Search
  • Follow NativePlanet
Share
» »ಕರ್ನಾಟಕದ ಪ್ರವಾಸಿ ವಿಶೇಷ ದ್ವೀಪಗಳು

ಕರ್ನಾಟಕದ ಪ್ರವಾಸಿ ವಿಶೇಷ ದ್ವೀಪಗಳು

By Vijay

ದ್ವೀಪಗಳು ಅಥವಾ ನಡುಗಡ್ಡೆಗಳು ಸಾಮಾನ್ಯವಾಗಿ ನೀರಿನ ಮಧ್ಯದಲ್ಲಿರುವ ಭೂಪ್ರದೇಶಗಳಾಗಿವೆ. ತನ್ನ ಸುತ್ತಲೂ ನೀರಿನಿಂದ ಆವೃತವಾಗಿರುವ ಈ ದ್ವೀಪಗಳು ಪ್ರವಾಸಿ ದೃಷ್ಟಿಯಿಂದ ಜನರನ್ನು ಸೆಳೆಯುತ್ತಲೆ ಇರುತ್ತವೆ. ಇಂತಹ ಅನೇಕ ದ್ವೀಪಗಳನ್ನು/ನಡುಗಡ್ಡೆಗಳನ್ನು ಪ್ರಪಂಚದಾದ್ಯಂತೆ ಎಲ್ಲೆಡೆ ಕಾಣಬಹುದು. ಕೆಲವು ಅಷ್ಟೊಂದು ಅನ್ವೇಷಿಸಲಾರದ ದ್ವೀಪಗಳಾಗಿದ್ದರೆ ಇನ್ನೂ ಕೆಲವು ಜನಪ್ರೀಯ ಪ್ರವಾಸಿ ಕೇಂದ್ರಗಳಾಗಿವೆ.

ವಿಶೇಷ ಲೇಖನ : ನೀವು ತಿಳಿಯಬೇಕಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸತ್ಯಗಳು

ಕರ್ನಾಟಕದಲ್ಲೂ ಕೆಲವು ವಿಶಿಷ್ಟ ದ್ವೀಪಗಳನ್ನು/ನಡುಗಡ್ಡೆಗಳನ್ನು ಕಾಣಬಹುದಾಗಿದೆ. ಈ ದ್ವೀಪಗಳು ನೋಡಲು ಆಕರ್ಷಕವಾಗಿದ್ದು ನಯನಮನೋಹರ ಪ್ರಕೃತಿಯ ಸೊಬಗನ್ನು ಹೊಂದಿವೆ. ಕೆಲವು ನದಿಗಳ ಮಧ್ಯದಲ್ಲಿರುವ ದ್ವೀಪಗಳಾಗಿದ್ದರೆ ಉಳಿದವು ಸಮುದ್ರದಲ್ಲಿ ರೂಪಗೊಂಡ ದ್ವೀಪಗಳಾಗಿವೆ. ಆದರೆ ಭೇಟಿ ನೀಡುವ ಪ್ರವಾಸಿಗರಿಗೆ ಇವು ಸದಾ ನವ ಚೈತನ್ಯ ಉಂಟುಮಾಡುತ್ತವೆ ಎಂದರೆ ತಪ್ಪಿಲ್ಲ.

ಹಾಗಾದರೆ ಕರ್ನಾಟಕದಲ್ಲಿರುವ ಆ ಸುಂದರ, ಆಕರ್ಷಕ ದ್ವೀಪಗಳು ಯಾವುವು...ಅಲ್ಲಿನ ಪ್ರಕೃತಿ ಸಂಪತ್ತು ಹೇಗಿರುತ್ತದೆ...ಆ ದ್ವೀಪಗಳಿಗೆ ಹೇಗೆ ತೆರಳಬಹುದು ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿದ್ದರೆ, ಈ ಲೇಖನವನ್ನೊಮ್ಮೆ ಓದಿ ಬಿಡಿ ಹಾಗೂ ಈ ಮೂಲಕ ಕರ್ನಾಟಕದ ಆ ಸುಂದರ ದ್ವೀಪಗಳ ಕುರಿತು ಮಾಹಿತಿ ತಿಳಿದುಬಿಡಿ. ನಂತರ ನಿಮ್ಮ ರಜೆಗಳಿಗನುಗುಣವಾಗಿ ಈ ದ್ವೀಪಗಳಿಗೆ ಭೇಟಿ ನೀಡಿ ಆನಂದಿಸಿ.

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಬಸವರಾಜದುರ್ಗ ದ್ವೀಪ : ಈ ಸುಂದರ ಹಾಗೂ ಮನಮೋಹಕ ದ್ವೀಪವು ಅರಬ್ಬೀ ಸಮುದ್ರದಲ್ಲಿ ಕಂಡುಬರುತ್ತದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಈ ದ್ವೀಪವು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಹೊನ್ನಾವರದ ಕಡಲ ತೀರದಿಂದ ಸಮುದ್ರದಲ್ಲಿ ನಾಲ್ಕು ಕಿ.ಮೀ ನಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Kumarcnaik

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇತಿಹಾಸವನ್ನು ಹೊಂದಿರುವ ಈ ನಡುಗಡ್ಡೆಯ ಭೂಪ್ರದೇಶದಲ್ಲಿ ಕೋಟೆಯಿರುವುದನ್ನು ಕಾಣಬಹುದು. ಅಂತೆಯೆ ಇದಕ್ಕೆ ದುರ್ಗ ಎಂಬ ಹೆಸರು ಬಂದಿದೆ. ಈ ದ್ವೀಪದ ಸುತ್ತಲೂ ಗಟ್ಟಿ ಮುಟ್ಟಾದ ಬಂಡೆ ಕಲ್ಲುಗಳು ಆವರಿಸಿದ್ದರಿಂದ ಇದು ನೈಸರ್ಗಿಕವಾಗಿ ಕೋಟೆಯ ತಡೆ ಗೋಡೆಯ ಬುಡಕ್ಕೆ ರಕ್ಷಣೆಯನ್ನು ಒದಗಿಸಿದೆ.

ಚಿತ್ರಕೃಪೆ: Kumarcnaik

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಈ ದ್ವೀಪದ ಒಟ್ಟು ವಿಸ್ತಾರವು 19 ಹೆಕ್ಟೇರುಗಳಷ್ಟಾಗಿದ್ದು ಸಮುದ್ರದಿಂದ ಸುಮಾರು 45 ರಿಂದ 50 ಮೀ ಗಳಷ್ಟು ಎತ್ತರದಲ್ಲಿದೆ. ದ್ವೀಪದ ಎತ್ತರದ ಪ್ರದೇಶವು ಒಣ ಹುಲ್ಲುಗಾವಲು ಹಾಗೂ ಗಿಡ ಮರಗಳಿಂದ ತುಂಬಿದೆ. ಈ ದ್ವೀಪದ ಕೋಟೆಯಲ್ಲಿ ದೇವಾಲಯವೊಂದಿದ್ದು ಅದು ಸುಮಾರು 16 ಹಾಗೂ 17 ನೇಯ ಶತಮಾನದ ಮಧ್ಯೆ ನಿರ್ಮಾಣವಾದುದಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: Kumarcnaik

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇಂದಿಗೂ ಆ ದ್ವೀಪ ಕೋಟೆಯ ದೇವಾಲಯಕ್ಕೆ ಹೊನ್ನಾವರ ಹಾಗೂ ಸುತ್ತಲಿನ ಕಡಲ ತೀರಗಳ ಸ್ಥಳೀಯ ಬೆಸ್ತರು ಮಕರಸಂಕ್ರಾಂತಿ ದಿನದಂದು ಭೇಟಿ ನೀಡಿ ವರ್ಷಪೂರ್ತಿ ಸಮುದ್ರವು ಯಾವುದೆ ಪ್ರಳಯ ಸೃಷ್ಟಿಸದೆ ತಮ್ಮನ್ನು ಹಾಗೂ ಪರಿವಾರದವರನ್ನು ರಕ್ಷಿಸು ಅಂತ ಬೇಡಿಕೊಳ್ಳುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ದ್ವೀಪದಲ್ಲಿ ಸಿಹಿ ನೀರಿನ ಕೊಳ/ಬಾವಿಗಳನ್ನು ಕಾಣಬಹುದು. ಈ ದ್ವೀಪ ಅಷ್ಟೊಂದಾಗಿ ಅನ್ವೇಷಿಸಲಾರದ ತಾಣವಾಗಿದೆ.

ಚಿತ್ರಕೃಪೆ: Kumarcnaik

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ನೇತ್ರಾಣಿ ದ್ವೀಪ : ಇದನ್ನು ಪಿಜನ್ ಐಲ್ಯಾಂಡ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇದು ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿರುವ ದ್ವೀಪವಾಗಿದೆ. ಇದೂ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಪ್ರಖ್ಯಾತ ಧಾರ್ಮಿಕ ಪ್ರವಾಸಿ ಕೇಂದ್ರವಾದ ಮುರುಡೇಶ್ವರದಿಂದ ಸಮುದ್ರದಲ್ಲಿ ಹತ್ತು ನಾಟಿಕಲ್ ಮೈಲ್ಸ್ ಅಥವಾ 19 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Chetansv

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಈ ದ್ವಿಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಹೃದಯದ ಆಕರದಲ್ಲಿರುವುದನ್ನು ಗಮನಿಸಬಹುದು. ಇಲ್ಲಿನ ವಿಶೇಷವೆಂದರೆ ಇಲ್ಲಿ ಸಾಕಷ್ಟು ಪಾರಿವಾಳಗಳು ಕಂಡುಬರುತ್ತವೆ. ಅಂತೆಯೆ ಇದಕ್ಕೆ ಪಿಜನ್ ಐಲ್ಯಾಂಡ್ ಎಂಬ ಹೆಸರು ಬಂದಿದೆ. ಇವುಗಳ ಹೊರತಾಗಿ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಡಾಡುಗಳೂ ಸಹ ಕಂಡುಬರುತ್ತವೆ.

ಚಿತ್ರಕೃಪೆ: Subhas nayak

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಹಿಂದೊಮ್ಮೆ ಈ ದ್ವೀಪವನ್ನು ಭಾರತ ಸರ್ಕಾರವು ತನ್ನ ಸೈನ್ಯದ ದಾಳಿ ತರಬೇತಿಗೆಂದು ಇದನ್ನು ಬಳಸುತ್ತಿತ್ತು. ಇಂದಿಗೂ ಈ ದ್ವೀಪದಲ್ಲಿ ಸಾಮಾನ್ಯವಾಗಿ ಕೆಲವು ಬಾಂಬು, ಸಿಡಿ ಮದ್ದುಗಳ ಅವಶೇಷಗಳನ್ನು ಕಾಣಬಹುದಾಗಿದೆ. ಈ ದ್ವೀಪವು ಏರಲು ಕಷ್ಟಕರವಾಗಿದೆ, ಕಾರಣ ಚೂಪಾದ ಹಾಗೂ ಮೊನಚಾದ ಬಂಡೆಗಳು. ಅಲ್ಲದೆ ಇಲ್ಲಿಗೆ ತೆರಳಲು ಅನುಮತಿ ಪಡೆದು ಹೋಗುವುದು ಉತ್ತಮ.

ಚಿತ್ರಕೃಪೆ: Subhas nayak

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇನ್ನೊಂದು ವಿಶೇಷವೆಂದರೆ ಇದೊಂದು ಸ್ಕೂಬಾ ಡವಿಂಗ್ ಕೇಂದ್ರವೂ ಆಗಿದ್ದು ಹವಳದ (ಕೋರಲ್ ರೀಫ್) ದ್ವೀಪವಾಗಿದೆ. ಹಲವು ಏಜನ್ಸಿಗಳು ಮುರುಡೇಶ್ವರ, ಗೋವಾಗಳಿಂದ ಇಲ್ಲಿಗೆ ಸ್ಕೂಬಾ ಡೈವಿಂಗ್ ತರಬೇತಿಯನ್ನು ಏರ್ಪಡಿಸುತ್ತಿರುತ್ತವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Toby Hudson

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಈ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಇರುವ ಮುಖ್ಯ ಉದ್ದೇಶವೆಂದರೆ ಇಲ್ಲಿರುವ ಹವಳದ ದಿಬ್ಬಗಳು. ಸಾಮಾನ್ಯವಾಗಿ ಈ ಹವಳದ ದಿಬ್ಬಗಳಲ್ಲಿ ಅತಿ ವಿಶಿಷ್ಟವಾದ ಜಲಚರಗಳು, ಮೀನುಗಳು ಕಂಡುಬರುತ್ತವ್ವೆ. ಇವುಗಳನ್ನು ಕಣ್ಣಾರೆ ನೋಡುವುದೆ ಒಂದು ರೋಮಾಂಚಕ ಅನುಭವ. ಈ ರೀತಿಯ ಮೀನುಗಳು ಈ ನೇತ್ರಾವತಿ ದ್ವೀಪದ ಸುತ್ತ ಮುತ್ತ ಕಂಡುಬರುತ್ತವೆ. ಬಟರ್ ಫ್ಲೈ ಮೀನು.

ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ವಿಶಿಷ್ಟವಾದ ಟೈಗರ್ ಫಿಷ್. ಈ ಮೀನುಗಳನ್ನು ನೀವು ಸಮುದ್ರದಾಳದಲ್ಲಿ ಇಳಿದು ನೋಡುವಾಗ ತುಸು ಎಚ್ಚರಿಕೆಯಿಂದಿರಿ. ಏಕೆಂದರೆ ಇದಕ್ಕೆ ಚೂಪಾದ ಹಲ್ಲುಗಳಿದ್ದು ನಿಮಗೆ ಘಾಸಿಗೊಳಿಸಬಹುದು.

ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇದನ್ನು ಪ್ಯಾರಟ್ ಫಿಷ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Nhobgood

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ವಿಶಿಷ್ಟವಾದ ಈಲ್ ಮೀನು.

ಚಿತ್ರಕೃಪೆ: Brocken Inaglory

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ನೇತ್ರಾಣಿ ದ್ವೀಪಕ್ಕೆ ಭೇಟಿ ನೀಡಿ, ಆನಂದಿಸಿ, ಸುಂದರ ಅನುಭವ ತಮ್ಮದಾಗಿಸಿಕೊಂಡು ಕಡಲ ತೀರಗಳಿಗೆ ಮರಳುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Subhas nayak

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಪಾವೂರು ಉಲಿಯಾ : ಇದೊಂದು ನೇತ್ರಾವತಿ ನದಿಯಲ್ಲಿ ರೂಪಗೊಂಡಿರುವ ಚಿಕ್ಕ ನಡುಗಡ್ಡೆ ದ್ವೀಪವಾಗಿದೆ. ಇಲ್ಲಿ ಅತಿ ಕಡಿಮೆ ಸಂಖ್ಯೆಯ ಕುಟುಂಬಗಳು ವಾಸಿಸುತ್ತವೆ. ಅವರಲ್ಲಿ ಭುತೇಕರು ಕ್ರಿಶ್ಚಿಯನ್ನರಾಗಿದ್ದಾರೆ. ಇವರ ಮೂಲ ಉದ್ಯೋಗ ಮೀನುಗಾರಿಕೆ, ತೆಂಗು ಬೆಳೆ ಹಾಗೂ ಮಾವು ಮತ್ತು ಹಲಸು ಹಣ್ಣುಗಳನ್ನು ಬೆಳೆಯುವುದು. ಈ ನಡುಗಡ್ಡೆ ಮಂಗಲೂರು ನಗರದಿಂದ 12 ಕಿ.ಮೀ ದೂರದಲ್ಲಿದೆ. ಇದರ ಸುತ್ತಲೂ ನೇತ್ರಾವತಿ ನದಿ ಹರಿದಿದೆ. ಬೇಸಿಗೆಯ ಸಮಯದಲ್ಲಿ ಇಲ್ಲಿರುವ ಸಾಂಪ್ರದಾಯಿಕ ಕಟ್ಟಿಗೆ ಸೇತುವೆಗಳ ಮೂಲಕ ಜನರು ಮುಖ್ಯ ಭೂಮಿಗೆ ಬರುತ್ತಾರೆ.

ಚಿತ್ರಕೃಪೆ: Vaikoovery

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇನ್ನೂ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಜನರು ಮುಖ್ಯ ಭೂಮಿಗೆ ತೆರಳಲು ದೋಣಿಗಳನ್ನೆ ನೆಚ್ಚಿಕೊಳ್ಳಬೇಕು. ವಿಶೇಷವೆಂದರೆ ಈ ನಡುಗಡ್ಡೆಯಲ್ಲಿ ಯಾವುದೆ ವಾಣಿಜ್ಯ ಕೇಂದ್ರಗಳಿಲ್ಲ. ಅಂಗಡಿ, ಆಸ್ಪತ್ರೆ, ಶಾಲೆಗಳಿಲ್ಲ. ವಿದ್ಯುತ್ ದೀಪಗಳೂ ಸಹ ಇಲ್ಲಿಲ್ಲ. ಒಂದು ಚರ್ಚ್ ಮಾತ್ರವಿದೆ.

ಚಿತ್ರಕೃಪೆ: Vaikoovery

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಶ್ರೀರಂಗಪಟ್ಟಣ : ಮೈಸೂರು ನಗರದಿಂದ ಕೇವಲ 15 ರಿಂದ 20 ಕಿ.ಮೀ ಗಳಷ್ಟೆ ದೂರದಲ್ಲಿರುವ ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಬರುತ್ತದೆ ಹಾಗೂ ಇದೊಂದು ದ್ವೀಪ ಪಟ್ಟಣವೆಂದೆ ಹೇಳಬಹುದು. ಏಕೆಂದರೆ ಇದರ ನಾಲ್ಕು ಬದಿಯಲ್ಲೂ ಕಾವೇರಿ ನದಿಯು ಹರಿದಿದೆ.

ಚಿತ್ರಕೃಪೆ: Ashwin Kumar

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕು ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ. ಶ್ರೀರಂಗಪಟ್ಟಣದ ಬಳಿ ಇರುವ ಪ್ರಖ್ಯಾತ ಬಲಮುರಿ ಜಲಪಾತ.

ಚಿತ್ರಕೃಪೆ: Ashwin Kumar

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.

ಚಿತ್ರಕೃಪೆ: Adam63

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ (ಗಗನಚುಕ್ಕಿ ಹಾಗೂ ಭರಚುಕ್ಕಿ) ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ. ಭರಚುಕ್ಕಿ ಜಲಪಾತ.

ಚಿತ್ರಕೃಪೆ: MikeLynch

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಗಗನಚುಕ್ಕಿ ಜಲಪಾತದ ಸುಂದರ ನೋಟ.

ಚಿತ್ರಕೃಪೆ: M.arunprasad

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಶ್ರೀರಂಗಪಟ್ಟಣದ ಸಂಗಮ - ಇಲ್ಲಿ ಕಾವೇರಿ, ಕಬಿನಿ ಮತ್ತು ಹೇಮಾವತಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ. ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Philanthropist 1

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಈ ಊರು ತನ್ನದೆ ಆದ ರೈಲುನಿಲ್ದಾಣವನ್ನುಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನನಿಲ್ದಾಣವಾಗಿದೆ. ರಸ್ತೆಯಮೂಲಕವು ಶ್ರೀರಂಗಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.

ಚಿತ್ರಕೃಪೆ: Ilya Mauter

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಸೇಂಟ್ ಮೇರಿಯ ದ್ವೀಪ: ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಸಂತ ಮೇರಿಯ ದ್ವೀಪ ಸಮೂಹವನ್ನು ಕರ್ನಾಟಕ ರಾಜ್ಯದ ಕೇವಲ ನಾಲ್ಕು ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಹಾಗು ದೇಶದ 26 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದೆಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ. ಮಲ್ಪೆಯ ತೀರದಿಂದ ದ್ವೀಪಕ್ಕೆ ತೆರಳುವಾಗ ದೂರದಿಂದ ಸಂತ ಮೇರಿಯ ದ್ವೀಪ ಕಂಡುಬರುವ ರೀತಿ.

ಚಿತ್ರಕೃಪೆ: Man On Mission

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇದರ ಮೊದಲ ಹೆಸರು "ತೋನ್ಸೆ ಪಾರ್" ಎಂದಾಗಿತ್ತಂತೆ. ಇತಿಹಾಸದ ಪ್ರಕಾರ 1497ರಲ್ಲಿ ಪೋರ್ಚುಗೀಸ್‌ ಶೋಧಕ/ನಾವಿಕ ವಾಸ್ಕೋ ಡ ಗಾಮ , ಯೂರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಯೆಸು ಕ್ರಿಸ್ತನ ಶಿಲುಭೆ ನೆಟ್ಟು "El Padron de Santa Maria" ಅಂದರೆ ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ ಎಂದು ಹೆಸರಿಟ್ಟ ಎಂದು ನಂಬಲಾಗಿದೆ. ಆದರಿಂದಾಗಿ ಈಗಿನ ಸೈಂಟ್ ಮೇರೀಸ್ ದ್ವೀಪ ಹೆಸರನ್ನು ಪಡೆಯಿತು ಎನ್ನಲಾಗಿದೆ.

ಚಿತ್ರಕೃಪೆ: Subhashish Panigrahi

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಸೈಂಟ್ ಮೇರೀಸ್ ದ್ವೀಪವು ನಾಲ್ಕು ದ್ವೀಪಗಳ ಸಮೂಹದಿಂದಾಗಿದೆ. ಈ ನಾಲ್ಕು ದ್ವೀಪಗಳಲ್ಲಿನ ಒಂದಾದ ಉತ್ತರದಲ್ಲಿರುವ ದ್ವೀಪವು "ಬಸಾಲ್ಟಿಕ್" (basaltic rock) ಕಲ್ಲುಗಳಿಂದಾಗಿ ರಚನೆಯಾಗಿ ಷಡ್ಭುಜ ಶಿಲಾಸ್ತರಗಳ ಸಮೂಹವಾಗಿದೆ. ಈ ಶಿಲಾಸ್ತರಗಳ ಸಮೂಹ ವಿಶಿಷ್ಟವಾಗಿದ್ದು ದೇಶದಲ್ಲಿ ಏಕಮಾತ್ರವೆ ಈ ರೀತಿಯ ಸಮೂಹವಿದೆ ಎನ್ನಲಾಗಿದೆ. ದ್ವೀಪದ ವಿಸ್ತಾರವು 500 ಮೀ ಉದ್ದವಿದ್ದು 100 ಮೀ. ಅಗಲವಿದೆ.

ಚಿತ್ರಕೃಪೆ: Bailbeedu

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ವ್ಯಾಪಿಸಿದ್ದು ನೋಡಲು ವಿಶಿಷ್ಟವಾಗಿ ಕಾಣಿಸುತ್ತದೆ. ಜನವಸತಿಯಿಲ್ಲದ ಈ ನಾಲ್ಕು ದ್ವೀಪಗಳ ಸಮೂಹವು ಇಂದು ಕೇವಲ ಪ್ರವಾಸಿ ತಾಣವಾಗಿ ಮಾತ್ರವೆ ಉಳಿದಿದೆ. ಇಲ್ಲಿರುವ ಆ ನಾಲ್ಕು ದ್ವೀಪಗಳೆಂದರೆ ಕೊಕೊನಟ್ ದ್ವೀಪ, ಉತ್ತರ ದ್ವೀಪ, ದೈರ್ಯಬಹಾದ್ದೂರ ದ್ವೀಪ ಹಾಗು ದಕ್ಷಿಣ ದ್ವೀಪ.

ಚಿತ್ರಕೃಪೆ: Arun Keerthi K. Barboza

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ನಿಸರ್ಗಧಾಮ : ನಿಸರ್ಗಧಾಮವು ಕಾವೇರಿ ನದಿಯಲ್ಲಿನ ಒಂದು ದ್ವೀಪವಾಗಿದೆ. ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದೊಂದು ಪಾರಂಪರಿಕ ಪಾರ್ಕ್‌ ಆಗಿದ್ದು ಸುಮಾರು 35 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. ದೋಣಿ ವಿಹಾರವು ಇಲ್ಲಿ ಲಭ್ಯವಿದ್ದು ಪ್ರವಾಸಿಗರಿಗೆ ಹೆಚ್ಚಿನ ಸಂತಸವನ್ನು ಕರುಣಿಸುತ್ತದೆ.

ಚಿತ್ರಕೃಪೆ: Avinash Raj

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

90 ಮೀಟರು ಉದ್ದದ ಸೇತುವೆಯನ್ನು ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದೆ. ಇದರ ಮೂಲಕ ಕಾವೇರಿಯ ನದಿಯನ್ನು ಪ್ರವಾಸಿಗರು ದಾಟಬಹುದು. ಹಳೆಯ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆಯನ್ನು ಕೂಡಾ ನಿರ್ಮಿಸಲಾಗಿದೆ. ದಟ್ಟವಾದ ಹಸಿರು ಜೊತೆಗೆ ಯಥೇಚ್ಛವಾಗಿ ಬೆಳೆದಿರುವ ಬಿದಿರು ಮರಗಳು, ಗಂಧದ ಮರಗಳು, ತೇಗದ ಮರಗಳು ಮತ್ತು ಚಿಕ್ಕ ಪುಟ್ಟ ಜಲಪಾತಗಳು ಕಾವೇರಿಯ ಎರಡೂ ಕಡೆಗಳಲ್ಲಿ ವ್ಯಾಪಿಸಿದ್ದು ವಿಶಿಷ್ಟವಾದ ಅನುಭವ ನೀಡುತ್ತದೆ. ಇದೊಂದು ಅಭಯಾರಣ್ಯವಾಗಿದ್ದು ಪ್ರವಾಸಿಗರಲ್ಲಿ ತುಂಬಾ ಜನಪ್ರಿಯವಾಗಿದೆ.

ಚಿತ್ರಕೃಪೆ: Rameshng

ಕರ್ನಾಟಕದ ಸುಂದರ ದ್ವೀಪಗಳು:

ಕರ್ನಾಟಕದ ಸುಂದರ ದ್ವೀಪಗಳು:

ಇಲ್ಲಿ ವಿವಿಧ ಪ್ರಾಣಿಗಳನ್ನು ನೋಡಬಹುದು. ಕರಡಿ, ಆನೆಗಳು, ಮೊಲಗಳು, ನವಿಲುಗಳು ಮತ್ತು ಇತರ ಪ್ರಾಣಿಗಳನ್ನು ಆಗಾಗ್ಗೆ ಕಾಣಬಹುದು. ಇಲ್ಲಿ ಮರದ ಮೇಲಿನ ಬಿದಿರು ಹಾಸಿಗೆಗಳು ಮತ್ತು ಅರಣ್ಯ ಇಲಾಖೆಯು ನಡೆಸುವ ಪ್ರವಾಸಿ ಮಂದಿರವಿದೆ. ಪ್ರವಾಸಿಗರಲ್ಲಿ ಇದು ತುಂಬಾ ಜನಪ್ರಿಯವಾದ ಪಿಕ್‌ನಿಕ್‌ ತಾಣವಾಗಿದ್ದು, ಈ ಪ್ರದೇಶದ ನಿಸರ್ಗ ಸೌಂದರ್ಯದಿಂದಾಗಿ ಮರೆಯಲಾರದ ಅನುಭವ ಉಂಟಾಗುತ್ತದೆ.

ಚಿತ್ರಕೃಪೆ: Rameshng

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X