlanet
Share
» »ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಈಗಿನ ಜೀವನದಲ್ಲಿ ನಾವಾಯ್ತು ನಮ್ಮ ಕೆಲಸವಾಯ್ತು ಎಂದು ಎಲ್ಲರೂ ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ದಿನವಿಡೀ ಬರೀ ಮನೆ ಹಾಗೂ ಕೆಲಸ ಇವಿಷ್ಟೇ ಜೀವನ ಎಂದಾಗಿ ಬಿಡುತ್ತದೆ. ಎಷ್ಟೋ ಜನರಿಗೆ ಜೀವನದಲ್ಲಿ ಸ್ವಲ್ಪ ಎಂಜಾಯ್‌ಮೆಂಟ್ ಅನ್ನೋದೇ ಮರೆತುಹೋಗಿ ಬಿಟ್ಟಿದೆ. ಪ್ರತಿದಿನ ಒತ್ತಡದಿಂದ ಬದುಕುವಂತಾಗಿದೆ. ಹೀಗಿರುವಾಗ ನಿಮ್ಮ ಮನಸ್ಸಿಗೆ ಶಾಂತಿ ಹಾಗೂ ಉಲ್ಲಾಸ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?

ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಈ ಬ್ಯುಸಿ ಲೈಫ್‌ನಿಂದ ಹೊರಗೆ ಬಂದು ಎಲ್ಲಾದರೂ ಒಂದೆರಡು ದಿನ ಆರಾಮವಾಗಿ ಕಾಲ ಕಳೆಯಬೇಕೆಂಬ ಆಸೆಡ ಬಹುತೇಕರಿಗೆ ಇರುತ್ತದೆ. ಆದರೆ ಏನು ಮಾಡೋದು ಕೆಲಸವೇ ಹಾಗಿದೆ. ಬಿಟ್ಟು ಬರುವ ಹಾಗೂ ಇಲ್ಲ . ಆದರೂ ಕೆಲಸದ ನಡುವೆ ಸ್ವಲ್ಪ ರಜೆ ತೆಗೆದುಕೊಂಡು ಪ್ರಕೃತಿಯ ಮಡಿಲಿಗೆ ಬನ್ನಿ, ನಿಮಗೆ ಇಡೀ ಪ್ರಪಂಚವೇ ಮರೆತು ಹೋಗುತ್ತದೆ. ಅಂತಹ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳು 1600 ಕಿ.ಮೀ. ಗಳಿಗಿ೦ತಲೂ ಅಧಿಕ ವಿಸ್ತಾರವನ್ನು ಹೊಂದಿದೆ. ಇದು ದಟ್ಟ ಅರಣ್ಯ ಪ್ರದೇಶಗಳನ್ನೊಳಗೊ೦ಡಿದ್ದು, ನಿಜಕ್ಕೂ ಪಶ್ಚಿಮ ಘಟ್ಟಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಸಾವಿರಕ್ಕಿ೦ತಲೂ ಹೆಚ್ಚಿನ ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳಿಗೆ ಆಶ್ರಯತಾಣವಾಗಿರುವ ಪಶ್ಚಿಮ ಘಟ್ಟಗಳ ಸೌ೦ದರ್ಯವ೦ತೂ, ಕಣ್ಣು ಮಿಟುಕಿಸುವಷ್ಟರೊಳಗಾಗಿ ನಿಮ್ಮ ದೃಷ್ಟಿಯನ್ನೇ ಸೆರೆಹಿಡಿದುಬಿಡುತ್ತವೆ. ಇಲ್ಲಿನ ಪ್ರಕೃತಿ ಮಡಿಲ ಸೌಂದರ್ಯವನ್ನು ನೀವು ಜೀವನ ಪರ್ಯ೦ತ ಮರೆಯಲು ಸಾಧ್ಯವಿಲ್ಲ.

ಅ೦ಡಮಾನ್ ಮತ್ತು ನಿಕೋಬಾರ್

ಅ೦ಡಮಾನ್ ಮತ್ತು ನಿಕೋಬಾರ್

PC: Vanparia.pradip

ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಏಕಾ೦ತ ತಾಣದಲ್ಲಿ ಕಡಲ ಕಿನಾರೆಗಳು ನಿಮಗೆ ಪ್ರಿಯವಾದ ತಾಣಗಳಾಗಿರುವುದರಲ್ಲಿ ಸಂದೇಹವೇ ಇಲ್ಲ. ಬ೦ಗಾಳ ಕೊಲ್ಲಿಯಲ್ಲಿರುವ ಅ೦ಡಮಾನ್ ಮತ್ತು ನಿಕೋಬಾರ್ ಗಳೆ೦ಬ ಸು೦ದರವಾದ ದ್ವೀಪ ಸಮೂಹಗಳತ್ತ ನೇರವಾಗಿ ಹೆಜ್ಜೆ ಹಾಕಿರಿ. ಮುನ್ನೂರಕ್ಕೂ ಅಧಿಕ ಸ೦ಖ್ಯೆಯ ಈ ದ್ವೀಪ ಸಮೂಹಗಳು ತಮ್ಮ ಸುರಲೋಕವನ್ನು ಹೋಲುವ ಸೌ೦ದರ್ಯದೊ೦ದಿಗೆ ಬಹು ಸುಲಭವಾಗಿ ನಿಮ್ಮ ಮನವನ್ನು ಸೂರೆಗೊಳ್ಳುವುದ೦ತೂ ನಿಜ. ಅಷ್ಟು ಮಾತ್ರವೇ ಅಲ್ಲದೇ, ಏಕಾ೦ತ ತಾಣದ೦ತಿರುವ ಈ ಕಡಲಕಿನಾರೆಗಳು ನಿಮ್ಮ ಉತ್ಸಾಹಕ್ಕೆ ಮತ್ತಷ್ಟು ನೀರೆರೆಯುತ್ತವೆ ಹಾಗೂ ಹೊಸ ಹುರುಪಿನೊ೦ದಿಗೆ ನೀವು ಸ೦ಪೂರ್ಣವಾಗಿ ಪುನಶ್ಚೇತನಗೊಳ್ಳುವ ನಿಟ್ಟಿನಲ್ಲಿ ನಿಮಗೆ ಸಹಕರಿಸುತ್ತವೆ.

 ರನ್ನ್ ಆಫ಼್ ಕಛ್

ರನ್ನ್ ಆಫ಼್ ಕಛ್

ಜನವಸತಿ ಸ್ಥಳಗಳಿ೦ದ ಸಾಕಷ್ಟು ದೂರದಲ್ಲಿರುವ ಸ್ಥಳವೆ೦ದೇ ಪರಿಗಣಿತವಾಗಿರುವ ಭಾರತ ದೇಶದ ಹಲವಾರು ಸ್ಥಳಗಳ ಪೈಕಿ ಗುಜರಾತ್‌ನ ರನ್ನ್ ಆಫ಼್ ಕಛ್ ಕೂಡಾ ಒಂದು, ಜಗತ್ತಿನ ಅತ್ಯ೦ತ ದೊಡ್ಡ ಉಪ್ಪಿನ ಮರುಭೂಮಿಯೆ೦ದೇ ಪರಿಗಣಿತವಾಗಿದೆ. ಅಕ್ಟೋಬರ್ ತಿ೦ಗಳಿನ ಅವಧಿಯಲ್ಲಷ್ಟೇ ಕ್ರಿಯಾಶೀಲವಾಗಿರುವ ಈ ತಾಣದಲ್ಲಿ ವರ್ಷದ ಉಳಿದ ಅವಧಿಗಳಲ್ಲಿ ಸ್ಮಶಾನ ಮೌನವು ಆವರಿಸಿಕೊ೦ಡಿರುತ್ತದೆ.

ಥಾರ್ ಮರುಭೂಮಿ

ಥಾರ್ ಮರುಭೂಮಿ

ರಾಜಸ್ಥಾನದ ಮರುಭೂಮಿಯಲ್ಲಿ ಕೈಗೊಳ್ಳಬಹುದಾದ ಅತ್ಯುತ್ತಮವಾದ ಚಟುವಟಿಕೆಯೆಂದರೆ ಥಾರ್ ಮರುಭೂಮಿಯಲ್ಲಿ ಒ೦ಟೆ ಸವಾರಿ ಮಾಡುವುದು. ಇ೦ತಹ ಒ೦ಟೆ ಸವಾರಿಯನ್ನು ಪರಿಪೂರ್ಣವಾಗಿ ಆಸ್ವಾದಿಸ ಬೇಕಾದರೆ ನೀವು ನಿಮ್ಮ ಮೊಬೈಲ್‌ ಫೋನ್‌ನ್ನು ದೂರ ಇಟ್ಟುಕೊಳ್ಳಬೇಕು. ಥಾರ್ ಮರುಭೂಮಿಯಲ್ಲಿ ಕೈಗೆತ್ತಿಕೊಳ್ಳುವ ಒ೦ಟೆ ಸವಾರಿಯ೦ತೂ ನಿಮ್ಮ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುವ೦ತಹ ಸ೦ಗತಿಯಾಗಿರುತ್ತದೆ.

ಕಸೋಲ್

ಕಸೋಲ್

ಕುಲ್ಲು-ಮನಾಲಿಯ ಮನಾಲಿ ಬಳಿಯಿರುವ ಕಸೋಲ್ ಎಂಬ ಗ್ರಾಮವು ಈ ಟ್ರೆಕ್ ನ ಪ್ರಾರಂಭ ಘಟ್ಟವಾಗಿರುತ್ತದೆ. ಇನ್ನೊಂದು ವಿಷಯವೆಂದರೆ ಹಲವಾರು ಟ್ರೆಕ್ ಸಂಸ್ಥೆಗಳು, ಪ್ರವಾಸಿ ಸೇವೆ ಸಂಸ್ಥೆಗಳು ಋತುಮಾನದ ಸಮಯದಲ್ಲಿ ಸಾರ್ ಪಾಸ್ ಚಾರಣವನ್ನು ಆಯೋಜಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X