Search
  • Follow NativePlanet
Share
» »4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ

4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ

ಆದರೆ ಹಿಮಾಚಲ ಪ್ರದೇಶದಲ್ಲಿನ ಒಂದು ದೇವಾಲಯ ಮಾತ್ರ ಸುಮಾರು 8 ತಿಂಗಳ ಕಾಲ ನೀರಿನಲ್ಲಿಯೇ ಮುಳುಗಿರುತ್ತದೆ. ಇಂತಹ ದೇವಾಲಯದ ಬಗ್ಗೆ ಬಹುಶಃ ನೀವು ಭೇಟಿ ಮಾಡಿಲ್ಲ ಎಂದೇ ಹೇಳಬಹುದು. ಈ ದೇವಾಲಯವು ಹಲವಾರು ದಶಕಗಳಿಂದಲೂ ಇದೇ ಪದ್ಧತಿಯನ್ನೇ ರೂಢಿಕೊಂಡ

ನಮ್ಮ ಭಾರತ ದೇಶದಲ್ಲಿ ನಮಗೆ ತಿಳಿಯದ ಹಲವಾರು ವಿಷಯಗಳು ಅಡಗಿವೆ. ಅದರಲ್ಲಿ ದೇವತೆಗಳ ಭೂಮಿಯಾಗಿ ಭಾವಿಸುವ ಹಿಮಾಚಲ ಪ್ರದೇಶದಲ್ಲಿನ ಸ್ಥಳವು ಒಂದು. ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಪ್ರಾಚೀನ ಕಾಲದ ಚರಿತ್ರೆಯನ್ನು ಹೊಂದಿರುವ ಈ ರಾಜ್ಯವು ಹಲವಾರು ರಹಸ್ಯಮಯ ತಾಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿವೆ. ನಾವು ಸಾಧಾರಣಾವಾಗಿ ದೇವಾಲಯವನ್ನು ಬೆಟ್ಟದ ಮೇಲೆ ಅಥವಾ ದಟ್ಟವಾದ ಅರಣ್ಯದಲ್ಲಿ ಇರುವುದನ್ನು ಕೇಳಿದ್ದೇವೆ, ಭೇಟಿ ಮಾಡಿದ್ದೇವೆ.

ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!

ಆದರೆ ಹಿಮಾಚಲ ಪ್ರದೇಶದಲ್ಲಿನ ಒಂದು ದೇವಾಲಯ ಮಾತ್ರ ಸುಮಾರು 8 ತಿಂಗಳ ಕಾಲ ನೀರಿನಲ್ಲಿಯೇ ಮುಳುಗಿರುತ್ತದೆ. ಇಂತಹ ದೇವಾಲಯದ ಬಗ್ಗೆ ಬಹುಶಃ ನೀವು ಭೇಟಿ ಮಾಡಿಲ್ಲ ಎಂದೇ ಹೇಳಬಹುದು. ಈ ದೇವಾಲಯವು ಹಲವಾರು ದಶಕಗಳಿಂದಲೂ ಇದೇ ಪದ್ಧತಿಯನ್ನೇ ರೂಢಿಕೊಂಡೆ ಬಂದಿದೆ. ವಿಚಿತ್ರವೆನೆಸಿದರು ಇದು ನಿಜ. ಹಾಗಾದರೆ ಈ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು? ಎಲ್ಲಿ ನಿರ್ಮಾಣ ಮಾಡಿದರು ಎಂಬ ಹಲವಾರು ವಿವಿರವನ್ನು ಲೇಖನದ ಮೂಲಕ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ದೇವಾಲಯವು ಅತ್ಯಂತ ಪ್ರಾಚೀನವಾಗಿದ್ದು, ಸುಮಾರು 8 ತಿಂಗಳ ಕಾಲ ನೀರಿನಲ್ಲಿಯೇ ಇರುತ್ತದೆ. ಈ ದೇವಾಲಯವನ್ನು ಬಾತೂ ಕಿ ಲಡಿ ಎಂದು ಕರೆಯಲಾಗುತ್ತದೆ. ಈ ವಿಚಿತ್ರವಾದ ದೇವಾಲಯವು ಹಿಮಾಚಲ ಪ್ರದೇಶದಲ್ಲಿನ ಕಾಂಗ್ರಾ ಜಿಲ್ಲೆಯಲ್ಲಿದೆ.

ಮಹಾರಾಣಾ ಪ್ರತಾಪ್ ಸಾಗರ್

ಮಹಾರಾಣಾ ಪ್ರತಾಪ್ ಸಾಗರ್

ಆದರೆ ಈ ದೇವಾಲಯವನ್ನು 1970 ರಲ್ಲಿ ನಿರ್ಮಾಣ ಮಾಡಿದ ಮಹಾರಾಣಾ ಪ್ರತಾಪ್ ಸಾಗರ್ ಪ್ರಸ್ತುತ ಷಾಂಗ್ ಡ್ಯಾಂನಲ್ಲಿ ಜಲಸಮಾಧಿಯಲ್ಲಿ ಇದೆ. ಸುಮಾರು 8 ತಿಂಗಳ ಕಾಲ ನೀರಿನಲ್ಲಿಯೇ ಇರುವ ಕೇವಲ 4 ತಿಂಗಳ ಕಾಲ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ ಎಂತೆ ಈ ದೇವಾಲಯ.

ಪೌರಾಣಿಕ ಕಥೆಯ ಪ್ರಕಾರ

ಪೌರಾಣಿಕ ಕಥೆಯ ಪ್ರಕಾರ

ಈ ದೇವಾಲಯಕ್ಕೆ ಭೇಟಿ ನೀಡಲು ಹಲವಾರು ಪ್ರವಾಸಿಗರು ಆ ಸ್ಥಳಕ್ಕೆ ಬೋಟ್‍ನಲ್ಲಿ ತೆರಳುತ್ತಾರೆ. ಸುಮಾರು 50 ವರ್ಷದಿಂದ ಇದು ನೀರಿನಲ್ಲಿಯೇ ಮುಳುಗಿದೆ. ಆದರೆ ಇಲ್ಲಿನ ಸ್ಥಳೀಯರ ಪೌರಾಣಿಕ ಕಥೆಯ ಪ್ರಕಾರ ಈ ದೇವಾಲಯದಲ್ಲಿ ಸ್ವರ್ಗಕ್ಕೆ ಹೋಗಲು ಮೆಟ್ಟಿಲುಗಳು ಇವೆ ಎಂದು ಹಾಗೆಯೇ ಇಲ್ಲಿ 5 ಸಾವಿರ ವರ್ಷಗಳ ಹಿಂದೆ ಪಾಂಡವರು ಅಜ್ಞಾತವಾಸದಲ್ಲಿದ್ದ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗಿದೆ.

6 ತಿಂಗಳ ಒಂದು ರಾತ್ರಿ

6 ತಿಂಗಳ ಒಂದು ರಾತ್ರಿ

ಪಾಂಡವರು ತಮ್ಮ ಅಜ್ಞಾತ ವಾಸದಲ್ಲಿ ಆನೇಕ ಪ್ರದೇಶದಲ್ಲಿ ಶಿವಾಲಯವನ್ನು ನಿರ್ಮಾಣ ಮಾಡಿ, ಆ ಪರಮಶಿವನನ್ನು ಪಾರ್ಥಿಸುತ್ತಿದ್ದರು. ಆದರೆ ಈ ಸ್ಥಳದಲ್ಲಿ ಮಾತ್ರ ದೇವಾಲಯದ ಜೊತೆ ಜೊತೆಗೆ ಸ್ವರ್ಗಕ್ಕೆ ಮೆಟ್ಟಿಲು ಮಾರ್ಗವನ್ನು ಕೂಡ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಆದರೆ ಈ ದೇವಾಲಯದಲ್ಲಿನ ಸ್ವರ್ಗದ ಮೆಟ್ಟಿಲು ಅಷ್ಟು ಸುಲಭವಾದುದು ಅಲ್ಲ. ಶ್ರೀ ಕೃಷ್ಣನು ಪಾಂಡವರಿಗೆ ಸಾಹಯ ಮಾಡಲು ಎಂದು ಸ್ವರ್ಗಕ್ಕೆ ಮೆಟ್ಟಿಲು ಮಾರ್ಗವನ್ನು ನಿರ್ಮಾಣ ಮಾಡುವುದಕ್ಕೆ 6 ತಿಂಗಳನ್ನು ಒಂದೇ ರಾತ್ರಿಯಾಗಿ ಮಾರ್ಪಾಟು ಮಾಡಿದ ಎಂದು ಹೇಳಲಾಗುತ್ತದೆ.

ಅಜ್ಞಾತವಾಸ

ಅಜ್ಞಾತವಾಸ

ಈ ದೇವಾಲಯದ ನಿರ್ಮಾಣ ಮಾಡುವ ಸಮಯದಲ್ಲಿ ಅವರು ಸೂರ್ಯನ ಕಿರಣವನ್ನು ಕಾಣಬಾರದು ಎಂದು, ಒಂದು ವೇಳೆ ಸೂರ್ಯನ ಕಿರಣವು ಬಿದ್ದರೆ ಪಾಂಡವರು ಆ ನಿರ್ಮಾಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹಾಗಾಗಿಯೇ 6 ತಿಂಗಳಕಾಲ ಒಂದೇ ರಾತ್ರಿಯಾಗಿ ಮಾರ್ಪಾಟು ಮಾಡಿದ ಶ್ರೀ ಕೃಷ್ಣ.

ನಿರ್ಮಾಣ

ನಿರ್ಮಾಣ

ಪಾಂಡವರು ಆಕಸ್ಮಾತ್ ದೇವಾಲಯವನ್ನು ಪೂರ್ಣಗೊಳಿಸಲಿಲ್ಲ ಎಂದರೆ ಮತ್ತೆ 6 ತಿಂಗಳು ವನವಾಸ ಮಾಡಬೇಕು ಎಂದು ಹೇಳುತ್ತಾನೆ. ಶ್ರೀ ಕೃಷ್ಣನ ಮಾತಿಗೆ ಒಪ್ಪಿದ ಪಾಂಡವರು ನಿರ್ಮಾಣ ಮಾಡುವ ಸಮಯದಲ್ಲಿ ನೀರಿನಲ್ಲಿ ಮುಳುಗುತ್ತಾರೆ. ಅದರೆ ಆ ಪ್ರದೇಶದಲ್ಲಿ ಒಂದು ಮಹಿಳೆ ಅರ್ಧರಾತ್ರಿಯ ವರೆಗೆ ಕೆಲಸ ಮಾಡುತ್ತಾ ಇರುತ್ತಾಳೆ. ಅವಳ ಕೆಲಸಕ್ಕಾಗಿ ಬೆಳಗಿನ ಸಮಯದಲ್ಲಿಯೇ ಎದ್ದು ದೀಪವನ್ನು ಹಚ್ಚುತ್ತಿದ್ದಳು.

ಸೂರ್ಯೋದಯ

ಸೂರ್ಯೋದಯ

ಆ ದೀಪವು ಕಾಂತಿಯಿಂದ ಪಾಂಡವರ ಸೂರ್ಯೋದಯವಾಗುತ್ತಿದೆ ಎಂದು ತಿಳಿದು ಆ ಮೆಟ್ಟಿಲಿನ ನಿರ್ಮಾಣವನ್ನು ನಿಲ್ಲಿಸುತ್ತಿದ್ದರು. ಆ ವಿಧವಾಗಿ ಮೆಟ್ಟಿಲುಗಳು ಪೂರ್ತಿಯಾಗದೇ ಅರ್ಧದಲ್ಲಿಯೇ ನಿಂತು ಹೋಯಿತು ಎಂದು ಅಲ್ಲಿನ ಸ್ಥಳೀಯರು ರೋಚಕವಾದ ಈ ಕಥೆಯನ್ನು ಹೇಳುತ್ತಾರೆ.

ಬಾತೂ ಕಿ ಲಡಿ

ಬಾತೂ ಕಿ ಲಡಿ

ಶ್ರೀ ಕೃಷ್ಣನು ನೀಡಿದ ವಾಗ್ಧಾನದ ಪ್ರಕಾರ ಪಾಂಡವರು ಮೆಟ್ಟಿಲು ಮಾರ್ಗವನ್ನು ನಿಲ್ಲಿಸಿ ಹಿಂದಿರುಗಿ ಅಜ್ಞಾತವಾಸವನ್ನು ಮುಂದುವರೆಸುತ್ತಾರೆ. ಮಹಾಭಾರತ ಕಾಲದಲ್ಲಿ ಬಾತು ಎಂಬ ಕಲ್ಲಿನಿಂದ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದರಿಂದ ಈ ದೇವಾಲಯವನ್ನು ಬಾತು ಕಿ ಲಡಿ ಎಂಬ ಹೆಸರು ಬಂದಿತು.

6 ದೇವಾಲಯಗಳು

6 ದೇವಾಲಯಗಳು

ಇಲ್ಲಿ 6 ದೇವಾಲಯಗಳು ಇರುತ್ತವೆ. ಇಲ್ಲಿ 6 ದೇವಾಲಯಗಳಲ್ಲಿ ಒಂದು ಪ್ರಧಾನವಾದ ದೇವಾಲಯ ಕೂಡ ಇರುತ್ತದೆ. ಚಿಕ್ಕ ದೇವಾಲಯದಲ್ಲಿ ವಿಷ್ಣು ಮೊದಲಾದ ದೇವತಾಮೂರ್ತಿಗಳು ನೆಲೆಸಿದ್ದಾರೆ. ಆದರೆ ಪ್ರಧಾನವಾದ ದೇವಾಲಯದಲ್ಲಿ ಮಾತ್ರ ಪರಮಶಿವನ ಲಿಂಗವನ್ನು ಕಾಣಬಹುದಾಗಿದೆ.

ಮತ್ತೊಂದು ಅದ್ಭುತ

ಮತ್ತೊಂದು ಅದ್ಭುತ

ಇಲ್ಲಿನ ಮತ್ತೊಂದು ಅದ್ಭುತವೆಂದರೆ ವೈಜ್ಞಾನಿಕವಾಗಿ ಅಲೋಚಿಸದವರಿಗೂ ಕೂಡ ಅಲೋಚನೆಗಳು ಹುಟ್ಟುತ್ತದೆ. ಅದೆನೆಂದರೆ ಸೂರ್ಯಾನ ಒಂದು ಕೊನೆಯ ಕಿರಣಗಳು ಇಲ್ಲಿನ ಶಿವನ ಪಾದದ ಮೇಲೆ ತಾಕುವುದೇ ಆಗಿದೆ.

ದೇವಾಲಯ ನಿರ್ಮಾಣ

ದೇವಾಲಯ ನಿರ್ಮಾಣ

ಆ ಶಿವನ ಪಾದಗಳಲ್ಲಿ ಸ್ಪರ್ಶಿಸದೇ ಸೂರ್ಯಾ ದೇವನು ಎಂದಿಗೂ ಅಸ್ತಮಗೊಳ್ಳುವುದಿಲ್ಲವಂತೆ. ಆ ವಿಧವಾಗಿ ಈ ದೇವಾಲಯದ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯವು 4 ತಿಂಗಳ ಕಾಲ ಭೂಮಿಯ ಮೇಲೆ ಈ ದೇವಾಲಯ ಇರುವ ಕಾಲದವರೆಗೆ ಸೂರ್ಯಾನ ಕೊನೆಯ ಕಿರಣಗಳು ಸ್ವಾಮಿಯ ಪಾದವನ್ನು ಸ್ಪರ್ಶಿಸದೇ ಹಿಂದಿರುಗುವುದಿಲ್ಲವಂತೆ.

7 ಕಿ.ಮೀ ದೂರದಲ್ಲಿ

7 ಕಿ.ಮೀ ದೂರದಲ್ಲಿ

ಇಲ್ಲಿಂದ 7 ಕಿ.ಮೀ ದೂರದಲ್ಲಿರುವ ಭೀಮನು ಎಸೆದ ಕಲ್ಲು ಇದೆ ಎಂದೂ, ಆ ಕಲ್ಲನ್ನು ಘಾಸಿಗೊಳಿಸಿದರೆ ರಕ್ತ ಸುರಿಯುತ್ತದೆ ಎಂದು ಆನೇಕ ಕಥೆಗಳನ್ನು ಕೂಡ ಪ್ರಚಾರದಲ್ಲಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಹಿಮಾಚಲ ಪ್ರದೇಶದಲ್ಲಿನ ಕಾಂಗ್ರಾಗೆ ಭೇಟಿ ನೀಡಲು ನ್ಯೂಡೆಲ್ಲಿ, ಚಂಡೀಪುರ್‍ನ ರಸ್ತೆ ಮಾರ್ಗವಾಗಿ ಸುಮಾರು 34 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ವಿಮಾನ ಮಾರ್ಗದ ಮೂಲಕ ತೆರಳಬೇಕಾದರೆ ಸುಮಾರು 5 ಗಂಟೆ 45 ನಿಮಿಷಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X