Search
  • Follow NativePlanet
Share
» »ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ಬಾವಲಿಯಿಂದಾಗಿ ನಿಪಾಹ್ ವೈರಸ್ ಕೇರಳ ರಾಜ್ಯದಲ್ಲೆಲ್ಲಾ ಹಬ್ಬಿದ್ದು , ಸಾಕಷ್ಟು ಜನರು ನಿಪಾಹ್ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ನಿಪಾಹ್‌ ವೈರಸ್‌ನಿಂದ ಜಾಗ್ರತವಾಗಿರುವಂತೆ ಕಟ್ಟೆಚ್ಚರ ವಹಿಸಲಾಗುದೆ. ಕೇರಳ ಪ್ರವಾಸವನ್ನೇ ಸ್ವಲ್ಪ ಸಮಯದ ಮಟ್ಟಿಗೆ ನಿಷೇಧಿಸಲಾಗಿದೆ. ಹೀಗಿರುವಾಗ ಕೇರಳದ ಗ್ರಾಮವೊಂದರಲ್ಲಿ ಜನರು ಬಾವಲಿ ಹಿಡಿಯುವ ಹಬ್ಬವನ್ನು ಆಚರಿಸ್ತಾರಂತೆ. ಇದೆನೋ ನಿಪಾಹ್ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮದ ಭಾಗ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಹಾಗಾದ್ರೆ ಏನೀ ಬಾವಲಿ ಹಿಡಿಯುವ ಹಬ್ಬ, ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ...

 ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್‌ಗೆ ತುಂಬಾನೇ ಡಿಮ್ಯಾಂಡ್ ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್‌ಗೆ ತುಂಬಾನೇ ಡಿಮ್ಯಾಂಡ್

ಬಾವಲಿ ಹಿಡಿಯುವ ಹಬ್ಬ

ಬಾವಲಿ ಹಿಡಿಯುವ ಹಬ್ಬ

PC:Peter van der Sluijs

ಜನರು ಬಾವಲಿಗೆ ಹೆದರಿ ದೂರ ಓಡುತ್ತಿದ್ದಾರೆ. ಬಾವಲಿ ತಿಂದಂತಹ ಹಣ್ಣುಗಳನ್ನು ತಿನ್ನಲು ಭಯಪಡುತ್ತಿದ್ದಾರೆ ಹೀಗಿರುವಾಗ ಕೇರಳದಕಾಸರಗೋಡು ಜಿಲ್ಲೆಯ ಅಡೂರಿನ ಪಾಂಡಿ ಎಂಬಲ್ಲಿ ಬಾವಲಿ ಹಿಡಿಯುವ ಹಬ್ಬ ಕೂಡಾ ನಡೆಸುತ್ತಾರೆ ಅಂದರೆ ಆಶ್ಚರ್ಯವಾಗುವುದು ಸಹಜವೇ.

ಆಚರಣೆ ಹಿಂದಿನ ಕಥೆ

ಆಚರಣೆ ಹಿಂದಿನ ಕಥೆ

PC: Вых Пыхманн

ಈ ಹಬ್ಬವನ್ನು ಆಚರಿಸುವ ಹಿಂದೆ ಒಂದು ಕಥೆ ಇದೆ. ಅದೇನೆಂದರೆ ಅಲ್ಲಿನ ಗ್ರಾಮಸ್ಥರು ತಮ್ಮ ಊರಿನ ಸುಖ ಶಾಂತಿ ಹಾಗೂ ಐಶ್ವರ್ಯ ವೃದ್ಧಿಗಾಗಿ ಈ ಬಾವಲಿಯನ್ನು ಹಿಡಿಯುವ ಹಬ್ಬವನ್ನುಆಚರಿಸುತ್ತಾರೆ.

ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ಯಾರಿಗೆ ಬಾವಲಿ ಹಿಡಿಯಲು ಅವಕಾಶ

ಯಾರಿಗೆ ಬಾವಲಿ ಹಿಡಿಯಲು ಅವಕಾಶ

PC:Uwe Schmidt

ಮುಗೇರ ಹಾಗೂ ಸಲ್ಕಾ ಸಮುದಾಯದ ಜನರಿಗಷ್ಟೇ ಈ ಬಾವಲಿ ಹಿಡಿಯಲು ಅವಕಾಶ ನೀಡಲಾಗುತ್ತದೆ. ಇಲ್ಲಿ ಸುಮಾರು 50ಜನರು ಮೂರು ಗುಹೆಯೊಳಗೆ ನುಗ್ಗಿ ಅಲ್ಲಿರುವ ಬಾವಲಿಗಳನ್ನು ಹೊಡೆದು ಹಿಡಿಯುತ್ತಾರೆ. ಬಾವಲಿಗಳನ್ನು ಹಿಡಿಯುವುದಕ್ಕಾಗಿಯೇ ಪ್ರತ್ಯೇಕ ಮುಳ್ಳಿನ ಗಿಡವನ್ನು ಬಳಸಲಾಗುತ್ತದೆ. ಸಿಕ್ಕಿದ ಬಾವಲಿಯನ್ನು ತಾವು ಧರಿಸಿರುವ ಲುಂಗಿಯಲ್ಲಿ ಕಟ್ಟಿ ತರುತ್ತಾರೆ.

ಬಾವಲಿಯ ಪದಾರ್ಥ ಮಾಡಿ ದೇವಿಗೆ ನೈವೇದ್ಯ

ಬಾವಲಿಯ ಪದಾರ್ಥ ಮಾಡಿ ದೇವಿಗೆ ನೈವೇದ್ಯ

PC: PD-USGov

ಸಿಕ್ಕಿದ ಬಾವಲಿಯನ್ನು ರಾಶಿ ಹಾಕಿ ಅವುಗಳಲ್ಲಿ ಸ್ವಲ್ಪ ಬಾವಲಿಯನ್ನು ಪದಾರ್ಥ ಮಾಡಿ ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಉಳಿದ ಬಾವಲಿಗಳನ್ನು ಅದನ್ನು ಹಿಡಿದು ತಂದವರು ಕೊಂಡೊಯ್ಯುತ್ತಾರೆ. ಈ ಬಾವಿಯ ರೆಕ್ಕೆಗಳಿಂದ ಡೋಲುಗಳನ್ನು ತಯಾರಿಸಲಾಗುತ್ತದೆ.

ದೇವಿ ಮುನಿಸಿಕೊಳ್ಳುತ್ತಾಳೆ

ದೇವಿ ಮುನಿಸಿಕೊಳ್ಳುತ್ತಾಳೆ

PC: Shantanu Kuveskar

ಒಂದು ವೇಳೆ ಬಾವಲಿ ಸಿಕ್ಕಿಲ್ಲವೆಂದಾದಲ್ಲಿ ದೇವಿ ಮುನಿಸಿಕೊಳ್ಳುತ್ತಾಳೆ ಎನ್ನುವುದು ಜನರ ನಂಬಿಕೆ. ಹಾಗಾಗಿ ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಬಾವಲಿಗಳನ್ನು ಹಿಡಿದು ತರುತ್ತಾರೆ.

ಬಾವಲಿ ಹಿಡಿಯುವ ಮುನ್ನ ಸ್ನಾನ ಮಾಡಬೇಕು

ಬಾವಲಿ ಹಿಡಿಯುವ ಮುನ್ನ ಸ್ನಾನ ಮಾಡಬೇಕು

PC: Marie Jullion

ಬಾವಲಿಯನ್ನು ಹಿಡಿಯಲು ತೆರಳುವ ಮುನ್ನ, ಬಾವಲಿ ಹಿಡಿಯುವವರು ಸ್ನಾನ ಮಾಡಿ ಶುದ್ಧವಾಗಿ ದೇವಿಗೆ ಕಾಣಿಕೆ ಹಾಗೂ ಕೋಳಿಯನ್ನು ಅರ್ಪಿಸಿ ನಂತರ ಬಾವಲಿ ಹಿಡಿಯಲು ಹೋಗುವುದು ಸಂಪ್ರದಾಯ. ಅದರಂತೆಯೇ ಇಲ್ಲಿನ ಜನಗಳು ಆ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ.

ಯಾವಾಗ ನಡೆಯುತ್ತೆ ಈ ಹಬ್ಬ

ಯಾವಾಗ ನಡೆಯುತ್ತೆ ಈ ಹಬ್ಬ

PC:Zoharby

ಈ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ವಿಶು ಹಾಗೂ ಶಿವರಾತ್ರಿಯ ಸಂದರ್ಭದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅನೇಕ ತಲೆಮಾರುಗಳಿಂದ ಈ ಆಚರಣೆ ನಡೆಯುತ್ತಾ ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X