India
Search
  • Follow NativePlanet
Share
» »ನೀಟಾದ ಊಟಿ ಕೆರೆಗಳ ಮೈಮಾಟಕ್ಕಿಲ್ಲ ಸಾಟಿ!

ನೀಟಾದ ಊಟಿ ಕೆರೆಗಳ ಮೈಮಾಟಕ್ಕಿಲ್ಲ ಸಾಟಿ!

By Vijay

ದಕ್ಷಿಣ ಭಾರತದ ಪ್ರಖ್ಯಾತ ಗಿರಿಧಾಮಗಳಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ ಊಟಿ ಅಥವಾ ಉದಕಮಂಡಲಂ. ಕೇವಲ ಈ ಭಾಗದ ಜನರಲ್ಲದೆ ಉತ್ತರ ಭಾರತದ ಮೂಲೆ ಮೂಲೆಗಳಿಂದಲೂ ಸಹ ಜನರು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿರುವ ಈ ಸುಂದರ ಗಿರಿಧಾಮಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.

ಎಲ್ಲ ವಯಾಕಾಮ್ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಮೂಲತಃ ಉದಕಮಂಡಲ ಎಂಬ ಹೆಸರನ್ನು ಹೊಂದಿರುವ ಈ ಗಿರಿಧಾಮವು ಬ್ರಿಟೀಷರ ಕಾಲದಲ್ಲಿ ಊಟಿ ಎಂಬ ಹೆಸರು ಪಡೆದು ಇಂದಿಗೂ ಸಹ ಅದೆ ಹೆಸರಿನಿಂದ ಸಾಕಷ್ಟು ಜನಪ್ರೀಯವಾಗಿದೆ. ಸಾಮಾನ್ಯವಾಗಿ ಎಲ್ಲ ಕಾಲಗಳಲ್ಲೂ ಭೇಟಿ ನೀಡಲು ಪ್ರಶಸ್ತವಾಗಿರುವ ಊಟಿ, ಚಿತ್ರೀಕರಣ ನಡೆಸಲೂ ಸಹ ಆದರ್ಶಮಯವಾಗಿದೆ. ಅಂತೆಯೆ ದಕ್ಷಿಣ ಭಾರತದ ಚಿತ್ರಗಳು ಮಾತ್ರವಲ್ಲದೆ ಸಾಕಷ್ಟು ಹಿಂದಿ ಚಿತ್ರಗಳೂ ಸಹ ಊಟಿಯಲ್ಲಿ ಚಿತ್ರೀಕರಣಗೊಂಡಿವೆ. ಊಟಿಯು ಹಿತಕರವಾದ ವಾತಾವರಣ ಹೊಂದಿದ್ದು ಶ್ರೀಮಂತ ಪ್ರಕೃತಿ ಸಂಪತ್ತನ್ನು ಹೊಂದಿರುವುದೆ ಇದಕ್ಕೆ ಮುಖ್ಯ ಕಾರಣ.

ವಿಶೇಷ ಲೇಖನ : ಬೊಂಬಾಟ್ ಮೈಮಾಟದ ಊಟಿ

ಇನ್ನೂ ಊಟಿಯಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ನವ ದಂಪತಿಗಳು, ಸ್ನೇಹಿತರ ಬಳಗ ಹಾಗೂ ಕುಟುಂಬ ಸಮೇತವಾಗಿ ಪ್ರವಾಸ ಹೊರಡಲು ಯೋಗ್ಯವಾಗಿರುವ ಈ ಗಿರಿಧಾಮದಲ್ಲಿರುವ ಕೆಲವು ಸುಂದರ ಕೆರೆ/ಜಲಾಶಯಗಳು ಅತಿ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಊಟಿಯಲ್ಲಿರುವ ಈ ಕೆರೆಗಳು ಊಟಿಯ ಅಂದ ಚೆಂದಗಳಿಗೆ ಮತ್ತಷ್ಟು ಮೆರುಗನ್ನು ನೀಡಿ ಊಟಿಗೆ ಬರುವ ಎಲ್ಲ ಪ್ರವಾಸಿಗರ ಫೆವರೆಟ್ ಆಕರ್ಷಣೆಗಳಾಗಿವೆ. ಪ್ರಸ್ತುತ ಲೇಖನದ ಮೂಲಕ ಊಟಿಯಲ್ಲಿರುವ ಈ ಸುಂದರ ಕೆರೆಗಳಿಗೆ ನೀವು ಒಮ್ಮೆ ಭೇಟಿ ನೀಡಿ.

ಉಪಯುಕ್ತ ಕೊಂಡಿಗಳು : ಊಟಿಗೆ ತೆರಳುವ ಬಗೆ ಊಟಿಯ ಹೋಟೆಲುಗಳು

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆ : ಇದೊಂದು ಮಾನವ ನಿರ್ಮಿತ ಕೃತಕ ಜಲಾಶಯವಾಗಿದ್ದು 1823 ರಿಂದ 1825 ರ ನಡುವೆ ನಿರ್ಮಿಸಲ್ಪಟ್ಟಿದೆ. ನಾಲ್ಕು ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ಕೆರೆಯು ಸುಮಾರು 2.5 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದೆ.

ಚಿತ್ರಕೃಪೆ: Ashwin Kumar

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಸಾಮಾನ್ಯವಾಗಿ ಇತರೆ ಪ್ರವಾಸಿ ಸ್ಥಳಗಳಲ್ಲಿರುವ ಕೆರೆಗಳು ಪ್ರವಾಸಿಗರ ನಿರಂತರ ಭೇಟಿಯಿಂದಾಗಿ ಕಳೆ ಕಳೆದುಕೊಂಡಂತೆ, ಊಟಿ ಕೆರೆಯು ಇರದೆ ತನ್ನ ಸ್ವಚ್ಛತೆ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ಚುಂಬಕದಂತೆ ಸೆಳೆಯುತ್ತದೆ.

ಚಿತ್ರಕೃಪೆ: torilaure

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಇದಕ್ಕೆ ಇನ್ನಷ್ಟು ಇಂಬು ನೀಡುವಂತೆ ಇಲ್ಲಿರುವ ದೋಣಿ ವಿಹಾರ ಸೌಲಭ್ಯ ಇದರ ಮಾದಕತೆಯನ್ನು, ಆಕರ್ಷಣೆಯನ್ನು ಪ್ರವಾಸಿಗರಲ್ಲಿ ಮತ್ತಷ್ಟು ಹೆಚ್ಚಿಸಿದೆ. ಅಂತೆಯೆ ಊಟಿ ಕೆರೆಯಲ್ಲೊಂದು ದೋಣಿ ವಿಹಾರ ಪ್ರವಾಸ ಸಾರ್ಥಕಗೊಳಿಸುವ ವಿಚಾರ.

ಚಿತ್ರಕೃಪೆ: Vinayaraj

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಹಿಂದೆ 1800 ರ ಸಂದರ್ಭದಲ್ಲಿ ಊಟಿಯ ಸುತ್ತಮುತ್ತಲೂ ಕಾಣಬಹುದಾದ ದೈತ್ಯಾಕಾರದ ನೀಲ್ಗಿರಿ ಬೆಟ್ಟಗಳು ತಮ್ಮ ಅಮೋಘ ವೈಭವದಿಂದ ಪ್ರದೇಶದ ವೈಭವತೆಯನ್ನು ಕಾಯ್ದುಕೊಂಡಿದ್ದವು. ಇಲ್ಲಿರುವ ಅದೆಷ್ಟೊ ಬೆಟ್ಟ ಗುಡ್ಡಗಳ ಸಂದುಗಳಿಂದ ನೀರಿನ ಧಾರೆಯು ಉಗಮಗೊಂಡು ಚಿಮ್ಮಿ ಕೆಳ ಮುಖ ಮಾಡಿ ವಸುಂಧರೆಯತ್ತ ಹರಿಯುತ್ತಿದ್ದವು.

ಚಿತ್ರಕೃಪೆ: Irvin calicut

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

1824 ರ ಸಂದರ್ಭದಲ್ಲಿ ಜಾನ್ ಸುಲ್ಲೀವನ್ ಎಂಬಾತನು ಬೆಟ್ಟಗುಡ್ಡಗಳಿಂದ ಹರಿಯುವ ನೀರಿನ ಮೂಲಗಳನ್ನು ಒಂದೆಡೆ ಸಂಗ್ರಹಿಸುವ ಯೋಚನೆ ಮಾಡಿ ಯೋಜನೆ ಹಾಕಿ ಅನುಷ್ಠಾನಗೊಳಿಸಿದ ಪ್ರತಿಫಲವೆ ಇಂದು ನಾವೆಲ್ಲರೂ ಕಾಣುವ ಊಟಿ ಕೆರೆ.

ಚಿತ್ರಕೃಪೆ: Jai Kumara Yesappa

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಇಲ್ಲಿಯವರೆಗೂ ಈ ಸುಂದರ ಕೆರೆಯು ಮೂರು ಸಲ ನೀರಿನಿಂದ ಬರಿದಾದ ಸಂದರ್ಭ ಎದುರಿಸಿದೆ. ಅದೂ ಕೂಡ ಇದಕ್ಕಿದ್ದ ನಿಗದಿತ ಕಟ್ಟೆ ಮೀರಿ ನೀರು ಸಂಗ್ರಹಗೊಂಡು ಬೇರೆಡೆ ಹರಿದಾಗ. ಮೂಲತಃ ಈ ಕೆರೆಯನ್ನು ಫೆರ್‍ರಿಗಳಲ್ಲಿ ಸುತ್ತಾಡುತ್ತ ಮೀನು ಹಿಡಿಯುವ ಉದ್ದೇಶಕ್ಕೆಂದು ನಿರ್ಮಿಸಲಾಗಿತ್ತು.

ಚಿತ್ರಕೃಪೆ: Navaneeth Krishnan S

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ನಂತರ ಈ ಕೆರೆಯು ಉದ್ಯಾನ, ಬಸ್ಸು ನಿಲ್ದಾಣ ಹೀಗೆ ಹಲವು ಸೌಲಭ್ಯಗಳಿಗೆ ಜಾಗ ಒದಗಿಸುತ್ತ ಕ್ರಮೇಣವಾಗಿ ಕ್ಷಿಣಿಸತೊಡಗಿತು. ಕೊನೆಗೆ ತಮಿಳುನಾಡು ಪ್ರವಾಸೋದ್ಯಮ ಇಲಾಖೆಯು ತನ್ನ ತೆಕ್ಕೆಗೆ ಈ ಕೆರೆಯನ್ನು ತೆಗೆದುಕೊಂಡು ಅಭಿವೃದ್ಧಿಪಡಿಸಿ ಪ್ರವಾಸಿಗರ ಮನರಂಜನೆ ಹಾಗೂ ಅನುಕೂಲಕ್ಕೆಂದು ದೋಣಿ ವಿಹಾರದ ಸೌಲಭ್ಯ ಕಲ್ಪಿಸಿತು.

ಚಿತ್ರಕೃಪೆ: Navaneeth Krishnan S

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಯು ತನ್ನ ಸುತ್ತಲೂ ಯುಕ್ಯಾಲಿಪ್ಟಸ್ (ನೀಲ್ಗಿರಿ ಗಿಡಗಳು) ಗಿಡಗಳಿಂದ ಸುತ್ತುವರಿಯಲ್ಪಟ್ಟಿದ್ದು ಅದ್ಭುತವಾಗಿ ಕಂಡುಬರುತ್ತದೆ.ಅಲ್ಲದೆ ಇಲ್ಲಿ ರೈಲು ಹಳಿಯೂ ಸಹ ಹಾದು ಹೋಗಿದ್ದು ಇದರ ಅಂದವನ್ನು ಹೆಚ್ಚಿಸಿದೆ. ಈ ಒಂದು ಸುಂದರ ನೋಟವನ್ನು ಮನತುಂಬಿಕೊಳ್ಳಲೆಂದೆ ಕೆಲ ಪ್ರವಾಸಿಗರು ನಿರಂತರವಾಗಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Jeff Peterson

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಬೇಸಿಗೆಯ ಸಂದರ್ಭದಲ್ಲಿ ಭೇಟಿ ನೀಡಲು ಯೋಗ್ಯವಾಗಿರುವ ಈ ಪ್ರದೇಶವು ನಿರೀಕ್ಷೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಇಂತಹ ಸ್ಂದರ್ಭದಲ್ಲಿ ಅಂದರೆ ಹೆಚ್ಚು ಕಡಿಮೆ ಮೇ ತಿಂಗಳಿನಲ್ಲಿ ಈ ಕೆರೆಯಲ್ಲಿ ದೋಣಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿರುತ್ತದೆ. ಈ ಆನಂದವನ್ನು ಪಡೆಯಲು ಸಾಕಷ್ಟು ಜನರು ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Jeff Peterson

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಕೆರೆಯ ಅಂಗಳದಲ್ಲಿ ಭೇಟಿ ನೀಡಬಹುದಾದ ಮತ್ತೊಂದು ಸುಂದರ ಸ್ಥಳ ಬೋಟ್ ಹೌಸ್. ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಈ ಬೋಟ್ ಹೌಸನ್ನು ನಿರ್ಮಿಸಲಾಗಿದೆ. ಇದೊಂದು ಉಲುವು ತುಂಬಿಕೊಂಡ ಸ್ಥಳವಾಗಿದ್ದು ಮನಸ್ಸಿಗೆ ಸಾಕಷ್ಟು ಪ್ರಸನ್ನತೆಯನ್ನು ಕರುಣಿಸುತ್ತದೆ.

ಚಿತ್ರಕೃಪೆ: Ashwin Kumar

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಇಲ್ಲಿ ಬೋಟಿಂಗ್ ಪ್ರಮುಖ ಹಾಗೂ ಆಕರ್ಷಣೀಯ ಚಟುವಟಿಕೆಯಾಗಿದ್ದು, ಪೆಡಲ್ ಬೋಟ್, ಮೋಟರ್ ಬೋಟ್, ರೋವ್ ಬೋಟ್ ಹೀಗೆ ವೈವಿಧ್ಯಮಯ ದೋಣಿ ವಿಹಾರಗಳು ಪ್ರವಾಸಿಗರಿಗೆಂದು ಲಭ್ಯವಿದೆ. ದೋಣಿಯಲ್ಲಿ ಸಾಗುತ್ತಿರುವಾಗ ಪ್ರದೇಶದ ಅಂದ ಚೆಂದ ವಿಭಿನ್ನ ರೀತಿಯಲ್ಲಿ ಕಣ್ಣುಗಳ ಮುಂದೆ ಬಂದು ಊಟಿ ಕೆರೆಯ ಗಮ್ಮತ್ತನ್ನು ಸಾರಿ ಸಾರಿ ಹೇಳುತ್ತದೆ.

ಚಿತ್ರಕೃಪೆ: Gauri Wur Sem

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಬೋಟ್ ಹೌಸ್ ಅಂಗಳವು ಕೇವಲ ದೋಣಿ ವಿಹಾರಕ್ಕೆ ಮಾತ್ರ ಸೀಮಿತವಾಗಿರದೆ ಇಲ್ಲಿ ಒಂದು ಮನರಂಜನಾ ಉದ್ಯಾನ, ಉಪಹಾರಗೃಹ ಹಾಗೂ ಮಿನಿ ರೈಲಿನ ಸೌಲಭ್ಯವಿದೆ.

ಚಿತ್ರಕೃಪೆ: Gauri Wur Sem

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಪ್ಯಾಕರಾ ಕೆರೆ : ಊಟಿ ಕೆರೆಗಿಂತಲೂ ಸ್ವಚ್ಛವಾಗಿ ಕಂಡುಬರುತ್ತದೆ ಪ್ಯಾಕರಾ ಕೆರೆ. ಪ್ರಶಾಂತ ಪರಿಸರ, ಹಸಿರು ಗಿಡ ಮರಗಳ ಗಂಭೀರ ನಿಲುವು, ತಂಪಾಗಿ ಬೀಸುವ ಕಲ್ಮಶರಹಿತ ಗಾಳಿ, ಈ ಕೆರೆಯ ತಾಣವನ್ನು ಒಂದು ಸುಂದರ ಸ್ಥಳವಾಗಿ ಪರಿವರ್ತಿಸಿವೆ. ಹೆಚ್ಚು ಜನದಟ್ಟನೆ ಇಲ್ಲದ ಕಾರಣ ಏಕಾಂತದಲ್ಲಿ ಹಾಯಾಗಿ ಸಮಯ ಕಳೆಯಲು ಈ ಕೆರೆಯು ಆದರ್ಶಮಯವಾಗಿದೆ.

ಚಿತ್ರಕೃಪೆ: Darshan Simha

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಪ್ಯಾಕರಾ ಕೆರೆಯು ಊಟಿ ಪಟ್ಟಣದಿಂದ ಸುಮಾರು 21 ಕಿ.ಮೀ ದೂರದಲ್ಲಿ ಊಟಿ-ಮೈಸೂರು ಮಾರ್ಗದಲ್ಲಿ ನೆಲೆಸಿದೆ. ಊಟಿಯಿಂದ ಇಲ್ಲಿಗೆ ತಲುಪಲು ಬಾಡಿಗೆ ವಾಹನಗಳು ನಿರಾಯಾಸವಾಗಿ ದೊರೆಯುತ್ತವೆ. ಈ ಕೆರೆಯೂ ಕೂಡ ಬೋಟಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಚಿತ್ರಕೃಪೆ: Amol.Gaitonde

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಎಮರಾಲ್ಡ್ ಕೆರೆ : ಊಟಿ ಬಳಿಯಿರುವ, ನೀಲ್ಗಿರಿ ಜಿಲ್ಲೆಯ ಮತ್ತೊಂದು ಸುಂದರ ಕೆರೆ. ಊಟಿಯಿಂದ ಸುಮಾರು 25 ಕಿ.ಮೀ ದೂರವಿರುವ ಪ್ರವಾಸಿ ಖ್ಯಾತಿಯ "ಸೈಲೆಂಟ್ ವ್ಯಾಲಿ" ಎಂಬ ಪ್ರದೇಶದಲ್ಲಿ ಎಮರಾಲ್ಡ್ ಕೆರೆಯನ್ನು ಕಾಣಬಹುದು. ಇಲ್ಲಿಗೆ ತಲುಪಲು ಊಟಿಯಿಂದ ಬಾಡಿಗೆ ವಾಹನಗಳು ದೊರೆಯುತ್ತವೆ. ಈ ಕೆರೆಯು ಪ್ರಮುಖವಾಗಿ ತನ್ನಲ್ಲಿರುವ ವಿವಿಧ ಬಗೆಯ ಮೀನು ಪ್ರಬೇಧಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ತಂಗಲು ರಿಸಾರ್ಟುಗಳೂ ಸಹ ಇದ್ದು, ಇಲ್ಲಿನ ಪ್ರವಾಸ ಎಂದಿಗೂ ಮರೆಯಲಾಗದ ನೆನಪನ್ನು ಕರುಣಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: L.vivian.richard

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಅವಲಾಂಚೆ ಕೆರೆ : ಊಟಿಯಿಂದ ಕೇವಲ 28 ಕಿ.ಮೀ ಗಳಷ್ಟು ದೂರದಲ್ಲಿರುವ ಅವಲಾಂಚೆ ಕೆರೆಯು ಊಟಿ ಬಳಿಯಿರುವ ಮಗದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಕೆರೆಯಾಗಿದೆ. ಅವಲಾಂಚೆ ಎಂದರೆ ಸಾಮಾನ್ಯವಾಗಿ ಹಠಾತ್ ಆಗಿ ಸಂಭವಿಸುವ ನೈಸರ್ಗಿಕ ಘಟನೆಯಾಗಿದೆ. ಹಿಂದೆ 1800 ರ ಸಮಯದಲ್ಲಿ ಈ ಪ್ರದೇಶದಲ್ಲುಂಟಾದ ಹಠಾತ್ ಭೂಕುಸಿತದಿಂದಾಗಿ ಈ ಪ್ರದೇಶವು ಉಬ್ಬು ತಗ್ಗುಗಳ ಭೂಮಟ್ಟವನ್ನು ಪಡೆಯಿತು ಹಾಗೂ ಇಲ್ಲಿರುವ ಕೆರೆಗೆ ಅವಲಾಂಚೆ ಕೆರೆ ಎಂಬ ಹೆಸರು ಬಂದಿತು. ಈ ಕೆರೆಯು ಪ್ರಮುಖವಾಗಿ ಟ್ರೌಟ್ ಮೀನುಗಳನ್ನು ಹಿಡಿಯುವ ಹವ್ಯಾಸಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Raghavan Prabhu

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಅವಲಾಂಚೆ ಕೆರೆಯ ಮತ್ತೊಂದು ನೋಟ. ಈ ಕೆರೆಯನ್ನು ಮೇಲಿನಿಂದ ಗಮನಿಸಿದಾಗ ಇದು ವಿಶಿಷ್ಟವಾಗಿ "x" ಆಕಾರದಲ್ಲಿರುವುದು ಕಂಡುಬರುತ್ತದೆ.

ಚಿತ್ರಕೃಪೆ: stonethestone

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಇಲ್ಲಿ ಕೇವಲ ಬೋಟಿಂಗ್ ಮೂಲಕ ಹಾಯಾಗಿ ಸುತ್ತಾಡಿದರೆ ಸಾಕು ಪ್ರದೇಶದ ಸುಂದರ ಭೂದೃಶ್ಯಾವಳಿಗಳು ನೋಡುಗರ ಮನವನ್ನು ಪುಳಕಿತಗೊಳಿಸುತ್ತದೆ. ಅಲ್ಲದೆ ಇಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗರು ಕೇವಲ ಬೋಟಿಂಗ್ ಅಲ್ಲದೆ ಪ್ರದೇಶದ ಸುತ್ತಮುತ್ತಲಿನಲ್ಲಿ ಟ್ರೆಕ್ಕಿಂಗ್ ಸಹ ಮಾಡುತ್ತಾರೆ. ಇಲ್ಲಿಂದ ಟ್ರೆಕ್ ಮಾಡುತ್ತ ಮೇಲೆರುತ್ತಾ ಅಪ್ಪರ್ ಭವಾನಿ ಕೆರೆಯನ್ನೂ ಸಹ ತಲುಪಬಹುದಾಗಿದೆ. ಇದೂ ಸಹ ನೋಡಲು ಯೋಗ್ಯವಾದ ಕೆರೆಯಾಗಿದೆ. ಇಲ್ಲಿಗೆ ಟ್ರೆಕ್ಕಿಂಗ್ ಕೂಡ ಅಷ್ಟೆ ಮಜವಾಗಿರುತ್ತದೆ.

ಚಿತ್ರಕೃಪೆ: Raghavan Prabhu

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಕಾಮರಾಜ ಸಾಗರ ಜಲಾಶಯ : ಊಟಿ ಬಸ್ಸು ನಿಲ್ದಾಣದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಕಾಮರಾಜ ಸಾಗರ ಜಲಾಶಯವು ಒಂದು ಪ್ರಸಿದ್ಧ ಪಿಕ್ನಿಕ್ ತಾಣವಾಗಿದೆ. ಅಲ್ಲದೆ ಚಿತ್ರೀಕರಣಕ್ಕೂ ಸಹ ನೆಚ್ಚಿನ ಸ್ಥಳವಾಗಿದೆ. ಇದನ್ನು ಸಂದ್ಯಾನಲ್ಲಾ ಜಲಾಶಯ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Challiyan

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಪ್ಯಾಕಾರಾ ಕೆರೆಯು ಮೇಲೆ ತಿಳಿಸಿದ ಹಾಗೆ ಕೇವಲ ಕೆರೆಗೆ ಮಾತ್ರವಲ್ಲದೆ ಪ್ಯಾಕರಾ ಜಲಪಾತಕ್ಕೂ ಸಹ ಹೆಸರುವಾಸಿಯಾಗಿದೆ. ಮೂಲತಃ ಪ್ಯಾಕರಾ ಎಂಬುದು ಒಂದು ಹಳ್ಳಿಯ ಹೆಸರಾಗಿದೆ.

ಚಿತ್ರಕೃಪೆ: Ksanthosh89

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಪರ್ಸನ್ಸ್ ವ್ಯಾಲಿ ಜಲಾಶಯ : ಊಟಿ ಪಟ್ಟಣದ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ ಈ ಜಲಾಶಯ. ಇದು ಮೂಲವಾಗಿ ಕಾಡಿನ ನಿರ್ಜನ ಪ್ರದೇಶದಲ್ಲಿ ನೆಲೆಸಿರುವುದರಿಂದ ಹೆಚ್ಚಾಗಿ ಜನರು ಇಲ್ಲಿಗೆ ಭೇಟಿ ನೀಡುವುದಿಲ್ಲ. ಆದರೆ ಜಲಾಶಯವು ಪ್ರಶಾಂತವಾಗಿ ನೆಲೆಸಿದ್ದು ಸುತ್ತಮುತ್ತಲಿನ ಪರಿಸರವು ಸಂತೃಪ್ತಿಯನ್ನು ಕರುಣಿಸುತ್ತದೆ.

ಚಿತ್ರಕೃಪೆ: Ambigapathy

ಊಟಿ ಕೆರೆಗಳ ಗಮ್ಮತ್ತು:

ಊಟಿ ಕೆರೆಗಳ ಗಮ್ಮತ್ತು:

ಪೊರ್ತಿಮುಂಡ ಕೆರೆ : ಈ ಕೆರೆಯು ಮೀಸಲು ಅರಣ್ಯ ಪ್ರದೇಶದಲ್ಲಿದ್ದು ಜನರ ಒಡನಾಟವಿಲ್ಲದ ತಾಣವಾಗಿದೆ. ಆದರೆ ಇಲ್ಲಿನ ಪರಿಸರವು ಅದ್ಭುತವಾಗಿದ್ದು ನೋಡುಗರನ್ನು ಮೂಕವಿಸ್ಮಿತಗೊಳಿಸುತ್ತದೆ. ಯಶಸ್ವಿ ಚಿತ್ರವಾದ ರೋಜಾದ ಕೆಲವು ಸನ್ನಿವೇಶಗಳನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.

ಚಿತ್ರಕೃಪೆ: Ambigapathy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X