Search
  • Follow NativePlanet
Share
» »ಭಾರತದ ಅಮೋಘ ಪರ್ವತ ಶ್ರೇಣಿಗಳು

ಭಾರತದ ಅಮೋಘ ಪರ್ವತ ಶ್ರೇಣಿಗಳು

By Vijay

ಪರ್ವತಗಳು ಅಥವಾ ಬೆಟ್ಟ ಗುಡ್ಡಗಳು ಮೊದಲಿನಿಂದಲೂ ಮಾನವನಿಗೆ ಕುತೂಹಲಕರ ರಚನೆಗಳಾಗಿ ಆಸಕ್ತಿ ಮೂಡಿಸಿವೆ. ನಾವು ಚಿಕ್ಕಂದಿನಿಂದಲೂ ಬೆಟ್ಟ ಗುಡ್ಡಗಳೊಂದಿಗೆ ಒಂದು ರೀತಿಯಾದ ಭಾವನಾತ್ಮಕ ನಂಟನ್ನು ಹೊಂದಿದ್ದೇವೆ. ಮೊದಲಿಗೆ ಬಸ್ಸುಗಳಲ್ಲಿ ಒಂದೂರಿನಿಂದ ಮತ್ತೊಂದೂರಿಗೆ ಪ್ರಯಾಣ ಮಾಡುವಾಗ ಬೆಟ್ಟ ಗುಡ್ಡಗಳು ಕಾಣ ಸಿಗುತ್ತಿದ್ದವು. ಹಿರಿಯರಿಂದ ಅಥವಾ ಪಾಲಕರಿಂದ ಬರುತ್ತಿದ್ದ ಉತ್ತರವೆಂದರೆ ಈ ಗುಡ್ಡ ದಾಟಿದರೆ ಸಾಕು ಊರು ಬಂದೆ ಬಿಡುತ್ತದೆಂದು.

ಎಲ್ಲ ದೇಶೀಯ ಫ್ಲೈಟ್ ದರಗಳ ಮೇಲೆ 15% ಹಣ ಮರುಪಾವತಿ

ಆ ಒಂದು ನಿಟ್ಟಿನಲ್ಲಿ ನಾವು ಬಿಟ್ಟ ಕಣ್ಣು ಬಿಟ್ಟಂತೆ, ಕಣ್ಪಿಳಿಕಿಸದೆ ಆ ಗುಡ್ಡಗಳನ್ನೆ ಗಮನಿಸುತ್ತ ಪ್ರಯಾಣಿಸಿರುವುದು ನಮ್ಮಲ್ಲಿ ಹಲವರಿಗೆ ಇನ್ನೂ ನೆನಪಿರಬಹುದು. ಈ ರೀತಿಯಾಗಿ ಬೆಟ್ಟ ಗುಡ್ಡಗಳು ನಾವು ಚಿಕ್ಕವರಿದ್ದಾಗ ಊರು ಬರುವುದನ್ನು ಸೂಚಿಸುವ ಮಾಪನಗಳಾಗಿದ್ದರೆ ಬೆಳೆ ಬೆಳೆಯುತ್ತಿದ್ದಂತೆ ಅದೇ ಪರ್ವತ ಬೆಟ್ಟ ಗುಡ್ಡಗಳು ನಮ್ಮನ್ನು ಕೈಬಿಸಿ ಕರೆಯುತ್ತ "ಬಾ ಹತ್ತು ನನ್ನನ್ನು" ಎಂದು ಹೇಳುತ್ತಿವೆ ಎಂಬ ಅನಿಸಿಕೆ ಮೂಡಿಸುವುದರಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು.

ವಿಶೇಷ ಲೇಖನ : ಭಾರತದ ಅತಿ ಎತ್ತರದ ಗಿರಿಶಿಖರಗಳು

ಚಿಕ್ಕ ಪುಟ್ಟ ಬೆಟ್ಟ ಗುಡ್ಡಗಳು ಎಲ್ಲೆಂದರಲ್ಲಿ ಕಂಡುಬರುವುದು ಸಾಮಾನ್ಯ ಆದರೆ ಇವು ಸಾಲು ಸಾಲಾಗಿ ಉದ್ದವಾಗಿ, ವಿಶಾಲವಾಗಿ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಹರಡಿರುವುದನ್ನು ನೋಡಿದಾಗ ಏನೋ ಒಂದು ರೀತಿಯ ಆನಂದ, ಪ್ರಸನ್ನತೆ ಮನದಲ್ಲುಂಟಾಗುತ್ತದೆ. ಈ ಉದ್ದನೆಯ ಸಾಲಿನ ಪರ್ವತಗಳನ್ನೆ ಶ್ರೇಣಿಗಳೆಂದು ಕರೆಯಲಾಗುತ್ತದೆ.

ವಿಶೇಷ ಲೇಖನ : ನಂದಾದೇವಿ ಎಂಬ ರಮಣೀಯ ಪರ್ವತ

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ಕಂಡು ಬರುವ ಕೆಲ ಪ್ರಮುಖ ಪರ್ವತ ಶ್ರೇಣಿಗಳು ಯಾವುವೆಂದು ಎಂಬುದರ ಕುರಿತು ತಿಳಿಯಿರಿ.

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಅರಾವಳಿ ಪರ್ವತ ಶ್ರೇಣಿ : ಅಕ್ಷರಶಃ ಅರಾವಳಿಯನ್ನು ಅರ್ಥೈಸಿದಾಗ ಶೃಂಗಗಳ ಸಾಲು ಎಂಬರ್ಥ ಬರುತ್ತದೆ. ಗುಜರಾತ್, ರಾಜಸ್ಥಾನದ ಮೂಲಕ ದೆಹಲಿಯವರೆಗೂ ಈ ಪರ್ವತ ಶ್ರೇಣಿಯು ಉದ್ದವಾಗಿ ಹರಡಿದೆ. ಇದರ ಒಟ್ಟಾರೆ ಉದ್ದವು ಸುಮಾರು 800 ಕಿ.ಮೀ ಗಳಷ್ಟು. ಇದರ ವಿಶೇಷತೆ ಎಂದರೆ ಇವು ಅತಿ ಪುರಾತನ ಮಡಚುವಿಕೆಯಿಂದುಂಟಾದ ಪರ್ವತಗಳಾಗಿವೆ. ಭೂಗರ್ಭವು ತನ್ನ ಹೊರಪದರದೊಂದಿಗೆ ಘರ್ಷಿಸಿ ಮಡಚುವಿಕೆ ರೂಪಗೊಂಡು ಉಂಟಾದ ಪರ್ವತ ಶ್ರೇಣಿಗಳು. ದೆಹಲಿಯಲ್ಲಿರುವ ದೆಹಲಿ ರಿಡ್ಜ್ ಎಂಬ ಪ್ರದೇಶವು ಈ ಪರ್ವತ ಶ್ರೇಣಿಯ ಕೊನೆಯ ಹಂತವಾಗಿದೆ.

ಚಿತ್ರಕೃಪೆ: Nagarjun Kandukuru

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಡುಂಡವಾ ಪರ್ವತ ಶ್ರೇಣಿ : ಶಿವಾಲಿಕ್ ಪರ್ವತಗಳ ಉಪಶ್ರೇಣಿಯಾಗಿರುವ ಈ ಪರ್ವತ ಶ್ರೇಣಿಯು ಉತ್ತರ ಪ್ರದೇಶ ರಾಜ್ಯದಲ್ಲಿದ್ದು ಬಲಾರಾಂಪುರ ಹಾಗೂ ಶ್ರಾವಸ್ತಿ ಜಿಲ್ಲೆಗಳನ್ನು ಭೌಗೋಳಿಕವಾಗಿ ಬೇರ್ಪಡಿಸುತ್ತದೆ.

ಚಿತ್ರಕೃಪೆ: Rikkimaheshwari

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಪೂರ್ವ ಘಟ್ಟ ಪರ್ವತ ಶ್ರೇಣಿ : ಈಸ್ಟರ್ನ್ ಘಾಟ್ಸ್ ಅಥವಾ ಮಹೇಂದ್ರ ಪರ್ವತ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಪೂರ್ವ ಘಟ್ಟದ ಪರ್ವತ ಶ್ರೇಣಿಯು ಒಡಿಶಾ ರಾಜ್ಯದಿಂದ ಹಿಡಿದು ಆಂಧ್ರ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡಿನ ವರೆಗೂ ಬೃಹತ್ತಾಗಿ ಚಾಚಿದೆ.

ಚಿತ್ರಕೃಪೆ: Sankara Subramanian

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಹರಿಶ್ಚಂದ್ರ ಶ್ರೇಣಿ : ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುವ ಈ ಪರ್ವತ ಶ್ರೇಣಿಯು ಈಶಾನ್ಯ ದಿಕ್ಕಿನಿಂದ ಆಗ್ನೇಯ ದಿಕ್ಕಿನವರೆಗೂ ಹರಡಿದೆ. ಮಹಾರಾಷ್ಟ್ರದ ಪುಣೆ, ಅಹ್ಮದ್ ನಗರ, ಬೀಡ್ ಹಾಗೂ ಒಸ್ಮಾನಾಬಾದ್ ಜಿಲ್ಲೆಗಳಲ್ಲಿ ಈ ಪರ್ವತ ಶ್ರೇಣಿಯು ಹರಡಿದೆ.

ಚಿತ್ರಕೃಪೆ: Zeman

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ವಿಂಧ್ಯ ಪರ್ವತ ಶ್ರೇಣಿ : ಕೇಂದ್ರ ಭಾರತದಲ್ಲಿ ಸ್ಥಿತವಿರುವ ವಿಂಧ್ಯ ಪರ್ವತ ಶ್ರೇಣಿಯು ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಹರಡಿದೆ. ವಿಂಧ್ಯ ಪರ್ವತ ಶ್ರೇಣಿಯು ಇತರೆ ಪರ್ವತ ಶ್ರೇಣಿಗಳಂತೆ ನಿರಂತರವಾಗಿರದೆ ಅಲ್ಲಲ್ಲಿ ಕೊಂಡಿಗಳನ್ನು ಕಳೆದುಕೊಂಡಿರುವುದನ್ನು ಗಮನಿಸಬಹುದು. ಭಾರತೀಯ ಪೌರಾಣಿಕ ಕಥೆಗಳಲ್ಲಿ ವಿಂಧ್ಯ ಪರ್ವತಗಳಿಗೆ ಮಹತ್ವ ನೀಡಿರುವುದನ್ನು ಕಾಣಬಹುದು. ಹಿಂದೆ ಇದು ಇಂಡೋ - ಆರ್ಯನ್ನರ ಭೂಭಾಗವಾಗಿದ್ದ ಆರ್ಯವರ್ತದ ದಕ್ಷಿಣದ ಗಡಿಯಾಗಿತ್ತೆಂದು ಹೇಳಲಾಗಿದೆ.

ಚಿತ್ರಕೃಪೆ: Deeptrivia

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಪಶ್ಚಿಮ ಘಟ್ಟ : ಪೆನಿನ್ಸುಲಾ ಭಾರತದ ಪಶ್ಚಿಮ ಕರಾವಳಿಗೆ ಬಹುತೇಕ ಸಮಾನಾಂತರವಾಗಿ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯು ಚಾಚಿದೆ. ಈ ಉದ್ದನೆಯ ಪರ್ವತ ಶ್ರೇಣಿಯು ದಟ್ಟ ಹಸಿರಿನ ಮರಗಳಿರುವ ಕಾಡಿನಿಂದ ಕೂಡಿದ್ದು ವೈವಿಧ್ಯಮಯ ಜೀವ ಜಂತುಗಳಗೆ ಆಶ್ರಯ ತಾಣವಾಗಿದೆ. ಗುಜರಾತ್ ನಿಂದ ಆರಂಭವಾಗುವ ಈ ಪರ್ವತ ಶ್ರೇಣಿಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ.

ಚಿತ್ರಕೃಪೆ: Bimal K C

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಸಹ್ಯಾದ್ರಿ ಪರ್ವತ ಶ್ರೇಣಿ : ಪಶ್ಚಿಮ ಘಟ್ಟಗಳಲ್ಲೆ ಆವರಿಸಿದೆ ಸಹ್ಯಾದ್ರಿ ಪರ್ವತ ಶ್ರೇಣಿ.

ಚಿತ್ರಕೃಪೆ: Magentic Manifestations

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ನೀಲ್ಗಿರಿ ಪರ್ವತಗಳು : ತಮಿಳುನಾಡು ರಾಜ್ಯದ ಪಶ್ಚಿಮ ಭಾಗದಲ್ಲಿ ಕರ್ನಾಟಕ, ಕೇರಳಗಳಿಗೆ ಹತ್ತಿರವಾಗಿ ಚಾಚಿದೆ ನೀಲ್ಗಿರಿ ಪರ್ವತಗಳು. ಪಶ್ಚಿಮ ಘಟ್ಟಗಳ ಭಾಗವಾಗಿರುವ ಈ ಪರ್ವತಗಳು ಸುಮಾರು 24 ಶಿಖರ ಶೃಂಗಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Thangaraj Kumaravel

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಸಾತ್ಪುರಾ ಪರ್ವತ ಶ್ರೇಣಿ : ಗುಜರಾತ್ ರಾಜ್ಯದ ಅರಬ್ಬಿ ಸಮುದ್ರದ ಬಳಿ ಪ್ರಾರಂಭವಾಗುವ ಈ ಪರ್ವತಗಳ ಸರಣಿಯು ಮಹಾರಾಷ್ಟ್ರ, ಮಧ್ಯ ಪ್ರದೇಶಗಳ ಮೂಲಕ ಸಾಗುತ್ತ ಛತ್ತೀಸ್ಗಡ್ ವರೆಗೂ ಹರಡಿದೆ. ಬಹುತೇಕ ವಿಂಧ್ಯ ಪರ್ವತಗಳಿಗೆ ಸಮಾನಾಂತ್ರವಾಗಿ ಹರಡಿರುವ ಈ ಪರ್ವತಗಳ ಈಶಾನ್ಯ ದಿಕ್ಕಿನ ಕೊನೆಯಲ್ಲಿಯೆ ನರ್ಮದಾ ನದಿಯು ಜನ್ಮ ತಳೆಯುತ್ತದೆ.

ಚಿತ್ರಕೃಪೆ: Abhayashok

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಕುದುರೆಮುಖ ಪರ್ವತ ಶ್ರೇಣಿ : ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಕುದುರೆಮುಖ ಪರ್ವತ ಶ್ರೇಣಿಯನ್ನು ಕಾಣಬಹುದು. ಶೋಲಾ ಅರಣ್ಯಗಳಿಂದ ಈ ಪರ್ವತ ಶ್ರೇಣಿಯು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿಯೂ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Naveen

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಕಾರಾ ಕೋರಂ ಶ್ರೇಣಿ : ಭಾರತ, ಚೀನಾ ಹಾಗೂ ಪಾಕಿಸ್ತಾನಗಳ ಮಧ್ಯದಲ್ಲಿ ಈ ಪರ್ವತ ಶ್ರೇಣಿಯು ಕಂಡುಬರುತ್ತದೆ. ಈ ಪರ್ವತ ಶ್ರೇಣಿಗಳು ಅತಿ ಎತ್ತರದ ಗಿರಿ ಶೃಂಗಗಳನ್ನು ಒಳಗೊಂಡಿದೆ. ಒಟ್ಟಾರೆ ಉದ್ದ ಸುಮಾರು 500 ಕಿ.ಮೀ ಗಳಷ್ಟಾಗಿದ್ದು, ಹಿಮಚ್ಛಾದಿತ ಪರ್ವತಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Guilhem Vellut

ದೈತ್ಯ ಪರ್ವತ ಶ್ರೇಣಿಗಳು:

ದೈತ್ಯ ಪರ್ವತ ಶ್ರೇಣಿಗಳು:

ಹಿಮಾಲಯ ಪರ್ವತ ಶ್ರೇಣಿ : ಅತ್ಯಂತ ಉದ್ದನೆಯ ಸರಣಿಯಾ ಹಿಮಾಲಯ ಪರ್ವತ ಶ್ರೇಣಿಯು ಸುಮಾರು 2400 ಕಿ.ಮೀ ಗಳಷ್ಟು ಉದ್ದವಿದೆ. ಗಂಗಾ, ಸಿಂಧು ಹಾಗೂ ಬ್ರಹ್ಮಪುತ್ರ ನದಿಗಳು ಹಿಮಾಲಯ ಪರ್ವತ ಶ್ರೇಣಿಯಲ್ಲೆ ಉಗಮಗೊಂಡಿವೆ. ಹಿಂದೂಗಳು ಹಾಗೂ ಬೌದ್ಧ ಧರ್ಮೀಯರಿಗೆ ಹಿಮಾಲಯವು ಪವಿತ್ರವಾಗಿದೆ.

ಚಿತ್ರಕೃಪೆ: Prasad Kholkute

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X