Search
  • Follow NativePlanet
Share
» »ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ

ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ

ಬಾರಾಬಂಕಿ ನಂತರ ಮುಸ್ಲೀಂರ ಅಧೀನಕ್ಕೊಳಪಟ್ಟಿತು ಮತ್ತು ಈ ಪ್ರದೇಶವನ್ನು 12 ಭಾಗಗಳಾಗಿ ವಿಂಗಡಿಸಿದ ಕಾರಣದಿಂದ ಬಾರಾಬಂಕಿ ಎಂಬ ಹೆಸರು ಬಂತು.

ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ. ಗತಕಾಲದಲ್ಲಿ ಹಲವಾರು ಸಂತರು - ಮುನಿಗಳಿಗೆ ಇದು ತಪ್ಪಸ್ಸಿನ ಸ್ಥಳವಾಗಿತ್ತು. ಈ ಸ್ಥಳವನ್ನು ಕ್ರಿಶ 1000 ದಲ್ಲಿ ಹುಡುಕಲಾಯಿತು ಎಂದು ನಂಬಲಾಗುತ್ತದೆ.

ಬಾರಾಬಂಕಿ ಹೆಸರು ಬಂದಿದ್ದು ಹೇಗೆ?

ಬಾರಾಬಂಕಿ ಹೆಸರು ಬಂದಿದ್ದು ಹೇಗೆ?

PC:Maesi64

ಬಾರಾಬಂಕಿ ನಂತರ ಮುಸ್ಲೀಂರ ಅಧೀನಕ್ಕೊಳಪಟ್ಟಿತು ಮತ್ತು ಈ ಪ್ರದೇಶವನ್ನು 12 ಭಾಗಗಳಾಗಿ ವಿಂಗಡಿಸಿದ ಕಾರಣದಿಂದ ಬಾರಾಬಂಕಿ ಎಂಬ ಹೆಸರು ಬಂತು. ಹಿಂದಿಯಲ್ಲಿ ಬಾರಾ ಅಂದರೆ 12 ಎಂದರ್ಥ. ಇನ್ನೊಂದು ಕಥೆಯ ಪ್ರಕಾರ, ಇಲ್ಲಿ ದಟ್ಟವಾದ ಕಾಡಿನ 12 ವಿಭಾಗಗಳಿದ್ದವು. ಹೀಗಾಗಿ ಬಾರಾಬಂಕಿ ಎಂಬ ಹೆಸರು ಚಾಲ್ತಿಯಲ್ಲಿ ಬಂದಿತು ಎನ್ನಲಾಗುತ್ತದೆ.

ಪಾರಿಜಾತ ಮರ

ಪಾರಿಜಾತ ಮರ

PC: Faizhaider
ಬಾರಾಬಂಕಿಯಲ್ಲಿ ನೋಡುವಂತ ಹಲವು ಪ್ರವಾಸಿ ತಾಣಗಳಿವೆ. ಅಪರೂಪದ ಏಕಲಿಂಗದ (ಯುನಿಸೆಕ್ಸ್ ಟ್ರಿ)ಪಾರಿಜಾತ ಮರ ಇಲ್ಲಿದೆ. ಘಾಘ್ರಾ ತೀರದಲ್ಲಿರುವ ಕಿಂಟೂರ್ ಗ್ರಾಮದಲ್ಲಿ ಪಾರಿಜಾತ ಮರವು ಪವಿತ್ರವಾದ ಮರವಾಗಿದೆ. ಇದು ಕುಂತಿ ನಿರ್ಮಿಸಿದ ಕುಂತೇಶ್ವರ ಮಹಾದೇವ ದೇವಾಲಯದ ಬಳಿ ಇದೆ, ಈ ಮರವು ಕುಂತಿಯ ಚಿತಾಭಸ್ಮದಿಂದ ಬೆಳೆದಿದ್ದು ಎಂದು ಹೇಳಲಾಗುತ್ತದೆ.

ಪ್ರಮುಖ ತಾಣಗಳು

ಪ್ರಮುಖ ತಾಣಗಳು

PC: Maesi64
ಬಾರಾಬಂಕಿ ಘಂಟೆಗೋಪುರ ನಗರಕ್ಕೆ ಸ್ವಾಗತ ಕೋರುತ್ತದೆ. ಮಹಾದೇವ ದೇವಸ್ಥಾನ ಜಿಲ್ಲೆಯ ಅತ್ಯಂತ ಹಳೆಯ ದೇವಾಲಯಗಳಲ್ಲೊಂದು. ಪುರಾತನ ಐತಿಹಾಸಿಕ ನಗರಗಳು ಹಾಗೂ ಗ್ರಾಮಗಳು ಬಾರಾಬಂಕಿ ಜಿಲ್ಲೆಯ ಹೆಮ್ಮೆ. ಇಲ್ಲಿನ ರಾಜ್ಯಮನೆತನದ ಮುಖ್ಯ ಗುರುವಿನ ತವರಾದ ಸತ್ರಿಖ್, ಹಾಜಿ ವಾರಿಸ್ ಅಲಿ ಶಾಹ್ ರ ನೆಲೆಯಾದ ದೇವಾ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಡೊಸರೈ ಹಾಗು ಮಹಾಭಾರತದಲ್ಲಿನ ಪಾಂಡವರ ತಾಯಿಯಾದ ಕುಂತಿಯ ಹುಟ್ಟೂರು ಕಿಂತೂರ್ ಮುಂತಾದವು ಹೆಸರಿಸಬಹುದಾದ ಕೆಲವು ಪ್ರಮುಖ ತಾಣಗಳು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Faiz Haider
ಬಾರಾಬಂಕಿಯಲ್ಲಿ ಸಮಶೀತೋಷ್ಣ ಹವಾಮಾನವಿದೆ. ಭೇಟಿ ಮಾಡಲು ಪ್ರಶಸ್ತವಾದ ಕಾಲ: ಬಾರಾಬಂಕಿಯನ್ನು ಭೆಟಿ ಮಾಡಲು ಪ್ರಶಸ್ತವಾದ ಕಾಲವೆಂದರೆ ನವೆಂಬರ್ ನಿಂದ ಮಾರ್ಚ್. ಇನ್ನುಳಿದ ಸಮಯದಲ್ಲಿ ಹವಾಮಾನ ಅತ್ಯಂತ ಬಿಸಿಯಾಗಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Faiz Haider
ಬರಾಬಂಕಿಯಲ್ಲಿರುವ ರೈಲ್ವೆ ನಿಲ್ದಾಣವು ಅಹಮದಾಬಾದ್, ಬರೇಲಿ, ಗೋರಖ್‌ಪುರ, ಲಕ್ನೋ, ಬೆಂಗಳೂರು, ದೆಹಲಿ, ಅಮೃತಸರ ಮತ್ತು ವಾರಣಾಸಿಯಂತಹ ನಗರಗಳಿಂದ ರೈಲುಗಳನ್ನು ಒದಗಿಸುತ್ತದೆ.
ಬರಾಬಂಕಿಗೆ ರಾಜ್ಯ ಸಾರಿಗೆ ನಿಗಮವು ನಡೆಸುವ ಬಸ್ಸುಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X