Search
  • Follow NativePlanet
Share
» »ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ದಕ್ಷಿಣ ಭಾರತದ ಅತ್ಯಂತ ಜನಪ್ರಿಯವಾದ ತಾಣ ಯಾವುದು ಗೊತ್ತ?

ನಮ್ಮ ಭಾರತದಲ್ಲಿ ಹಲವಾರು ದೇವಾಲಯಗಳು, ಬೆಟ್ಟಗಳು, ಗುಹೆಗಳು, ವಿಚಿತ್ರಗಳು, ವಿಭಿನ್ನತೆಗಳನ್ನು ಕಾಣಬೇಕಾದರೆ ಒಮ್ಮೆ ದಕ್ಷಿಣ ಭಾರತಕ್ಕೆ ಭೇಟಿ ನೀಡಲೇಬೇಕು. ರಜಾ ಅವಧಿಯಲ್ಲಿ ನೀವು ಈ ಲೇಖನದಲ್ಲಿ ಹೇಳಲಾಗುವ ತಾಣಗಳಿಗೆ ಒಮ್ಮೆ ಭೇಟಿ ನೀಡಬಹುದಾಗಿದ

ನಮ್ಮ ಭಾರತದಲ್ಲಿ ಹಲವಾರು ದೇವಾಲಯಗಳು, ಬೆಟ್ಟಗಳು, ಗುಹೆಗಳು, ವಿಚಿತ್ರಗಳು, ವಿಭಿನ್ನತೆಗಳನ್ನು ಕಾಣಬೇಕಾದರೆ ಒಮ್ಮೆ ದಕ್ಷಿಣ ಭಾರತಕ್ಕೆ ಭೇಟಿ ನೀಡಲೇಬೇಕು. ರಜಾ ಅವಧಿಯಲ್ಲಿ ನೀವು ಈ ಲೇಖನದಲ್ಲಿ ಹೇಳಲಾಗುವ ತಾಣಗಳಿಗೆ ಒಮ್ಮೆ ಭೇಟಿ ನೀಡಬಹುದಾಗಿದೆ.

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮುಖ್ಯವಾಗಿ ಈ ಸ್ಥಳಗಳಿಗೆ ನೀವು ಭೇಟಿ ನೀಡಿರುವುದಿಲ್ಲ. ಹಾಗಾಗಿಯೇ ಆ ಸ್ಥಳಗಳ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ಪಡೆದು ಭೇಟಿ ನೀಡಿ ಬನ್ನಿ. ಪ್ರವಾಸವೆಂದರೆ ಹಾಗೆ ಒಂದು ಸ್ಥಳವನ್ನು ಕಾಣಲು ಉತ್ಸಹದಿಂದ ಇರುವ ನಾವು ಆ ಪ್ರದೇಶದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಬೇಕು ಎಂಬ ಕಾತುರವಿರುವುದು ಸಾಮಾನ್ಯ. ಅಂಥಹ ಮನೋಹರವಾದ ಸ್ಥಳಗಳಿಗೆ ಭೇಟಿ ನೀಡಿದರೆ ದಿನದ ಒತ್ತಡವೆಲ್ಲಾ ಮಾಯವಾಗುತ್ತದೆ ಎಂದೇ ಹೇಳಬಹುದು.

ಹಾಗಾದರೆ ದಕ್ಷಿಣ ಭಾರತದ ಅತ್ಯಂತ ಸುಂದರವಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

ತಲಶ್ಯೇರಿ

ತಲಶ್ಯೇರಿ

ತಲಶ್ಯೇರಿಯನ್ನು "ಮಲಬಾರ್ ತೀರದ ಪ್ಯಾರಿಸ್" ಎಂದು ಕರೆಯುತ್ತಾರೆ. ಈ ಸುಂದರವಾದ ಸ್ಥಳಕ್ಕೆ ಪ್ರವಾಸಿಗರು ಮನಸೋಲದೆ ಇರುವುದಿಲ್ಲ. ಈ ಸುಂದರವಾದ ವಾತಾವರಣವು ನಮ್ಮನ್ನು ಆಕರ್ಷಿಸುತ್ತದೆ. ಈ ಅದ್ಭುತವಾದ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ತಲಶ್ಯೇರಿಯನ್ನು ಕೇಕ್‍ಗಳ, ಕ್ರಿಕೆಟ್‍ಗಳ ಹಾಗು ಸರ್ಕಸ್‍ನ ಪಟ್ಟಣವೆಂದು ಸಹ ತಲಶ್ಯೇರಿಯನ್ನು ಕರೆಯುತ್ತಾರೆ.


PC: Kerala Tourism

ತರಂಗಂಬಾಡಿ

ತರಂಗಂಬಾಡಿ

ಈ ತರಂಗಬಾಡಿಯು ಒಂದು ಕಾಲದಲ್ಲಿ ಅಂದರೆ 1620 ರಿಂದ 1845 ರವೆರೆಗೆ ಈ ಪಟ್ಟಣವು ಟಾನಿಷ್ ದೇಶದ ವಸಾಹತು ಆಗಿತ್ತು. ಇದಕ್ಕೆ ನಿರ್ದಶನ ಎಂಬಂತೆ ಇಲ್ಲಿ ಡ್ಯಾನ್ಸ್ ಬೋರ್ಗ್ ಕೋಟೆಯನ್ನು ಕಾಣಬಹುದಾಗಿದೆ. ಈ ಸ್ಥಳವು ಅತ್ಯಂತ ಹಿತದಾಯವಾಗಿದ್ದು, ಸಾಮಾನ್ಯವಾಗಿ ಈ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೇ ಅಲ್ಲದೇ ಇಲ್ಲಿ ಹಲವಾರು ತಾಣಗಳು ಇವೆ.


PC:Sumansukumar745

ಪೊಲ್ಲಾಚಿ

ಪೊಲ್ಲಾಚಿ

ಈ ಸುಂದರವಾದ ಸ್ಥಳವು ಕೊಯಂಬತ್ತೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿ ಪೊಲ್ಲಾಚಿ ಇದೆ. ಇಲ್ಲಿ ಅತ್ಯಂತ ಮನೋಹರವಾದ ವಾತಾವರಣದಿಂದ ಕೂಡಿದ್ದು, ಸಾಹಸಭರಿತ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಈ ಸ್ಥಳವನ್ನು ಒಂದೇ ಮಾತಿನಲ್ಲಿ ವರ್ಣಿಸಬೇಕು ಎಂದಾದರೆ "ಸ್ವರ್ಗ" ವೇ ಸರಿ.


PC:Valliravindran

ಬಾದಾಮಿ

ಬಾದಾಮಿ

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಅತ್ಯಂತ ಅದ್ಭುತವಾದ ಗುಹೆಗಳಾಗಿವೆ. ಇದನ್ನು ಚಾಲುಕ್ಯರು ನಿರ್ಮಾಣ ಮಾಡಿದ್ದು, ಅವರ ವಾಸ್ತುಶಿಲ್ಪ ಶೈಲಿಯಲ್ಲಿಯೇ ಕಂಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಸ್ಥಳವನ್ನು ಒಂದು ಕಾಲದಲ್ಲಿ ವಾತಾಪಿ ಎಂದು ಕರೆಯಲಾಗುತ್ತಿತ್ತು. 6 ನೇ ಶತಮಾನದಲ್ಲಿ ವಾತಾಪಿಯು ಚಾಲುಕ್ಯರ ರಾಜಧಾನಿಯಾಯಿತು.


PC:Dineshkannambadi

ಅಥಿರಪಿಲ್ಲಿ ಜಲಪಾತ

ಅಥಿರಪಿಲ್ಲಿ ಜಲಪಾತ

ಶೊಲಯಾರ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಅಥಿರಪಿಲ್ಲಿ ಜಲಪಾತಗಳ ಭವ್ಯವಾದ, ಸೊಗಸಾದ ವಾತಾವರಣವನ್ನು ಇಲ್ಲಿ ಅನುಭವಿಸಬಹುದಾಗಿದೆ. ಈ ಜಲಪಾತವು ಸುಮಾರು 80 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. ಇದೊಂದು ಅದ್ಭುತವಾದ ಸ್ಥಳವಾಗಿದ್ದು, ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

PC: Framesnlight

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X